ETV Bharat / sukhibhava

ರಷ್ಯಾದ ಬಾವಲಿಗಳಲ್ಲಿ ಹೊಸ ಕೋವಿಡ್ ರೀತಿ ವೈರಸ್ ಪತ್ತೆ: ಮನುಷ್ಯರಿಗೆ ತಗಲುವ ಸಾಧ್ಯತೆ; ಅಧ್ಯಯನ - ರಷ್ಯಾದ ಬಾವಲಿಗಳಲ್ಲಿ ಪತ್ತೆ

ರಷ್ಯಾದ ಬಾವಲಿಗಳಲ್ಲಿ ಪತ್ತೆಯಾದ ಹೊಸ SARS-COV-2 ತರಹದ ವೈರಸ್, ಮಾನವರಿಗೆ ಹಬ್ಬುವ ಸಾಧ್ಯತೆ ಇದೆ. ಕೋವಿಡ್ -19 ವಿರುದ್ಧ ಹೋರಾಡಲು ಪ್ರಸ್ತುತ ಇರುವ ಲಸಿಕೆಗಳು, ಇದರ ವಿರುದ್ಧ ಹೋರಾಡುವುದಿಲ್ಲ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

New COVID-like virus found in bats
ರಷ್ಯಾದ ಬಾವಲಿಗಳಲ್ಲಿ ಹೊಸ ಕೋವಿಡ್ ರೀತಿ ವೈರಸ್ ಪತ್ತೆ
author img

By

Published : Sep 26, 2022, 6:14 PM IST

ವಾಷಿಂಗ್ಟನ್: ರಷ್ಯಾದ ಬಾವಲಿಗಳಲ್ಲಿ ಹೊಸ SARS-COV-2 ತರಹದ ವೈರಸ್ ಪತ್ತೆಯಾಗಿದೆ. ಇದು ಮನುಷ್ಯರಿಗೆ ತಗಲುವ ಸಾಧ್ಯತೆ ಇದ್ದು, ಪ್ರಸ್ತುತ ಇರುವ ಕೋವಿಡ್ -19 ಲಸಿಕೆಗಳು ಇದರ ವಿರುದ್ಧ ಹೋರಾಡುವ ಶಕ್ತಿ ಹೊಂದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ಅಮೆರಿಕ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ (ಡಬ್ಲ್ಯುಎಸ್ಯು) ಯ ಸಂಶೋಧಕರ ತಂಡವು ಖೋಸ್ಟಾ -2 ಹೆಸರಿನ ಬ್ಯಾಟ್ ವೈರಸ್​ನಿಂದ ಸ್ಪೈಕ್ ಪ್ರೋಟೀನ್​ಗಳನ್ನು ಕಂಡು ಹಿಡಿದಿದೆ.

ಈ ವೈರಸ್ ಮನುಷ್ಯರ ಜೀವಕೋಶಗಳಿಗೆ ಪ್ರವೇಶಿಸಲು ಮತ್ತು ಸೋಂಕು ಹರಡಲು ಸ್ಪೈಕ್ ಪ್ರೋಟೀನ್​ನನ್ನು ಬಳಸುತ್ತದೆ. ಖೋಸ್ಟಾ -2 ಮತ್ತು ಸಾರ್ಸ್-ಕೋವ್ -2 ಎರಡೂ ಸರ್ಬೆಕೋವೈರಸ್ ಎಂದು ಕರೆಯಲ್ಪಡುವ ಕೊರೊನಾ ವೈರಸ್​ಗಳ ಒಂದೇ ಉಪ-ವರ್ಗಕ್ಕೆ ಸೇರಿವೆ.

ಲಸಿಕಾ ಅಭಿಯಾನ ಅಗತ್ಯ: ನಮ್ಮ ಸಂಶೋಧನೆಯು ಏಷ್ಯಾದ ಹೊರಗಿನ ವನ್ಯಜೀವಿಗಳಲ್ಲಿ ಹಬ್ಬುತ್ತಿರುವ ಸರ್ಬೆಕೋವೈರಸ್​, ಖೋಸ್ಟಾ -2 ವೈರಸ್ ಕಂಡುಬಂದ ಪಶ್ಚಿಮ ರಷ್ಯಾದಂತಹ ಸ್ಥಳಗಳಲ್ಲಿಯೂ ನಡೆಯುತ್ತಿದೆ. ಇದು ಜಾಗತಿಕ ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡಬಹುದು. ಅಲ್ಲದೇ SARS-COV-2 ವಿರುದ್ಧ ನಡೆಯುತ್ತಿರುವ ಲಸಿಕೆ ಅಭಿಯಾನಕ್ಕೆ ಸಹ ಕಾರಣವಾಗಿದೆ ಎಂದು ಮೈಕೆಲ್ ಲೆಟ್ಕೊ ಹೇಳಿದರು.

