ETV Bharat / sukhibhava

ಕಳಪೆ ನಿದ್ರೆಯಿಂದ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ - ರಕ್ತದೊತ್ತಡ ಏರಿಕೆ

ವಸ್ತುನಿಷ್ಠ ನಿದ್ರೆ ಗುಣಮಟ್ಟವೂ ಒಟ್ಟಾರೆ ನಿದ್ರೆಯ ಅವಧಿಯನ್ನು ಹೊಂದಿರುವುದಿಲ್ಲ. ಆದರೆ ನಿದ್ರೆಯ ವಿವಿಧ ಹಂತದ ಮೌಲ್ಯವನ್ನು ಹೊಂದಿರುತ್ತದೆ.

Poor sleep quality may negatively impact physical health

author img

By ETV Bharat Karnataka Team

Published : Dec 30, 2023, 6:37 PM IST

ನವದೆಹಲಿ: ಕಳಪೆ ನಿದ್ರೆಯ ಗುಣಮಟ್ಟವೂ ದೈಹಿಕ ಆರೋಗ್ಯದ ಮೇಲೆ ಅನಾನುಕೂಲತೆಯ ಸಮಸ್ಯೆಯನ್ನುಂಟು ಮಾಡುತ್ತದೆ. ಅದರಲ್ಲೂ ರಕ್ತದೊತ್ತಡದ ಏರಿಕೆಗೆ ಕಾರಣವಾಗುತ್ತದೆ ಎಂದು ಅಧ್ಯಯನದಿಂದ ಪತ್ತೆ ಮಾಡಲಾಗಿದೆ.

ವಸ್ತುನಿಷ್ಠ ನಿದ್ರೆ ಗುಣಮಟ್ಟವೂ ಒಟ್ಟಾರೆ ನಿದ್ರೆಯ ಅವಧಿಯನ್ನು ಹೊಂದಿರುವುದಿಲ್ಲ. ಆದರೆ ನಿದ್ದೆಯ ವಿವಿಧ ಹಂತದ ಮೌಲ್ಯವನ್ನು ಹೊಂದಿರುತ್ತದೆ. ಎಚ್ಚರ ಅವಧಿಯ ಸಮಯ ಮತ್ತು ಪದೇ ಪದೇ ಎಚ್ಚರಿಕೆಗೊಳ್ಳುವುದನ್ನು ಇದು ಹೊಂದಿದೆ.

ಜಪಾನ್​​ನಲ್ಲಿನ ಸುಕುಬ ಯುನಿವರ್ಸಿಟಿ ಈ ಕುರಿತ ಸಂಗ್ರಹ ಅಧ್ಯಯನ ನಡೆಸಿದೆ. 30 ರಿಂದ 59 ವರ್ಷದೊಳಿಗೆ 100 ಜನ ವಯಸ್ಕರನ್ನು ಎಲೆಕ್ಟ್ರೋಎನ್ಸೆಫಾಲೋಗ್ರಫಿ (ಇಇಜಿ) ನಿದ್ರೆ ಗುಣಮಟ್ಟವನ್ನು ಮಾಪನ ಮಾಡಲಾಗಿದೆ. ಭಾಗಿದಾರರ ಮನೆಯಲ್ಲಿಯೇ ಐದು ದಿನಗಳ ನಿದ್ರೆಯನ್ನು ವಿಶ್ಲೇಷಣೆ ಮಾಡಲಾಗಿದೆ.

ಎಲೆಕ್ಟ್ರೋಎನ್ಸೆಫಾಲೋಗ್ರಫಿ ಎನ್ನುವುದು ಮೆದುಳಿನ ಸ್ವಯಂಪ್ರೇರಿತ ವಿದ್ಯುತ್ ಚಟುವಟಿಕೆಯ ಎಲೆಕ್ಟ್ರೋಗ್ರಾಮ್ ಅನ್ನು ದಾಖಲಿಸುವ ಒಂದು ವಿಧಾನವಾಗಿದೆ. ಹೆಚ್ಚುವರಿಯಾಗಿ ಟೋಕಿಯೋದಲ್ಲಿನ ಆರೋಗ್ಯ ಕಾಳಜಿಯ ವಿವರವಾದ ಆರೋಗ್ಯ ಪರಿಶೀಲನೆ ನಡೆಸಲಾಗಿದೆ.

