ನವದೆಹಲಿ: ನಿಫಾ ಸೋಂಕು ಉಸಿರಾಟದ ಹನಿಗಳಿಂದ ಹರಡಲಿದ್ದು, ಕೊರೊನಾಗೆ ಹೋಲಿಕೆ ಮಾಡಿದಾಗ ಈ ಸಾವಿನ ಸೋಂಕಿನ ದರ 40 ರಿಂದ 70 ರಷ್ಟು ಹೆಚ್ಚಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ (ಐಸಿಎಂಆರ್) ನಿರ್ದೇಶಕ ಡಾ ರಾಜೀವ್ ಬಹಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಾವಿನ ದರ ಶೇ 2-3ರಷ್ಟಿದೆ. ನಿಫಾ ಝೋನಾಟಿಕ್ ವೈರಸ್ ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಾಗಿದೆ. ಇದರ ಮೂಲ ಬಾವುಲಿಗಳು ಕಚ್ಚಿ ತಿಂದ ಹಣ್ಣಾಗಿದೆ ಎಂದಿದ್ದಾರೆ. ನಿಫಾ ಸೋಂಕು ರಕ್ತ ಮತ್ತು ದೇಹದ ದ್ರವದ ಡ್ರಾಪ್ಲೆಟ್ ಅಂದರೆ ಹನಿಗಳ ಮೂಲಕ ಹರಡುತ್ತದೆ. ಹೆಚ್ಚಿನ ಸಾವಿನ ದರ ಹೊಂದಿರುವ ಈ ಸೋಂಕು ಕೋವಿಡ್ನಂತೆ ಹರಡುವಿಕೆ ಹೊಂದಿಲ್ಲ. ಇದರ ಹರಡುವಿಕೆಯ ದರ ಕಡಿಮೆಯಿದ್ದು, ಗರಿಷ್ಠ ಪ್ರಕರಣಗಳು 100ರಷ್ಟು ಎಂದು ಮಾಹಿತಿ ನೀಡಿದರು.
ನಿಫಾ ಸೋಂಕು ಮೊದಲ ಬಾರಿಗೆ 1999ರಲ್ಲಿ ಪತ್ತೆಯಾಯಿತು. ಇದು ನಾಲ್ಕರಿಂದ ಐದು ದೇಶದಲ್ಲಿ ಕಾಣಿಸಿಕೊಂಡಿತು. ಅವು ಮಲೇಷ್ಯಾ, ಸಿಂಗಾಪೂರ್, ಬಾಂಗ್ಲಾದೇಶ, ಫಿಲಿಪ್ಪಿನ್ಸ್ ಮತ್ತು ಭಾರತ 2018ರಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡಿದ್ದು, ಕೇರಳದಲ್ಲಿ ಈಗ ನಾಲ್ಕನೇ ಬಾರಿ ಸೋಂಕು ಪತ್ತೆಯಾಗಿದೆ. ಈ ಮೊದಲು ಅಂದರೆ 2018 ಮತ್ತು ಇದರ ಬಳಿಕ 2021ರಲ್ಲಿ ಕೋಯಿಕ್ಕೋಡ್ನಲ್ಲಿ ವರದಿಯಾದ ಪ್ರಕರಣದ ಸ್ಥಳದಿಂದ 15 ಕಿ.ಮೀ ದೂರದಲ್ಲಿ ಮತ್ತೀಗ ಇದೇ ಸೋಂಕು ಪತ್ತೆಯಾಗಿದೆ.
2019ರಲ್ಲಿ ನಿಫಾ ಸೋಂಕು ಕೊಚ್ಚಿಯ ವಿವಿಧ ಪ್ರದೇಶದಲ್ಲಿ ಕಂಡು ಬಂದಿತು. ಇದೀಗ ರಾಜ್ಯದಲ್ಲಿ ಒಟ್ಟು ಆರು ಮಂದಿಯಲ್ಲಿ ಈ ನಿಫಾ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಈ ಸೋಂಕು ನಿವಾರಣೆಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಮಾಡುವುದೊಂದೇ ಇದಕ್ಕೆ ಇರುವ ಪರಿಹಾರ ಎಂದು ತಜ್ಞರು ಹೇಳಿದ್ದಾರೆ. .
