ನವದೆಹಲಿ: ಮೈಂಡ್ ಡಯಟ್, ಮಿದುಳಿನ ಆರೋಗ್ಯಕರ ಆಹಾರ ಪದ್ಧತಿಯೂ ಹೆಚ್ಚಾಗಿ ಧಾನ್ಯ, ಹಸಿರು ಎಲೆ ತರಕಾರಿ, ಹಣ್ಣು ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುತ್ತದೆ. ಇದು ನೆನಪಿನ ಶಕ್ತಿ ಮತ್ತು ಇತರ ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುವುದರ ಮೇಲೆ ಅಲ್ಪಾವಧಿಯ ಪ್ರಭಾವ ಹೊಂದಿದೆಯೇ ಹೊರತು, ದೀರ್ಘಾವಧಿಯಾಗಿ ಅಲ್ಲ ಎಂದು ಸಂಶೋಧನೆ ತಿಳಿಸಿದೆ.
ನ್ಯೂ ಇಂಗ್ಲೆಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಈ ಕುರಿತು ಪ್ರಕಟಿಸಲಾಗಿದೆ. ಮೂರು ವರ್ಷಗಳ ಕಾಲ ಈ ಅಧ್ಯಯನವನ್ನು ನಡೆಸಲಾಗಿದ್ದು, ಸಾಮಾನ್ಯ ಡಯಟ್ ನಿಯಂತ್ರಣ ಗುಂಪಿಗೆ ಹೋಲಿಕೆ ಮಾಡಿದಾಗ ಮೈಂಡ್ ಡಯಟ್ ಗುಂಪಿನ ಭಾಗಿದಾರರ ಅರಿವಿನ ಬದಲಾವಣೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿಲ್ಲ ಎಂದಿದ್ದಾರೆ.
ಮೂರು ವರ್ಷ ಅಧ್ಯಯನ: ಮೂರು ವರ್ಷದ ಹೊಸ ಅಧ್ಯಯನದ ಕ್ಲಿನಿಯಲ್ ಟ್ರಯಲ್ಗಳು ಪ್ರಭಾವಶಾಲಿಯಾಗಿಲ್ಲ. ಮೈಂಡ್ ಡಯಟ್, ಅಲ್ಪಾವಧಿಯಲ್ಲಿ ಅರಿವಿನ ಸುಧಾರಣೆಗಳು ದೀರ್ಘಾವಧಿಯ ವೀಕ್ಷಣಾ ದತ್ತಾಂಶದೊಂದಿಗೆ ಸ್ಥಿರವಾಗಿದೆ ಎಂದು ಅಧ್ಯಯನ ಪ್ರಮುಖ ಲೇಖಕ ಲಿಸಾ ಬರ್ನೆಸ್ ತಿಳಿಸಿದ್ದಾರೆ.
ಎರಡು ಗುಂಪಿನ ಅಧ್ಯಯನದ ವೇಳೆ ನಿತ್ಯ 250 ಕಿ.ಗ್ರಾಂ ಕ್ಯಾಲೋರಿ ಕಡಿಮೆ ಮಾಡಲಾಗಿದೆ. ಆದರೆ, ಮೊದಲ ಎರಡು ವರ್ಷದಲ್ಲಿ ಇದರಲ್ಲಿ ಗಮನಾರ್ಹ ಅಭಿವೃದ್ಧಿಕಂಡಿದೆ. ಎರಡು ಗುಂಪಿನಲ್ಲಿ ಅರಿವಿನ ಅಭಿವೃದ್ಧಿಯನ್ನು ನಾವು ಕಂಡಿದ್ದೇವೆ. ಆದರೆ, ಮೈಂಡ್ ಡಯಟ್ ಮದ್ಯಂತರ ಗುಂಪು ಅರಿವಿನಲ್ಲಿ ಕೊಂಚ ಮಟ್ಟದ ಉತ್ತಮ ಬೆಳವಣಿಗೆ ಕಂಡಿದೆ. ಆದಾಗ್ಯೂ ಇದು ಗಮನಾರ್ಹವಾಗಿ ಉತ್ತಮವಾಗಿಲ್ಲ ಎಂದು ಬರ್ನೆಸ್ ತಿಳಿಸಿದ್ದಾರೆ.
