ಬೆಂಗಳೂರು: ಪ್ರತಿ ವರ್ಷ ಆಗಸ್ಟ್ 4ರಂದು ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಮೂಳೆಸ್ನಾಯು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಾಗುವುದು. ಜೊತೆಗೆ ಈ ಮಸ್ಕ್ಯೂಲೋಸ್ಕೆಲಿಟಲ್ ಸಮಸ್ಯೆಗಳ ಸ್ಥಿತಿಗಳನ್ನು ಸುಧಾರಿಸಲು ತಂತ್ರಗಳನ್ನು ಅಭಿವೃದ್ಧಿ ಪಡಿಸುವುದು ಮತ್ತು ಅದರ ವೆಚ್ಚ ಪರಿಣಾಮಕಾರಿ ಚಿಕಿತ್ಸೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ.
ಭಾರತದಲ್ಲಿ ಶೇ 85ರಷ್ಟು ಅಪಘಾತಗಳು 15 ರಿಂದ 19 ವರ್ಷ ಮತ್ತು 20ರಿಂದ 29ವರ್ಷದವರ ಸಾವಿಗೆ ಕಾರಣವಾಗುತ್ತಿದೆ. ಪ್ರತಿ ವ್ಯಕ್ತಿ ತಮ್ಮ ಜೀವಿತಾವಧಿಯಲ್ಲಿ ಕನಿಷ್ಠ ಎರಡು ಮೂಳೆ ಮುರಿತದ ಅನುಭವವನ್ನು ಹೊಂದಿರುತ್ತಾರೆ. ಈ ಅಪಘಾತಗಳು ಜೀವನಶೈಲಿಯ ಅಂಶಗಳು, ವಾಹನಗಳ ಚಾಲನೆ ಅಥವಾ ಹೊಡೆದಾಟದಲ್ಲಿ ಆಗುವ ಹಿಂಸೆ ಸೇರಿದಂತೆ ಇತರ ಅಂಶಗಳನ್ನು ಹೊಂದಿರುತ್ತದೆ. ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನದಂದು ಈ ಕುರಿತು ಕಾರಣ, ಅಪಾಯ ಮತ್ತು ತಡೆಗಟ್ಟುವಿಕೆ ಮತ್ತು ಗಂಭೀರ ಸಮಸ್ಯೆಯಿಂದ ಹೊರ ಬರುವುದ ಕುರಿತು ಗಮನ ಹರಿಸಲಾಗುವುದು.
ಅಮೋರ್ ಆಸ್ಪತ್ರೆಯ ಮೂಳೆ ರೋಗ ತಜ್ಞರಾಗಿರುವ ಡಾ ಕಿಶೋರ್ ಬಿ ರೆಡ್ಡಿ ಹೇಳುವಂತೆ, ಸಾಮಾನ್ಯವಾಗಿ ರಸ್ತೆ ಅಪಘಾತದಿಂದ ಹೆಚ್ಚಿನ ಮೂಳೆ ಮುರಿತ ಪ್ರಕರಣಗಳು ಆಗುತ್ತಿದ್ದು, 15 ರಿಂದ 29 ವರ್ಷದವರ ಸಾವಿಗೂ ಇದು ಪ್ರಮುಖ ಕಾರಣವಾಗಿದೆ. 2020ರಲ್ಲಿ ಮೋಟರ್ಸೈಕಲ್ ಅಪಘಾತದ ಸಾವಿಗೆ ಪ್ರಮುಖ ಕಾರಣವಾಗಿದೆ. ಇದರ ಹೊರತಾದ ಅಪಘಾತಗಳು ಆದಾಗ ಮೇಲಿನಿಂದ ಬೀಳುವುದು, ಟ್ರಾಮಾ, ಮಕ್ಕಳ ಮೇಲಿನ ದೌರ್ಜನ್ಯ ಮುಂತಾದವುಗಳಿಂದಲೂ ಈ ಸಮಸ್ಯೆ ಕಾಡಬಹುದು. ಈ ಸಮಸ್ಯೆಗಳು ರೋಗಿಯ ಆರ್ಥಿಕ ಮತ್ತು ಆರೋಗ್ಯದ ಪರಿಸ್ಥಿತಿ ಮೇಲೆ ಗಂಭೀರ ಅಪಾಯವನ್ನು ಉಂಟು ಮಾಡುತ್ತವೆ.
