ಲಂಡನ್: ದೀರ್ಘಕಾಲದ ಕೋವಿಡ್ನಲ್ಲಿ ವಾಸನೆ ಕಳೆದುಕೊಳ್ಳುವುದು ಅತ್ಯಂತ ಸಾಮಾನ್ಯ. ಹೊಸ ಅಧ್ಯಯನ ಅನುಸಾರ, ಮೂರನೇ ದೀರ್ಘಾವಧಿ ಕೋವಿಡ್ನಲ್ಲಿ ನಿರಂತರ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳಲಿದ್ದಾರೆ. ಐದನೇ ಅನುಭವದಲ್ಲಿ ರುಚಿಯನ್ನು ಕಳೆದುಕೊಳ್ಳಲಿದ್ದಾರೆ. ಈಸ್ಟ್ ಏಜಲಿಯಾ (ಯುಇಎ) ಬ್ರಿಟನ್ ಜಂಟಿ ಅಧ್ಯಯನದಲ್ಲಿ ಕಿವಿ, ಮೂಗು ಮತ್ತು ಗಂಟಲು ಸಂಬಂಧಿಸಿದ ಲಕ್ಷಣವನ್ನು ದೀರ್ಘಾವಧಿ ಕೋವಿಡ್ನಲ್ಲಿ ಕಾಡಲಿದೆ ಎಂದಿದೆ.
ದೀರ್ಘ ಕೋವಿಡ್ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ. 12 ವಾರಗಳ ಕಾಲ ಲಕ್ಷಣಗಳು ಇರಲಿದೆ ಎಂದು ಸಂಶೋದಕರಿ ಕರ್ಲ್ ಪಿಲ್ಪೊಟ್ ತಿಳಿಸಿದ್ದಾರೆ. ತಲೆನೋವು, ರುಚಿ, ವಾಸನೆ ಕಳೆದುಕೊಳ್ಳುವುದು ಮೈಯಾಲ್ಜಿಯಾ, ಆಯಾಸದಂತಹ ಲಕ್ಷಣಗಳು ಕಾಡಲಿದೆ. ಸೋಂಕಿನ ನಂತರದಲ್ಲಿ ತಿಂಗಳವರೆಗೆ ಪರೊಸ್ಮಿಯ, ಬ್ರೈನ್ ಫಾಗ್, ಸ್ಮರಣಾಶಕ್ತಿ ಕಳೆದುಕೊಳ್ಳುವುದು ಕಾಡಲಿದೆ.
ವಾಸನೆ ಕಳೆದುಕೊಳ್ಳುವುದು ಸೇರಿದಂತೆ ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಕೋವಿಡ್ ಲಕ್ಷಣಗಳ ಮೇಲೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಈ ಸಂಬಂಧ ಯುಕೆ ಕೊರೋನಾ ವೈರಸ್ ಸೋಂಕು ಸಮೀಕ್ಷೆ ಮತ್ತು 3,60,000 ಜನರ ಮಾಹಿತಿ ಅನುಸಾರ ವಿಶ್ಲೇಷಣೆ ನಡೆಸಲಾಗಿದೆ.
ದೀರ್ಘಕಾಲದ ಕೋವಿಡ್ನಿಂದ ಬಳಲಿದ ಒಟ್ಟು 10,431ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿನಿತ್ಯದ ಜೀವನದಲ್ಲಿ 23 ವೈಯಕ್ತಿಕ ರೋಗಲಕ್ಷಣದ ಪ್ರಭಾವದ ಕುರಿತು ಪ್ರಶ್ನಿಸಲಾಯಿತು. ಈ ವೇಳೆ ಕೋವಿಡ್ ಸೋಂಕಿನ ನಂತರ ನಾಲ್ಕು ವಾರಗಳ ಕಾಲ ಈ ಲಕ್ಷಣಗಳು ಕಾಡಲಿವೆ.
ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಶೇ 3ರಷ್ಟು ಜನರು ದೀರ್ಘಕಾಲ ಕೋವಿಡ್ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಯುಕೆ ಜನಸಂಖ್ಯೆಯನ್ನು ಅಳತೆ ಮಾಡಿದಾಗ ಇದು ಸುಮಾರು 1.8 ಮಿಲಿಯನ್ ಜನರಿಗೆ ಸಮವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಆಯಾಸ ಸಾಮಾನ್ಯ ಲಕ್ಷಣವಾಗಿದ್ದು, ಇಎನ್ಟಿ ಸಮಸ್ಯೆಗಳಾದ ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ತಲೆ ಸುತ್ತು, ಉಸಿರಾಟದ ಸಮಸ್ಯೆ ಮತ್ತು ಗಂಟಲು ನೋವು ಸೇರಿದೆ.
ಇದು ಜೀವನದ ಪ್ರತಿಯೊಂದರ ಮೇಲೆ ಕೂಡ ಪರಿಣಾಮ ಹೊಂದಿದೆ. ದೈನಂದಿನ ಕಾಳಜಿಯಾದ ವೈಯಕ್ತಿಕ ಶುಚಿತ್ವದಿಂದ ಲೈಂಗಿಕ ನಿರಾಸಕ್ತಿ, ಸಂಬಂಧಗಳ ಹಾಳಾಗುವಿಕೆ ಕೂಡ ಇದರಲ್ಲಿದೆ. ಕ್ರಿಸ್ಮಸ್ ಸಮಯ ವಿಶೇಷವಾಗಿ ಸಂಕಷ್ಟದ ಸಮಯವಾಗಿದೆ. ನಮ್ಮ ಬಹುತೇಕ ಸಂಭ್ರಮಗಳು ವಾಸನೆ ಮತ್ತು ರುಚಿ ಮೇಲೆ ಆಧಾರಿತವಾಗಿವೆ. ಯುಕೆಯಲ್ಲಿ ದೀರ್ಘಕಾಲದ ಕೋವಿಡ್ ಬೆಳವಣಿಗೆ ಸಮಸ್ಯೆಯಾಗಿದ್ದು, ವಾಸನೆ-ರುಚಿ ಕಳೆದುಕೊಳ್ಳುತ್ತಿರುವರತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ಫಿಲ್ಪೊಟ್.
ಇದನ್ನೂ ಓದಿ: ಜಗತ್ತಿನಲ್ಲಿ ವೈರಸ್ ಉಲ್ಬಣ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