ಇಡಿಯೋಪಥಿಕ್ ಇಂಟ್ರಾಕ್ರೇನಿಯಲ್ ಹೈಪರ್‌ಟೆನ್ಷನ್ (IIH) ಎಂದು ಕರೆಯಲ್ಪಡುವ 'ಬ್ಲೈಂಡಿಂಗ್' ತಲೆನೋವಿನಿಂದ ಬಳಲುತ್ತಿರುವ ರೋಗಿಗಳಿಗೆ ಟೈಪ್ 2 ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಚುಚ್ಚುಮದ್ದಿನ ಪೆಪ್ಟೈಡ್‌ನಿಂದ ಚಿಕಿತ್ಸೆ ನೀಡಬಹುದು ಎಂಬುದನ್ನು ಹೊಸ ಪ್ರಯೋಗವೊಂದು ಕಂಡು ಹಿಡಿದಿದೆ. ಈ ಸಂಶೋಧನೆಯು ಬ್ರೈನ್ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಅಧ್ಯಯನವು ಇಂದು IIH ಗೆ ಸಂಭಾವ್ಯ ಚಿಕಿತ್ಸೆಯಾಗಿ, GLP-1 ರಿಸೆಪ್ಟರ್ ಅಗೊನಿಸ್ಟ್ ಎಂಬ ಎಕ್ಸೆನಾಟೈಡ್ ಎಂಬ ಔಷಧಿಯ ಎರಡನೇ ಹಂತದ ಪ್ರಯೋಗವನ್ನು ವರದಿ ಮಾಡಿದೆ.
ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ನರವಿಜ್ಞಾನಿಗಳ ತಂಡ ಮತ್ತು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಆಸ್ಪತ್ರೆಗಳ ನೇತೃತ್ವದ ತಂಡ IIH ಪ್ರೆಶರ್ ಟ್ರಯಲ್ ನಡೆಸಿದ್ದು, ಪ್ರಸ್ತುತ ಟೈಪ್ 2 ಡಯಾಬಿಟಿಸ್‌ನಲ್ಲಿ ಬಳಸಲು ಅನುಮೋದಿಸಲಾದ ಔಷಧದ ನಿಯಮಿತ ಚುಚ್ಚುಮದ್ದನ್ನು ಪಡೆದ ಏಳು ರೋಗಿಗಳಲ್ಲಿ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಮಾಪನಗಳೆರಡರಲ್ಲೂ ಔಷಧ ಒತ್ತಡ ಕುಸಿತಕ್ಕೆ ಕಾರಣವಾಗಿದೆ ಎಂಬುದನ್ನು ಕಂಡು ಹಿಡಿದಿದೆ. ಪ್ರಯೋಗದಲ್ಲಿ 12 ವಾರಗಳು ಭಾಗವಹಿಸಿದ ಪಾರ್ಟಿಸಿಪೆಂಟ್ಗಳಲ್ಲಿ ಗಮನಾರ್ಹವಾದ ತಲೆನೋವಿನ ಕುಸಿತವನ್ನು ತಂಡ ಗಮನಿಸಿದ್ದು, ಬೇಸ್‌ಲೈನ್‌ಗೆ ಹೋಲಿಸಿದರೆ ತಿಂಗಳಿಗೆ ಸರಾಸರಿ 7.7 ಕಡಿಮೆ ದಿನಗಳ ತಲೆನೋವು, ಪ್ಲೇಸ್‌ಬೊ ಆರ್ಮ್‌ನಲ್ಲಿ ಗಮನಿಸಿದರೆ ಕೇವಲ 1.5ಕ್ಕಿಂತಲೂ ಕಡಿಮೆ ದಿನಗಳಿಗೆ ತಲೆನೋವು ಕುಸಿತವಾಗಿತ್ತು.
