ಲಂಡನ್: ಮಕ್ಕಳಲ್ಲಿರುವ ಜಡತ್ವ ನೇರವಾಗಿ ಸ್ಥೂಲಕಾಯತೆಯೊಂದಿಗೆ ಸಂಬಂಧ ಹೊಂದಿದೆ. ಹಗುರ ದೈಹಿಕ ಚಟುವಟಿಕೆ ನಡೆಸುವ ಮೂಲಕ ಇದರ ಅಡ್ಡ ಪರಿಣಾಮಗಳನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಬಹುದು ಎಂದು ಹೊಸ ಸಂಶೋಧನೆ ತಿಳಿಸಿದೆ.
ಇತ್ತೀಚಿನ ವರದಿ ಪ್ರಕಾರ, ಜಾಗತಿಕವಾಗಿ ಶೇ 80ರಷ್ಟು ಮಕ್ಕಳ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿರುವ ದೈನಂದಿನ ಸರಾಸರಿಯ 60 ನಿಮಿಷ ವೇಗದ ದೈಹಿಕ ಚಟುವಟಿಕೆಯನ್ನು ನಡೆಸುತ್ತಿಲ್ಲ ಎಂಬುದು ಕಂಡುಬಂದಿದೆ.
ಈ ಅಧ್ಯಯನ ವದರಿಯನ್ನು ನೇಚರ್ ಕಮ್ಯೂನಿಕೇಷನ್ನಲ್ಲಿ ಪ್ರಕಟಿಸಲಾಗಿದೆ. ಒಟ್ಟಾರೆ ಕೊಬ್ಬಿನ ದ್ರವ್ಯರಾಶಿಯನ್ನು ಕಡಿಮೆ ಮಾಡಲು ಮಕ್ಕಳಿಗೆ ಹಗುರ ದೈಹಿಕ ವ್ಯಯಾಮ ಸಹಾಯಕ. ಇದು ಮಧ್ಯಮದಿಂದ ವೇಗದ ದೈಹಿಕ ಚಟುವಟಿಕೆಗಿಂತ ಹೆಚ್ಚು ಪ್ರಯೋಜನಕಾರಿ ಎಂದು ಸಲಹೆ ನೀಡಿದೆ.
ಸಂಶೋಧನೆಯ ಹೊಸ ಫಲಿತಾಂಶದ ಫಲವಾಗಿ ಆರಂಭಿಕ ಜೀವನದಲ್ಲಿಯೇ ಅತಿಯಾದ ಸ್ಥೂಲಕಾಯದಿಂದ ಮಕ್ಕಳನ್ನು ರಕ್ಷಿಸಬಹುದು. ದಿನದಲ್ಲಿ 60 ನಿಮಿಷದ ವೇಗದ ದೈಹಿಕ ಚಟುವಟಿಕೆಗಿಂತ 3 ಗಂಟೆಗಳ ಕಾಲ ಹಗುರ ದೈಹಿಕ ಚಟುವಟಿಕೆ ಸೂಕ್ತ ಎಂದು ಎಕ್ಸೆಟೆರ್ ಯೂನಿವರ್ಸಿಟಿಯ ಡಾ.ಆಂಡ್ರೊ ಅಗ್ಬಜೆ ಹೇಳಿದ್ದಾರೆ.
ಹಗುರ ದೈಹಿಕ ಚಟುವಟಿಕೆಯು ಯುವ ಜನರಲ್ಲಿ ಉಂಟಾಗುವ ಸ್ಥೂಲಕಾಯದ ಅಡ್ಡ ಪರಿಣಾಮಗಳಿಂದ ರಕ್ಷಿಸುತ್ತದೆ. ಒಟ್ಟು 6,059 ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ ಶೇ 53ರಷ್ಟು ಬಾಲಕಿಯರಾಗಿದ್ದು, 11 ವರ್ಷ ವಯೋಮಾನದಿಂದ 24 ವರ್ಷದೊಳಗಿನವರಿದ್ದರು. ಭಾಗಿದಾರರು ಹಗುರ ದೈಹಿಕ ಚಟುವಟಿಕೆಯನ್ನು ದಿನಕ್ಕೆ ಆರರಿಂದ ಮೂರು ಗಂಟೆಗೆ ಇಳಿಕೆ ಮಾಡಲಾಗಿದೆ. ವೇಗದ ಚಟುವಟಿಕೆಯನ್ನು 50 ನಿಮಿಷಕ್ಕೆ ಇಳಿಸಲಾಗಿದೆ.
ಹಗುರ ವ್ಯಾಯಾಮಗಳಾವುವು?: ಬಾಲ್ಯದಿಂದ ಹದಿಹರೆಯದವರೆಗೆ 10 ಕೆ.ಜಿ ಫ್ಯಾಟ್ ಮಾಸ್ ಅನ್ನು ಮಕ್ಕಳು ಪಡೆಯುತ್ತಾರೆ. ಈ ಅವಧಿಯಲ್ಲಿ 1 ಕೆ.ಜಿ ತೂಕದ ಹೆಚ್ಚಳ ಶೇ 60ರಷ್ಟು ಅಕಾಲಿಕ ಸಾವಿನ ಅಪಾಯ ಹೆಚ್ಚಿಸುತ್ತದೆ. ದೀರ್ಘ ನಡಿಗೆ, ಮನೆ ಕೆಲಸ, ನಿಧಾನದ ನೃತ್ಯ, ನಿಧಾನ ಈಜು ಮತ್ತು ನಿಧಾನದ ಸೈಕ್ಲಿಂಗ್ಗಳು ಹಗುರ ವ್ಯಾಯಾಮಗಳಾಗಿವೆ.
ನಮ್ಮ ಅಧ್ಯಯನವೂ ಭವಿಷ್ಯದ ಆರೋಗ್ಯ ಮಾರ್ಗಸೂಚಿ ಮತ್ತು ನಿಯಮಗಳ ಹೇಳಿಕೆಗಳ ಪ್ರಯೋಜನಕಾರಿಯಾಗಿದೆ. ಸಾರ್ವಜನಿಕ ಆರೋಗ್ಯ ತಜ್ಞರು, ಆರೋಗ್ಯ ನೀತಿ ನಿರೂಪಕರು, ಆರೋಗ್ಯ ಪತ್ರಕರ್ತರು ಮತ್ತು ಬ್ಲಾಗರ್ಸ್, ಪಿಡಿಯಾಟ್ರಿಷಿಯನ್ ಮತ್ತು ಪೋಷಕರಿಗೆ ಮಕ್ಕಳ ಸ್ಥೂಲಕಾಯತೆ ತಡೆಯಲಿ ಹಗುರ ದೈಹಿಕ ಚಟುವಟಿಕೆಗೆ ಉತ್ತೇಜಿಸಲು ಸಹಾಯ ಮಾಡುತ್ತದೆ. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ನಿಂದ ದಡಾರ, ಮೆದುಳಿನ ಅಸ್ವಸ್ಥತೆಯ ಅಪಾಯ ಹೆಚ್ಚು: ತಜ್ಞರು