ETV Bharat / sukhibhava

ನೇತ್ರದಾನ ಜಾಗೃತಿ ಅಗತ್ಯ: ಇಲ್ಲಿದೆ ಕೆಲ ಸಲಹೆಗಳು

author img

By

Published : Aug 25, 2020, 1:14 PM IST

ಪ್ರತಿವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ, ಕಣ್ಣಿನ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಕಣ್ಣಿನ ದಾನ ದಿನವನ್ನು ಆಚರಿಸಲಾಗುತ್ತದೆ.

ನೇತ್ರದಾನ ಕುರಿತಾದ ಜಾಗೃತಿ ಅಗತ್ಯ
ನೇತ್ರದಾನ ಕುರಿತಾದ ಜಾಗೃತಿ ಅಗತ್ಯ

ಕಣ್ಣುಗಳು ನಮ್ಮ ದೇಹದ ಅವಿಭಾಜ್ಯ ಅಂಗವಾಗಿದ್ದು, ವಸ್ತುಗಳನ್ನು ನೋಡಲು, ಪ್ರಕೃತಿಯನ್ನು ಪ್ರಶಂಸಿಸಲು ಮತ್ತು ನಮ್ಮ ಸುತ್ತಮುತ್ತಲಿನ ಸುಂದರವಾದ ಬಣ್ಣಗಳನ್ನು ಮೆಚ್ಚಿಸಲು ನಮಗೆ ಸಹಾಯ ಮಾಡುತ್ತದೆ. ಇನ್ನು ಕೆಲವರಿಗೆ ಕೆಲವು ಜನ್ಮ ದೋಷಗಳು ಅಥವಾ ಜೀವನದಲ್ಲಿ ನಡೆಯುವ ದುರದೃಷ್ಟಕರ ಘಟನೆಗಳಿಂದ ದೃಷ್ಟಿ ಕಳೆದುಕೊಳ್ಳುತ್ತಾರೆ.

ಪ್ರತಿವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ, ಕಣ್ಣಿನ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ’’ರಾಷ್ಟ್ರೀಯ ಕಣ್ಣಿನ ದಾನ’’ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಾರ್ನಿಯಲ್ ಕಾಯಿಲೆಗಳು (ಕಣ್ಣಿನ ಮುಂಭಾಗವನ್ನು ಆವರಿಸುವ ಅಂಗಾಂಶಗಳಿಗೆ ಹಾನಿ) ಕಣ್ಣಿನ ಪೊರೆ ಮತ್ತು ಗ್ಲುಕೋಮಾದ ನಂತರ ದೃಷ್ಟಿ ನಷ್ಟ ಮತ್ತು ಕುರುಡುತನಕ್ಕೆ ಪ್ರಮುಖ ಕಾರಣಗಳಾಗಿವೆ.

ನ್ಯಾಷನಲ್ ಹೆಲ್ತ್ ಪೋರ್ಟಲ್ ಆಫ್ ಇಂಡಿಯಾ (ಎನ್‌ಎಚ್‌ಪಿ) ಪ್ರಕಾರ, ಜನರು ಕಣ್ಣಿನ ದಾನಕ್ಕಾಗಿ ಮುಂದೆ ಬರದಿರಲು ವಿವಿಧ ಕಾರಣಗಳಿವೆ ಮತ್ತು ಅರಿವಿನ ಕೊರತೆಯು ಅವುಗಳಲ್ಲಿ ಒಂದು. ಇನ್ನು ಇತರ ಕಾರಣಗಳೆಂದರೆ,

1. ನನಗೆ ದೃಷ್ಟಿ ದುರ್ಬಲವಾಗಿದೆ, ಆದ್ದರಿಂದ ನಾನು ನನ್ನ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ.

ದೃಷ್ಟಿ ದುರ್ಬಲವಾಗುವುದು ಅದೃಷ್ಟವಶಾತ್ ಕಣ್ಣಿನ ದಾನ ಪ್ರಕ್ರಿಯೆಯಲ್ಲಿ ತಡೆಗೋಡೆಯಾಗುವುದಿಲ್ಲ. ಸಣ್ಣ ಅಥವಾ ದೀರ್ಘ ದೃಷ್ಟಿಗೆ ಕನ್ನಡಕ ಅಥವಾ ಮಸೂರಗಳನ್ನು ಧರಿಸುವ ಜನರು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡಬಹುದು.

2. ನನ್ನ ಮುಂದಿನ ಜನ್ಮದಲ್ಲಿ ನಾನು ಕುರುಡನಾಗಿ ಜನಿಸುತ್ತೇನೆ.