ಸಮಸ್ಯೆಗೊಂದು ಪರಿಹಾರದ ಆಶಾಕಿರಣ: ಅಲೆಕ್ಸ್ ಸಿಂಕ್ಲೇರ್ ಅವರು ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಮೆಟಾಬಾಲಿಸಮ್ ಮತ್ತು ಸಿಸ್ಟಮ್ಸ್ ರಿಸರ್ಚ್‌ನಲ್ಲಿ ನರವಿಜ್ಞಾನದ ಪ್ರಾಧ್ಯಾಪಕರು, ಯೂನಿವರ್ಸಿಟಿ ಹಾಸ್ಪಿಟಲ್ಸ್ ಬರ್ಮಿಂಗ್ಹ್ಯಾಮ್ NHS ಫೌಂಡೇಶನ್ ಟ್ರಸ್ಟ್‌ನಲ್ಲಿ ಗೌರವ ಸಲಹೆಗಾರ ನರವಿಜ್ಞಾನಿ ಮತ್ತು ಅಧ್ಯಯನದ ಪ್ರಧಾನ ತನಿಖಾಧಿಕಾರಿಯಾಗಿದ್ದಾರೆ. ಪ್ರೊಫೆಸರ್ ಅಲೆಕ್ಸ್ ಸಿಂಕ್ಲೇರ್ ಹೇಳುವಂತೆ 'ಜನರು, ಸಾಮಾನ್ಯವಾಗಿ ಮಹಿಳೆಯರು ಕುರುಡರಾಗುವಂತೆ ಮತ್ತು ನಿತ್ಯ ತಲೆನೋವಿಂದ ಬಳಲುವಂತೆ ಮಾಡಬಹುದಾದ ಅಪರೂಪದ ಮತ್ತು ದುರ್ಬಲಗೊಳಿಸುವ ಸ್ಥಿತಿ IIH ನ ಬಗ್ಗೆ ನಡೆದ ಒಂದು ಪ್ರಮುಖ ಪ್ರಯೋಗವಾಗಿದೆ. IIH ಚಿಕಿತ್ಸೆಗಾಗಿ ಪ್ರಸ್ತುತ ಪರವಾನಗಿ ಪಡೆದ ಔಷಧಗಳಿಲ್ಲ ಮತ್ತು ಆದ್ದರಿಂದ ಈ ಫಲಿತಾಂಶವು ಒಂದು IIH ರೋಗಿಗಳಿಗೆ ಪ್ರಮುಖ ಆಶಾಮಾರ್ಗವಾಗಿದೆ.'
ನಮ್ಮ ಎರಡನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಚಿಕಿತ್ಸೆಯನ್ನು ನೀಡಿದ್ದು, ಚಿಕಿತ್ಸೆ ಪರಿಣಾಮಕಾರಿ ಪ್ರತಿಫಲ ನೀಡಿರುವುದರ ಬಗ್ಗೆ ಸಂತೋಷವಿದೆ. ನಾವು ಈಗ IIH ನಿಂದ ಬಳಲುತ್ತಿರುವ ಪ್ರಪಂಚದಾದ್ಯಂತದ ಅನೇಕ ಜನರ ಒತ್ತಡವನ್ನು ಅಕ್ಷರಶಃ ಸರಾಗಗೊಳಿಸುವ ಎಕ್ಸೆನಾಟೈಡ್ನ ಒಂದು ದೊಡ್ಡ ಪ್ರಯೋಗವನ್ನು ನಡೆಸಲು ಆಶಿಸುತ್ತೇವೆ ಎಂದು ಹೇಳಿದ್ದಾರೆ.