ಮೂಳೆ ಸಮಸ್ಯೆಯಲ್ಲಿ ಅನೇಕ ವಿಧದ ಗಾಯಗಳು ಆಗುತ್ತದೆ. ಅದೆಂದರೆ ಮೂಳೆ ಮುರಿತ, ಮೂಳೆಗೆ ಮೂಗೇಟು, ತೆರೆದ ಮುರಿತ, ಒತ್ತಡದ ಮುರಿತ ಮತ್ತು ಅವಲ್ಶನ್ ಮುರಿತ. ಭಾರತದಲ್ಲಿ ಶೇ 70ರಷ್ಟು ಯುವ ಜನತೆ ಗಂಭೀರ ಮತ್ತು ಸಣ್ಣ ಅಪಘಾತಕ್ಕೆ ಒಳಗಾಗಿದ್ದಾರೆ. ಮೂಳೆ ಮುರಿತದಿಂದ ಗುಣಮುಖವಾಗುವುದು ಸುಲಭವಲ್ಲ. ಬೆನ್ನು ಮೂಳೆ, ಪಕ್ಕೆಲಬು, ಮೊಣಕೈ ಮುರಿತವೂ ಹೆಚ್ಚಿನ ಅಪಾಯವನ್ನುಂಟು ಮಾಡುತ್ತವೆ ಅನ್ನುತ್ತಾರೆ ವೈದ್ಯರು.
ಕಿಮ್ಸ್ನ ಡಾ ಬಿ ಸಾರಿ ಪಾಣಿ ಚಂದ್ರ ಹೇಳುವಂತೆ, ಭಾರತದಲ್ಲಿ 60 ವರ್ಷಗಳ ಮೂಳೆಚಿಕಿತ್ಸೆಯ ಹೊರತಾಗಿಯೂ, ನಮ್ಮ ಜನಸಂಖ್ಯೆಯಲ್ಲಿ ಮೂಳೆ ಆರೋಗ್ಯದ ಸ್ಥಿತಿಯನ್ನು ವ್ಯಾಖ್ಯಾನಿಸಲು ನಮಗೆ ಸಾಧ್ಯವಾಗಿಲ್ಲ. ಜೊತೆಗೆ ಇದಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಕಳಪೆ ಮೂಳೆ ಆರೋಗ್ಯ ಪರಿಣಾಮಗಳ ಕೆಲಸ ಮತ್ತು ಅವಕಾಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಮಾತ್ರ ಅಲ್ಲಗಳೆಯುವ ಮಾತಲ್ಲ.
ಹದಿ ವಯಸ್ಸಿನಲ್ಲಿ 40 ರಿಂದ 60ರಷ್ಟು ಶೇಕಡಾ ಪ್ರಮಾಣದಲ್ಲಿ ಪ್ರಮುಖ ಮೂಳೆಗಳು ಅಭಿವೃದ್ಧಿ ಆಗುತ್ತದೆ. ಇದಕ್ಕೆ ಸರಿಯಾದ ಪೋಷಣೆ ನೀಡಬೇಕಾಗುತ್ತದೆ. ಹಾಲು, ತರಕಾರಿ, ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಇನ್ನಿತರ ಮಿನರಲ್ ಮತ್ತು ಪೂರಕಗಳ ಸೇವನೆ ಮಾಡಬೇಕು. ಮೂಳೆ ಮುರಿತದಲ್ಲಿ ಪುರುಷರಿಗೆ ಹೋಲಿಕೆ ಮಾಡಿದರೆ ಸಾವಿನ ಪ್ರಮಾಣ ಕಡಿಮೆ. ಅಂದಾಜು 40 ರಿಂದ 50ರಷ್ಟು ಮಕ್ಕಳು ಕೂಡ ಕೆಲವು ಮುರಿತದ ಅನುಭವವನ್ನು ಅನುಭವಿಸುತ್ತಾರೆ. ಕಾರಣ ಅವರ ಮೂಳೆಗಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ.
