ETV Bharat / sukhibhava

ಒಂಟಿತನ ಜಾಗತಿಕ ಆರೋಗ್ಯಕ್ಕೆ ಒಡ್ಡುತ್ತಿದೆ ಅತಿದೊಡ್ಡ ಬೆದರಿಕೆ; ವಿಶ್ವ ಆರೋಗ್ಯ ಸಂಸ್ಥೆ - ಒಂಟಿತನ ಎಂಬುದು ಗಂಭೀರ ಆರೋಗ್ಯ ಸಮಸ್ಯೆ

ಜಾಗತಿಕವಾಗಿ ಸಾಮಾಜಿಕ ಪ್ರತ್ಯೇಕೀಕರಣ ಮತ್ತು ಒಂಟಿತನ ಎಂಬುದು ಗಂಭೀರ ಆರೋಗ್ಯ ಸಮಸ್ಯೆ ಆಗಿದೆ

Loneliness is a global health threat
Loneliness is a global health threat
author img

By ETV Bharat Karnataka Team

Published : Nov 17, 2023, 4:53 PM IST

ಜೀನಿವಾ: ಒಂಟಿತನ ಎಂಬುದು ಒತ್ತಡದಾಯಕ ಆರೋಗ್ಯ ಬೆದರಿಕೆ ಆಗಿದೆ. ಇದು ಪ್ರಪಂಚದಾದ್ಯಂತ ಯುವಜನತೆ ಮತ್ತು ವಯಸ್ಕರಲ್ಲಿ ಮಾನಸಿಕ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಸಾಮಾಜಿಕ ಪ್ರತ್ಯೇಕೀಕರಣ ಅಂದರೆ ಸಾಮಾಜಿ ಸಂಪರ್ಕ ಇಲ್ಲದೇ ಇರುವುದು, ಒಂಟಿತನ ಹಾಗೂ ಸಂಪರ್ಕ ಇಲ್ಲದಿರುವ ಸಾಮಾಜಿಕ ನೋವಿನ ವ್ಯಾಪಕತೆ ಹೊಂದಿದೆ. ಈ ಪ್ರತ್ಯೇಕೀಕರಣ ಮತ್ತು ಒಂಟಿತನವೂ ಪ್ರಾಥಮಿಕವಾಗಿ ಹೆಚ್ಚಿನ ಆದಾಯ ಹೊಂದಿರುವ ಹಿರಿಯ ನಾಯಕರಲ್ಲಿ ಹೆಚ್ಚಾಗಿ ಪರಿಣಾಮ ಹೊಂದಿದೆ. ಇದು ಅವರ ಆರೋಗ್ಯ ಜಾಗತಿಕವಾಗಿ ಎಲ್ಲ ವಯೋಮಾನದ ಗುಂಪಿನವರ ಮೇಲೆ ಪರಿಣಾಮ ಹೊಂದಿದೆ.

ಸಂಶೋಧನೆ ಪ್ರಕಾರ, ಸಾಮಾಜಿಕ ಪ್ರತ್ಯೇಕೀಕರಣ ಎಂಬುದು ನಾಲ್ವರು ಹಿರಿಯರಲ್ಲಿ ಒಬ್ಬರಲ್ಲಿ ಸಾಮಾನ್ಯವಾಗಿದೆ. ಫ್ರೌಡವಯಸ್ಕರಲ್ಲಿ ಶೇ 15 ಮಂದಿ ಈ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಆದಾಗ್ಯೂ ಈ ಅಂಕಿ- ಅಂಶಗಳು ಕಡಿಮೆ ಅಂದಾಜುಗಳನ್ನು ಒಳಗೊಂಡಿದೆ.

ಈ ಘಟನೆ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯ ಆರೋಗ್ಯ ಮಂಡಳಿ, ಸಾಮಾಜಿಕ ಸಂಪರ್ಕದ ಹೊಸ ಆಯೋಗವನ್ನು ಘೋಷಿಸಿದೆ. ಇದು ಸಾಮಾಜಿಕ ಸಂಪರ್ಕವನ್ನು ಪ್ರಾದಾನ್ಯತೆ ಮೇಲೆ ಪ್ರೋತ್ಸಾಹಿಸುತ್ತದೆ. ಎಲ್ಲಾ ಆದಾಯದ ದೇಶಗಳಲ್ಲಿ ಈ ಸಂಬಂಧದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಇದು ಹೆಚ್ಚು ಉತ್ತೇಜನ ನೀಡುತ್ತಿದೆ.

