ETV Bharat / sukhibhava

Health Tips: ಎಚ್ಚರದಿಂದ ತೂಕ ಇಳಿಸಿ.. ಇದಕ್ಕೆ ಇಲ್ಲಿದೆ ತಜ್ಞರ ಸಲಹೆ - ವಿಧದ ಡಯಟ್​ ಮೊರೆ

ಬಾಯಿ ಕಟ್ಟಿ ತೂಕ ಇಳಿಸುವ ಬದಲಾಗಿ ಆರಾಮದಾಯಕವಾಗಿ ನೀವಿಷ್ಟ ಪಡುವಂತೆ ತೂಕ ಇಳಿಸುವುದರಿಂದ ಸಾಕಷ್ಟು ಪ್ರಯೋಜನ ಇದೆ.

lose-weight-carefully-dot-dot-dot-here-is-an-experts-advice

author img

By

Published : Jun 23, 2023, 12:16 PM IST

ಇತ್ತೀಚಿನ ದಿನಗಳಲ್ಲಿ ತೂಕ ನಿರ್ವಹಣೆ ಬಗ್ಗೆ ಯುವತಿಯರಿಗೆ ಎಲ್ಲಿಲ್ಲದ ಕಾಳಜಿ ಹೆಚ್ಚಿದೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವು ಯುವತಿಯರು ಅನೇಕ ವಿಧದ ಡಯಟ್​ ಮೊರೆ ಹೋಗುತ್ತಾರೆ. ಈ ಮೂಲಕ ತಮ್ಮಿಷ್ಟದ ಆಹಾರ ಮಾತ್ರವಲ್ಲದೇ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿರಾಕರಿಸುತ್ತಾರೆ. ಎಣ್ಣೆ, ಸಿಹಿ ತಿನಿಸು ದೂರ ಇಟ್ಟು ಕಟ್ಟು ನಿಟ್ಟಿನ ಆಹಾರ ಪದ್ಧತಿ ಪಾಲನೆ ಕೂಡ ಮಾಡುತ್ತಾರೆ. ಆದರೆ, ಇದರಿಂದಾಗಿ ದೇಶಕ್ಕೆ ಬೇಕಾದ ಅಗತ್ಯ ಶಕ್ತಿ ಕೊರತೆಯಿಂದ ಬಳಲುವಂತೆ ಆಗುತ್ತದೆ. ಕಡೆಗೆ ಅನಿವಾರ್ಯವಾಗಿ ಈ ಡಯಟ್​​ಗೆ ಗುಡ್​ಬೈ ಹೇಳುತ್ತಾರೆ. ಬಾಯಿ ಕಟ್ಟಿ ತೂಕ ಇಳಿಸುವ ಬದಲಾಗಿ ಆರಾಮದಾಯಕವಾಗಿ ನೀವಿಷ್ಟ ಪಡುವಂತೆ ತೂಕ ಇಳಿಸುವುದರಿಂದ ಸಾಕಷ್ಟು ಪ್ರಯೋಜನ ಇದೆ. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಮತ್ತು ಪ್ರೋಟಿನ್​ಗಳು ಲಭ್ಯವಾಗುತ್ತದೆ. ಅಂತಹ ಆಹಾರ ಪದ್ಧತಿ ಕುರಿತು ತಜ್ಞರು ನೀಡಿದ ಸಲಹೆಗಳು ಇಲ್ಲಿವೆ.

