ETV Bharat / sukhibhava

ನಿಮ್ಮ ಹೆಬ್ಬೆರಳ ತುದಿಯಲ್ಲಿ ಕೂರುತ್ತೆ ಈ ಟೆಡ್ಡಿ ಬೇರ್.. ಇದು ಟೈನಿಟೆಡ್ - LITTLE TEDDIES THAT ARE SMALLER THAN THUMB NAIL

ಚಿಕ್ಕ ಮಗು ಆಟವಾಡುವ ಟೆಡ್ಡಿ ಬೇರ್ ಮಾತ್ರವಲ್ಲದೆ ವಿಶ್ವದದಲ್ಲಿ ಅತಿದೊಡ್ಡ ಟೆಡ್ಡಿ ಬೇರ್ ಕೂಡ ಇವೆ. ಅತಿ ದೊಡ್ಡ ಟೆಡ್ಡಿ ಬೇರ್ ಹೆಸರು 'ದಿ ಮೆಕ್ಸಿಕನ್ ಜೈಂಟ್ ಟೆಡ್ಡಿ ಬೇರ್'. ಇದರ ಉದ್ದ 65 ಅಡಿಗಳಿಗಿಂತ ಹೆಚ್ಚು.

LITTLE TEDDIES THAT ARE SMALLER THAN THUMB NAIL
ನಿಮ್ಮ ಹೆಬ್ಬೆರಳ ತುದಿಯಲ್ಲಿ ಕೂರುತ್ತೆ ಈ ಟೆಡ್ಡಿ ಬೇರ್.. ಇದು ಟೈನಿಟೆಡ್
author img

By

Published : Aug 3, 2022, 2:11 PM IST

ಟೆಡ್ಡಿ ಬೇರ್ ಅಂದ್ರೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಇವು ತುಂಬಾ ಇಷ್ಟ. ಟೆಡ್ಡಿ ಬೇರ್ ಜೊತೆಗಿಲ್ಲದೆ ಕೆಲವರಿಗೆ ಒಂದು ದಿನವೂ ಇರಕ್ಕಾಗಲ್ಲ ಗೊತ್ತಾ..! ಬಹುತೇಕ ನಮ್ಮ ಬಳಿ ಇರುವ ಟೆಡ್ಡಿ ಬೇರ್​ಗಳು ಅಂಗೈ ಅಗಲದಿಂದ ಹಿಡಿದು ಆರಡಿ ಅಥವಾ ಅದಕ್ಕೂ ದೊಡ್ಡದಾಗಿರಬಹುದು. ಆದ್ರೆ ಹೆಬ್ಬೆರಳ ಉಗುರಿಗಿಂತಲೂ ಚಿಕ್ಕ ಟೆಡ್ಡಿ ಬೇರ್​ ಬಗ್ಗೆ ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಇಲ್ಲಿದೆ ನೋಡಿ ಮಾಹಿತಿ.

ವಿಶ್ವದ ಅತ್ಯಂತ ಚಿಕ್ಕ ಟೆಡ್ಡಿ ಬೇರ್: ವಿಶ್ವದ ಅತ್ಯಂತ ಚಿಕ್ಕ ಟೆಡ್ಡಿ ಬೇರ್ ಬೊಂಬೆಗೆ ಟೈನಿಟೆಡ್ ಎಂದು ಹೆಸರಿಸಲಾಗಿದೆ. ಇದರ ಎತ್ತರ ಕೇವಲ 4.5 ಮಿಮೀ. ಇದನ್ನು 2006 ರಲ್ಲಿ ದಕ್ಷಿಣ ಆಫ್ರಿಕಾದ ಚೆರಿಯಲ್ ಮಾಸ್ ತಯಾರಿಸಿದರು. ಇದು ಪ್ರಸ್ತುತ ದಕ್ಷಿಣ ಕೊರಿಯಾದ ಜೆಜು ದ್ವೀಪದಲ್ಲಿರುವ ಟೆಡ್ಡಿ ಬೇರ್ ಮ್ಯೂಸಿಯಂನಲ್ಲಿದೆ.

