ಹೈದರಾಬಾದ್: ಜರ್ಮನಿಯ ಮಾರ್ಬರ್ಗ , ಫ್ರಾಂಕ್‌ಫರ್ಟ್, ಸೆರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ 1976ರಲ್ಲಿ ಪತ್ತೆಯಾದ ವೈರಸ್ ಅನ್ನು, ವೈರಾಣುಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಇದು ಫಿಲೋವಿರಿಡೆ ಕುಟುಂಬದ ಸದಸ್ಯನಾಗಿದ್ದು, ಎಬೋಲಾ ವೈರಸ್‌ನಂತೆಯೇ ಮಾರಣಾಂತಿಕವಾಗಿದೆ. ಮಾರ್ಬರ್ಗ ವೈರಸ್ ಬಾವಲಿಗಳಿಂದ ಮತ್ತು ಮನುಷ್ಯರಿಂದ ಮನುಷ್ಯನಿಗೆ ಹರಡುತ್ತದೆ.
ಎರಡು ಪ್ರಕರಣ ಪತ್ತೆ: 2004 ರಲ್ಲಿ ಮಧ್ಯ ಆಫ್ರಿಕಾದ ಅಂಗೋಲಾದಲ್ಲಿ ಮಾರ್ಬರ್ಗ ವೈರಸ್ ಪತ್ತೆಯಾಗಿತ್ತು. ಇದು ಶೇ 90ರಷ್ಟು ಸಾವಿನ ಪ್ರಮಾಣವನ್ನು ಹೊಂದಿದೆ. 252 ಸೋಂಕಿತರಲ್ಲಿ 227 ಜನ ಸಾವಿಗೀಡಾಗಿದ್ದರು. ಜುಲೈ 2022 ರಲ್ಲಿ, ಸುಮಾರು 18 ವರ್ಷಗಳ ನಂತರ, ಪಶ್ಚಿಮ ಆಫ್ರಿಕಾದ ಘಾನಾದ ಪ್ರದೇಶದಲ್ಲಿ ಮಾರ್ಬರ್ಗ್ ವೈರಸ್‌ನ ಎರಡು ಪ್ರಕರಣಗಳು ಪತ್ತೆಯಾಗಿವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಗಿನಿ ಪ್ರಾಂತ್ಯದಲ್ಲಿ ಎಬೋಲಾ ವೈರಸ್ ಸೋಂಕಿನ ಎರಡನೇ ಅಲೆಯು ಅಂತ್ಯಗೊಂಡಿದೆ ಎಂದು ಘೋಷಿಸಿದ ಎರಡು ತಿಂಗಳಿನಲ್ಲೇ ಅಪಾಯ ಹೆಚ್ಚಾಗಿದೆ. ಕಳೆದ ವರ್ಷ ಶುರುವಾಗಿದ್ದ ಈ ಸೋಂಕು 12 ಮಂದಿಯ ಪ್ರಾಣವನ್ನೇ ಕಿತ್ತುಕೊಂಡಿತ್ತು. ಜಿನೇವಾದ ವಿಶ್ವ ಆರೋಗ್ಯ ಸಂಸ್ಥೆಯು ರೋಗಾಣುವಿನ ಹರಡುವಿಕೆ ಬಗ್ಗೆ ಉಲ್ಲೇಖಿಸಿತ್ತು. ಈ ರೋಗವು ಪ್ರಾದೇಶಿಕ ಮತ್ತು ದೇಶೀಯ ಮಟ್ಟದಲ್ಲಿ ಹೆಚ್ಚಾಗಿದೆಯೇ ವಿನಃ ಅಂತಾರಾಷ್ಟ್ರೀಯ ಮಟ್ಟಕ್ಕೆ ಹರಡುವ ಅಪಾಯ ಅಷ್ಟಾಗಿಲ್ಲ ಎಂದು ಹೇಳಿತ್ತು.
ವೈರಸ್‌ನ ಅವಧಿ 3 ವಾರ: ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವ ಮೂಲಕ ರೋಗಿಯ ಕುಟುಂಬ ಸದಸ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಸೋಂಕಿಗೆ ಒಳಗಾಗಬಹುದು. ಮಾರ್ಬರ್ಗ ವೈರಸ್‌ನ ಅವಧಿಯು 3 ವಾರಗಳವರೆಗೆ ಇರಬಹುದು. ಹೆಚ್ಚುತ್ತಿರುವ ಜಾಗತೀಕರಣ ಮತ್ತು ಅಂತಾರಾಷ್ಟ್ರೀಯ ಪ್ರಯಾಣವು ಜಾಗತಿಕ ಹರಡುವಿಕೆಯ ಅಪಾಯ ಹೆಚ್ಚಿಸುತ್ತದೆ.
