ನ್ಯೂಯಾರ್ಕ್(ಅಮೆರಿಕ): ಕಳಪೆ ಪೋಷಕಾಂಶವೂ ಟೈಪ್ 2 ಮಧುಮೇಹ ಅಭಿವೃದ್ಧಿ ಮತ್ತು ಖಿನ್ನತೆ, ಆತಂಕದಂತಹ ಮಾನಸಿಕ ಆರೋಗ್ಯದ ಅಪಾಯ ಹೆಚ್ಚಿಸುವ ಎರಡು ಪಾತ್ರವನ್ನು ನಿರ್ವಹಣೆ ಮಾಡುತ್ತದೆ ಎಂದು ಎರಡು ಅಧ್ಯಯನಗಳು ತೋರಿಸಿದೆ.
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಮಧುಮೇಹ ಹೊಂದಿರದ ಜನರಿಗೆ ಹೋಲಿಕೆ ಮಾಡಿದಾಗ ಮಧುಮೇಹ ಹೊಂದಿರುವವರಲ್ಲಿ ಖಿನ್ನತೆ ಹೊಂದುವ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚಿದೆ ಎಂದಿದೆ. ಪೋಷಕಾಂಶ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧ ಅರ್ಥೈಸಿಕೊಳ್ಳಲು ನಡೆಸಿದ ವೈಜ್ಞಾನಿಕ ಅಧ್ಯಯನದಲ್ಲಿ ಇದು ಹೊಸದಾಗಿದೆ.
ಈ ಅಧ್ಯಯನವನ್ನು ಕರ್ನಲ್ ನ್ಯೂಟ್ರಿಯೆಟ್ಸ್ನಲ್ಲಿ ಪ್ರಕಟಿಲಾಗಿದೆ. ಅಧ್ಯಯನದಲ್ಲಿ ಸಂಶೋಧಕರು ಪೋಷಕಾಂಶ, ಮಧುಮೆಹ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿಯ ಬಯಸಿದ್ದಾರೆ.
ಅಧ್ಯಯನದ ಫಲಿತಾಂಶದಲ್ಲಿ, ಖಿನ್ನತೆ, ಆತಂಕ ಟೈಪ್ 2 ಮಧುಮೇಹ ಅಭಿವೃದ್ಧಿಯ ಅಪಾಯದೊಂದಿಗೆ ಸಂಬಂಧ ಹೊಂದಿದ್ದು, ಇದರ ಜೊತೆಗೆ ಮಧುಮೇಹವೂ ಖಿನ್ನತೆ, ಆತಂಕ ಹೆಚ್ಚಳದ ಅಪಾಯದೊಂದಿಗೆ ಸಂಬಂಧ ಹೊಂದಿದೆ ಎಂದು ತೋರಿಸಿದೆ. ಪೋಷಕಾಂಶವೂ ಈ ಎರಡು ಮಾನಸಿಕ ಸಮಸ್ಯೆಗೆ ಪರಿಹಾರ ಆಗಬಲ್ಲದು ಎಂಬುದನ್ನು ಸಹ ಕಂಡುಕೊಳ್ಳಲಾಗಿದೆ.
ಅಧ್ಯಯನದಲ್ಲಿ ಆಹಾರದ ಆಯ್ಕೆಗಳ ಮೂಲಕ ಮಧುಮೇಹ ಮತ್ತು ಮಾನಸಿಕ ಆರೋಗ್ಯದ ನಡುವಿನ ಸಂಬಂಧವನ್ನು ಕಡಿಮೆ ಮಾಡಬಹುದು ಎಂದು ಕಂಡು ಬಂದಿದೆ. ಇದು ಆರೋಗ್ಯ ನೀತಿ ನಿರೂಪಕರು, ಆರೋಗ್ಯ ಆರೈಕೆದಾರರ ಅಭ್ಯಾಸ ಮತ್ತು ಆಹಾರದ ಶಿಫಾರಸುಗಳ ಅಳವಡಿಕೆಯನ್ನು ಹೊಂದಿದೆ. ಇದು ಸಾಮಾನ್ಯ ಜನರಲ್ಲಿ ಸಕಾರಾತ್ಮಕವಾಗಿ ಪರಿಣಾಮ ಬೀರಲಿದೆ ಎಂದು ಅಮೆರಿಕದ ಜಾರ್ಜ್ ಮಸೊನ್ ಯುನಿವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಪ್ರಮುಖ ಲೇಖಕರಾಗಿರುವ ರಧೇನ್ ಬಸಿರಿ ತಿಳಿಸಿದ್ದಾರೆ.
ಅಂತಿಮವಾಗಿ ಸಂಶೋಧಕರು ಜನರಿಗೆ ಆರೋಗ್ಯ ಪ್ರೋತ್ಸಾಹಕ ಆಹಾರದ ಆಯ್ಕೆಗಳು ಕುರಿತು ಜನರಿಗೆ ಮಾಹಿತಿ ನೀಡುವ ಮೂಲಕ ಮಧುಮೇಹದ ಜೊತೆಗೆ ಆತಂಕ ಹಾಗೂ ಖಿನ್ನತೆ ತಡೆಗಟ್ಟುವ ಮತ್ತು ನಿರ್ವಹಣೆ ಮಾಡುವ ರಕ್ಷಣಾತ್ಮಕ ತಂತ್ರವನ್ನು ಮಾಡಬಹುದು ಎಂದಿದ್ದಾರೆ.
ಅಧ್ಯಯನದಲ್ಲಿ ತಂಡವೂ ತಾಜಾ ಹಣ್ಣು, ತರಕಾರಿ, ಸಂಪೂರ್ಣ ಧ್ಯಾನ ಮತ್ತು ಲೀನ್ ಪ್ರೋಟಿನ್ ಹಾಗೂ ಕಡಿಮೆ ಕೊಬ್ಬಿನ ಡೈರಿ ಪದಾರ್ಥಗಳು ಟೈಪ್ 2 ಮಧುಮೇಹ ಮತ್ತು ಖಿನ್ನತೆ ಹಾಗೂ ಆತಂಕದಂತಹ ಆರೋಗ್ಯ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿ ಎಂದು ಕಂಡು ಕೊಂಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚುತ್ತಿದೆ ಟೈಪ್ 2 ಮಧುಮೇಹ: ತಜ್ಞರ ಆತಂಕ