ಹೈಪರ್‌ಟೆನ್ಶನ್: ಇಡಿಯೋಪಥಿಕ್ ಇಂಟ್ರಾಕ್ರೇನಿಯಲ್ ಹೈಪರ್‌ಟೆನ್ಶನ್ (IIH) ದುರ್ಬಲಗೊಳಿಸುವ ಸ್ಥಿತಿಯಾಗಿದ್ದು, ಅದು ಮೆದುಳಿನಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ತಲೆನೋವು ಮತ್ತು ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು. ಈ ಅನಾರೋಗ್ಯವು ಸಾಮಾನ್ಯವಾಗಿ ರೋಗಿಗಳ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರಧಾನವಾಗಿ 25 ರಿಂದ 36 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೂಕ ಹೆಚ್ಚಾಗುವುದು IIH ರೋಗದ ಮರುಕಳಿಕೆಯನ್ನು ಅಭಿವೃದ್ಧಿಪಡಿಸುವ ಪ್ರಮುಖ ಅಪಾಯಕಾರಿ ಅಂಶವಾಗಿದೆ.
ಸ್ಥೂಲಕಾಯತೆ ಏರಿಕೆ ತಂದ ಆತಂಕ: ಒಂದು ಕಾಲದಲ್ಲಿ ಅಪರೂಪವೆಂದು ಪರಿಗಣಿಸಲಾಗಿದ್ದ IIH ಸ್ಥೂಲಕಾಯತೆಯ ಜಾಗತಿಕ ಏರಿಕೆಯ ಥರ ಕಳೆದ 10 ವರ್ಷಗಳಲ್ಲಿ ಪ್ರತಿಶತ 350 ರಷ್ಟು ಏರಿಕೆಯಾಗಿದೆ. ಪ್ರಸ್ತುತ, ಯಾವುದೇ ಪರವಾನಗಿ ಪಡೆದ ಔಷಧ ಆಯ್ಕೆಗಳು ಇದಕ್ಕಿಲ್ಲ ಮತ್ತು ಅಸ್ತಿತ್ವದಲ್ಲಿರುವ ಆಫ್-ಲೇಬಲ್ ಔಷಧಿಗಳು ತ್ರಾಸದಾಯಕ ಅಡ್ಡ ಪರಿಣಾಮಗಳಿಂದ ಕೂಡಿದೆ. ಈಗ ಕಂಡುಕೊಂಡಿರುವ ಔಷಧಿಯ ಕ್ಷಿಪ್ರ ಕ್ರಿಯೆಯು ಒಂದು ಪ್ರಮುಖ ಸಂಶೋಧನೆಯಾಗಿದೆ. ಇದರ ಫಲಿತಾಂಶಗಳು ಔಷಧಿಯನ್ನು ತೆಗೆದುಕೊಂಡ ಎರಡೂವರೆ ಗಂಟೆಗಳಲ್ಲಿ ಮೆದುಳಿನ ಒತ್ತಡವು ಗಮನಾರ್ಹವಾಗಿ ಕಡಿಮೆಯಾಗಿದೆ ಎಂದು ಸೂಚಿಸುತ್ತದೆ. ಚಿಕಿತ್ಸೆ ನೀಡದೇ ಬಿಟ್ಟರೆ ಕ್ಷಿಪ್ರ ಕುರುಡುತನಕ್ಕೆ ಕಾರಣವಾಗುವುದರಿಂದ ತಕ್ಷಣ ಔಷಧದ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಇನ್ನೂ ಹೆಚ್ಚಿನ ಪ್ರಯೋಗಗಳ ಅವಶ್ಯಕತೆ: ಡಾ ಜೇಮ್ಸ್ ಮಿಚೆಲ್, ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದ ನರವಿಜ್ಞಾನದ ಉಪನ್ಯಾಸಕರು ಮತ್ತು ಪತ್ರಿಕೆಯ ಮೊದಲ ಲೇಖಕರು ಹೇಳುವಂತೆ, 'ಈ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು IIH ಗಾಗಿ ಕ್ಲಿನಿಕಲ್ ಚಿಕಿತ್ಸೆಯನ್ನು ಕಂಡು ಹಿಡಿಯಲು ದಾರಿಯಾಗಿದೆ. ಅಂತಹ ಚಿಕಿತ್ಸೆಯು ಭವಿಷ್ಯದಲ್ಲಿ ರೋಗಿಗಳಿಗೆ ಲಭ್ಯವಾಗುವ ಮೊದಲು ನಾವು ಹೆಚ್ಚಿನ ಪ್ರಯೋಗಗಳನ್ನು ಮಾಡಬೇಕಾಗಿದೆ. ಈ ಪ್ರಯೋಗದ ಗಮನಾರ್ಹ ಫಲಿತಾಂಶಗಳಿಂದ ನಾವು ಉತ್ತೇಜಿತರಾಗಿದ್ದೇವೆ. ಮೆದುಳಿನ ಒತ್ತಡವನ್ನು ಹೆಚ್ಚಿಸುವ ಇತರ ಪರಿಸ್ಥಿತಿಗಳಿಗೆ ಈ ಚಿಕಿತ್ಸೆಯು ಪ್ರಸ್ತುತವಾಗಿದೆ.
