ನ್ಯೂಯಾರ್ಕ್: ಕೋವಿಡ್ 19 ಅಥವಾ ಜ್ವರದ ರೋಗಿಗಳಿಗಿಂತ ಓಮ್ರಿಕಾನ್ ಬಿಎ.5 ತಳಿಯ ಸೋಂಕಿಗೆ ತುತ್ತಾಗಿರುವವರಲ್ಲಿ ಸಾವಿನ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ.
ಈ ಅಧ್ಯಯನದ ಬಗ್ಗೆ ಓಪನ್ ಫೋರಂ ಇನ್ಫೆಕ್ಷನ್ ಡಿಸೀಸ್ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದಲ್ಲಿ 2021 ಮತ್ತು 2022 ರಲ್ಲಿ ಕೋವಿಡ್ 19 ಮತ್ತು ಇನ್ಫುಯೆಂಜಾದಿಂದ ಐಸಿಯುನಲ್ಲಿ ದಾಖಲಾಗಿರುವ ರೋಗಿಗಳ ಪ್ರಮಾಣವನ್ನು ಪರಿಗಣಿಸಲಾಗಿದೆ.
ಕೋವಿಡ್ 19 ಅವಧಿಯಲ್ಲಿ ಐಸಿಯುಗೆ ದಾಖಲಾದ ಪ್ರಮಾಣವೂ ಇನ್ಫುಯೆಂಜಾ ಅವಧಿಗೆ ಸಮವಾಗಿದೆ. ಓಮ್ರಿಕಾನ್ ಬಿಎ. 5 ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಸಾವಿನ ಸಂಖ್ಯೆ ಇನ್ಫುಯೆಂಜಾದಿಂದ ಆಸ್ಪತ್ರೆಗೆ ದಾಖಲಾದ ಸಾವಿನ ಪ್ರಮಾಣಕ್ಕಿಂತ ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.
ವಯಸ್ಕರಲ್ಲಿ 18 ರಿಂದ 49 ವರ್ಷದವರಲ್ಲಿ ಆಸ್ಪತ್ರೆಯಲ್ಲಿನ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಕೋವಿಡ್ 19 ಮತ್ತು ಇನ್ಫುಯೆಂಜಾದಿಂದ ಸಾವನ್ನಪ್ಪಿದ ವಯಸ್ಕರಲ್ಲಿ ಯಾವುದೇ ಗಮನಾರ್ಹ ವಿಭಿನ್ನತೆ ಇಲ್ಲ.
'ಕೋವಿಡ್ 19 ವೈರಸ್ ಮುಂದುವರೆದಿದೆ. ನಮ್ಮ ದತ್ತಾಂಶದ ಪ್ರಕಾರ ಡೆಲ್ಟಾ ಪ್ರಾಬಲ್ಯ ಹಾಗೂ ಓಮ್ರಿಕಾನ್ ಬಿಎ.5 ಪ್ರಾಬಲ್ಯದ ನಡುವಿನ ಅವಧಿಯಲ್ಲಿ ಸೋಂಕಿತು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯಲ್ಲಿ ಕುಸಿತ ಆಗಿದೆ ಎಂದು ಜಾರ್ಜಿಯಾದಲ್ಲಿನ ಸಿಡಿಸಿ ಇನ್ಫುಯೆಂಜಾ ವಿಭಾಗದ ನೋಹಾ ಕೊಜಿಮಾ ತಿಳಿಸಿದ್ದಾರೆ.
ಈ ಸಂಶೋಧನೆಯಲ್ಲಿ 5,777 ಕೋವಿಡ್ ಬಾಧಿತರು ಮತ್ತು 2,363 ಜ್ವರ ಇರುವವರನ್ನೂ ಕೂಡ ಅಧ್ಯಯನ ನಡೆಸಲಾಗಿದೆ. 2021 ರ ಅಕ್ಟೋಬರ್ ಮತ್ತು ಡಿಸೆಂಬರ್ನ ಸಮಯದ ಡೆಲ್ಟಾ ವೆರಿಯೆಂಟ್ ಪೂರ್ವ ಪ್ರಾಬಲ್ಯದ ಅವಧಿಯಲ್ಲಿ 1,632 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.
2021-22 ರಲ್ಲಿ ಜ್ವರದಿಂದ 2,363 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದಾಗ್ಯೂ, ಈ ಅಧ್ಯಯನದ ಅವಧಿಯಲ್ಲಿ ಕೋವಿಡ್ 19 ನಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕುಸಿತಗೊಂಡಿತ್ತು. ಒಟ್ಟಾರೆ ಓಮ್ರಿಕಾನ್ ನಂತರದ ಉಪತಳಿ (ಬಿಎ.2 ಮತ್ತು ಬಿಎ.5) ಅವಧಿಯಲ್ಲಿ ಸೋಂಕಿನ ತೀವ್ರತೆ ಸಾಮಾನ್ಯವಾಗಿದೆ. ಈ ತೀವ್ರತೆಯ ಬಗ್ಗೆ ಮೇಲ್ವಿಚಾರಣೆ ಮುಂದುವರೆಸಲಾಗಿದ್ದು, ಬಿಎ.5 ಪ್ರಾಬಲ್ಯವೂ ಬಹು ಅಂಶಗಳಿಂದ ಕೂಡಿದೆ. (ಐಎಎನ್ಎಸ್)
ಇದನ್ನೂ ಓದಿ: ಆತಂಕ, ನಿದ್ರೆಯಲ್ಲಿ ತೊಡಕು: ಜೆಎನ್ 1 ಸೋಂಕಿನ ಹೊಸ ಲಕ್ಷಣಗಳು