ETV Bharat / sukhibhava

3ಗಂಟೆಗಿಂತ ಹೆಚ್ಚು ಸಮಯ ಮೊಬೈಲ್​ ವೀಕ್ಷಣೆ.. ಹದಿ ಹರೆಯದ ಮಕ್ಕಳನ್ನು ಕಾಡುತ್ತದೆ ಬೆನ್ನು ನೋವು - ಕೂರುವ ಭಂಗಿಯಿಂದ ಬೆನ್ನು ನೋವು

ಮೂರು ಗಂಟೆಗಳಿಗಿಂತತಲೂ ಹೆಚ್ಚು ಕಾಲ ಸ್ಮಾರ್ಟ್​ಫೋನ್​ ವೀಕ್ಷಿಸುವ ಮಕ್ಕಳು ಬೆನ್ನು ಹುರಿ ಅಪಾಯವನ್ನು ಹೊಂದುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

Looking at mobile phones for more than 3 hours causes back pain in teenagers

author img

By

Published : Apr 8, 2023, 4:17 PM IST

ವಾಷಿಂಗ್ಟನ್​: ಇಂದು ಹದಿ ಹರೆಯದ ಮಕ್ಕಳ ಅತಿ ಹೆಚ್ಚು ಕಾಲವನ್ನು ಸ್ಮಾರ್ಟ್​ಫೋನ್​ನೊಂದಿಗೆ ಕಳೆಯುತ್ತಿದ್ದಾರೆ. ಈ ವೇಳೆ ಅವರು ಕೂರುವ ಭಂಗಿಯಿಂದ ಬೆನ್ನು ನೋವು ಮತ್ತಿತರ ಸಮಸ್ಯೆಗೆ ಗುರಿಯಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಎಫ್​ಎಪಿಇಎಸ್​ಪಿ ಧನ ಸಹಾಯದಿಂದ ಈ ಅಧ್ಯಯನ ನಡೆಸಲಾಗಿದೆ. ಈ ಕುರಿತು ಸೈಂಟಿಫಿಕ್​ ಜರ್ನಲ್​ ಹೆಲ್ತ್​ಕೇರ್​ನಲ್ಲಿ ಪ್ರಕಟವಾಗಿದೆ. ಮೊಬೈಲ್​ ವೀಕ್ಷಣೆಯ ಭಂಗಿ ಬೆನ್ನು ಮೂಳೆ ಅಪಾಯಕ್ಕೆ ಗುರಿ ಮಾಡುತ್ತದೆ. ಉದಾಹರಣೆಗೆ ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್​ ವೀಕ್ಷಣೆ ಮಾಡುವುದರಿಂದ ಕಣ್ಣುಗಳು ಮತ್ತು ಮಲಗುವ ಭಂಗಿ ಮೇಲೆ ಪರಿಣಾಮ ಬೀರುತ್ತದೆ.

ಎದೆಗೂಡಿನ​ ಬೆನ್ನು ಹುರಿ ನೋವಿನ (ಟಿಎಸ್​ಸಿ) ಮೇಲೆ ಈ ಅಧ್ಯಯನ ಗುರಿಯಾಗಿಸಲಾಗಿದೆ. ಈ ಎದೆಗೂಡಿನ ಬೆನ್ನು ಹುರಿ ಎದೆಯ ಹಿಂದೆ ಇರುತ್ತದೆ. ಇದು ಭಜದ ಮೂಳೆ ಮತ್ತು ಕತ್ತಿನ ಕೆಳಗಿನಿಂದ ಸೊಂಟದ ಬೆನ್ನುಮೂಳೆಯ ಆರಂಭದವರೆಗೆ ವಿಸ್ತರಿಸುತ್ತದೆ. ಈ ಅಧ್ಯಯನಕ್ಕಾಗಿ ಸಾವೊ ಪಾಲೊ ರಾಜ್ಯದ ಮಧ್ಯ ವಯಸ್ಸಿನ ಮಕ್ಕಳ ಮೇಲೆ ಅಂದರೆ 14 ರಿಂದ 18 ವರ್ಷದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸುಮಾರು 1,628 ಮಕ್ಕಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, 2018ರಲ್ಲಿ 1,393 ಮಂದಿ ಪ್ರಶ್ನಾವಳಿಗಳನ್ನು ಪೂರ್ಣ ಮಾಡಿದ್ದಾರೆ. ವಿಶ್ಲೇಷಣೆಯಲ್ಲಿ ಒಂದು ವರ್ಷ ಶೇ 38.4ರಷ್ಟು ಹರಡುವಿಕೆ ಮತ್ತು ಒಂದು ವರ್ಷ 10.1ರಷ್ಟು ಘಟನೆಗಳಲ್ಲಿ ಭಾರ ಗಣನೆಗೆ ಬಂದಿದೆ. ಅದರಲ್ಲೂ ಹುಡುಗರಿಗಿಂತ ಹುಡುಗಿಯರು ಹೆಚ್ಚು ಪರಿಣಾಮಕ್ಕೆ ಗುರಿಯಾಗಿದ್ದಾರೆ.

