ETV Bharat / sukhibhava

ಲಿವರ್​ ಸಿರೋಸಿಸ್​: ಕೊನೆಯ ಹಂತದ ಯಕೃತ್​ ಸಮಸ್ಯೆಗೆ ಕಾರಣವೇನು? - ಯಕೃತ್​ ಸಮಸ್ಯೆಯ ಕಡೆಯ ಹಂತ ಈ ಸಿರೋಸಿಸ್​

ಲಿವರ್​ ಸಿರೋಸಿಸ್ ಅದು ಯಕೃತ್ತಿನ ಕಾಯಿಲೆಯ ಕೊನೆಯ ಹಂತ ಎಂದು ಪರಿಗಣಿಸಲಾಗುತ್ತದೆ. ಜಾಗತಿಕವಾಗಿ ಶೇ 20ರಷ್ಟು ಮಂದಿ ಈ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

Liver Cirrhosis: What Causes End-Stage Liver Problems?

author img

By

Published : Apr 18, 2023, 5:26 PM IST

ನವದೆಹಲಿ: ಲಿವರ್​ ಸಿರೋಸಿಸ್​ ಗಂಭೀರ ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಜಾಗತಿಕವಾಗಿ ಪ್ರತಿ ವರ್ಷ ಶೇ 20ರಷ್ಟು ಮಂದಿ ಇದಕ್ಕೆ ತುತ್ತಾಗುತ್ತಿದ್ದಾರೆ. ಯಕೃತ್​ ಸಮಸ್ಯೆಯ ಕಡೆಯ ಹಂತ ಈ ಸಿರೋಸಿಸ್​ ಆಗಿದೆ. ಯಕೃತ್​​ಗೆ ಆದ ಅನೇಕ ಗಾಯಗಳಿಂದ ಇದು ಸಂಭವಿಸುತ್ತದೆ. ಕೆಲವು ಲಿವರ್​ ಸಮಸ್ಯೆ ಮತ್ತು ಪರಿಸ್ಥಿತಿಗಳು ಆಲ್ಕೋಹಾಲ್​ ಸೇವನೆ, ದೀರ್ಘಾವಧಿ ಹೆಪೆಟೈಟಿಸ್​, ಫ್ಯಾಟಿ ಲಿವರ್​ ಅಥವಾ ದೀರ್ಘಾವಧಿ ಹೆಪೊಟೊಕ್ಸಿಕ್​ ಔಷಧದಿಂದ ಉಂಟಾಗುತ್ತದೆ. ನಾಲ್ಕರಲ್ಲಿ ಒಬ್ಬ ಭಾರತೀಯರಲ್ಲಿ ಬೊಜ್ಜು ಅಥವಾ ಸ್ಥೂಲಕಾಲದಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇದರ ಹೊರತಾಗಿ ಆಲ್ಕೋಹಾಲ್​ ಸೇವನೆ ಕೂಡ ಈ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಹೇಗೆ ಸಂಭವಿಸುತ್ತದೆ?: ಯಕೃತ್​ ಏನಾದರೂ ಸಮಸ್ಯೆ ಆದರೆ, ಅದು ತನ್ನತಾನೇ ಸರಿ ಮಾಡಿಕೊಳ್ಳುತ್ತದೆ. ಆದರೆ ಸಿರೋಸಿಸ್​ ಸಮಸ್ಯೆಗೆ ಅಧಿಕ ಆಲ್ಕೋಹಾಲ್​ ಸೇವನೆ, ದೀರ್ಘಕಾಲದ ಹೆಪಟೈಟಿಸ್​ ಮತ್ತಿತ್ತರ ಕಾರಣವಾಗುತ್ತದೆ. ಯಕೃತು ಸ್ವಂತ ಸರಿಪಡಿಸಿಕೊಳ್ಳುವ ಸಮಯದಲ್ಲಿ ಗಾಯಗಳಾಗುತ್ತದೆ. ಯಾವಾಗ ಹೆಚ್ಚು ಹೆಚ್ಚು ಗಾಯವಾಗುತ್ತದೆ ಆಗ ಸಿರೋಸಿಸ್​ ಗಂಭೀರವಾಗುತ್ತದೆ.