ಕ್ಯಾಲೋರಿಯೂ ಬೇಕು: ತೂಕ ಇಳಿಕೆಗೆ ಕ್ಯಾಲೋರಿಗಳ ಏಣಿಕೆ ಕೂಡ ಅತಿ ಮುಖ್ಯವಾಗುತ್ತದೆ ಎಂದು ಅನೇಕ ಯುವತಿಯರ ನಂಬಿಕೆ. ಇದೇ ಕಾರಣಕ್ಕೆ ಅವರು ಎಣ್ಣೆಯುಕ್ತ ಪದಾರ್ಥಗಳನ್ನು ಹೊರಗೆ ಇಡುತ್ತದೆ. ನೀವು ಕೆಲಸ ಮಾಡಲು ನಿಮ್ಮ ದೇಹಕ್ಕೆ ಶಕ್ತಿ ಅವಶ್ಯಕತೆ ಹೆಚ್ಚಿದೆ. ಈ ಹಿನ್ನೆಲೆ ದೇಹಕ್ಕೆ ಅಗತ್ಯವಾದ ಕ್ಯಾಲೋರಿ ಮತ್ತು ಅವಶ್ಯ ಪೋಷಕಾಂಶಗಳು ಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ನೀರಿನಾಂಶ ಮರೆಯದಿರಿ: ದೇಹದ ತೂಕ ಕಡಿಮೆಯಾಗುವುದು ಕೇವಲ ಬೆವರು ಸುರಿದಾಗ ಮಾತ್ರ ಎಂಬುದನ್ನು ತಿಳಿಯಬೇಡಿ. ದೇಹಕ್ಕೆ ಅಗತ್ಯ ಪ್ರಮಾಣದ ನೀರು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಕ್ಯಾಲೋರಿಯ ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್​ ಮತ್ತು ರವೆ ಗಂಜಿಯಂತಹ ಪದಾರ್ಥಗಳನ್ನು ಸೇವಿಸಿ. ಇದು ದೇಹಕ್ಕೆ ತಕ್ಷಣವಾದ ಶಕ್ತಿ ನೀಡುತ್ತದೆ. ಇದನ್ನು ಆಗಾಗ್ಗೆ ತೆಗೆದುಕೊಳ್ಳಬೇಕು ಎಂಬುದನ್ನು ಮರೆಯಬೇಡಿ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಶಕ್ತಿಯೂ ಕುಸಿಯುತ್ತದೆ.

ದೇಹಕ್ಕೆ ಬೇಕು ಪ್ರೋಟಿನ್​: ಪ್ರೋಟಿನ್​ ಕೂಡ ದೇಹಕ್ಕೆ ಅವಶ್ಯವಾಗಿದೆ. ಇದು ಕಡಿಮೆಯಾದರೆ ಆಲಸ್ಯವೂ ಹೆಚ್ಚಾಗುತ್ತದೆ. ಇದರ ನಿವಾರಣೆಗೆ ದೇಹಕ್ಕೆ ಪ್ರೋಟಿನ್​ ಅತ್ಯವಶ್ಯಕವಾಗಿದೆ.

ಊಟ ತಪ್ಪಿಸುವುದು ಮಾರ್ಗವಲ್ಲ: ನೀವು ತಿನ್ನುವುದು ನಿಲ್ಲಿಸಿದಾಕ್ಷಣ ನೀವು ತೂಕ ಕಳೆದುಕೊಳ್ಳುತ್ತೀರಾ ಎಂಬುದು ಮಿಥ್ಯ ಎಂಬುದನ್ನು ಮರೆಯಬೇಡಿ. ಇದಕ್ಕೆ ಶಕ್ತಿ ತರಬೇತಿ ಮುಂತಾದವುಗಳು ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದ ಆಹಾರವನ್ನು ಒದಗಿಸುವಾಗ, ಕ್ಯಾಲೋರಿಗಳು ಕಡಿಮೆಯಾಗುವುದು ಮಾತ್ರವಲ್ಲ, ಮನಸ್ಸೂ ಸಂತಸಗೊಳ್ಳುತ್ತದೆ.

ತೂಕ ನಿರ್ವಹಣೆಗೆ ಯಾರನ್ನೂ ಕೂಡ ಫಾಲೋ ಮಾಡಬಾರದು. ಕಾರಣ ಪ್ರತಿಯೊಬ್ಬರ ದೇಹದ ವಿನ್ಯಾಸ ಒಂದು ರೀತಿಯಲ್ಲಿದ್ದು, ಎಲ್ಲರಿಗೂ ಆಗುವುದು ನಿಮಗೂ ಆಗುತ್ತದೆ ಎಂಬ ಕಲ್ಪನೆ ಬೇಡ. ಪ್ರತಿಯೊಬ್ಬರ ದೇಹ ಕೂಡ ವೈಶಿಷ್ಟ್ಯವಾಗಿದೆ. ನಿಮ್ಮ ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ ಎಷ್ಟು ಪ್ರಮಾಣದ ಆಹಾರ ಮತ್ತು ದೈಹಿಕ ಚಟುವಟಿಕೆ ಬೇಕು ಎಂಬುದನ್ನು ಅರಿಯುವುದು ಕೂಡ ಅತ್ಯವಶ್ಯಕವಾಗಿದೆ. ಅದರ ಅನುಸಾರವಾಗಿ ನೀವು ಆಹಾರ ಪದ್ದತಿ ರೂಢಿಸಿಕೊಂಡಾಗ ಸುಲಭವಾಗಿ ತೂಕವನ್ನು ಇಳಿಸಬಹುದಾಗಿದೆ.

ಇದನ್ನೂ ಓದಿ: ತಿನ್ನುವ ಪ್ರೋಟಿನ್​ ಬೆಸ್ಟೇ​ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.