ಜಾಗತಿಕವಾಗಿ ಸಾಮಾಜಿಕ ಪ್ರತ್ಯೇಕೀಕರಣ ಮತ್ತು ಒಂಟಿತನ ಎಂಬುದು ಗಂಭೀರ ಆರೋಗ್ಯ ಸಮಸ್ಯೆ ಆಗಿದೆ. ಬಲವಾದ ಸಾಮಾಜಿಕ ಸಂಪರ್ಕ ಹೊಂದಿಲ್ಲದ ಜನರು ಇದರ ಹೆಚ್ಚಿನ ಅಪಾಯವನ್ನು ಹೊಂದಿದ್ದು, ಇದು ಅವರಲ್ಲಿ ಪಾರ್ಶ್ವವಾಯು, ಆತಂಕ, ಡೆಮನ್ಶಿಯ, ಖಿನ್ನತೆ, ಆತ್ಮಹತ್ಯೆ ಮತ್ತು ಇತರ ಅಪಾಯಕ್ಕೆ ಕಾರಣವಾಗುತ್ತದೆ ಎಂದು ಡಬ್ಲ್ಯೂಎಚ್​ಒ ಪ್ರಧಾನ ನಿರ್ದೇಶಕರಾದ ಡಾ ಗೆಬ್ರಿಯಸೆಸ್​ ತಿಳಿಸಿದ್ದಾರೆ.

ಡಬ್ಲ್ಯೂಎಚ್​ಒ ಆಯೋಗವೂ ಜಾಗತಿಕ ಆರೋಗ್ಯ ಆದ್ಯತೆ ಅನುಸಾರ ಸಾಮಾಜಿಕ ಸಂಪರ್ಕ ಸ್ಥಾಪನೆ ಹಾಗೂ ಭರವಸೆಯ ಮಧ್ಯಸ್ಥಿಕೆಯ ಹಂಚಿಕೊಳ್ಳಲು ಸಹಾಯ ಮಾಡುತ್ತದೆ. ಅಮೆರಿಕದ​ ಸರ್ಜನ್​ ಜನರಲ್​ ಡಾ ವಿವೇಕ್​ ಮೂರ್ತಿ ಮತ್ತು ಆಫ್ರಿಕನ್​ ಯುನಿಯನ್​ ಯುವ​ ರಾಯಭಾರಿ ಚಿಡೊ ಮ್ಪೆಂಬ ನೇತೃತ್ವದಲ್ಲಿ 11 ನೀತಿ ನಿರೂಪಕರು, ಚಿಂತಕರು ಮತ್ತು ಅಡ್ವೊಕೇಟ್​​ಗಳು ಆಯೋಗದಲ್ಲಿ ಇದ್ದಾರೆ.

ಸಾಮಾಜಿಕ ಸಂಪರ್ಕವೂ ಧೂಮಪಾನ, ಅಧಿಕ ಮದ್ಯ ಸೇವನೆ, ದೈಹಿಕ ಚಟುವಟಿಕೆ ಕೊರತೆ, ಸ್ಥೂಲಕಾಲ ಮತ್ತು ವಾಯು ಮಾಲಿನ್ಯಕ್ಕಿಂತ ಹೆಚ್ಚಿನ ಅಪಾಯವನ್ನು ಹೊಂದಿದೆ. ಸಾಮಾಜಿಕ ಪ್ರತ್ಯೇಕೀಕರಣವೂ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಧ್ಯಯನಗಳು ತೋರಿಸುವಂತೆ ಆತಂಕ ಮತ್ತು ಖಿನ್ನತೆ ಹೃದಯ ರಕ್ತನಾಳದ ಅಪಾಯವನ್ನು ಶೇ 30ರಷ್ಟು ಹೆಚ್ಚಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಚಿವಾಲಯದ ಬೆಂಬಲದೊಂದಿಗೆ ಸಾಮಾಜಿಕ ಸಂಪರ್ಕದ ಆಯೋಗವು ತನ್ನ ಮೊದಲ ನಾಯಕತ್ವ ಮಟ್ಟದ ಸಭೆಯನ್ನು ಡಿಸೆಂಬರ್ 6 ರಿಂದ 8 ರವರೆಗೆ ನಡೆಸಲಿದೆ. (ಐಎಎನ್​ಎಸ್​)

ಇದನ್ನೂ ಓದಿ: ಒಂಟಿತನ ಖಿನ್ನತೆಗೆ ಕಾರಣವಾಗುತ್ತಿದೆ ಹಿರಿಯರಲ್ಲಿನ ಜೀರ್ಣಕ್ರಿಯೆ ಸಮಸ್ಯೆ : ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.