ಇದರಿಂದ ಯಕೃತ್​​ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ. ಸುಧಾರಿತ ಲಿವರ್​ ಸಿರೋಸಿಸ್​ಗೆ ಹೆಚ್ಚಿನ ಚಿಕಿತ್ಸೆ ತಕ್ಷಣಕ್ಕೆ ಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಪ್ರಾಣಕ್ಕೆ ಅಪಾಯವಾಗುತ್ತದೆ. ಈ ಸಮಸ್ಯೆಗೆ ಅನೇಕ ಬಾರಿ ಲಿವರ್​ ಟ್ರಾನ್​ಪ್ಲಾನ್​ ಪರಿಹಾರವಾಗುತ್ತದೆ. ಆರೋಗ್ಯಯುತ ಡೋನರ್​ ಸಹಾಯದಿಂದ ಇದನ್ನು ಮಾಡಬಹುದು. ಲಿವರ್​ ಟ್ರಾನ್​ಪ್ಲಾಟ್​ಗಳಿಗೆ ಪ್ರಮುಖ ಕಾರಣವೇ ಈ ಲಿವರ್​ ಸಿರೋಸಿಸ್​ ಆಗಿದೆ.

ಲಿವರ್​ ಸಿರೋಸಿಸ್​ನ ಅಪಾಯದ ಅಂಶ: ಅಧಿಕ ಮದ್ಯ ಸೇವನೆ ಹಾಗೂ ಸ್ಥೂಲಕಾಲ ಅಥವಾ ತೂಕ ಹೆಚ್ಚಳ ಕೂಡ ಸಿರೋಸಿಸ್​ ಅಪಾಯಕ್ಕೆ ಕಾರಣವಾಗುತ್ತದೆ. ಜೊತೆಗೆ ಫ್ಯಾಟಿ ಲಿವರ್​ ಡಿಸೀಸ್​ ಮತ್ತು ಆಲ್ಕೋ ಹಾಲ್​ ಹೊರತಾದ ಸ್ಟಿಟಿಹೆಪಟೈಟಿಸ್​ ಕೂಡ ಪರಿಣಾಮ ಬೀರುತ್ತದೆ. ಸ್ಥೂಲಕಾಯದ ಜೊತೆಗೆ ದೀರ್ಘಾವಧಿಯ ಹೆಪಟೈಟಿಸ್ ಬಿ ಮತ್ತು ಸಿ ವೈರಸ್​ ಸೋಂಕು ​ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ.

ಲಕ್ಷಣಗಳು: ಯಕೃತ್​ ಸಂಪೂರ್ಣವಾಗಿ ಹಾಳಾಗುವವರೆಗೂ ಇದರ ಗುಣಲಕ್ಷಣಗಳು ಪತ್ತೆ ಆಗುವುದಿಲ್ಲ. ಇದು ಸಂಭವಿಸಿದಾಗ ಹಸಿವು ಆಗದಿರುವುದು, ಆಯಾಸ, ಚರ್ಮ ತುರಿಕೆ, ತಲೆ ನೋವು, ತೂಕ ನಷ್ಟ, ಕಾಲಿನಲ್ಲಿ ಊತ, ರಕ್ತಸ್ರಾವ ಸಂಭವಿಸುತ್ತದೆ. ಇದರ ಹೊರತಾಗಿ ಹೊಟ್ಟೆಯಲ್ಲಿ ದ್ರವ ಸಂಗ್ರಹ, ಚರ್ಮ ಮತ್ತು ಕಣ್ಣು ಹಳದಿಗಟ್ಟುವಿಕೆಯ ಜಾಂಡಿಸ್​, ಅಂಗೈನಲ್ಲಿ ರೆಡ್​ನೆಸ್​, ಉಗುರಗಳಲ್ಲಿ ಬಿರಿತ ಕಾಣುತ್ತದೆ. ಲಿವರ್​ ಸಿರೋಸಿಸ್​ನಿಂದ ಹೈಪರ್​ ಟೆನ್ಷನ್​ ಕೂಡ ಕಾರಣವಾಗುತ್ತದೆ.