ಐದು ದಿನಗಳ ಅಧ್ಯಯನದಲ್ಲಿ ಇಇಜಿ ದತ್ತಾಂಶವನ್ನು ಮೂರು ಗುಂಪುಗಳಾಗಿ ವರ್ಗೀಕರಿಸಿ ಅಧ್ಯಯನ ನಡೆಸಲಾಗಿದೆ. ಅದರಲ್ಲಿ ನಿದ್ರೆಯ ವಯಸ್ಸು, ಮಧ್ಯಂತರ ಗುಂಪು ಮತ್ತು ಕಳಪೆ ನಿದ್ರೆ ಗುಂಪುಗಳಾಗಿದೆ.

ಜರ್ನಲ್​ ಸೈಂಟಿಫಿಕ್​ ರಿಪೋರ್ಟ್ಸ್​​​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವು, ಈ ಎಲ್ಲಾ ವಯೋಮಾನದ ಗುಂಪುಗಳ ನಡುವೆ 50 ದೈಹಿಕ ಆರೋಗ್ಯ ಮೌಲ್ಯಮಾಪನ ಮಾಡಲು ಕೃತಕ ಬುದ್ಧಿಮತ್ತೆಯ ಡೊಮೇನ್‌ನೊಳಗೆ ಮೇಲ್ವಿಚಾರಣೆ ಮಾಡದ ಯಂತ್ರ ಕಲಿಕೆಯ ರೂಪವನ್ನು ಬಳಸಿದೆ.

ಈ ಸಂಶೋಧನೆಲ್ಲಿ ಸಿಸ್ಟೊಲಿಕ್​ ಮತ್ತು ಡಯಸ್ಟೊಲಿಕ್​ ರಕ್ತದೊತ್ತಡ, ಯಕೃತ್​​​ ಕಾರ್ಯಾಚರಣೆ ಮಾರ್ಕರ್​ ಮತ್ತು ಸೆರಂ ಕ್ರಿಯಟೈನಿನೆ ವಿಭಿನ್ನತೆ ಗಮನಾರ್ಹವಾಗಿದೆ.

ಈ ವಿಭಿನ್ನತೆಯಲ್ಲಿ ಸಿಸ್ಟೊಲಿಕ್​ ರಕ್ತದೊತ್ತಡವೂ ಹೃದಯದ ಬಡಿತದಲ್ಲಿನ ಅಪಧಮನಿಯಲ್ಲಿನ ಒತ್ತಡವನ್ನು ಮಾಪನ ಮಾಡುತ್ತದೆ. ಇದು ಹೆಚ್ಚಾಗಿ ಕಡಿಮೆ ನಿದ್ರೆ ಗುಂಪಿನವರಲ್ಲಿ ಕಂಡು ಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ನಿದ್ರೆಯ ಗುಣಮಟ್ಟವೂ ನಿದ್ದೆ ಸಮಯದಲ್ಲಿನ ಇಇಜಿ ಮತ್ತು ವಿಷಾಧಾರಿತ ನಿದ್ರೆ ಗುಣಮಟ್ಟದ ನಡುವಿನ ದುರ್ಬಲ ಸಂಬಂಧವನ್ನು ತೋರಿಸಿದೆ. ವಸ್ತುನಿಷ್ಠ ನಿದ್ರೆ ಗುಣಮಟ್ಟವನ್ನು ಸಿಸ್ಟೋಲಿಕ್​ ರಕ್ತದೊತ್ತಡದೊಂದಿಗೆ ಸಂಬಂಧ ಗಮನಾರ್ಹವಾಗಿ ಕಂಡು ಬಂದಿದೆ ಎಂದು ಸಂಶೋಧಕರು ತಿಳಿಸಿದೆ.

ಹೆಚ್ಚುವರಿಯಾಗಿ, ಸಂಶೋಧನೆಯು ಇಇಜಿ ನಿದ್ರೆಯ ಮಾಪನಗಳು ಮತ್ತು ದೈಹಿಕ ಆರೋಗ್ಯ ನಡುವೆ ಬಲವಾದ ಪರಸ್ಪರ ಸಂಬಂಧಗಳನ್ನು ಪ್ರದರ್ಶಿಸುವ ನಿರ್ದಿಷ್ಟ ಸಂಯೋಜನೆಗಳನ್ನು ಗುರುತಿಸಿದೆ. (ಪಿಟಿಐ)

ಇದನ್ನೂ ಓದಿ: ಮೂಡ್​ ಮೇಲೂ ಪರಿಣಾಮ ಬೀರುತ್ತೆ; ಬೇಸರ, ಆತಂಕಕ್ಕೂ ಕಾರಣ ಅರ್ಧಂಬರ್ಧ ನಿದ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.