ನವದೆಹಲಿ: ಹೆರಿಗೆ ಬಳಿಕ ಉಂಟಾಗು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪುತ್ತಿರುವ ತಾಯಂದಿರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ಪ್ರಸವದ ಬಳಿಕ ಉಂಟಾಗುವ ರಕ್ತಸ್ರಾವ (ಪಿಪಿಎಚ್)ನಲ್ಲಿ 24 ಗಂಟೆಯ ಅವಧಿಯಲ್ಲಿ 1000 ಎಂಎಲ್ಗಿಂತ ಹೆಚ್ಚು ರಕ್ತಸ್ರಾವ ಉಂಟಾದರೆ ಅದನ್ನು ಗಂಭೀರ ಪಿಪಿಎಚ್ ಎಂದು ಗುರುತಿಸಲಾಗಿದ್ದು, ಇದು ಮಾರಾಣಾಂತಿಕವಾಗಿದೆ.
ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ, ಹೆರಿಗೆಯಾದ ಬಳಿಕ 24 ಗಂಟೆಯೊಳಗೆ 500 ಎಂಎಲ್ಗಿಂತ ಹೆಚ್ಚು ರಕ್ತಸ್ರಾವ ಆದರೆ ಇದು ಮಾರಾಣಾಂತಿಕ. ಹೆರಿಗೆಯಾದ 24 ಗಂಟೆ ಅವಧಿಯೊಳಗೆ ಹೆಚ್ಚಿನ ಮಟ್ಟದ ಪಿಪಿಎಚ್ನಿಂದ ತಾಯಂದಿರು ಸಾವನ್ನಪ್ಪುತ್ತಿರುವುದನ್ನು ಅನೇಕ ಅಧ್ಯಯನಗಳು ತೋರಿಸಿದೆ. ಈ ಹಿನ್ನೆಲೆ ಪ್ರಸವಪೂರ್ವದ ಕಾಳಜಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಕೂಡ ಭಾರತದಲ್ಲಿ ತಾಯಂದಿರ ಸಾವಿಗೆ ಈ ಪಿಪಿಎಚ್ ಸಾಮಾನ್ಯ ಕಾರಣವಾಗಿದೆ ಎಂದು ತಿಳಿಸಿದೆ. ಇದರಿಂದಾಗಿ ಶೇ 38ರಷ್ಟು ತಾಯಂದಿರು ಸಾವನ್ನಪ್ಪುತ್ತಿದ್ದಾರೆ.
ತಾಯಂದಿರ ಸಾವು: ಭಾರತದಲ್ಲಿ ತಾಯಂದಿರ ಕಾಯಿಲೆ ಮತ್ತು ಸಾವಿಗೆ ಪ್ರಮುಖ ಕಾರಣ ಈ ಪಿಪಿಎಚ್ ಆಗಿದೆ. ಇದೊಂದು ದುಸ್ವಪ್ನವಾಗಿದ್ದು, ತ್ವರಿತ ಕಾರಣವಾಗಿದೆ. ಪಿಪಿಎಚ್ ನಿರ್ವಹಣೆ ಯಾವಾಗಲೂ ತುರ್ತಾಗಿದ್ದು, ಇದರಲ್ಲಿ ವಿಳಂಬ ತೋರುವುದು ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞ ಡಾ ಅಲ್ಪೇಶ್ ತಿಳಿಸಿದ್ದಾರೆ.