ಮಾರ್ಬರ್ಗ್ ವೈರಸ್‌ಗೆ ಲಸಿಕೆ ಇಲ್ಲ: ಮಾರ್ಬರ್ಗ ವೈರಸ್ ಕಾಯಿಲೆಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಆಂಟಿವೈರಲ್ ಚಿಕಿತ್ಸೆಯನ್ನು ಪ್ರಸ್ತುತ ಅನುಮೋದಿಸಲಾಗಿಲ್ಲ. ಹೀಗಾಗಿ ಇದು ಹೆಚ್ಚಿನ ಸಾವಿಗೆ ಕಾರಣವಾಗುತ್ತದೆ. ಆದ್ದರಿಂದ, ಮಾರ್ಬರ್ಗ ವೈರಸ್ ಕಾಯಿಲೆಯ ತುರ್ತು ಪರಿಗಣನೆ ಮತ್ತು ಈ ವೈರಸ್ನನ್ನು ತಡೆಗಟ್ಟುವ ವಿಧಾನಗಳು ಅತ್ಯಗತ್ಯ. ಮಾರ್ಬರ್ಗ್ ವೈರಸ್ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ ಮತ್ತು ವೈರಸ್‌ಗೆ ನಿರ್ದಿಷ್ಟವಾದ ಆಂಟಿವೈರಲ್‌ಗಳನ್ನು ಉತ್ಪಾದಿಸಬೇಕಾಗಿದೆ. ಎಲ್ಲ ದೇಶಗಳ ಸರ್ಕಾರ ತಮ್ಮ ನಾಗರಿಕರಿಗೆ ಮಾರ್ಬರ್ಗ ವೈರಸ್ ಕಾಯಿಲೆಗೆ ಚಿಕಿತ್ಸೆ ಒದಗಿಸುವಂತಾಗಬೇಕಾಗಿದೆ.
ಇದನ್ನೂ ಓದಿ: ಏನಿದು ಗೋಲ್ಡ್ ನ್ಯಾನೋಪರ್ಟಿಕಲ್ ಚಿಕಿತ್ಸೆ: ಇದು ಆಗಬಹುದೇ ಕ್ಯಾನ್ಸರ್ಗೆ ರಾಮಬಾಣ
ಬಹು ಮುಖ್ಯವಾಗಿ, ಘಾನಾದ ಮೂರು ಪ್ರದೇಶಗಳಲ್ಲಿ (ಅಶಾಂತಿ, ಸವನ್ನಾ ಮತ್ತು ಪಶ್ಚಿಮ ಪ್ರದೇಶಗಳು) ಮತ್ತಷ್ಟು ಹರಡುವುದನ್ನು ತಡೆಗಟ್ಟಲು ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು. ಇದರಲ್ಲಿ ಎರಡು ದೃಢಪಡಿಸಿದ ಪ್ರಕರಣಗಳ ಸಂಪರ್ಕಗಳನ್ನು ಗುರುತಿಸಲಾಗಿದೆ. ಘಾನಾದ ಈ ಪೀಡಿತ ಪ್ರದೇಶಗಳಲ್ಲಿ ವೈರಸ್ ಹರಡುವುದನ್ನು ತಡೆಗಟ್ಟುವುದು ಜಾಗತಿಕ ಹರಡುವಿಕೆಯ ಅಪಾಯ ಮಿತಿಗೊಳಿಸುತ್ತದೆ.
ಮಾರ್ಬರ್ಗ್ ವೈರಸ್ ಸೋಂಕು ತಗುಲಿ ಎರಡರಿಂದ 21 ದಿನಗಳಲ್ಲಿ ಬೆಳೆಯಬಹುದು. ತೀವ್ರ ಜ್ವರ, ತೀವ್ರ ತಲೆನೋವು ಮತ್ತು ಆಯಾಸದಂತಹ ರೋಗಲಕ್ಷಣಗಳೊಂದಿಗೆ ಹಠಾತ್ ತೀವ್ರ ಅನಾರೋಗ್ಯ. ಏಳು ದಿನಗಳಲ್ಲಿ ಹೆಚ್ಚಿನ ಬಲಿಪಶುಗಳಲ್ಲಿ ರಕ್ತಸ್ರಾವ ಸಂಭವಿಸುತ್ತದೆ. ನಂತರ ಅದು ಮಾರಕವಾಗುತ್ತದೆ.ಮಾರ್ಬರ್ಗ್ ವೈರಸ್ ಲಕ್ಷಣಗಳೆಂದರೇ, ಜ್ವರ, ರಕ್ತಸಿಕ್ತ ಅತಿಸಾರ, ಒಸಡುಗಳಲ್ಲಿ ರಕ್ತಸ್ರಾವ, ಕೆಂಪು ಕಣ್ಣುಗಳು, ಮೂತ್ರದಲ್ಲಿ ರಕ್ತ.