ಈ ಅಧ್ಯಯನದಲ್ಲಿ ಔಷಧವನ್ನು ಸಬ್ಕ್ಯುಟೇನಿಯಸ್ ಅಂಗಾಂಶಕ್ಕೆ ದಿನಕ್ಕೆ ಎರಡು ಬಾರಿ ಇಂಜೆಕ್ಷನ್ ಆಗಿ ನೀಡಲಾಗಿದೆ. ಭವಿಷ್ಯದಲ್ಲಿ ಆಗಾಗ್ಗೆ ಚುಚ್ಚುಮದ್ದಿನ ಅಗತ್ಯವನ್ನು ಕಡಿಮೆ ಮಾಡಲು ವಾರಕ್ಕೊಮ್ಮೆ ಪ್ರೆಸೆಂಡಿನ್ ಎಂಬ ಸಬ್ಕ್ಯುಟೇನಿಯಸ್ ಇಂಜೆಕ್ಷನ್ ಅನ್ನು ಪ್ರಯೋಗಿಸಲಾಗುತ್ತದೆ.
ಯುಕೆಯ IIH ರೋಗಿಗಳ ಚಾರಿಟಿ ಅಧ್ಯಕ್ಷರಾದ ಶೆಲ್ಲಿ ವಿಲಿಯಮ್ಸನ್, 'ಇದು ಉತ್ತೇಜಕ ಪ್ರಗತಿಯಾಗಿದೆ. IIH ಗೆ ಹೊಸ ಔಷಧ ಆಯ್ಕೆಗಳು ಅತ್ಯಗತ್ಯವಾಗಿದೆ. ಈ ಪ್ರಯೋಗವು ತಲೆನೋವಿನಿಂದ ಬಳಲುತ್ತಿರುವ ಲಕ್ಷಾಂತರ ರೋಗಿಗಳಿಗೆ ಭರವಸೆಯ ಮೂಡಿಸುತ್ತದೆ. ನಾವು ಮುಂದಿನ ಹೆಜ್ಜೆಯನ್ನು ಎದುರುನೋಡುತ್ತೇವೆ. ಹಂತಗಳು ಮತ್ತು ಔಷಧವನ್ನು ಎರಡು ದೊಡ್ಡ ಹಂತದ 3 ಕ್ಲಿನಿಕಲ್ ಪ್ರಯೋಗಗಳಲ್ಲಿ ಪರೀಕ್ಷಿಸಲಾಗಿದೆ' ಎಂದು ಹೇಳಿದರು.
ಇದನ್ನೂ ಓದಿ: ಬಿಎಂಐ ರೋಗಿಗಳ ಭಾಗಶಃ ಮೊಣಕಾಲು ಆರ್ತ್ರೋಪ್ಲ್ಯಾಸ್ಟಿಯ ದೀರ್ಘಾವಧಿ ಫಲಿತಾಂಶಗಳ ಮೇಲೆ ಪರಿಣಾಮ:ವರದಿ