ETV Bharat / sukhibhava

ಹೃದಯ ರಕ್ತನಾಳದ ಕಾಯಿಲೆಗೇ ಹೆಚ್ಚು ಜನರು ಬಲಿ.. ಏನಿದು ಸಮಸ್ಯೆ.. ಇದಕ್ಕಿಲ್ಲವೇ ಪರಿಹಾರ?

author img

By

Published : Jan 26, 2023, 5:51 PM IST

ಏಷ್ಯನ್, ಕಪ್ಪು ಮತ್ತು ಹಿಸ್ಪಾನಿಕ್ ಜನರಲ್ಲಿ ಸಿವಿಡಿ ಸಂಬಂಧಿತ ಸಾವಿನ ಪ್ರಕರಣಗಳು ಹೆಚ್ಚು - ಕೋವಿಡ್​ - 19 ಹೃದಯ ರಕ್ತನಾಳದ ಆರೋಗ್ಯದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರುತ್ತದೆ.

people-dying-from-cardiovascular-disease-up-by-6-dot-2-pc-in-pandemics-first-year-in-us-study
ಅಮೇರಿಕಾದಲ್ಲಿ ಹೃದಯ ರಕ್ತನಾಳದ ಕಾಯಿಲೆಗೆ ಹೆಚ್ಚು ಜನರು ಸಾವು..!

ವಾಷಿಂಗ್ಟನ್: ಅಮೆರಿಕದಲ್ಲಿ ಹೃದಯರಕ್ತನಾಳದ ಕಾಯಿಲೆಯಿಂದ (ಸಿವಿಡಿ) ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭಿಕ ವರ್ಷದಲ್ಲಿ ಕಾಡಿದ್ದ ಕೋವಿಡ್​​-19 ಸಾಂಕ್ರಾಮಿಕ ರೋಗಕ್ಕಿಂತಲೂ ಎಂದರೆ ಶೇಕಡಾ 6.2ರಷ್ಟು ಹೆಚ್ಚು ಜನ ಹೃದಯ ರಕ್ತನಾಳ ಕಾಯಿಲೆಯಿಂದಲೇ ಮೃತಪಡುತ್ತಿದ್ದಾರೆ ಎಂದು ಅಧ್ಯಯನವೊಂದು ಸ್ಪಷ್ಟಪಡಿಸಿದೆ.

2019ರಲ್ಲಿ 874,613 ಸಿವಿಡಿ ಸಂಬಂಧಿತ ಸಾವಿನ ಸಂಖ್ಯೆಯು 2020ರಲ್ಲಿ 928,741ಕ್ಕೆ ಏರಿಕೆಯಾಗಿದೆ. 2015ರಲ್ಲಿ ಅಪಾರ ಪ್ರಮಾಣದಲ್ಲಿ ಸಿವಿಡಿ ಸಾವುಗಳು ಸಂಭವಿಸಿವೆ. 2003ರಲ್ಲಿ ದಾಖಲಾದ ಹಾಗೂ ಇತ್ತೀಚಿನ ಸಿವಿಡಿ ಸಂಬಂಧಿತ ಸಾವುಗಳ ಸಂಖ್ಯೆ 910,000ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೃದಯ ರೋಗ ಮತ್ತು ಪಾರ್ಶ್ವವಾಯು ಅಂಕಿ - ಅಂಶಗಳ ಬಗ್ಗೆ 2023ರ ಡೇಟಾ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಅಧ್ಯಯನ ನಡೆಸಿ ಈ ಮಾಹಿತಿ ನೀಡಿದೆ. ಈ ಅಧ್ಯಯನದ ವರದಿಯನ್ನು ಸರ್ಕ್ಯುಲೇಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

"ಕಳೆದ ದಶಕದಲ್ಲಿ ಸಾವುಗಳ ಸಂಖ್ಯೆಯು ನಿಧಾನವಾಗಿ ಹೆಚ್ಚಾಗುತ್ತಿದೆ. ಆದರೆ, 2020ರವರೆಗಿನ ಅವಧಿಯನ್ನು ಪರಿಗಣಿಸಿದರೆ, ಪ್ರತಿ ವರ್ಷವೂ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ನಮ್ಮಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. ಲಸಿಕೆಗಳು ಲಭ್ಯವಾಗುವ ಮೊದಲು ದೇಶ ಹಾಗೂ ವಿಶ್ವದಲ್ಲಿ ಎಲ್ಲ ವಯಸ್ಸಿನ ಜನರಿಗೆ ಕೋವಿಡ್​ ಸಾಂಕ್ರಾಮಿಕ ಕಾಯಿಲೆ ಹರಡಿತ್ತು'' ಎಂದು ಸಾವೊ (Tsao)ವಿವರಿಸಿದ್ದಾರೆ.

ಸಾವಿನ ಪ್ರಕರಣಗಳು ಹೆಚ್ಚಳ: ಏಷ್ಯನ್, ಕಪ್ಪು ಮತ್ತು ಹಿಸ್ಪಾನಿಕ್ ಜನರಲ್ಲಿ ಸಿವಿಡಿ ಸಂಬಂಧಿತ ಸಾವಿನ ಪ್ರಕರಣಗಳು ಹೆಚ್ಚು ಕಂಡುಬರುತ್ತಿದೆ. ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಹೆಚ್ಚು ಜನರ ಮೇಲೆ ಪರಿಣಾಮ ಬೀರಿತ್ತು. ಕೋವಿಡ್​-19 ಕಾಯಿಲೆಯಂತೆ, ಹೃದಯ ರಕ್ತನಾಳ ರೋಗವೂ ಜನರನ್ನು ಹೆಚ್ಚು ಕಾಡಿದೆ. ಮತ್ತು ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್​ಯ ಪ್ರಾಥಮಿಕ ಮಾಹಿತಿ ಪ್ರಕಾರ, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಸಾವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.

