ETV Bharat / sukhibhava

ಹೊಸ ಕೋವಿಡ್​ ಉಪತಳಿ ಪತ್ತೆ; ಪ್ರಧಾನ ಮಂತ್ರಿ ಕಚೇರಿಯಿಂದ ಉನ್ನತ ಮಟ್ಟದ ಸಭೆ - ಸಾರ್ಸ್​ ಕೋವ್​ 2ನ ಹೊಸ ಉಪತಳಿ

ಸಭೆಯಲ್ಲಿ ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್​ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.

new Covid variants detected globally; A high-level meeting from the Prime Minister's Office

author img

By

Published : Aug 22, 2023, 12:10 PM IST

ನವದೆಹಲಿ: ಕೋವಿಡ್​ 19 ಬಳಿಕ ಅದರ ಉಪತಳಿಗಳು ಪತ್ತೆಯಾಗುತ್ತಲೇ ಇದೆ. ಇದೀಗ ಸಾರ್ಸ್​ ಕೋವ್​ 2ನ ಹೊಸ ಉಪತಳಿ ಪತ್ತೆಯಾಗಿದೆ. ಬ್ರಿಟನ್​, ಯುರೋಪ್​ ಸೇರಿದಂತೆ ಹಲವೆಡೆ ಪತ್ತೆಯಾಗಿರುವ ಈ ಹೊಸ ತಳಿ ಕುರಿತು ಪ್ರಧಾನಮಂತ್ರಿಗಳ ಸಚಿವಾಲಯ ಮುನ್ನೆಚ್ಚರಿಕೆ ವಹಿಸಿದ್ದು, ಈ ಸಂಬಂಧ ಪರಿಸ್ಥಿತಿ ಅವಲೋಕನ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿಯಾದ ಪಿಕೆ ಮಿಶ್ರಾ, ನೇತೃತ್ವದಲ್ಲಿ ಸಂಬಂಧಿಸಿದ ಅಧಿಕಾರಿಗಳಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದು, ಜಾಗತಿಕ ಮತ್ತು ರಾಷ್ಟ್ರ ಮಟ್ಟದಲ್ಲಿನ ಕೋವಿಡ್​ ಪರಿಸ್ಥಿತಿಗಳ ಕುರಿತು ಅವಲೋಕನ ನಡೆಸಲಾಯಿತು. ಇದೇ ವೇಳೆ, ಹೊಸ ಉಪ ತಳಿಯು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲಾಯಿತು.

ಕಳೆದ ಏಳು ದಿನಗಳಿಂದ ಜಾಗತಿಕವಾಕವಾಗಿ 2,96,219 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದೆ. ಇದು ಸುಮಾರು ಜಾಗತಿಕ ಜನಸಂಖ್ಯೆಯ ಶೇ 17ರಷ್ಟಿದೆ. ಭಾರತದಲ್ಲಿ ನಿತ್ಯ ಹೊಸ ಕೋವಿಡ್​ ಪ್ರಕರಣಗಳು ಕೇವಲ 50ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ವಾರದ ಕೋವಿಡ್​ ಪಾಸಿಟಿವ್​ ಪ್ರಕರಣಗಳು ಶೇ 0.2ಕ್ಕಿಂತ ಕಡಿಮೆ ಇದೆ. ಇದೇ ವೇಳೆ, ಭಾರತದಲ್ಲಿರುವ ವಿವಿಧ ರೂಪಾಂತರಗಳ ಜೀನೋಮ್​ ತಳಿಗಳ ಕುರಿತು ಒಂದು ಅವಲೋಕನ ನೀಡಲಾಯಿತು.

