ಲಂಡನ್: ಸಕಾರಾತ್ಮಕ ಚಿಂತನೆ ಮತ್ತು ಆಶಾವಾದ ಜೀವನದ ಯಶಸ್ಸು, ಉತ್ತಮ ಆರೋಗ್ಯ ಮತ್ತು ಜೀವನಾಯುಷ್ಯದೊಂದಿಗೆ ಆಗಾಗ್ಗೆ ಸಂಬಂಧ ಹೊಂದಿರುತ್ತದೆ. ಆದರೆ ಇದು ಕೆಲವೊಮ್ಮೆ ಜನರ ಆರ್ಥಿಕ ಕಾಳಜಿಯ ವಿಚಾರದಲ್ಲಿ ಕಳಪೆ ನಿರ್ಧಾರ ತೆಗೆದುಕೊಳ್ಳುವಿಕೆಗೆ ಕಾರಣವಾಗಬಹುದು ಎಂದು ಹೊಸ ಅಧ್ಯಯನ ಸಲಹೆ ನೀಡಿದೆ.
ಜರ್ನಲ್ ಪರ್ಸನಲಿಟಿ ಆ್ಯಂಡ್ ಸೋಶಿಯನ್ ಸೈಕಾಲಾಜಿ ಬುಲೆಟಿನ್ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ಯುಕೆ ಆಧಾರಿತ ಯೂನಿವರ್ಸಿಟಿ ಆಫ್ ಬೇತ್ ಸಂಶೋಧಕರು, ಹೆಚ್ಚಿನ ಆಶಾವಾದವು ಕಡಿಮೆ ಅರಿವಿನ ಕೌಶಲ್ಯ ಅಂದರೆ ಮೌಖಿಕ ನಿರರ್ಗಳತೆ, ತಾರ್ಕಿಕತೆ, ಸಂಖ್ಯಾತ್ಮಕ ತಾರ್ಕಿಕತೆ ಮತ್ತು ಸ್ಮರಣೆಯೊಂದಿಗೆ ಸಂಬಂಧ ಹೊಂದಿದೆ ಎಂದು ಎಂದು ತೋರಿಸಿದ್ದಾರೆ.
ಹೆಚ್ಚಿನ ಅರಿವಿನ ಸಾಮರ್ಥ್ಯವು ನೈಜತೆ ಮತ್ತು ನಿರಾಶಾವಾದ ಅವರ ಭವಿಷ್ಯದ ನಿರೀಕ್ಷೆಯಲ್ಲಿ ಇರಲಿದೆ. ಭವಿಷ್ಯವನ್ನು ನಿಖರವಾಗಿ ಮುನ್ಸೂಚಿಸುವುದು ಕಷ್ಟ. ಇದೇ ಕಾರಣದಿಂದ ನಾವು ಕಡಿಮೆ ಅರಿವಿನ ಸಾಮರ್ಥ್ಯ ಹೊಂದಿ ನಿರ್ಧಾರ ರೂಪಿಸಲು ತಪ್ಪೆಸಗುತ್ತೇವೆ. ಇದು ಆಶಾವಾದವೂ ಇರಬಹುದು ನಿರಾಶಾವಾದವೂ ಆಗಿರಬಹುದು. ಆದರೆ, ಫಲಿತಾಂಶ ಸ್ಪಷ್ಟವಾಗಿದೆ. ಕಡಿಮೆ ಅರಿವಿನ ಸಾಮರ್ಥ್ಯ ಸ್ವಯಂ ಹೊಗಳಿಕೆಯ ಪೂರ್ವಗ್ರಹಗಳಿಗೆ ಕಾರಣವಾಗುತ್ತದೆ ಎಂದು ಯೂನಿವರ್ಸಿಟಿ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ಡಾ.ಕ್ರಿಸ್ ಡಾಸನ್ ತಿಳಿಸಿದ್ದಾರೆ.
ಪ್ರಮುಖವಾಗಿ, ಆರ್ಥಿಕ ವಿಷಯದಲ್ಲಿ ಅಂದರೆ, ಉದ್ಯೋಗ, ಹೂಡಿಕೆ ಅಥವಾ ಉಳಿತಾಯದಲ್ಲಿನ ನಿರ್ಧಾರಗಳು ಅನಿಶ್ಚಿತತೆಯ ಅಪಾಯದ ಆಯ್ಕೆ ಹೊಂದಿರುತ್ತದೆ. ಈ ಅಧ್ಯಯನಕ್ಕಾಗಿ ಯುಕೆಯಲ್ಲಿ 36,000 ಮಂದಿಯನ್ನು ಒಳಪಡಿಸಲಾಗಿದೆ. ಈ ವೇಳೆ ಜನರ ಆರ್ಥಿಕ ಯೋಗಕ್ಷೇಮದ ನಿರೀಕ್ಷೆಗಳನ್ನು ಪ್ರಸ್ತುತ ಹಣಕಾಸಿನ ಸ್ಥಿತಿಯೊಂದಿಗೆ ಹೋಲಿಕೆ ಮಾಡಲಾಗಿದೆ.
ಅನೈಜತೆಯ ಆಶಾವಾದ ವ್ಯಕ್ತಿ ಎದುರಿಸುವ ಮತ್ತೊಂದು ವಂಚನೆಯಾಗಿದೆ. ಜನರು ನಕಾರಾತ್ಮಕತೆಯನ್ನು ಕಡಿಮೆ ಅಂದಾಜು ಮಾಡುತ್ತಾರೆ. ಸಕಾರಾತ್ಮಕ ಚಿಂತನೆ ಪರಿಕಲ್ಪನೆ ಸಂಸ್ಕೃತಿಯಲ್ಲಿ ಪ್ರಶ್ನಾತೀತವಾಗಿದೆ. ಆದರೆ ಈ ನಂಬಿಕೆಗಳನ್ನು ಆಗಿಂದಾಗಲೇ ಪರಿಶೀಲಿಸುವುದು ಆರೋಗ್ಯಕರವಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಎಡಿಎಚ್ಡಿ ಅಪಾಯದ ಅಂಶಗಳು; ಅಧ್ಯಯನ