ಲಸಿಕೆ ಅಭಿವೃದ್ಧಿ ಅವಶ್ಯಕ: PLOS ಜರ್ನಲ್‌ನಲ್ಲಿ ಪ್ರಕಟವಾದ ಈ ಶೋಧನೆಯು, ಸರ್ಬೆಕೋವೈರಸ್​ನಿಂದ ರಕ್ಷಿಸಿಕೊಳ್ಳಲು ಸಾರ್ವತ್ರಿಕ ಲಸಿಕೆಯನ್ನು ಅಭಿವೃದ್ಧಿಪಡಿಸುವ ಅಗತ್ಯ ಎತ್ತಿ ತೋರಿಸುತ್ತದೆ. ಕೆಲವರು ಲಸಿಕೆಯನ್ನು ಕಂಡು ಹಿಡಿಯುತ್ತಿದ್ದಾರೆ. ಅದು ಕೇವಲ SARS-2 ನ ಮುಂದಿನ ರೂಪಾಂತರದಿಂದ ರಕ್ಷಿಸುವುದಲ್ಲದೇ, ಸರ್ಬೆಕೋವೈರಸ್​ನಿಂದಲೂ ನಮ್ಮನ್ನು ರಕ್ಷಿಸುತ್ತದೆ ಎಂದು ಲೆಟ್ಕೊ ಹೇಳಿದರು.

ಇದನ್ನೂ ಓದಿ: ಇಮ್ಯುನೊ ಡಿಫಿಷಿಯನ್ಸಿ ಕಾಯಿಲೆ ಇರುವ ಮಕ್ಕಳು ಕೋವಿಡ್‌ನಿಂದ ಹೆಚ್ಚು ಅಪಾಯ

ದುರಾದೃಷ್ಟವೆಂದರೇ, ಪ್ರಸ್ತುತ ಅನೇಕ ಲಸಿಕೆಗಳನ್ನು ನಿರ್ದಿಷ್ಟ ವೈರಸ್‌ಗಳಿಗೆ ಮಾತ್ರ ವಿನ್ಯಾಸಗೊಳಿಸಲಾಗಿದೆ. ಇದು ಮನುಷ್ಯರಿಗೆ ಸೋಂಕು ತಗುಲುವ ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ನೂರಾರು ಸರ್ಬೆಕೊವೈರಸ್​ಗಳು ಪತ್ತೆಯಾಗಿವೆ. ಪ್ರಮುಖವಾಗಿ ಏಷ್ಯಾದ ಬಾವಲಿಗಳಲ್ಲಿ, ಬಹುಪಾಲು ವೈರಸ್​ಗಳು ಮನುಷ್ಯರಿಗೆ ಸೋಂಕು ತಗುಲಿಸುವ ಸಾಮರ್ಥ್ಯ ಹೊಂದಿಲ್ಲ. 2020 ರ ಉತ್ತರಾರ್ಧದಲ್ಲಿ ರಷ್ಯಾದ ಬಾವಲಿಗಳಲ್ಲಿ ಖೋಸ್ಟಾ -1 ಮತ್ತು ಖೋಸ್ಟಾ -2 ವೈರಸ್‌ಗಳು ಪತ್ತೆಯಾಗಿವೆ.

ಖೋಸ್ಟಾ 2 ದಿಂದ ಅಪಾಯ ಹೆಚ್ಚು: ಖೋಸ್ಟಾ -1 ಮನುಷ್ಯರಿಗೆ ಕಡಿಮೆ ಅಪಾಯವನ್ನುಂಟು ಮಾಡಿದೆ ಎಂದು ಸಂಶೋಧಕರು ಹೇಳುತ್ತಾರೆ. ಆದರೆ ಖೋಸ್ಟಾ -2 ದಿಂದ ಕೆಲವರು ತೊಂದರೆಗೊಳಗಾಗಿದ್ದಾರೆ. SARS-COV-2 ನಂತೆ, ಖೋಸ್ಟಾ -2 ತನ್ನ ಸ್ಪೈಕ್ ಪ್ರೋಟೀನ್ ಅನ್ನು ಜೀವಕೋಶಗಳಿಗೆ ಸೋಂಕು ತಗುಲಿಸಲು ಬಳಸಬಹುದು. ಪ್ರಸ್ತುತ ಲಸಿಕೆಗಳು ಹೊಸ ವೈರಸ್‌ನಿಂದ ರಕ್ಷಿಸುತ್ತವೆಯೇ ಎಂದು ನಿರ್ಧರಿಸಲು ತಂಡವು ಮುಂದಾಗಿದೆ. ಕೋವಿಡ್ -19 ಗಾಗಿ ಲಸಿಕೆ ಹಾಕಿಸಿಕೊಂಡ ಜನರ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷಿಸಿದಾಗ, ಇದು ಖೋಸ್ಟಾ -2 ಅನ್ನು ತಡೆಯುವುದಿಲ್ಲ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಖೋಸ್ಟಾ -2 ಎಸ್‌ಎಆರ್‌ಎಸ್-ಕೋವ್ -2 ನಂತಹ ಎರಡನೇ ವೈರಸ್‌ನೊಂದಿಗೆ ಮರುಸಂಯೋಜನೆ ಆಗುವ ಅಪಾಯವಿದೆ. SARS-2 ಮನುಷ್ಯರಿಂದ ವನ್ಯಜೀವಿಗಳಿಗೆ ಹಬ್ಬುವ ಸಾಮರ್ಥ್ಯವನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.