ಡಾ ಪಿ ಅಜಯ್ ಕುಮಾರ್ ರಾಜು ತಿಳಿಸುವಂತೆ, ’’ಯುವ ಜನತೆಯ ಕನಸು ಮತ್ತು ಆಕಾಂಕ್ಷೆಗಳನ್ನು ಈ ಅಪಘಾತಗಳು ಕೊಲ್ಲುತ್ತವೆ. ಅವರು ಸಾಮಾನ್ಯ ಜೀವನಶೈಲಿಯನ್ನ ಈ ಅಪಘಾತಗಳು ನುಚ್ಚು ನೂರು ಮಾಡುತ್ತವೆ. ಕೆಲವೊಮ್ಮೆ ಇದು ಉಪಶಮನವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಯಸ್ಸಿನ ಆಧಾರದ ಮೇಲೆ ಚೇತರಿಕೆಯೂ ಇರುತ್ತದೆ. ಬಹುತೇಕ ಸಮಯದಲ್ಲಿ ಹಿಂಸೆ ಮತ್ತು ಅಪಘಾತ ಈ ಮೂಳೆ ಮುರಿತಕ್ಕೆ ಕಾರಣ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ರಸ್ತೆ ಅಪಘಾತಗಳು ಅಸಹಜ ಸಾವಿಗೆ ಪ್ರಮುಖ ಕಾರಣವಾಗಿದೆ. ಕಡಿಮೆ ಮಧ್ಯಮ ಆದಾಯದ ದೇಶದಲ್ಲಿ ಶೇ 80ರಷ್ಟು ಪ್ರಕರಣಗಳು ವರದಿಯಾಗುತ್ತದೆ ಎಂದು ತಿಳಿಸಿದೆ. ಆಧುನಿಕ ಸೌಲಭ್ಯಗಳು ಲಭ್ಯವಿದ್ದರೂ, ಕೆಲವು ಕುಟುಂಬಗಳಿಗೆ ಯಾವುದೇ ಮಾರ್ಗದರ್ಶನ ಅಥವಾ ಬೆಂಬಲ ಸಿಗದ ಹಿನ್ನಲೆ ಪರಿಣಾಮಕಾರಿ ಪ್ರಾಥಮಿಕ ಚಿಕಿತ್ಸೆ ಲಭ್ಯವಾಗುವುದಿಲ್ಲ. ಶೇ 90ರಷ್ಟು ಸಮಸ್ಯೆಗಳು ಆರಂಭದ ಹಂತದಲ್ಲೇ ಪತ್ತೆ ಮಾಡಿ ಕಡಿಮೆ ಅವಧಿಯಲ್ಲಿ ಉಪಶಮನ ಮಾಡಬಹುದು. ಭಾರತದಲ್ಲಿ ಅನೇಕ ಆಸ್ಪತ್ರೆಗಳು ರೋಗಿಗಳ ಸಂಪೂರ್ಣ ಚೇತರಿಕೆಗೆ ಬೆಂಬಲ ನೀಡುತ್ತದೆ.
ಇದನ್ನೂ ಓದಿ: National Bone And Joint Day 2023: ಮಹಿಳೆಯರನ್ನು ಹೆಚ್ಚಾಗಿ ಕಾಡುವ ಮೂಳೆ ಸಮಸ್ಯೆ ಬಗ್ಗೆ ಮೂಡಿಸಬೇಕಿದೆ ಅರಿವು