ಇಲ್ಲ. ಇದು ಸಂಪೂರ್ಣ ಮೂಢನಂಬಿಕೆ. ಕಣ್ಣುಗಳು ಅಥವಾ ಇನ್ನಾವುದೇ ಅಂಗಗಳನ್ನು ದಾನ ಮಾಡುವುದು ಮಹಾದಾನ. ಅಲ್ಲದೇ, ಪುನರ್ಜನ್ಮದಲ್ಲಿ ಇಂತಹ ವಿಚಾರಗಳನ್ನು ಸಾಗಿಸಲಾಗುವುದಿಲ್ಲ,

3. ಕಣ್ಣಿನ ದಾನ ನನ್ನ ಮುಖವನ್ನು ವಿರೂಪಗೊಳಿಸುತ್ತದೆ

ಇದು ಸಾಮಾನ್ಯವಾಗಿ ಕಾರ್ನಿಯಾವನ್ನು ತೆಗೆದುಹಾಕಲಾಗುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಪ್ರಾಸ್ಥೆಟಿಕ್ ಅನ್ನು ಇರಿಸಬಹುದು. ಆದ್ದರಿಂದ, ಇದು ಕಣ್ಣಿನ ಸಾಕೆಟ್​ಗಳ ಸ್ಥಳದಲ್ಲಿ ರಂಧ್ರವನ್ನು ಬಿಡುವುದಿಲ್ಲ.

4. ನಾನು ಪ್ರತಿಜ್ಞೆ ಮಾಡದಿದ್ದರೆ ನನ್ನ ಕಣ್ಣುಗಳನ್ನು ದಾನ ಮಾಡಲು ಸಾಧ್ಯವಿಲ್ಲ

ತಪ್ಪು. ಒಬ್ಬರು ಜೀವಂತವಾಗಿದ್ದಾಗ ಅವರ ಕಣ್ಣಿನ ದಾನಕ್ಕೆ ವಾಗ್ದಾನ ಮಾಡದಿದ್ದರೂ ಕುಟುಂಬ ಸದಸ್ಯರೊಬ್ಬರು ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡಲು ಸ್ವಯಂಸೇವಕರಾಗಿ ಮಾಡಬಹುದು.

5. ನನ್ನ ಜೀವ ಉಳಿಸಲು ವೈದ್ಯರು ಹೆಚ್ಚು ಶ್ರಮಿಸುವುದಿಲ್ಲ

ಏನೇ ಇರಲಿ, ರೋಗಿಯ ಜೀವವನ್ನು ಎಲ್ಲ ರೀತಿಯಿಂದಲೂ ಉಳಿಸಲು ವೈದ್ಯರು ಸಂಪೂರ್ಣವಾಗಿ ಪ್ರಯತ್ನಿಸುತ್ತಾರೆ. ವ್ಯಕ್ತಿಯ ಮರಣದ ನಂತರವೇ ಅವರ ಕಣ್ಣುಗಳನ್ನು ದಾನ ಮಾಡಬಹುದು.

6. ಮಾಲೀಕರ ಕುಟುಂಬಕ್ಕೆ ಶುಲ್ಕ ವಿಧಿಸಲಾಗುತ್ತದೆ

ಇದು ಮತ್ತೊಂದು ತಪ್ಪು ಕಲ್ಪನೆ. ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡಲು ಯಾವುದೇ ಹಣವನ್ನು ವಿಧಿಸಲಾಗುವುದಿಲ್ಲ. ಇದು ದತ್ತಿ ಸೇವೆ.

7. ನಾನು ಕಣ್ಣು ದಾನ ಮಾಡಿದರೆ ವೈದ್ಯರಿಗೆ ಹಣ ಸಿಗುತ್ತದೆ

ಇಲ್ಲ. ವ್ಯಕ್ತಿಯ ಕಣ್ಣುಗಳು ಅಥವಾ ಇನ್ನಾವುದೇ ಅಂಗಗಳನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಈ ಪ್ರಕ್ರಿಯೆಯಲ್ಲಿ ಯಾವುದೇ ಹಣ ಪಡೆಯಲಾಗುವುದಿಲ್ಲ.

8. ಕಣ್ಣಿನ ದಾನವು ಸುದೀರ್ಘ ವಿಧಾನವಾಗಿದೆ

ವ್ಯಕ್ತಿಯ ನಿಧನದ ನಂತರ ಆಯಾ ಅಧಿಕಾರಿಗಳಿಗೆ ತಿಳಿಸಿದ ನಂತರ, ಪ್ರಕ್ರಿಯೆಯು ಪೂರ್ಣಗೊಳ್ಳಲು 15 - 20 ನಿಮಿಷಗಳನ್ನು ತೆಗೆದುಕೊಳ್ಳುವುದಿಲ್ಲ.

ನಿಮಗೆ ಇನ್ನು ಮುಂದೆ ಜಗತ್ತನ್ನು ನೋಡಲು ಸಾಧ್ಯವಾಗದಿದ್ದರೂ ಬೇರೆಯವರಿಗೆ ಸಾಧ್ಯವಾಗುತ್ತದೆ. ಆದ್ದರಿಂದ, ಮರಣದ ನಂತರ ಕಣ್ಣುದಾನ ಮಾಡಿದಾಗ ಅದೊಂದು ಅತ್ಯುತ್ತಮ ಕೆಲಸವಾಗಲಿದೆ. ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವಂತೆ ಪ್ರೇರೇಪಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.