ನ್ಯೂಯಾರ್ಕ್: ಮೀನು ಮತ್ತು ಮೀನಿನ ಎಣ್ಣೆಯ ಪೂರಕದಲ್ಲಿ ಅಗಾಧ ಪ್ರಮಾಣದಲ್ಲಿ ಕಂಡು ಬರುವ ಒಮೆಗಾ -3 ಫ್ಯಾಟಿ ಆ್ಯಸಿಡ್ ಇದೀಗ ಶ್ವಾಸಕೋಶದ ಆರೋಗ್ಯ ನಿರ್ವಹಣೆಗೆ ಪ್ರಯೋಜನ ನೀಡುತ್ತದೆ ಎಂದು ಹೊಸ ಸಂಶೋಧನೆ ತಿಳಿಸಿದೆ.
ಒಮೆಗಾ-3 ಫ್ಯಾಟಿ ಆ್ಯಸಿಡ್ಗಳು ಊರಿಯೂತದ ಪ್ರಯೋಜನ ಹೊಂದಿದೆ. ಈ ಹಿಂದಿನ ಅಧ್ಯಯನದಲ್ಲೂ ಇದು ಹೃದಯದ ಆರೋಗ್ಯವೃದ್ಧಿ ಹೆಚ್ಚಿಸಿ, ಹೃದಯ ಸಮಸ್ಯೆ ಮತ್ತು ಪಾರ್ಶ್ವವಾಯು ಪ್ರಕರಣಗಳು ತಡೆಗಟ್ಟುತ್ತದೆ ಎಂದು ಅಧ್ಯಯನ ತಿಳಿಸಿದೆ. ಜೊತೆಗೆ ಕ್ಯಾನ್ಸರ್ ಅಪಾಯವನ್ನು ಕೂಡ ಇದು ಕಡಿಮೆ ಮಾಡುತ್ತದೆ.
ಅಮೆರಿಕನ್ ಜರ್ನಲ್ ಆಫ್ ರೆಸ್ಪಿರೆಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಒಮೆಗಾ 3, ಶ್ವಾಸಕೋಶದನ ನಡುವಿನ ಸಂಬಂಧ ಕುರಿತು ಬಲವಾದ ಪುರಾವೆ ತೋರಿಸಲಾಗಿದೆ. ಒಮೆಗಾ 3 ಫ್ಯಾಟಿ ಆ್ಯಸಿಡ್ಗಳು ಒಣಹಣ್ಣುಗಳು ಮತ್ತು ಬೀಜ, ಸಸ್ಯ ಎಣ್ಣೆ ಮತ್ತು ಪೊರ್ಟಿಫೈಡ್ ಆಹಾರದಲ್ಲಿ ಇರುತ್ತದೆ ಎಂಬುದನ್ನು ತೋರಿಸಿದೆ. ಇದು ಶ್ವಾಸಕೋಶನ ಕಾರ್ಯಾಚರಣೆ ಕುಗ್ಗುವುದನ್ನು ತಡೆಯಲು ಸಾಧ್ಯಮಾಡುತ್ತದೆ ಎಂದು ತೋರಿಸಲಾಗಿದೆ.
ಕ್ಯಾನ್ಸರ್ ಮತ್ತು ಹೃದಯನಾಳ ಸಮಸ್ಯೆಗಳಲ್ಲಿ ಆಹಾರ ಪದ್ದತಿಯ ಪಾತ್ರ ಕುರಿತು ನಮಗೆಲ್ಲ ತಿಳಿದಿದೆ. ಆದರೆ, ದೀರ್ಘಾವಧಿಯ ಶ್ವಾಸಕೋಶ ಸಮಸ್ಯೆಯಲ್ಲಿನ ಆಹಾರ ಪದ್ದತಿ ಪಾತ್ರವನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಕರೆಸ್ಪಾಂಡಿಂಗ್ ಲೇಖಕ ಪ್ಯಾಟ್ರಿಸಿಯ ಎ ಕ್ಯಾಸನೊ ತಿಳಿಸಿದ್ದಾರೆ.