ಆದಾಗ್ಯೂ, ಬಹುತೇಕ ಸಾವುಗಳನ್ನು ಸಮಯಕ್ಕೆ ಸರಿಯಾಗಿ ತಡೆಯಬಹುದಾಗಿದ್ದು, ತಕ್ಷಣಕ್ಕೆ ರಕ್ತಸ್ರಾವ ನಿಯಂತ್ರ ನಿರ್ವಹಣೆ ಮಾಡದಿರುವುದು ಇದಕ್ಕೆ ಕಾರಣವಾಗುತ್ತಿದೆ ಎಂದಿದ್ದಾರೆ. ಭಾರತದಲ್ಲಿ ತಾಯಂದಿರ ಸಾವಿನ ದರ (ಎಂಎಂಆರ್) ಕಡಿಮೆಯಾಗುತ್ತಿರುವುದು ಕಾಣಬಹುದಾಗಿದೆ. ಆದರೆ, ಇದರ ತಡೆಗೆ ಇನ್ನು ಬಹಳ ದೂರ ಕ್ರಮಿಸಬೇಕಿದೆ. ಸಾಂಸ್ಥಿಕ ವಿತರಣೆಗಳು ಪ್ರಸವಗಳು ಅನೇಕ ಪ್ರಕರಣಗಳಲ್ಲಿ ವಿಶೇಷ ಕಾಳಜಿವಹಿಸುವ ಮೂಲಕ ಈ ತಾಯಂದಿರ ಸಾವಿನ ದರ ತಡೆಯಲು ಕಾರಣವಾಗಿದೆ.
ರಕ್ತದ ಸ್ರಾವ: ವಿಶ್ವದಾದ್ಯಂತ ತಾಯಂದಿರ ಮರಣಕ್ಕೆ ಅನೇಕರ ಕಾರಣಗಳನ್ನು ತಿಳಿಸಿದೆ. ಅದರಲ್ಲಿ ಪಿಪಿಎಚ್ನಿಂದ 14 ಮಿಲಿಯನ್ ಮಹಿಳೆಯರು ನೋವು ಅನುಭವಿಸುತ್ತಿದ್ದು, ಜಾಗತಿಕವಾಗಿ 70 ಸಾವಿರ ತಾಯಂದಿರು ಸಾವನ್ನಪ್ಪುತ್ತಿದ್ದಾರೆ. ಅನೇಕ ಮಹಿಳೆಯು ಬದುಕುಳಿದರು ಅವರಲ್ಲಿ ರಕ್ತಸ್ರಾವ ನಿಯಂತ್ರಣಕ್ಕೆ ತುರ್ತು ಶಸ್ತ್ರ ಚಿಕಿತ್ಸೆಗಳಿ ಬೇಕಾಗುತ್ತದೆ. ಇದರಿಂದ ಅವರು ಸಂತಾನೋತ್ಪತ್ತಿ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಗರ್ಭಾಶಯದ ಅಟೋನಿ, ದುರ್ಬಲ ಗರ್ಭಾಶಯ, ಗರ್ಭಾಸಯ ಆಘಾತ, ಹೆರಿಗೆ ಸಮಯದಲ್ಲಿ ಯೋನಿಯ ಹಾನಿಗಳು ರಕ್ತಸ್ರಾವಕ್ಕೆ ಕಾರಣವಾಗುತ್ತದೆ.
ಇದೀಗ ಸಾಕಷ್ಟು ವೈದ್ಯಕೀಯ ಮತ್ತು ಶಸ್ತ್ರ ಚಿಕಿತ್ಸೆಯಿಂದಾಗಿ ಇದೀಗ ಪಿಪಿಎಚ್ ಕಾರಣದಿಂದ ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ. ರಕ್ತಸ್ರಾವದ ವೇಗ ನಿಯಂತ್ರಿಸಲು ಮತ್ತು ಮರಣ ಪ್ರಮಾಣ ಕಡಿಮೆ ಮಾಡಲು ಮತ್ತಷ್ಟು ಹೊಸ ವಿಧಾನದ ಅವಶ್ಯಕತೆ ಇದೆ ಎಂದು ಡಾ ಮಾಲಾ ಶ್ರೀವಾಸ್ತವ ತಿಳಿಸಿದ್ದಾರೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಾಡುವ ಖಿನ್ನತೆಯಿಂದ ಹೆರಿಗೆ ಬಳಿಕ ಹೃದಯ ಸಮಸ್ಯೆ