ನವದೆಹಲಿ: ಮೂರನೇ ಹಂತದ ಪ್ರಯೋಗದಲ್ಲಿ ಶೇ 90ರಷ್ಟು ಯಶಸ್ವಿ ಆಗಿರುವ ಫಿಜರ್ ಅಭಿವೃದ್ಧಿಪಡಿಸಿದ ಕೊರಾನಾ ವೈರಸ್ ಲಸಿಕೆಯ ಸ್ಟೋರೇಜ್ ಹಾಗೂ ವಿತರಣೆ ದುಬಾರಿ ಆಗಲಿದೆ ಎಂದು ಏಮ್ಸ್ ದೆಹಲಿ ನಿರ್ದೇಶಕರು ಆತಂಕ ವ್ಯಕ್ತಪಡಿಸಿದ್ದಾರೆ.
ಆರಂಭಿಕ ಪ್ರಯೋಗಗಳ ಫಲಿತಾಂಶ ಡೇಟಾ ಬಿಡುಗಡೆ ಮಾಡಿ ಮಾತನಾಡಿದ ಫಿಜರ್ ಕಂಪನಿ ಸಿಇಒ, ಇದೊಂದು 'ಮಾನವೀಯತೆಗೆ ಉತ್ತಮವಾದ ದಿನ. ಲಸಿಕೆಯ ಪರಿಣಾಮಕಾರಿತ್ವವು ಕಾರ್ಯಸಾಧ್ಯತೆ ಮತ್ತು ಸುರಕ್ಷತೆಯನ್ನು ತೋರಿಸುತ್ತದೆ. ಇದನ್ನು ನೋವೆಲ್ ಎಂಆರ್‌ಎನ್‌ಎ ತಂತ್ರಜ್ಞಾನ ಬಳಸಿ ರೂಪಿಸಲಾಗಿದೆ' ಎಂದಿದ್ದರು.
ಈ ಲಸಿಕೆಯ ಬಗ್ಗೆ ಅಭಿಮತ ವ್ಯಕ್ತಪಡಿಸಿದ ಏಮ್ಸ್ ದೆಹಲಿ ನಿರ್ದೇಶಕ ರಂದೀಪ್ ಗುಲೇರಿಯಾ, ಫಿಜರ್ ಅಭಿವೃದ್ಧಿ ಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆ ಅನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಿದೆ. ಅಂತಹ ಲಾಜಿಸ್ಟಿಕ್ಸ್ ಸ್ಟೋರೇಜ್ ಭಾರತದಲ್ಲಿ ವ್ಯವಸ್ಥೆ ಮಾಡಲು ಕಷ್ಟವಾಗಬಹುದು ಎಂದಿದ್ದಾರೆ.
ಲಸಿಕೆಯನ್ನು ಪ್ರಪಂಚದ ಮೂಲೆ- ಮೂಲೆಗೆ ವಿತರಿಸುವ ಕಠಿಣ ಕಾರ್ಯವನ್ನು ಈಗಲ್ಲೇ ಕೈಗೊಳ್ಳಬೇಕಾಗಿಲ್ಲ. ಅದು ಸುಲಭ ಸಾಧ್ಯವಾಗುವುದಿಲ್ಲ. ಫಿಜರ್ ಲಸಿಕೆಯನ್ನು -70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕಾಗಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಒಂದು ದೊಡ್ಡ ಸವಾಲಾಗಿದೆ. ಕೋಲ್ಡ್ ಸ್ಟೋರೇಜ್ ಕಾಪಾಡಿಕೊಳ್ಳಲು ತೊಂದರೆಗಳನ್ನು ಎದುರಿಸುತ್ತೇವೆ. ವಿಶೇಷವಾಗಿ ಗ್ರಾಮೀಣ ಕಾರ್ಯಾಚರಣೆಗಳಲ್ಲಿ ಸಾಕಷ್ಟು ಸವಾಲು ಎದುರಾಗಲಿದೆ ಎಂದು ಸಂದರ್ಶವೊಂದರಲ್ಲಿ ಹೇಳಿದ್ದಾರೆ.
