ನವದೆಹಲಿ: ದೇಶದಲ್ಲಿ ಕೆಮ್ಮಿನ ಔಷಧ ತಯಾರು ಮಾಡುತ್ತಿರುವ 40 ಕಂಪನಿಗಳ ಸಿರಪ್ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫವಾಗಿದೆ. ಈ ಕುರಿತು ವರದಿ ನೀಡಿರುವ ಸಿಡಿಎಸ್ಸಿಒ, ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳನ್ನು ಜಾಗತಿಕವಾಗಿ 141 ಮಕ್ಕಳ ಸಾವುಗಳಿಗೆ ಕಾರಣವಾಗುತ್ತಿರುವ ವರದಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತಿರುವ ಔಷಧಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಇವು ಅರ್ಹತೆ ಪಡೆಯಲು ವಿಫಲವಾಗಿವೆ.
ಸೆಂಟ್ರಲ್ ಡ್ರಗ್ ಸ್ಟ್ಯಾಡಂರ್ಡ್ ಕಂಟ್ರೋಲ್ ಆರ್ಗನೈಸೇಷನ್ (ಸಿಡಿಎಸ್ಸಿಒ) ಈ ವರದಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಯಲ್ಲಿ 1,105 ಔಷಧಗಳ ಮೌಲ್ಯ ಮಾಪನ ನಡೆಸಲಾಗಿದೆ. ಇದರಲ್ಲಿ 59 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಘೋಷಿಸಲಾಗಿದೆ.
ನವೆಂಬರ್ನಲ್ಲಿ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಪಟ್ಟಿಯ ಅಡಿ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉತ್ಪನ್ನಗಳು ಪ್ರಮಾಣಿತ ಗುಣಮಟ್ಟವಲ್ಲ ಅಥವಾ ಕಲಬೆರಕೆ ಅಥವಾ ತಪ್ಪಾದ ಬ್ರ್ಯಾಂಡ್ ಎಂದು ಘೋಷಿಸಲಾಗಿದೆ. ಈ ದತ್ತಾಂಶವನ್ನು ಸರ್ಕಾರಿ ಪರೀಕ್ಷಾ ಪ್ರಯೋಗಾಲಯದಿಂದ ಪಡೆಯಲಾಗಿದೆ. ಈ ವರದಿಯಲ್ಲಿ ಯಾವುದೇ ಉತ್ಪನ್ನಗಳು ಕಲಬೆರಕೆ ಅಥವಾ ತಪ್ಪು ಬ್ರ್ಯಾಂಡ್ ಎಂದು ಕಂಡು ಬಂದಿಲ್ಲ.
ಭಾರತದಲ್ಲಿ ಉತ್ಪಾದಿತ ಅನೇಕ ಕೆಮ್ಮಿನ ಸಿರಪ್ಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಸೇವಿಸಿದವರಲ್ಲಿ ಸಾವಿನ ವರದಿಗಳಾಗಿದ್ದವು. ಈ ಹಿನ್ನೆಲೆ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ರಫ್ತು ಮಾಡುವ ಕೆಮ್ಮಿನ ಸಿರಪ್ಗಳ ಗುಣಮಟ್ಟದ ಮೇಲೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದಿತು. ಡಿಜಿಎಫ್‌ಟಿ ನಿರ್ದೇಶನ ಹಿನ್ನಲೆ ಸಿಡಿಎಸ್ಸಿಇ ರಫ್ತು ಅನುಮತಿ ಪಡೆಯುತ್ತಿರುವ ಎಲ್ಲ ಕೆಮ್ಮಿನ ಸಿರಪ್ಗಳ ಪರೀಕ್ಷೆ ನಡೆಸುತ್ತಿದೆ.
ಮಕ್ಕಳ ಸಾವಿಗೆ ಕಾರಣವಾದ ಔಷಧಗಳು: ಗ್ಯಾಂಬೀಯಾ ಮತ್ತು ಉಜ್ಜೇಕಿಸ್ತಾನ ನೋಯ್ಡಾ ಮೂಲದ ಔಷಧ ಸಂಸ್ಥೆ ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್ ಡಾಕ್ -1 ಅನ್ನು ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದರು. ಇರಾಕ್ನಲ್ಲಿ ಮಹಾರಾಷ್ಟ್ರದ ಫಾರ್ಮಾಸ್ಯುಟಿಕಲ್ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿದ ಮಕ್ಕಳ ಸ್ಥಿತಿ ಕೂಡ ಗಂಭೀರಗೊಂಡಿತು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿ, ಇವುಗಳಲ್ಲಿ ರಾಸಾಯನಿಕ ಅಂಶ ಇದ್ದು ಬಳಕೆ ಮಾಡದಂತೆ ಜಾಗತಿಕ ಎಚ್ಚರಿಕೆ ನೀಡಿತು. (ಐಎಎನ್ಎಸ್)
ಇದನ್ನೂ ಓದಿ: ಇರಾಕ್ನಲ್ಲಿ ಮಾರಾಟವಾಗುತ್ತಿರುವ ಭಾರತದ ಸಿರಪ್ನಲ್ಲಿ ವಿಷಕಾರಿ ರಾಸಾಯನಿಕ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