ಸುದೀರ್ಘ ಚರ್ಚೆಯ ಬಳಿಕ ಮಾತನಾಡಿರುವ ಅಧಿಕಾರಿ ಮಿಶ್ರಾ, ಭಾರತದಲ್ಲಿ ಕೋವಿಡ್​ ಪರಿಸ್ಥಿತಿ ಸ್ಥಿರವಾಗಿದೆ. ದೇಶದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಕೂಡ ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ. ರಾಜ್ಯಗಳು ಐಎಲ್​ಐ/ಎಸ್​ಎಆರ್​ಐ ಪ್ರಕರಣಗಳ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ. ಜೀನೋಮ್​ ಅನುಕ್ರಮ ಹೆಚ್ಚಿಸುವಾಗ ಮತ್ತು ಹೊಸ ರೂಪಾಂತರಗಳ ಮೇಲೆ ನಿಗಾ ವಹಿಸಲು ಪರೀಕ್ಷೆಗೆ ಸಾಕಷ್ಟು ಮಾದರಿಗಳನ್ನು ಕಳುಹಿಸಬೇಕು ಎಂದು ಸೂಚನೆ ನೀಡಿದರು.

ಜಾಗತಿಕ ಕೋವಿಡ್​ ಪರಿಸ್ಥಿತಿಗಳ ಕುರಿತು ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದರು. ಈ ವೇಳೆ ಸಾರ್ಸ್​ ಕೋವ್​-2 ವೈರಸ್​ನ BA.2.86 (ಪಿರೊಲ) ಮತ್ತು EG.5 (ಎರಿಸ್​) ಕುರಿತು ಮಾಹಿತಿ ನೀಡಿದರು. ಸದ್ಯ ಈ ಎರಿಸ್​ ವೈರಸ್​ ಅನೇಕ ದೇಶದಲ್ಲಿ ಪತ್ತೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ, ಜಗತ್ತಿನ 50 ದೇಶಗಳಲ್ಲಿ ಏರಿಸ್​ ಸೋಂಕು ಪತ್ತೆಯಾಗುತ್ತಿರುವ ಕುರಿತು ಎಚ್ಚರಿಸಿದೆ. ಇನ್ನು ನಾಲ್ಕು ದೇಶದಲ್ಲಿ BA.2.86 (ಪಿರೊಲ) ಸೋಂಕು ಪತ್ತೆಯಾಗಿದೆ.

ಈ ಉನ್ನತ ಮಟ್ಟದ ಸಭೆಯಲ್ಲಿ ನೀತಿ ಆಯೋಗದ ಸದಸ್ಯ ವಿನೋದ್​ ಪೌಲ್​, ಕ್ಯಾಬಿನೆಟ್​ ಕಾರ್ಯದರ್ಶಿ ರಾಜೀವ್​ ಗೌಬಾ, ಪಿಎಂಒ ಸಲಹೆಗಾರರಾದ ಅಮಿತ್​ ಖರೆ, ಆರೋಗ್ಯ ಕಾರ್ಯದರ್ಶಿ ಸುಧಂಶ್​​ ಪಂತ್​ ಮತ್ತಿತ್ತರ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

54 ಹೊಸ ಪ್ರಕರಣ ಪತ್ತೆ: ಸೋಮವಾರ ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಭಾರತದಲ್ಲಿ 54 ಹೊಸ ಕೋವಿಡ್​ ಪ್ರಕರಣ ದಾಖಲಾಗಿದೆ. ಈ ಮೂಲಕ ಭಾರತದಲ್ಲಿನ ಒಟ್ಟಾರೆ ಕೋವಿಡ್​ ಪ್ರಕರಣಗಳ ಸಂಖ್ಯೆ 4,49,96,653 ಆಗಿದೆ. ಇನ್ನು ಸಾವಿನ ಪ್ರಕರಣ 5,13,926 ಆಗಿದೆ. ಇಲ್ಲಿಯವರೆಗೆ 2,20,67 ಕೋಟಿ ಕೋವಿಡ್​ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಕೋವಿಡ್‌ ಬಳಿಕ ಟೆಲಿಹೆಲ್ತ್​ ಮಾರುಕಟ್ಟೆ ಬೆಳವಣಿಗೆ: ಏನಿದು ಟೆಲಿಹೆಲ್ತ್‌ ವ್ಯವಸ್ಥೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.