ರೋಗ ನಿರ್ಣಯ: ಸಿಟಿ ಸ್ಕ್ಯಾನ್​, ಅಲ್ಟ್ರಾ ಸೌಂಡ್​ ಅಥವಾ ಎಂಆರ್​ಐ ಮೂಲಕ ಈ ಲಿವರ್​ ಸಿರೋಸಿಸ್​ ರೋಗ ನಿರ್ಣಯ ಮಾಡಬಹುದು. ಕೆಲವು ಪ್ರಕರಣದಲ್ಲಿ, ಸೂಜಿ ಬಯಪ್ಸಿಸ್​ ಮೂಲಕ ಇದನ್ನು ಪತ್ತೆ ಮಾಡಬಹುದು. ಎಲ್​ಸ್ಟೊಗ್ರಾಫಿ ಮೂಲಕ ಕೂಡ ಇದರ ಪತ್ತೆ ಮಾಡಬಹುದು. ಇದನ್ನು ಎಂಆರ್​ಐ ಮತ್ತು ಅಲ್ಟ್ರಾ ಸೌಂಡ್​ ಮೂಲಕ ಪತ್ತೆ ಮಾಡಬಹುದು. ಲಿವರ್​ ಫೈಬ್ರೊಸಿಸ್​ ಮೂಲಕವೂ ಲಿವರ್​ ಬಯಪ್ಸಿ ನಡೆಸಬಹುದು. ಇದು ವೆಚ್ಚದಾಯಕವಾಗಿದ್ದು, ರೋಗಿಯ ಉಳಿಕೆ ಬಗ್ಗೆ ಯಾವುದೇ ಖಚಿತತೆ ಒದಗಿಸುವುದಿಲ್ಲ.

ಸಂಶೋಧನೆ ಪ್ರಕಾರ, ಸಿರೋಸಿಸ್​ ಶಮನಕ್ಕೆ ಯಾವುದೇ ಪರಿಹಾರಗಳಿಲ್ಲ. ಆದರೆ, ಚಿಕಿತ್ಸೆ ಮತ್ತು ಜೀವನ ಶೈಲಿ ಮೂಲಕ ಇದರ ಮೇಲ್ವಿಚಾರಣೆ ನಡೆಸಬಹುದು. ಅನೇಕ ರೋಗಿಗಳಿಗೆ ಲಿವರ್​ ಟ್ರಾನ್ಸ್​ಪ್ಲಾನಟೇಷನ್​ ಆಯ್ಕೆಯಾದರೂ ಇದು ಕೂಡ ಕೆಲವು ತೊಡಕನ್ನು ಹೊಂದಿದೆ.

ಯಾವುದೇ ವ್ಯಕ್ತಿಯ ಜೀವನದ ಮೇಲೆ ಈ ಲಿವರ್​ ಸಿರೋಸಿಸ್​ ಗಂಭೀರವಾದ ಪರಿಣಾಮ ಬೀರುತ್ತದೆ. ಸುಧಾರಿತ ವೈದ್ಯಕೀಯ ವಿಜ್ಞಾನ ಮತ್ತು ರೋಗ ನಿರ್ಣಯ ತಂತ್ರಜ್ಞಾನದಿಂದ ಇದನ್ನು ಸುಲಭವಾಗಿ ಪತ್ತೆ ಮಾಡಿ, ಚಿಕಿತ್ಸೆ ನೀಡಬಹುದು. ಲಿವರ್​ ದೇಹದ ಪ್ರಮುಖ ಅಂಗಾಂಶವಾಗಿದ್ದು, ದೇಹದಲ್ಲಿನ ವಿಷವನ್ನು ಹೊರತೆಗೆದು, ಪ್ರಮುಖ ಕಾರ್ಯ ಚಟುವಟಿಕೆ ನಡೆಸಲು ಪ್ರಮುಖವಾಗಿದೆ. ಈ ಹಿನ್ನಲೆ ಈ ಲಿವರ್​ ಕಾಳಜಿ ವಿಷಯವನ್ನು ಅಗತ್ಯವಾಗಿ ಮಾಡಬೇಕಿದೆ.

ಇದನ್ನೂ ಓದಿ: ಕಳಪೆ ಆಹಾರ ಪದ್ಧತಿಗೂ ಟೈಪ್​ 2 ಡಯಾಬಿಟೀಸ್‌ಗೂ ಇದೆ ಸಂಬಂಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.