ETV Bharat / sukhibhava

Liver cancer: ಫ್ಯಾಟಿ ಲಿವರ್​ ರೋಗಿಗಳ ನಿಕಟ ಸಂಬಂಧಿಗಳಲ್ಲಿ ಲಿವರ್​ ಕ್ಯಾನ್ಸರ್​; ಅಧ್ಯಯನ - ಯಕೃತ್​ ಕ್ಯಾನ್ಸರ್​ ಮತ್ತು ಯಕೃತ್​

ಇತ್ತೀಚಿನ ದಿನದಲ್ಲಿ ಲಿವರ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಪ್ರಮುಖ ಕಾರಣದಲ್ಲಿ ಎಂಎಎಸ್ಎಲ್ಡಿ ಕೂಡ ಕಾರಣವಾಗಿದೆ

Liver cancer in close relatives of patients with fatty liver

author img

By ETV Bharat Karnataka Team

Published : Sep 9, 2023, 1:51 PM IST

ಚಯಪಚಯನ ಸಂಬಂಧ ಫ್ಯಾಟಿ ಲಿವರ್​ನಂತಹ ಸಮಸ್ಯೆಯನ್ನು ಹೊಂದಿರುವ ರೋಗಿಗಳ ನಿಕಟ ಸಂಬಂಧಿಗಳು ಇಲ್ಲವೇ, ಕುಟುಂಬ ಸದಸ್ಯರು ಯಕೃತ್​ ಕ್ಯಾನ್ಸರ್​ ಮತ್ತು ಯಕೃತ್​ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ರಾಷ್ಟ್ರೀಯ ಅಧ್ಯಯನವನ್ನು ದಿ ಜರ್ನಲ್​ ಆಫ್​ ಹೆಪಟೊಲೊಜಿಯಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ, ಇಂತಹ ಕುಟುಂಬ ಸದಸ್ಯರು ಜೀವನ ಶೈಲಿಯ ಬದಲಾವಣೆಗೆ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ.

ಚಯಾಪಚಯನ ಸಂಬಂಧ ಫ್ಯಾಟಿ ಲಿವರ್ ರೋಗವೂ​ (ಎಂಎಎಸ್​ಎಲ್​ಡಿ) ಲಿವರ್​ ಕ್ಯಾನ್ಸರ್​​ ಅಭಿವೃದ್ಧಿ ಹೊಂದುವ ಮತ್ತು ಸಾವನ್ನಪ್ಪುವ ಅಪಾಯವನ್ನು ಹೊಂದಿರುತ್ತಾರೆ. ಇತ್ತೀಚಿನ ದಿನದಲ್ಲಿ ಲಿವರ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಪ್ರಮುಖ ಕಾರಣದಲ್ಲಿ ಎಂಎಎಸ್ಎಲ್ಡಿ ಕೂಡ ಕಾರಣವಾಗಿದೆ. ಆದಾಗ್ಯೂ ಕರೊನಿಸ್ಕೊ ಸಂಸ್ಥೆಯ ಸಂಶೋಧಕರು ತೋರಿಸಿರುವಂತೆ ಫ್ಯಾಟಿ ಲಿವರ್​ ಸಮಸ್ಯೆ ಹೊಂದಿರುವ ರೋಗಿಗಳ ನಿಕಟ ಸಂಬಂಧಿಗಳಲ್ಲಿ ಲಿವರ್​ ಕ್ಯಾನ್ಸರ್​ ಮತ್ತು ಸುಧಾರಿತ ಲಿವರ್​ ಸಮಸ್ಯೆ ಹೆಚ್ಚಾಗುವ ಅಪಾಯ ಗುರುತಿಸಿದ್ದಾರೆ.

ಮುಂಚೆ ಪತ್ತೆಯಿಂದ ಆಗುವ ಪ್ರಯೋಜನ: ಎಂಎಎಸ್​ಎಲ್​ಡಿ ರೋಗಿಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡುವಂತಿಲ್ಲ ಎಂದು ಸಂಶೋಧನೆ ಸೂಚಿಸಿದೆ ಎಂದು ಅಧ್ಯಯನ ಮೊದಲ ಲೇಖಕ, ಕರೊಲಿನ್ಸಕಾ ಸಂಸ್ಥೆಯ ಫಹಿಮ್​ ಎಬ್ರೊಹಿಮ್​ ತಿಳಿಸಿದ್ದಾರೆ. ರೋಗಿಗಳ ಕುಟುಂಬ ಸದಸ್ಯರಿಗೂ ಜೀವನಶೈಲಿ ಬದಲಾವಣೆಯನ್ನು ಶಿಫಾರಸು ಮಾಡಿದೆ. ನಮ್ಮ ಅಧ್ಯಯನವೂ ಸಲಹೆ ನೀಡುವಂತೆ, ಎಂಎಎಸ್​ಎಲ್​ಡಿ ಪೂರ್ವ ಪತ್ತೆಯಿಂದ ಮೆಟಾಬೊಲಿಕ್​ ಅಪಾಯ ಅಂಶಗಳು ಡಯಾಬಿಟಿಸ್​ ಮೆಲ್ಲಿಟಸ್​​ ಅಪಾಯದ ಅಂಶವನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ.