ಅಪಾಯದ ಅಂಶ: ಜಗತ್ತಿನಾದ್ಯಂತ ಟಿಎಸ್​ಬಿ ಎಂಬುದು ವಿಭಿನ್ನ ವಯೋಮಾನದ ಗುಂಪಿನವರಿಗೆ ಸಾಮಾನ್ಯವಾಗಿದೆ. ಇದು ವಯಸ್ಕರಲ್ಲಿ ಶೇ 15ರಿಂದ 35 ರಷ್ಟು ಹರಡಿದರೆ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಶೇ 13ರಿಂದ 35ರಷ್ಟು ಹರಡುತ್ತದೆ. ಕೋವಿಡ್​ ಸಮಯದಲ್ಲಿ ಹೆಚ್ಚಿನ ಎಲೆಕ್ಟ್ರಾನಿಕ್​ ಸಾಧನಗಳ ಬಳಕೆ ಈ ಸಮಸ್ಯೆಯನ್ನು ಹೆಚ್ಚಿಸಿದೆ. ಟಿಎಸ್​ಪಿ ದೈಹಿಕ, ಶಾರೀರಿಕ, ಮಾನಸಿಕ ಮತ್ತು ನಡವಳಿಕೆ ಅಪಾಯ ಹೊಂದಿದೆ. ಬೆನ್ನುಮೂಳೆಯ ಆರೋಗ್ಯದ ಮೇಲೆ ದೈಹಿಕ ಚಟುವಟಿಕೆ, ಕುಳಿತುಕೊಳ್ಳುವ ಅಭ್ಯಾಸಗಳು ಮತ್ತು ಮಾನಸಿಕ ಅಸ್ವಸ್ಥತೆಗಳ ಪರಿಣಾಮ ಹೊಂದಿದೆ.

ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರೊಂದಿಗೆ ಈ ಅಧ್ಯಯನವನ್ನು ಬಳಸಿಕೊಂಡು ಮಾಹಿತಿ ನೀಡಬಹುದು ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ಅಲ್ಬರ್ಟೊ ಡೆ ವಿಟ್ಟಾ ತಿಳಿಸಿದ್ದಾರೆ. ಮಕ್ಕಳ ಆರೋಗ್ಯ ಶಿಕ್ಷಣ ಸೇರಿದಂತೆ ವೈಯಕ್ತಿಕ ಮತ್ತು ಸಾಮೂದಾಯಿಕ ಆರೋಗ್ಯದ ಅಪಾಯಗಳನ್ನು ಗುರುತಿಸುವಲ್ಲಿ ಶಾಲೆಗಳ ಪಾತ್ರವೂ ಮುಖ್ಯವಾಗುತ್ತದೆ. ಈ ಹಿನ್ನೆಲೆ ಆರೋಗ್ಯ ಕಾಳಜಿ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅವಶ್ಯ ಎಂದು ಸಲಹೆ ನೀಡಲಾಗಿದೆ.

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಟಿಎಸ್​ಪಿ ಅಪಾಯಕಾರಿ ಅಂಶಗಳ ಕುರಿತು ಮಾಹಿತಿ ನೀಡುವುದು ಮುಖ್ಯವಾಗಿದೆ ಏಕೆಂದರೆ ಬೆನ್ನುನೋವಿನೊಂದಿಗೆ ಮಕ್ಕಳು ಮತ್ತು ಹದಿಹರೆಯದವರು ಹೆಚ್ಚು ನಿಷ್ಕ್ರಿಯರಾಗಿದ್ದಾರೆ. ಇದರಿಂದ ಅವರ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದ್ದು, ಮಾನಸಿಕ ಸಮಸ್ಯೆ ಹೆಚ್ಚುತ್ತಿದೆ. ಇನ್ನು ಈ ಅಧ್ಯಯನದಲ್ಲಿ ಬೆನ್ನು ಮತ್ತು ಕುತ್ತಿಗೆ ನೋವಿಗಿಂತ ಟಿಎಸ್​ಪಿ ಅಧ್ಯಯನಗಳನ್ನು ನಡೆಸಲಾಗಿದೆ.

ಇದನ್ನೂ ಓದಿ: ಮಕ್ಕಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಬೇಡಿ; ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.