ಹೃದಯರಕ್ತನಾಳದ ಸಾವುಗಳ ಹೆಚ್ಚಳವಾಗಿರುವುದು ನಿರಾಶಾದಾಯ ಸುದ್ದಿಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ವಾಸ್ತವವಾಗಿ, ಅಸೋಸಿಯೇಷನ್ ​​ಈಗ ಇರುವ ನೈಜತೆ ಅಂಶಗಳನ್ನು ಒಳಗೊಂಡಿದೆ ಎಂದು ಯುಎಸ್​ನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಅಮೇರಿಕನ್ ಹಾರ್ಟ್ ಅಸೋಸಿಯೇಷನ್​ ಸ್ವಯಂಸೇವಕ ಅಧ್ಯಕ್ಷರಾದ ಮಿಚೆಲ್ ಎ. ಆಲ್ಬರ್ಟ್ ಹೇಳಿದರು.

ಹೃದ್ರೋಗ ಮತ್ತು ಸ್ಟ್ರೋಕ್ ರೋಗ: ಕೋವಿಡ್​-19 ಹೃದಯ ರಕ್ತನಾಳದ ಆರೋಗ್ಯದ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರುತ್ತದೆ. ವೈರಸ್​ನಿಂದ ಹೆಪ್ಪುಗಟ್ಟುವಿಕೆ ಮತ್ತು ಉರಿಯೂತ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಹೃದ್ರೋಗ ಮತ್ತು ಸ್ಟ್ರೋಕ್ ರೋಗ ಲಕ್ಷಣಗಳನ್ನು ಹೊಂದಿರುವ ಅನೇಕ ರೋಗಿಗಳು ವೈದ್ಯಕೀಯ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ ಎಂದು ನಮಗೆ ತಿಳಿದಿದೆ. ವಿಶೇಷವಾಗಿ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳಲ್ಲಿ ಹೃದಯ ರಕ್ತನಾಳದ ಸಮಸ್ಯೆಗಳ ಬಳುತ್ತಿರುವವರಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಆದರೆ, ಈ ಹಂತದಲ್ಲೆ ಬಹುತೇಕ ಜನರು ಸಾವನ್ನುಪ್ಪುತ್ತಾರೆ ಎಂದು ಆಲ್ಬರ್ಟ್ ತಿಳಿಸಿದರು.

ಅಮೆರಿಕದಲ್ಲಿ 'ಹೃದಯ ಕಾಯಿಲೆ' ಹೆಚ್ಚು ಜನರು ಸಾವಿಗೀಡಾಗುತ್ತಿದ್ದಾರೆ. ಮತ್ತು ಎಲ್ಲ ಕಾಯಿಲೆಗಳಿಗಿಂತ ಈ ರೋಗದಿಂದಲೇ ಹೆಚ್ಚು ಮೃತರಾಗುತ್ತಿರುವುದರಿಂದ ಇದು ಮೊದಲ ಸ್ಥಾನದಲ್ಲಿದೆ. ಕ್ಯಾನ್ಸರ್​ನಿಂದ ಸಾವುಗಳು - ಎಡನೇ ಸ್ಥಾನ ಪಡೆದುಕೊಂಡಿವೆ. ಅಚ್ಚರಿ ಹಾಗೂ ವಾಸ್ತವ ಎಂದರೆ ಕೋವಿಡ್​-19ರಿಂದ ಮೃತಪಡುವವರ ಸಂಖ್ಯೆ ಮೂರನೇ ಸ್ಥಾನದಲ್ಲಿದೆ. ಈ ಮೂರು ಕಾಯಿಲೆಗಳ ಬಳಿಕ ಅತಿಹೆಚ್ಚು ಜನ ಸಾಯುತ್ತಿರುವುದು ಅಪಘಾತಗಳಿಂದ. ಸ್ಟ್ರೋಕ್​ನಿಂದ ಆಗುವ ಸಾವಿನ ಪ್ರಕರಣಗಳು ಐದನೇ ಸ್ಥಾನದಲ್ಲಿದೆ. 2020ರಲ್ಲಿ ಮೊದಲ ಬಾರಿಗೆ ಕೋವಿಡ್​-19 ನಿಂದ ಮೃತಪಟ್ಟಿರುವುದು ಪ್ರಮುಖ ಕಾರಣಗಳ ಪಟ್ಟಿಯಲ್ಲಿ ಇದೆ. ಇತ್ತೀಚಿನ ವರ್ಷದ ಯುಎಸ್​ಸಿಡಿಸಿಯಿಂದ ಅಂತಿಮ ಅಂಕಿ - ಅಂಶಗಳು ಇವು ಎಂದು ಅಧ್ಯಯನವು ತಿಳಿಸಿದೆ.

ಇದನ್ನೂ ಓದಿ: ತಾಳೆ ಹಣ್ಣು ತಿಂದರೆ ಸ್ತನಗಳು ದೊಡ್ಡದಾಗುತ್ತವೆ ಎಂದ ಯೂಟ್ಯೂಬ್​ ವೈದ್ಯೆಗೆ ಸಂಕಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.