ಎರಡು ಗುಂಪು ಮೂರು ವರ್ಷದಲ್ಲಿ ಅಂದಾಜು 5 ಕೆಜಿ ತೂಕ ನಷ್ಟಕ್ಕೆ ಒಳಗಾಗಿದ್ದಾರೆ. ತೂಕ ನಷ್ಟವೂ ಅರಿವಿನ ಟ್ರಯಲ್ನಲ್ಲಿ ಪ್ರಯೋಜನ ನೀಡಿದೆ ಎಂದು ತಿಳಿಸಿದ್ದಾರೆ. ಅಮೆರಿಕ ನ್ಯೂಸ್ ಮತ್ತು ವರ್ಲ್ಡ್ನ ವಾರ್ಷಿಕ ವರದಿಯ ಟಾಪ್ ಐದು ಡಯಟ್ನಲ್ಲಿ ಮೈಂಡ್ ಡಯಟ್ ಕೂಡ ಸ್ಥಾನ ಪಡೆದಿದೆ.
ಕ್ಯಾಲೋರಿಗೆ ನಿರ್ಬಂಧ: ಇತ್ತೀಚಿನ ಪ್ರಯೋಗದಲ್ಲಿ ಮೈಂಡ್ ಡಯಟ್ಗೆ 604 ಅಧಿಕ ತೂಕವುಳ್ಳ ಜನರು ದಾಖಲಾಗಿದ್ದಾರೆ. ಅವರು ಉಪ ಸೂಕ್ತ ಆಹಾರ ಪದ್ದತಿ ಹೊಂದಿದ್ದು, ಅವರ ಕುಟುಂಬದಲ್ಲಿ ಆಲ್ಝಮೈರ್ ರೋಗದ ಇತಿಹಾಸ ಹೊಂದಿದ್ದಾರೆ. ಈ ಪ್ರಯೋಗವನ್ನು ಎರಡು ಗುಂಪಿನ ಡಯಟ್ ಮಧ್ಯಂತರದಲ್ಲಿ ಸಮಾಲೋಚನೆ ಜೊತೆಗೆ ಮಧ್ಯಮ ಕ್ಯಾಲೋರಿ ನಿರ್ಬಂಧವನ್ನು ನಿತ್ಯವೂ ಪಾಲಿಸಲಾಗಿದೆ. ಅದರ ಅನುಸಾರ ದಿನಕ್ಕೆ 250 ಕ್ಯಾಲೋರಿ ಮಾತ್ರ ನೀಡಲಾಗಿದೆ. ಖುಷಿ ವಿಚಾರ ಎಂದರೆ, ಭಾಗಿದಾರರ ಸರಾಸರಿ ಅಭಿವೃದ್ಧಿಗೆ ಇದು ಸಹಾಯಕವಾಗಿದ್ದು, ಇದು ದುರದೃಷ್ಟವಶಾತ್ ಈ ತುಲನಾತ್ಮಕವಾಗಿ ಕಡಿಮೆ ಅವಧಿಯಲ್ಲಿ ಎರಡು ಗುಂಪುಗಳ ನಡುವಿನ ಗಮನಾರ್ಹ ವ್ಯತ್ಯಾಸಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ತಡೆಯುತ್ತದೆ.
ಮೈಂಡ್ ಡಯಟ್ನಲ್ಲಿ 14 ಆಹಾರಗಳು ಹೊಂದಿದೆ. ಅದರಲ್ಲಿ ಮಿದುಳಿಗೆ ಆರೋಗ್ಯಕರ ಆಹಾರಗಳಾದ ಚಿಕನ್, ಮೀನು, ಹಸಿರು ಎಲೆ ತರಕಾರಿ ಮತ್ತು ಬೆರ್ರಿ, ನಟ್ಸ್ ಹೊಂದಿದೆ. ಐದು ಅನಾರೋಗ್ಯಕರ ಆಹಾರಗಳಾದ ಕೆಂಪು ಮಾಂಸ, ಬೆಣ್ಣೆ ಮತ್ತು ಸಂಪೂರ್ಣ ಕೊಬ್ಬಿನ ಚೀಸ್, ಪೆಸ್ಟ್ರಿ, ಸ್ವೀಟ್ ಮತ್ತು ಕರಿದ ಆಹಾರ ಹೊಂದಿದೆ.
ಇದನ್ನೂ ಓದಿ: Strawberries: ಸ್ಟ್ರಾಬೆರಿ ಹಣ್ಣು ಸೇವಿಸುವಿರಾ? ಆರೋಗ್ಯ ಪ್ರಯೋಜನಗಳು ತಿಳಿದಿದೆಯೇ?