ETV Bharat / sukhibhava

ವೈದ್ಯರ ಶಿಫಾರಸಿಲ್ಲದೇ ಆ್ಯಂಟಿಬಯೋಟಿಕ್ಸ್​​​ ಬಳಕೆ: ಹೊಸ ನಿಯಮ ಬಿಡುಗಡೆ ಮಾಡಿದ ನಿಮ್ಸ್​​ - ಆರೋಗ್ಯ ಮಾಹಿತಿ

Antibiotics Usage: ವೈದ್ಯರ ಸೂಚನೆ ಇಲ್ಲದೇ ಆ್ಯಂಟಿ ಬಯೋಟಿಕ್ಸ್​​ಗಳ ಬಳಕೆ ಮಾಡುವುದು ಅಪಾಯಕಾರಿ. ಆದರೂ, ಕೆಲವು ಮಂದಿ ಇದರ ಬಳಕೆಗೆ ಮುಂದಾಗುತ್ತಾರೆ.

nims-has-released-a-new-policy-to-prevent-excessive-use-of-antibiotics

author img

By ETV Bharat Karnataka Team

Published : Dec 5, 2023, 11:03 AM IST

ಹೈದರಾಬಾದ್​: ಅನೇಕ ಮಂದಿ ಸಣ್ಣ ಜ್ವರ ಅಥವಾ ಶೀತ ಬಂದರೆ ಸಾಕು ನೇರವಾಗಿ ಔಷಧ ಮಳಿಗೆಗೆ ಹೋಗಿ ಆ್ಯಂಟಿಬಯೋಟಿಕ್ಸ್​​​ ಅನ್ನು ಖರೀದಿಸುತ್ತಾರೆ. ಮತ್ತೆ ಕೆಲವು ಮಂದಿ ಇಂಟರ್​ನೆಟ್​ನಲ್ಲಿ ಮಾಹಿತಿ ಹುಡುಕಿದಾಗ ಸಿಕ್ಕಿತು ಎಂಬ ಕಾರಣಕ್ಕೂ ಆ್ಯಂಟಿಬಯೋಟಿಕ್​ ಬಳಕೆಗೆ ಮುಂದಾಗುತ್ತಾರೆ. ಈ ರೀತಿ ಮಾಡುವುದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಈ ರೀತಿಯ ಅನೇಕ ಪ್ರಕರಣಗಳು ಹೈದರಾಬಾದ್​ನಲ್ಲಿ ದಾಖಲಾಗುತ್ತಿದ್ದು, ಯುವತಿಯರು ಯಾವುದೇ ವೈದ್ಯರ ಸೂಚನೆ ಇಲ್ಲದೇ ಆ್ಯಂಟಿಬಯೋಟಿಕ್ಸ್​ ಖರೀದಿಗೆ ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ನಿಜಾಮ್​ ಇನ್ಸಿಟ್ಯೂಟ್​​ ಆಫ್​ ಮೆಡಿಕಲ್​ ಸೈನ್ಸ್​ (ಎನ್​ಐಎಂಎಸ್​​) ಈ ರೀತಿ ಆ್ಯಂಟಿಬಯೋಟಿಕ್ಸ್​ ಬಳಕೆಯಿಂದ ಆಗುತ್ತಿರುವ ಸಮಸ್ಯೆ ತಡೆಯಲು ವಿಶೇಷ ನಿಯಮ ಬಿಡುಗಡೆ ಮಾಡಿದೆ.

ವೈದ್ಯರ ಶಿಫಾರಸಿಲ್ಲದೇ ನಡೆಯುತ್ತಿರುವ ಬಳಕೆ: ಆ್ಯಂಟಿ ಬಯೋಟಿಕ್ಸ್​​ಗಳನ್ನು ರೋಗಿಗಳ ನಿರ್ದಿಷ್ಟ ಚಿಕಿತ್ಸೆಗೆ ಮಿತ ಪ್ರಮಾಣದಲ್ಲಿ ಮಾತ್ರ ಬಳಕೆ ಮಾಡಲಾಗುವುದು. ಇನ್ನು ಈ ಆ್ಯಂಟಿಬಯೋಟಿಕ್ಸ್​​ ಅನ್ನು ವೈದ್ಯರು ಶಿಫಾರಸು ಮಾಡುವ ಮುನ್ನ ಡೋಸೆಜ್​ (ಎಂಜಿ), ಬಳಕೆ ದಿನ ಸೇರಿದಂತೆ ಅನೇಕ ಅಂಶಗಳನ್ನು ಗಮನಿಸಿ ಬಳಕೆಗೆ ತಿಳಿಸುತ್ತಾರೆ. ಅನೇಕ ಮಂದಿ ವೈದ್ಯರ ಯಾವುದೇ ಸೂಚನೆ ಪಡೆಯದೇ ಅವುಗಳನ್ನು ಖರೀದಿಸಿ ಬಳಕೆ ಮಾಡುತ್ತಾರೆ. ಇದಕ್ಕೆ ಪ್ರಮುಖ ಕಾರಣ ಈ ಸಂಬಂಧ ಯಾವುದೇ ನಿಯಮ, ಮೇಲ್ವಿಚಾರಣೆ ಮತ್ತು ಔಷಧ ಮಾರಾಟಗಾರರು ಕೂಡ ಪ್ರಿಸ್ಕ್ರಿಪ್ಷನ್​ ಇಲ್ಲದೇ ನೀಡುತ್ತಿರುವುದಾಗಿದೆ.

