ಮಿಚಿಗನ್: ಮಕ್ಕಳು ಶಾಲೆಯಿಂದ ಮರಳಿದ ಬಳಿಕ ಪೋಷಕರನ್ನು ಕಾಡುವ ಪ್ರಮುಖವಾದ ಎರಡು ಕಾಳಜಿಯ ವಿಷಯಗಳೆಂದರೆ ಸಾಮಾಜಿಕ ಮಾಧ್ಯಮದ ಪರಿಣಾಮ ಮತ್ತು ಅಂತರ್ಜಾಲದ ಅತಿಯಾದ ಬಳಕೆಯಂತೆ. ಯುನಿವರ್ಸಿಟಿ ಆಫ್ ಮಿಚಿಗನ್ ಹೆಲ್ತ್ ಸಿಎಸ್ ಮೊಟ್ ಚಿಲ್ಡ್ರನ್ ಹಾಸ್ಪಿಟಲ್ ಮಕ್ಕಳ ಆರೋಗ್ಯ ವಿಚಾರದಲ್ಲಿ ರಾಷ್ಟ್ರೀಯ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪೋಷಕರು, ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯವು ತಮ್ಮ ಆರೋಗ್ಯದ ಅತ್ಯಂತ ಕಾಳಜಿ ವಿಷಯ ಎಂದಿದ್ದಾರೆ.
ಅಮೆರಿಕದಲ್ಲಿ ಈ ವರ್ಷ ಮಕ್ಕಳ ಆರೋಗ್ಯ ಸಂಬಂಧಿತ ಪೋಷಕರ ಕಾಳಜಿ ವಿಚಾರದಲ್ಲಿ ಮಾನಸಿಕ ಆರೋಗ್ಯ ಮತ್ತು ತಂತ್ರಜ್ಞಾನ ಪ್ರಮುಖ 10 ವಿಷಯಗಳಲ್ಲಿ ಮೊದಲ ಸ್ಥಾನ ಪಡೆದಿದೆ. ದಶಕದ ಹಿಂದೆ ಪೋಷಕರ ಕಾಳಜಿಯ ವಿಷಯವಾಗಿದ್ದ ಮಕ್ಕಳ ಬಾಲ್ಯದ ಸ್ಥೂಲಕಾಯತೆ ಆರೋಗ್ಯ ವಿಚಾರವನ್ನು ಇದು ಮೀರಿದೆ.
ಮಕ್ಕಳ ಸ್ಕ್ರೀನ್ ಟೈಂ ಹೆಚ್ಚಳ: ತಂತ್ರಜ್ಞಾನಗಳು ಮಕ್ಕಳ ಅನಾರೋಗ್ಯಕರ ತಿನ್ನುವ ಅಭ್ಯಾಸ ಮತ್ತು ಸ್ಥೂಲಕಾಯತೆ ಸೇರಿದಂತೆ ದೈಹಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿರುವುದನ್ನು ಪೋಷಕರು ಇಂದಿಗೂ ಕಾಣುತ್ತಿದ್ದಾರೆ. ಆದರೆ ಈ ಎಲ್ಲಾ ಸಮಸ್ಯೆಗಳನ್ನು ಮಾನಸಿಕ ಆರೋಗ್ಯ, ಸಾಮಾಜಿಕ ಮಾಧ್ಯಮ ಮತ್ತು ಸ್ಕ್ರೀನ್ ಟೈಮ್ಗಳು ಮೀರಿಸಿದೆ ಎಂದು ಮೊಟ್ ಪೊಲ್ ಸಹನಿರ್ದೇಶಕ ಮತ್ತು ಮೋಟ್ ಮಕ್ಕಳ ತಜ್ಞ ಸುಸನ್ ವೂಲ್ಫೋರ್ಡ್ ತಿಳಿಸಿದ್ದಾರೆ.
ಮೂರರಲ್ಲಿ ಇಬ್ಬರು ಪೋಷಕರು ಮಕ್ಕಳು ತಮ್ಮ ಸ್ಕ್ರೀನ್ ಟೈಮ್ ಹೆಚ್ಚಳದ ಬಗ್ಗೆ ಚಿಂತಿತರಾಗಿದ್ದಾರೆ. ಈ ವರ್ಷ ಮಕ್ಕಳ ಆರೋಗ್ಯ ಕಾಳಜಿ ವಿಚಾರದಲ್ಲಿ ಇದು ಮೊದಲ ಮತ್ತು ಎರಡನೇ ಸ್ಥಾನ ಪಡೆದಿದೆ ಎಂದು ರಾಷ್ಟ್ರೀಯವಾಗಿ ಪ್ರತಿನಿಧಿಸಿದ ಸಮೀಕ್ಷೆ ಹೇಳಿದೆ.