ಸೋಂಕು ನಿರ್ವಹಣೆ ಹಿನ್ನೆಲೆ ಭಾರತ ಆಸ್ಟ್ರೇಲಿಯಾ ಕ್ವೀನ್ಸ್‌ಲ್ಯಾಂಡ್ ಸಂಶೋಧಕರು M102.4 ಪ್ರತಿಕಾಯದ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಜಗತ್ತಿನ 14 ಮಂದಿ ಮೇಲೆ ಇದರ ಪರೀಕ್ಷೆ ನಡೆಸಲಾಗಿದೆ. ಇದು ಸುರಕ್ಷಿತವಾಗಿದ್ದು, ಯಾವುದೇ ಸಾವು ಕಂಡು ಬಂದಿಲ್ಲ. ಇದರ ಅಡ್ಡಪರಿಣಾಮಗಳ ಬಗ್ಗೆ ಅರಿವು ಇಲ್ಲದ ಹಿನ್ನೆಲೆ ಇದನ್ನು ಇನ್ನೂ ನಿರ್ವಹಣೆ ಮಾಡಲಾಗುತ್ತಿಲ್ಲ. ಭಾರತ ಆಸ್ಟ್ರೇಲಿಯಾದಿಂದ 20 ಲಸಿಕೆಯ ಮೊನೊಕ್ಲೋನಲ್ ಅಂಟಿಬಾಡಿಯನ್ನು ಸಂಗ್ರಹಿಸುತ್ತಿದೆ
ಸದ್ಯ ಭಾರತದಲ್ಲಿ ಈ ಲಸಿಕೆ 10 ಡೋಸ್ ಇದ್ದು, ಇನ್ನು 10 ಡೋಸ್ ನೀಡುವಂತೆ ಮನವಿ ಮಾಡಿದ್ದೇವೆ. ಮೈನಸ್ 80 ಡಿಗ್ರಿ ತಾಪಮಾನದಲ್ಲಿ ಈ ಲಸಿಕೆ ಸಂಗ್ರಹಿಸಿದ್ದು, ಐದು ವರ್ಷ ಕಾಲ ಇದರ ಬಳಿಕೆ ಬರಲಿದೆ ಎಂದು ತಿಳಿಸಿದರು. ಭಾರತ ಆಸ್ಟ್ರೇಲಿಯದಿಂದ 2018ರಲ್ಲೇ ಈ ಲಸಿಕೆಯನ್ನು ಪಡೆದಿತ್ತು. ಆದರೆ, ಈ ಸಮಯದಲ್ಲಿ ನಿಫಾ ವೈರಸ್ ಪ್ರಕರಣಗಳು ಸಾವನ್ನಪ್ಪಿದ್ದರಿಂದ ಇದನ್ನು ಬಳಸಿರಲಿಲ್ಲ. ಇದೀಗ ಐಸಿಎಂಆರ್ ಮೊಬೈಲ್ ಬಿಎಸ್ಐಐಐ (ಬಯೋಸೇಫ್ಟ್ ಲೆವೆಲ್-3) ಪ್ರಯೋಗಾಲಯವನ್ನು ಕೋಯಿಕ್ಕೋಡ್ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಕೇರಳದಲ್ಲಿ ಮತ್ತೊಂದು ನಿಫಾ ಪ್ರಕರಣ.. ಸೋಂಕು ಪತ್ತೆಗೆ ಮೊಬೈಲ್ ವೈರಾಲಾಜಿ ಘಟಕಕ್ಕೆ ಚಾಲನೆ