ಈ ಅಧ್ಯಯನಕ್ಕೆ ಸಂಶೋಧಕರು ಸ್ವೀಡನ್​ನಲ್ಲಿ 1965ರಿಂದ ಇಲ್ಲಿಯವರೆಗೆ ಲಿವರ್​ ಬಯಪ್ಸಿಗೆ ಒಳಗಾದ ರೋಗಿಗಳ ದತ್ತಾಂಶವನ್ನು ಪಡೆದಿದ್ದಾರೆ. ಅವರು ಎಂಎಎಸ್​ಎಲ್​ಡಿ ಸಾಬೀತು ಮಾಡಿದ ಬಯೋಪ್ಸಿಯ 12,,000 ಮಂದಿಯನ್ನು ಪತ್ತೆ ಮಾಡಿದ್ದಾರೆ. ಅಧ್ಯಯನದಲ್ಲಿ ರೋಗಿಯ ಮೊದಲ ಹಂತದ 2,50,000 ನಿಕಟ ಸಂಬಂಧಿಗಳು 57,000 ಪಾರ್ಟರ್​ಗಳ ಅಧ್ಯಯನ ನಡೆಸಿದೆ.

50 ವರ್ಷ ನಡೆಸಿದ ಫಾಲೋಅಪ್​: ಸರಿ ಸುಮಾರು 17.6 ವರ್ಷದ ಫಾಲೋ ಅಪ್​ನಿಂದ 50 ವರ್ಷದವರೆ ರೋಗಿಗಳ ಅಧ್ಯಯನ ನಡೆಸಲಾಗಿದೆ. ಸಂಶೋಧಕರು ಎಂಎಸ್​ಎಲ್​ಡಿ ರೋಗಿಗಳ ಮೊದಲ ಹಂತದ ಸಂಬಂಧಿಗಳಲ್ಲಿ ಶೇ 80ರಷ್ಟು ಲಿವರ್​ ಕ್ಯಾನ್ಸರ್​ ಅಭಿವೃದ್ಧಿ ಹೊಂದುತ್ತಿರುವುದು ಪತ್ತೆ ಮಾಡಿದ್ದಾರೆ. ಆದಾಗ್ಯೂ, ಲಿವರ್​ ಕ್ಯಾನ್ಸರ್​ ಅಪರೂಪದ ಕಾಯಿಲೆ ಆಗಿದೆ. ಇದರ ಸಂಪೂರ್ಣ ಅಪಾಯದ ಮಟ್ಟ 20 ವರ್ಷದಲ್ಲಿ 0.11ರಷ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಜೀವನಶೈಲಿಯ ಪ್ರಮುಖ ಅಂಶ: ಸಂಶೋಧಕರು ಎಂಎಎಸ್​ಎಲ್​ಡಿ ರೋಗಿಗಳ ಪಾರ್ಟನರ್​ನಲ್ಲಿ ಅನೇಕ ಯಕೃತ್​​ ಕಾಯಿಲೆ ಅಭಿವೃದ್ಧಿ ಹೊಂದಿದ್ದು, ಇದರಿಂದ ಸಾವನ್ನಪ್ಪಿರುವುದನ್ನು ಪತ್ತೆ ಮಾಡಿದ್ದಾರೆ. ನಮ್ಮ ಅಧ್ಯಯನವೂ ಎಂಎಎಸ್​ಎಲ್​ಡಿ ಸ್ಪಷ್ಟ ಅಪಾಯವನ್ನು ಹೊಂದಿದೆ ಎಂದು ಖಾತ್ರಿ ಪಡಿಸಿದೆ. ಇದರ ಅಭಿವೃದ್ಧಿಯಲ್ಲಿ ಜೀವನಶೈಲಿ ಕೂಡ ಪ್ರಮುಖವಾಗಿದೆ ಎಂದು ಡಾ ಇಬ್ರಾಹಿಮಿ ತಿಳಿಸಿದ್ದಾರೆ (ಎಎನ್​ಐ).

ಇದನ್ನೂ ಓದಿ: ನಿಯಮಿತ ದೈಹಿಕ ಚಟುವಟಿಕೆಯಿಂದ ಮಕ್ಕಳಲ್ಲಿನ ಒತ್ತಡ ಕಡಿಮೆ; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.