ನಮ್ಮ ದೇಹದ ಅತಿ ಮುಖ್ಯವಾದ ಅಂಗ ಲಿವರ್ (ಯಕೃತ್). ಜೀರ್ಣ ಕ್ರಿಯೆ, ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಯಕೃತ್ ನಿರ್ವಹಿಸುತ್ತದೆ. ಕಾರಣಾಂತರಗಳಿಂದ ಯಕೃತ್ತಿಗೆ ಹಾನಿಯಾಗಿ ಅದು ತನ್ನ ಕೆಲಸ ಕಾರ್ಯವನ್ನು ಮಾಡಲು ಸಾಧ್ಯವಾಗದೇ ಹೋದಲ್ಲಿ ಆ ಪರಿಸ್ಥಿತಿಯನ್ನು ಲಿವರ್ ಸಿರೋಸಿಸ್ ಎಂದು ಕರೆಯಲಾಗುತ್ತದೆ.
Liver cirrhosis: ಲಿವರ್ ಒಂದು ರಾಸಾಯನಿಕ ಕಾರ್ಖಾನೆಯಾಗಿದೆ. ಈ ಕಾರ್ಖಾನೆ ಸರಿಯಾಗಿ ಕೆಲಸ ಮಾಡಿದರೆ ಮಾತ್ರ ನಮ್ಮ ಉಳಿವು ಸಾಧ್ಯ. ಇದಕ್ಕೆ ವೈರಸ್, ಹೆಪಟೈಟಿಸ್ ಮತ್ತು ಇತರ ರೀತಿಯ ರೋಗಗಳು ದಾಳಿ ಮಾಡಿದ್ರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಸಹ ಲಿವರ್ಗೆ ದೊಡ್ಡ ಅಪಾಯವನ್ನುಂಟು ಮಾಡುತ್ತವೆ. ಲಿವರ್ ಸಿರೋಸಿಸ್ನಿಂದ ಯಕೃತ್ತಿನ ಅಂಗಾಂಶವು ಸಿಮೆಂಟ್ ರೀತಿ ಗಟ್ಟಿಯಾಗುತ್ತದೆ. ಮಾರಣಾಂತಿಕ ಲಿವರ್ ಸಿರೋಸಿಸ್ ಬಗ್ಗೆ ಪ್ರಖ್ಯಾತ ವೈದ್ಯರು ಏನು ಹೇಳುತ್ತಾರೆ ಅಂದ್ರೆ.
Liver cirrhosis symptoms: ಯಕೃತ್ತು ತುಂಬಾ ಮೃದುವಾದ ಅಂಗವಾಗಿದೆ. ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸದಿಂದಾಗಿ ಯಕೃತ್ತು ಕ್ರಮೇಣವಾಗಿ ಊದಿಕೊಳ್ಳುತ್ತದೆ. ಬಳಿಕ ಸೋಂಕಿನೊಂದಿಗೆ ಇದು ಸಿಮೆಂಟ್ನಂತೆಯೇ ಗಟ್ಟಿಯಾಗುತ್ತದೆ. ಇದರಿಂದಾಗಿ ರಕ್ತ ಕಣಗಳಿಗೆ ಹಾನಿಯಾಗುತ್ತದೆ. ಕಾಲುಗಳ ಊತ, ರಕ್ತ ವಾಂತಿ ಸಂಭವಿಸುತ್ತವೆ. ಲಿವರ್ ನಿರ್ವಹಿಸುವ 500 ವಿಭಿನ್ನ ಕಾರ್ಯಗಳನ್ನು ನಿಲ್ಲಿಸುವುದರಿಂದ ಅದು ಮಾರಕವಾಗುತ್ತದೆ. ಹೆಪಟೈಟಿಸ್ ಎ, ಬಿ, ಸಿ ವೈರಸ್‌ಗಳಿಂದಲೂ ಇದೇ ರೀತಿಯ ಅಪಾಯ ಉಂಟಾಗುತ್ತದೆ. ಆದ್ದರಿಂದ, ಧೂಮಪಾನ ಮತ್ತು ಮದ್ಯಪಾನವನ್ನು ತ್ಯಜಿಸಲು ವೈದ್ಯರು ಸಲಹೆ ನೀಡುತ್ತಾರೆ.
ಲಿವರ್ ಸಿರೋಸಿಸ್ ಚಿಕಿತ್ಸೆ ಹೇಗೆ?: ಲಿವರ್ ಸಮಸ್ಯೆ ಎಷ್ಟರಮಟ್ಟಿಗಿದೆ ಎಂದು ತಿಳಿಯಬೇಕು. ಇದು ಸುರಕ್ಷಿತ ಸ್ಥಿತಿಯಲ್ಲಿದೆಯೇ ಎಂದು ಪರಿಶೀಲಿಸಿ. ಸಿರೋಸಿಸ್ ನಂತರ ಏನು ಮಾಡಲಾಗುವುದಿಲ್ಲ. ಈ ಕಾಯಿಲೆ ಬರುವ ಮುನ್ನ ಮುನ್ನೆಚ್ಚರಿಕೆ ವಹಿಸಿ. ಔಷಧಗಳನ್ನು ಬಳಸಬೇಕು. ವ್ಯಾಯಾಮ ಮಾಡಬೇಕು. ತೀವ್ರವಾದ ಸಿರೋಸಿಸ್ ನಂತರ ಯಕೃತ್ತನ್ನು ಕಸಿ ಮಾಡಬೇಕು. 80 ರಷ್ಟು ಯಕೃತ್ತಿನ ಹಾನಿಯನ್ನು ಸರಿಪಡಿಸಬಹುದು. ಆರಂಭಿಕ ಪತ್ತೆ ಯಾವುದೇ ಸಮಸ್ಯೆಯನ್ನು ತಡೆಯಬಹುದಾಗಿದೆ.
ಓದಿ: ಮೆದುಳನ್ನೇ ತಿನ್ನುವ 'ಅಮೀಬಾ'ಗೆ ವ್ಯಕ್ತಿ ಬಲಿ: ಇಸ್ರೇಲ್‌ನಲ್ಲೊಂದು ಆಘಾತಕಾರಿ ಘಟನೆ