ಮಕ್ಕಳು ಸಣ್ಣ ವಯಸ್ಸಿನಲ್ಲೇ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸಾಧನಗಳನ್ನು ಬಳಕೆ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದನ್ನು ಕಂಡುಕೊಂಡಿದ್ದಾರೆ. ಇದರ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸಾಕಷ್ಟು ಚಿಂತಿತರಾಗಿದ್ದಾರೆ ಎಂದು ಲೇಖಕರು ತಿಳಿಸಿದ್ದಾರೆ.
ಸಾಂಕ್ರಾಮಿಕದ ಸಮಯದಲ್ಲಿ ಈ ಸ್ಕ್ರೀನ್ ಟೈಮ್ ಬೆಳವಣಿಗೆ ಹೆಚ್ಚಿದ್ದು, ಇದು ಪೋಷಕರಿಗೆ ಕಾಳಜಿ ವಿಚಾರವಾಗಿದೆ ಎಂದು ಹಿಂದಿನ ಅಧ್ಯಯನದಲ್ಲಿ ಸಲಹೆ ಮಾಡಲಾಗಿತ್ತು. ಪೋಷಕರು ನಿಯಮಿತವಾಗಿ ಮಕ್ಕಳ ತಂತ್ರಜ್ಞಾನ ಬಳಕೆಯನ್ನು ಮೌಲ್ಯಮಾಪನ ಮಾಡುವುದು. ಮಕ್ಕಳು ಅನಾರೋಗ್ಯಕರ ನಡವಳಿಕೆಯ ಲಕ್ಷಣ ತೋರಿದಲ್ಲಿ ಅದರ ಬಳಕೆಗೆ ಮಿತಿ ಹೇರುವುದು ಸೇರಿದಂತೆ ಕೆಲವು ನಿಯಮಿತ ಮೌಲ್ಯಮಾಪನ ನಡೆಸಬೇಕು ಎಂದು ವೂಲ್ಫೋರ್ಡ್ ತಿಳಿಸಿದ್ದಾರೆ. ಅಲ್ಲದೇ, ಕೆಲವು ಸಾಮಾಜಿಕ ಮಾಧ್ಯಮ ಮತ್ತು ಸಾಧನಗಳ ಸೆಟ್ಟಿಂಗ್ಗಳು ಕೂಡ ಮಕ್ಕಳ ರಕ್ಷಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.
ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಕಾಳಜಿ ಪ್ರಮುಖ: ಸಮೀಕ್ಷೆಯಲ್ಲಿ ಕಳೆದ ಫೆಬ್ರವರಿಯಲ್ಲಿ 2,099 ಮಂದಿ ಮಕ್ಕಳ ಮಾನಸಿಕ ಆರೋಗ್ಯ ಕಾಳಜಿ ವಿಚಾರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಬಹುತೇಕ ಪೋಷಕರು, ಖಿನ್ನತೆ, ಆತ್ಮಹತ್ಯೆ, ಒತ್ತಡ, ಆತಂಕ ಮತ್ತು ಕಿರುಕುಳದಂತಹ ದೊಡ್ಡ ಸಮಸ್ಯೆಗಳು ಕಾಳಜಿ ವಿಚಾರವಾಗಿದೆ. ಅರ್ಧಕ್ಕಿಂತ ಹೆಚ್ಚಿನ ಪೋಷಕರು ಮಕ್ಕಳ ಮಾನಸಿಕ ಆರೋಗ್ಯ ಸೇವೆ ಕೊರತೆ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ.
ಪೋಷಕರು, ಶಾಲೆಗಳು ಮಕ್ಕಳ ಉದಯೋನ್ಮುಖ ಆರೋಗ್ಯ ಕಾಳಜಿ ವಿಚಾರಗಳನ್ನು ಪರಿಹರಿಸಲು ಮುಂದಾಗಬೇಕಿದೆ. ಅವರು ತಮ್ಮ ಮಕ್ಕಳು ಮತ್ತು ಹದಿಹರೆಯದವರೊಂದಿಗೆ ನಿಯಮಿತವಾಗಿ ಸಂಭಾಷಣೆಗಳನ್ನು ಮರುಪರಿಶೀಲಿಸಬೇಕು. ಅದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅವರು ಅನುಭವಿಸುವ ವಿಷಯಗಳನ್ನು ಹಂಚಿಕೊಳ್ಳಲು ಅಧ್ಯಯನ ಪ್ರೋತ್ಸಾಹಿಸಿದೆ. (ಎಎನ್ಐ)
ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಬಳಕೆ ಯುವಜನತೆ ಮತ್ತು ಮಕ್ಕಳಲ್ಲಿ ಖಿನ್ನತೆ ಉಂಟು ಮಾಡಲ್ಲ: ಸಂಶೋಧನೆ