ETV Bharat / sukhibhava

ಪಾರ್ಕಿನ್ಸನ್​ ಕಾಯಿಲೆ; ವೃದ್ಧಾಪ್ಯದಲ್ಲಿ ಕಾಡುವ ಈ ಸಮಸ್ಯೆ ಕುರಿತು ನಿರ್ಲಕ್ಷ್ಯ ಬೇಡ

ಪಾರ್ಕಿನ್ಸನ್​ ಕಾಯಿಲೆಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ, ಆಹಾರ ಕ್ರಮದ ಬದಲಾವಣೆ ಮತ್ತು ಪೋಷಣೆಯಿಂದ ಈ ಕಾಯಿಲೆಯನ್ನು ನಿರ್ವಹಣೆ ಮಾಡಬಹುದು.

Parkinson's disease; Don't neglect this problem in old age

author img

By

Published : Apr 11, 2023, 10:29 AM IST

ವೃದ್ಧಾಪ್ಯದಲ್ಲಿ ಹೆಚ್ಚಾಗಿ ಕಂಡು ಬರುವ ಪಾರ್ಕಿನ್ಸನ್​ ಕಾಯಿಲೆ ಮೆದುಳಿನ ಅಸ್ವಸ್ಥತೆಯಾಗಿದೆ. ಈ ಮಾರಣಾಂತಿಕ ಕಾಯಿಲೆ ಬಗ್ಗೆ ಇಂದಿಗೂ ಅನೇಕ ಮಂದಿಗೆ ಮಾಹಿತಿ ಕೊರತೆ ಇದೆ. ಈ ಹಿನ್ನೆಲೆ ಈ ರೋಗದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಏಪ್ರಿಲ್​ 11ರಂದು ಪಾರ್ಕಿಸನ್​ ದಿನವಾಗಿ ಜಗತ್ತಿನಾದ್ಯಂತ ಆಚರಿಸಲಾಗುವುದು. ಈ ದಿನದಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಗುವುದು. ಈ ವರ್ಷ "#Take6forPD" ಎಂಬ ಘೋಷವಾಕ್ಯದ ಅಡಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ.

ಮೆದುಳಿನ ಸಮಸ್ಯೆ: ಮೆದುಳಿನ ನಿರ್ದಿಷ್ಟ ಕೋಶಗಳಿಗೆ ಹಾನಿಯಾಗುವುದರಿಂದ ಈ ಪಾರ್ಕಿನ್ಸನ್​ ಕಾಯಿಲೆ ಉಂಟಾಗುತ್ತದೆ. ಇದರಿಂದಾಗಿ ಕೈ ಮತ್ತು ಪಾದಗಳಲ್ಲಿ ನಡುಕ ಉಂಟಾಗುತ್ತದೆ. ಅಲ್ಲದೇ, ಸ್ನಾಯು ಬಿಗಿಯುವಂತೆ ಆಗುತ್ತದೆ. ಇದರಿಂದ ದೇಹದ ಸಮತೋಲನ ಕಾಪಾಡುವುದು ಕಷ್ಟವಾಗುತ್ತದೆ. ಇದನ್ನು ನ್ಯೂರೋ ಡಿಜೆನರೇಟಿವ್​ ಡಿಸಾರ್ಡರ್​ ಎಂದೂ ಕರೆಯಲಾಗುವುದು. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಆಹಾರ ಮತ್ತು ಪೋಷಣೆಯಿಂದ ಇದನ್ನು ನಿರ್ವಹಣೆ ಮಾಡಬಹುದು. ಪ್ರತಿ ಆರು ನಿಮಿಷಕ್ಕೊಮ್ಮೆ ಈ ರೋಗ ಪತ್ತೆಯಾಗುತ್ತಿದ್ದು, ಇದರ ಬಗ್ಗೆ ಮುಂಜಾಗ್ರತೆ ವಹಿಸಬೇಕಿದೆ.

ಪಾರ್ಕಿನ್ಸನ್ ಕಾಯಿಲೆಯು ನ್ಯೂರೋ ಡಿಜೆನರೇಟಿವ್ ಡಿಸಾರ್ಡರ್ ಆಗಿದೆ. ಪಾರ್ಕಿನ್ಸನ್ ಡಾಟ್ ಆರ್ಗ್ ಪ್ರಕಾರ, ಮೆದುಳಿನ ನಿರ್ದಿಷ್ಟ ಭಾಗದಲ್ಲಿ ಸಬ್ಸ್ಟಾಂಟಿಯಾ ನಿಗ್ರಾದಲ್ಲಿ ಡೋಪಮೈನ್-ಉತ್ಪಾದಿಸುವ ನ್ಯೂರಾನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದ ಲಕ್ಷಣಗಳು ನಿಧಾನವಾಗಿ ಬೆಳವಣಿಗೆ ಕಂಡು ಗೋಚರವಾಗುತ್ತವೆ. ಅಲ್ಲದೇ ಇದರ ಲಕ್ಷಣ ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ.