ಫಿಜರ್ ತನ್ನ ಲಸಿಕೆಯ ಬೆಲೆಯನ್ನು ಇನ್ನು ನಿರ್ಧರಿಸಿಲ್ಲ. ಇದು ಭಾರತಕ್ಕೆ ಆರ್‌ಎನ್‌ಎ ಲಸಿಕೆಗಳು ತುಂಬಾ ದುಬಾರಿಯಾಗಲಿವೆ. ಕೊರೊನಾ ವೈರಸ್ ಲಸಿಕೆಯ ಬೆಲೆ ಪ್ರತಿ ಡೋಸ್‌ಗೆ 37 ಡಾಲರ್ (2,746 ರೂ.) ಆಗಲಿದೆ ಎಂದು ಮಾಡರ್ನಾ ಸಿಇಒ ಸ್ಟೀಫನ್ ಬಾನ್ಸೆಲ್ ಕಾನ್ಫರೆನ್ಸ್ ಹೇಳಿದ್ದರು. ಮತ್ತೊಂದೆಡೆ, ಫಿಜರ್ ತನ್ನ ಕೋವಿಡ್-19 ಲಸಿಕೆ BNT162b2ಗೆ ಇನ್ನೂ ದರ ನಿರ್ಧರಿಸಿಲ್ಲ. ಇದು ಕೂಡ ದುಬಾರಿ ಆಗಲಿದೆ ಎನ್ನಲಾಗುತ್ತಿದೆ.
ಫಿಜರ್‌ನ ಕೊರೊನಾ ವೈರಸ್ ಲಸಿಕೆ ದೇಶದ ಮೂಲೆ- ಮೂಲೆಗೆ ತಲುಪಿಸುವುದು ಕಷ್ಟವಾಗುತ್ತದೆ. ಏಕೆಂದರೆ ಲಸಿಕೆಯ ಸೂಪರ್ ಕೋಲ್ಡ್ ಸ್ಟೋರೇಜ್ ಅವಶ್ಯಕತೆ ಇದೆ. ಇಂತಹ ಸ್ಟೋರೇಜ್ಗಳು ದೊಡ್ಡ ನಗರಗಳಲ್ಲಿನ ಹ ಹೆಚ್ಚಿನ ಆಸ್ಪತ್ರೆಗಳಲ್ಲಿ ಕೂಡ ಲಭ್ಯವಿಲ್ಲ. ಫಿಜರ್‌ನ ಲಸಿಕೆಯ ವ್ಯಾಕ್ಸಿನೇಷನ್ ಕೇಂದ್ರಗಳನ್ನು ತಲುಪಿದ ನಂತರ, ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಿಂದ ಕರಗಿಸಿ ಐದು ದಿನಗಳಲ್ಲಿ ಚುಚ್ಚುಮದ್ದು ಮಾಡಬೇಕು. ಇಲ್ಲದಿದ್ದರೆ ಅವು ಕೆಟ್ಟು ಹೋಗುತ್ತವೆ. ಪ್ರಸ್ತುತ, ಭಾರತವು ಮೈನಸ್ 70 ಡಿಗ್ರಿ ಸೆಲ್ಸಿಯಸ್ ಲಸಿಕೆ ನೀಡುವ ವ್ಯವಸ್ಥೆ ಹೊಂದಿಲ್ಲ. ಆದ್ದರಿಂದ ಇದರ ವಿತರಣೆಯು ಭಾರತ ಮತ್ತು ಸಂಪನ್ಮೂಲಗಳ ಕೊರತೆಯಿರುವ ಬಡ ರಾಷ್ಟ್ರಗಳಿಗೆ ಸವಾಲಾಗಿ ಪರಿಣಮಿಸುತ್ತದೆ ಎಂದರು ಗುಲೇರಿಯಾ ವಿವರಿಸಿದರು.