ಈ ಅಧ್ಯಯನವೂ ಒಮೆಗಾ 3 ಫ್ಯಾಟಿ ಆ್ಯಸಿಡ್ ಆರೋಗ್ಯಯುತ ಆಹಾರ ಪದ್ಧತಿಯ ಭಾಗವಾಗಿದ್ದು, ಇದು ಶ್ವಾಸಕೋಶದ ಆರೋಗ್ಯಕ್ಕೂ ಪ್ರಮುಖ ಎಂಬುದರ ಸಾಕ್ಷಿಯನ್ನು ಅಧ್ಯಯನ ತಿಳಿಸಿದೆ ಎಂದಿದ್ದಾರೆ ಲೇಖಕರು. ರಕ್ತದಲ್ಲಿನ ಒಮೆಗಾ 3 ಫ್ಯಾಟಿ ಆ್ಯಸಿಡ್ ಮಟ್ಟ ಮತ್ತು ಶ್ವಾಸಕೋಶ ಕಾರ್ಯಾಚರಣೆ ನಡುವಿನ ಸಂಬಂಧಗಳು ಕುರಿತು ಕಾಲಾನಂತರದಲ್ಲಿ ಅಧ್ಯಯನಕಾರರು ಎರಡು ಭಾಗದ ಅಧ್ಯಯನವಾಗಿ ಅಭಿವೃದ್ಧಿಪಡಿಸಿದ್ದಾರೆ.
ಮೊದಲ ಭಾಗದಲ್ಲಿ ಸಂಶೋಧಕರು 15, 063 ಸಾರಾಸರಿ 56 ವರ್ಷದ ಅಮೆರಿಕನ್ರನ್ನು ಒಳಗೊಂಡ ಲಾಂಗಿಟ್ಯೂಡಿನಲ್ ಅಧ್ಯಯನ ನಡೆಸಿದ್ದಾರೆ. ಭಾಗಿದಾರರ ಸಾಮಾನ್ಯ ಆರೋಗ್ಯದೊಂದಿಗೆ ಅಧ್ಯಯನ ಆರಂಭಿಸಲಾಗಿದೆ. ಈ ವೇಳೆ, ಅವರಿಗೆ ದೀರ್ಘವಾಧಿಕ ಶ್ವಾಸಕೋಶದ ಸಮಸ್ಯೆ ಪತ್ತೆಯಾಗಿಲ್ಲ. ಇವರನ್ನು 7ರಿಂದ 20 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ.
ಲಾಂಗಿಟ್ಯೂಡಿನಲ್ ಅಧ್ಯಯದಲ್ಲಿ ಭಾಗಿದಾರನ ರಕ್ತದಲ್ಲಿನ ಒಮೆಗಾ-3 ಫ್ಯಾಟಿ ಆ್ಯಸಿಡ್ ಶ್ವಾಸಕೋಶದ ಸಮಸ್ಯೆಯನ್ನು ತಗ್ಗಿಸಿದೆ. ಸಂಶೋಧಕರು ಇದೇ ವೇಳೆ ಡಿಎಚ್ಎ, ಒಮೆಗಾ 3 ಫ್ಯಾಟಿ ಆ್ಯಸಿಡ್ ಅನ್ನು ಫ್ಯಾಟಿ ಫಿಶ್ ಆದ ಸಲ್ಮೊನ್, ಟ್ಯೂನಾ ಮತ್ತು ಸರ್ಡೈನ್ನಲ್ಲಿ ಪತ್ತೆ ಮಾಡಿದ್ದಾರೆ. ಎರಡನೇ ಭಾಗದಲ್ಲಿ ಸಂಶೋಧಕರು ಯುರೋಪಿಯನ್ನ 500000 ಭಾಗಿದಾರ ರೋಗಿಗಳ ಅನುವಂಶಿಕ ದತ್ತಾಂಶವನ್ನು ಪಡೆದಿದ್ದಾರೆ.
ರಕ್ತದಲ್ಲಿನ ಅನುವಂಶಿಕತೆಯನ್ನು ಪರೋಕ್ಷ ಮಾಪನವಾಗಿ ಒಮೆಗಾ 3 ಫ್ಯಾಟಿ ಮಟ್ಟವನ್ನು ಅಳೆಯಲು ಬಳಸಲಾಗಿದೆ. ಸಂಶೋಧಕರು ಡಿಎಚ್ಎ ಸೇರಿದಂತೆ ಹೆಚ್ಚಿನ ಮಟ್ಟದ ಒಮೆಗಾ-3 ಫ್ಯಾಟಿ ಆ್ಯಸಿಡ್ಗಳು ಉತ್ತಮ ಶ್ವಾಸಕೋಶ ಕಾರ್ಯಚರಣೆಯೊಂದಿಗೆ ಸಂಬಂಧ ಹೊಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವೈರಲ್ ಫೀವರ್ ಪ್ರಕರಣಗಳು ಹೆಚ್ಚಳ; ಮುನ್ನೆಚ್ಚರಿಕೆ ಮರೆಯದಿರಿ..