ವಿಶ್ರಾಂತಿಯ ಸಮಯದಲ್ಲಿಯೂ ಕೈಕಾಲುಗಳು ನಡುಗುವುದು.

ಚಲನೆ ನಿಧಾನವಾಗುವುದು

ಕೈಕಾಲುಗಳಲ್ಲಿ ಬಿಗಿತ.

ವಾಕಿಂಗ್​ ಮಾಡುವ ಸಮತೋಲನ ಸಮಸ್ಯೆ

ಭಂಗಿ ಸಮಸ್ಯೆ

ನಿದ್ರಾಹೀನತೆ

ಅಮೆರಿಕದಲ್ಲಿ ಸಾವಿಗೆ ಕಾರಣ: ಪಾರ್ಕಿನ್ಸನ್ ಕಾಯಿಲೆಯ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದೆ. ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ, ಇದಕ್ಕೆ ವಿವಿಧ ಚಿಕಿತ್ಸೆ ವಿಧಾನವಿದೆ. ಈ ರೋಗವು ಮಾರಣಾಂತಿಕವಲ್ಲದಿದ್ದರೂ ಇದರ ಸಮಸ್ಯೆಗಳು ತುಂಬಾ ಗಂಭೀರವಾಗಿರುತ್ತವೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ (ಸಿಡಿಸಿ) ಪ್ರಕಾರ, ಅಮೆರಿಕದಲ್ಲಿ ಸಾವಿನ ಪ್ರಮುಖ ಕಾರಣಗಳಲ್ಲಿ ಈ ರೋಗವೂ ಒಂದಾಗಿದ್ದು, ಇದು 14ನೇ ಸ್ಥಾನದಲ್ಲಿದೆ.

ಹೀಗಿರಲಿ ನಿರ್ವಹಣೆ: ಆಹಾರದಲ್ಲಿನ ಬದಲಾವಣೆ ಮಾಡುವ ಮೂಲಕ ಈ ರೋಗವನ್ನು ನಿರ್ವಹಣೆ ಮಾಡಬಹುದು. ಜೊತೆಗೆ ಮೀನಿನ ಎಣ್ಣೆ ಮತ್ತು ವಿಟಮಿನ್ ಬಿ 1, ಸಿ ಮತ್ತು ಡಿ ಸಮೃದ್ಧವಾಗಿರುವ ಆಹಾರವನ್ನು ಡಯಟ್​ನಲ್ಲಿ ಸೇರಿಸಬಹುದು. ಒಮೆಗಾ -3 ಕೊಬ್ಬಿನಾಮ್ಲಗಳು ನರಗಳ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರೋಗದ ರೋಗಿಗಳಿಗೆ ಒಮೆಗಾ-3 ಕೊಬ್ಬಿನ ಮೀನು ಅಥವಾ ಒಮೆಗಾ-3 ಪೂರಕಗಳನ್ನು ನೀಡಿದರೆ, ರೋಗಲಕ್ಷಣಗಳನ್ನು ಸರಾಗಗೊಳಿಸುವಲ್ಲಿ ಇದು ಪ್ರಯೋಜನಕಾರಿಯಾಗಿದೆ.

ಈ ರೋಗದ ಸಮಸ್ಯೆಯಿಂದ ಬಳಲುತ್ತಿರುವವರು ಸಕ್ಕರೆ, ಉಪ್ಪು ಮತ್ತು ಸಂಸ್ಕರಿಸಿದ ಆಹಾರ, ಹೆಚ್ಚಿನ ಕೊಬ್ಬಿನ ಆಹಾರ, ಚೀಸ್​ನಂತ ಡೈರಿ ಉತ್ಪನ್ನ, ಕಡಿಮೆ ಕೊಬ್ಬಿನ ಹಾಲು, ಯೋಗರ್ಟ್​​ನಂತಹ ಆಹಾರದಿಂದ ದೂರ ಇರುವುದು ಒಳಿತು. ಈ ರೋಗಿಗಳು ಸಾಮಾನ್ಯವಾಗಿ ಊತ ಮತ್ತು ಜಗಿಯುವ ಸಮಸ್ಯೆ ಅನುಭವಿಸುವುದರಿಂದ ಮಾಂಸ ಆಹಾರದಿಂದ ದೂರ ಇರುವುದು ಉತ್ತಮ.

ಇದನ್ನೂ ಓದಿ: ಬೇಸಿಗೆಯಲ್ಲಿ ಐಸ್​ಕೋಲ್ಡ್​ ನೀರು ಕುಡಿಯುವುದರಿಂದ ಆರೋಗ್ಯ ಸಮಸ್ಯೆ: ತಜ್ಞರ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.