ಆ್ಯಂಟಿ ಬಯೋಟಿಕ್ಸ್​​ಗಳ ವಿವೇಚನಾರಹಿತ ಬಳಕೆ, ಮಧ್ಯದಲ್ಲಿ ನಿಲ್ಲಿಸುವುದು, ಪುನಃ ಬಳಕೆಯು ಅನೇಕ ದೇಹದಲ್ಲಿ ಔಷಧ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ರೋಗಗಳು ನಂತರದಲ್ಲಿ ಕಾಣಿಸಿಕೊಂಡಾಗ ಈ ಔಷಧಗಳು ಕಾರ್ಯ ನಿರ್ವಹಿಸದೇ ಹೋಗಬಹುದು. ಮೊಂಡು ಬ್ಯಾಕ್ಟೀರಿಯಾಗಳು ದೇಹದಲ್ಲಿ ಬೆಳೆದು ಅನೇಕ ರೋಗ ಅಥವಾ ಜೀವದ ಅಪಾಯಕ್ಕೆ ಕಾರಣ ಆಗಬಹುದು. ಈ ಹಿನ್ನೆಲೆ ನಿಮ್ಸ್​​​ ಆಸ್ಪತ್ರೆ ಈ ಸಮಸ್ಯೆ ನಿವಾರಣೆಗೆ ಹೊಸ ವಿಧಾನ ಪರಿಚಯಿಸಿದೆ.

ಹೊಸ ನಿಯಮ: ರೋಗಿಗೆ ಆ್ಯಂಟಿಬಯೋಟಿಕ್ಸ್​ ಬೇಕಾ ಅಥವಾ ಬೇಡಾ? ರೋಗಿಯಲ್ಲಿ ಆ್ಯಂಟಿಬಯೋಟಿಕ್ಸ್​​​ ಪ್ರತಿರೋಧ ಹೇಗಿದೆ ಎಂದು ಪತ್ತೆ ಮಾಡುವುದು ಹೇಗೆ? ಒಂದು ವೇಳೆ ಪತ್ತೆ ಆದರೆ, ಯಾವ ರೀತಿ ಚಿಕಿತ್ಸೆ ನೀಡುವುದು? ಯಾವ ರೋಗಕ್ಕೆ ಯಾವ ಔಷಧ ಬಳಕೆ ಮಾಡುವುದು. ಎಷ್ಟು ಪ್ರಮಾಣದ ಬಳಕೆ ಮಾಡುವುದು ಎಂಬುವುದರ ಕುರಿತು ನಿಮ್ಸ್‌ನಲ್ಲಿರುವ ಕ್ಲಿನಿಕಲ್ ಫಾರ್ಮಕಾಲಜಿ ವಿಭಾಗದ ಆಶ್ರಯದಲ್ಲಿ ಹೊಸ ವಿಧಾನವನ್ನು ವಿನ್ಯಾಸಗೊಳಿಸಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ಇದನ್ನೂ ಒದಗಿಸಲಾಗಿದೆ ಎಂದು ನಿಮ್ಸ್ ನಿರ್ದೇಶಕ ಡಾ.ಬೀರಪ್ಪ ಸೋಮವಾರ ಬಹಿರಂಗಪಡಿಸಿದರು. ಅಗತ್ಯವಿದ್ದಲ್ಲಿ ಇದನ್ನು ಖಾಸಗಿ ಮತ್ತು ಕಾರ್ಪೋರೇಟ್​ ಆಸ್ಪತ್ರೆಗಳಿಗೆ ಕೂಡ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ತಯಾರಿಸಿದ 40ಕ್ಕೂ ಹೆಚ್ಚು ಕೆಮ್ಮಿನ ಸಿರಪ್​ಗಳು ಪ್ರಮಾಣಿತ ಗುಣಮಟ್ಟದಲಿಲ್ಲ: ವರದಿಯಲ್ಲಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.