ಎರಡನೆಯ ಅತಿ ಚಿಕ್ಕ ಟೆಡ್ಡಿ ಬೇರ್: ಎರಡನೇ ಚಿಕ್ಕ ಟೆಡ್ಡಿ ಬೇರ್ ಹೆಸರು ಮಿನಿ ದಿ ಪೂ. ಇದರ ಎತ್ತರ 5 ಮಿಮೀ. ಇದನ್ನು 2001 ರಲ್ಲಿ ಜರ್ಮನಿಯ ಬೆಟ್ಟಿಯಾ ಕಮಿನ್ಸ್ಕಿ ತಯಾರಿಸಿದರು. ಇದು ಥಂಬ್‌ನೇಲ್‌ಗಿಂತಲೂ ಚಿಕ್ಕದಾಗಿದೆ. ಇದನ್ನು ಪ್ರಸ್ತುತ ಬ್ರಿಟನ್‌ನ 'ಎ ವರ್ಲ್ಡ್ ಇನ್ ಮಿನಿಯೇಚರ್' ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.

ಮೂರನೇ ಅತಿ ಚಿಕ್ಕ ಟೆಡ್ಡಿ ಬೇರ್ ಸ್ವಿಟ್ಜರ್ಲೆಂಡ್‌ನಲ್ಲಿ: ಮೂರನೇ ಚಿಕ್ಕ ಟೆಡ್ಡಿಗೆ ವೀ ಬೇರ್ ಎಂದು ಹೆಸರಿಸಲಾಗಿದೆ. ಇದರ ಎತ್ತರ ಕೇವಲ 6.5 ಮಿಮೀ. ಇದನ್ನು 1998 ರಲ್ಲಿ ದಕ್ಷಿಣ ಆಫ್ರಿಕಾದ ಚೆರ್ಲಿ ಮಾಸ್ ತಯಾರಿಸಿದರು. ಇದನ್ನು ಪ್ರಸ್ತುತ ಸ್ವಿಟ್ಜರ್ಲೆಂಡ್‌ನ ಪುಪುನ್‌ಹಾಸ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ.

ಇದು ಅತಿ ದೊಡ್ಡ ಟೆಡ್ಡಿ ಬೇರ್: ಚಿಕ್ಕ ಮಗು ಆಟವಾಡುವ ಟೆಡ್ಡಿ ಬೇರ್ ಮಾತ್ರವಲ್ಲದೇ ವಿಶ್ವದದಲ್ಲಿ ಅತಿದೊಡ್ಡ ಟೆಡ್ಡಿ ಬೇರ್ ಕೂಡ ಇವೆ. ಅತಿ ದೊಡ್ಡ ಟೆಡ್ಡಿ ಬೇರ್ ಹೆಸರು 'ದಿ ಮೆಕ್ಸಿಕನ್ ಜೈಂಟ್ ಟೆಡ್ಡಿ ಬೇರ್'. ಇದರ ಉದ್ದ 65 ಅಡಿಗಳಿಗಿಂತ ಹೆಚ್ಚು. ಇದನ್ನು ತಯಾರಿಸಲು ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತ್ತು. ಪ್ರಸ್ತುತ, ವಿಶ್ವದ ಅತಿ ದೊಡ್ಡ ಟೆಡ್ಡಿ ಬೇರ್ ಎಂಬ ದಾಖಲೆಯನ್ನು ಇದು ಹೊಂದಿದೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲೂ ಸ್ಥಾನ ಪಡೆದಿದೆ. ಇದರ ತೂಕ 4.4 ಟನ್.

ಇದನ್ನು ಓದಿ:ಆಕಾಶದಲ್ಲಿ ಮಿನುಗಿ ಮಾಯವಾದ 'ಮಿಲ್ಕಿ ವೇ': ನೋಡಿ ಅದ್ಭುತ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.