ETV Bharat / sukhibhava

ಭವಿಷ್ಯದ ಸಾಂಕ್ರಾಮಿಕತೆ ಎದುರಿಸಲು ಕೋವಿಡ್​ 19 ಪಾಠ!

ಕೋವಿಡ್​ ಸೋಂಕು ಜಗತ್ತಿಗೆ ಅನೇಕ ಪಾಠ ಕಲಿಸಿದೆ. ಜೊತೆಗೆ ಭವಿಷ್ಯದಲ್ಲಿ ಎದುರಾಗುವ ಸೋಂಕು ಹೇಗೆ ನಿಭಾಯಿಸಬೇಕು ಎಂದು ತಿಳಿಸಿದೆ.

Lessons from Covid-19 for future pandemics

author img

By

Published : May 15, 2023, 5:31 PM IST

ಟೊರೆಂಟೋ ( ಕೆನಡಾ): ಜಗತ್ತನ್ನು ತಲ್ಲಣಗೊಳಿಸಿದ್ದ ಕೋವಿಡ್​ 19 ಸಾಂಕ್ರಾಮಿಕತೆಯನ್ನು ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ. ಇದು ಹೆಚ್ಚಿನ ಜನರ ದೈನಂದಿನ ಜೀವನದ ಮೇಲೆ ಹೆಚ್ಚಿನ ಪ್ರಭಾವ ಹೊಂದಿರದೇ ಇದ್ದರೂ, ಇದನ್ನೂ ಕೇವಲವಾಗಿ ಪರಿಗಣಿಸುವುದು ತಪ್ಪಾಗುತ್ತದೆ.

ಯಾವುದೇ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ಘೋಷಿಸಲು ಅದಕ್ಕೆ ಮೂರು ಷರತ್ತುಗಳಿರುತ್ತದೆ. ಮೊದಲನೇಯದು, ಸೋಂಕು ಹಲವು ದೇಶಗಳಲ್ಲಿ ಹರಡಬೇಕು. ಎರಡನೇಯದು, ಈ ಸೋಂಕಿನ ಅನೇಕ ಸಮಸ್ಯೆ, ಆಸ್ಪತ್ರೆ ದಾಖಲೀಕರಣ ಮತ್ತು ಸಾವಿನ ವರದಿ. ಮೂರನೇಯದು, ಇದರಿಂದ ಆರೋಗ್ಯ ಕಾಳಜಿ ವ್ಯವಸ್ಥೆ ಮೇಲೆ ಹೆಚ್ಚಿನ ಒತ್ತಡ ಇರಬೇಕು. ಕೋವಿಡ್​ 19ಗೆ ಮೊದಲು ಡಬ್ಲ್ಯೂಎಚ್​ಒ ಜಿಕಾ, ಎಂಬೋಲಾ, ಪೊಲೀಯೋ, ಎಂಪಾಕ್ಸ್​​ ಅನ್ನು ಕೂಡ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿತು. ಯಾವುದೇ ಸೋಂಕುಗಳನ್ನು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಪ್ರತಿ ಮೂರು ತಿಂಗಳಿಗೆ ಇದನ್ನು ಪರೀಶಿಲನೆ ಮಾಡಲಾಗುವುದು.

ಮಹತ್ವ: ಕೋವಿಡ್​ 19 ಸಾಂಕ್ರಾಮಿಕತೆಯನ್ನು ತುರ್ತು ಪರಿಸ್ಥಿತಿಯಿಂದ ತೆಗೆದು ಹಾಕಲು ಎರಡು ಪ್ರಮುಖ ಕಾರಣವಿದೆ. ವಿಶ್ವ ಆರೋಗ್ಯ ಸಂಸ್ಥೆಯ ಔಪಚಾರಿಕ ಅಧಿಕಾರವನ್ನು ಕಡಿಮೆ ಮಾಡುತ್ತದೆ. ಸಾಂಕ್ರಾಮಿಕ ರೋಗದ ತೀವ್ರ ಕಡಿಮೆಯಾಗಿದ್ದು, ಸಾರ್ಸ್​ ಕೋವ್​-2 ಉಂಟಾಗುವ ಅಪಾಯದ ಜೊತೆಗೆ ನಿರಂತರ ಪ್ರತಿಕ್ರಿಯೆಯ ಪ್ರಯತ್ನಗಳೊಂದಿಗೆ ಇದು ಇನ್ನೂ ಸಮತೋಲನದಲ್ಲಿರಬೇಕು ಎಂದು ಸಲಹೆ ನೀಡಿದೆ

ಆದಾಗ್ಯೂ, ಇಂದಿನ ಸಾಂಕ್ರಾಮಿಕತೆ ಕಾಲದಲ್ಲಿ ಯಾರು ಕೂಡ ಸುರಕ್ಷಿತರಲ್ಲ ಎಂಬುದನ್ನು ಈ ಕೋವಿಡ್​ ಕಾಲಘಟ್ಟ ತಿಳಿಸಿದೆ. ಇಂದಿಗೂ ಕೂಡ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಕೋವಿಡ್​ 19ನಿಂದ ಬಳಲುತ್ತಿದೆ. ಕೋವಿಡ್​ ಲಸಿಕೆ, ಪತ್ತೆ ಮತ್ತು ಚಿಕಿತ್ಸೆಗೆ ಪರದಾಡುತ್ತಿದೆ. ಮತ್ತೊಂದು ಕಡೆ ಅನೇಕ ರೋಗ ನಿರೋಧ ಸಮಸ್ಯೆಗಳು ವ್ಯಕ್ತವಾಗುತ್ತಿದೆ. ಈ ಸೋಂಕು ಜಗತ್ತಿನ ಜನಸಂಖ್ಯೆಯ ಆರೋಗ್ಯವನ್ನು ದುರ್ಬಲಗೊಳಿಸಿದೆ.

ಕೋವಿಡ್​ ತುರ್ತುಪರಿಸ್ಥಿತಿ ಕೊನೆಗೊಳಿಸಲು ಮತ್ತೊಂದು ಪ್ರಮುಖ ಕಾರಣ ಎಂದರೆ, ಅನೇಕ ಅಧಿಕ ಆದಾಯ ಹೊಂದಿರುವ ದೇಶಗಳು ಮೂರು ವರ್ಷಗಳ ಹೋರಾಟದ ಬಳಿಕ ಈ ಮುಂಚಿನ ಜೀವನಶೈಲಿಗೆ ಮರಳಿವೆ. ಆದಾಗ್ಯೂ, ಕೋವಿಡ್​ ನಿಂದಾಗಿ ಜಾಗತಿಕ ಪ್ರತಿಕ್ರಿಯೆಯಲ್ಲಿನ ನ್ಯೂನತೆಗಳನ್ನು ಪರಿಹರಿಸುವುದನ್ನು ಬಿಟ್ಟು ಸಾಂಕ್ರಾಮಿಕ ರೋಗದಿಂದ ಪಾಠಗಳನ್ನು ಕಲಿಯುವ ನಿರ್ಣಾಯಕ ಮತ್ತು ಸವಾಲಿನ ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದರಿಂದಾಗಿ ಭವಿಷ್ಯದ ಸಾಂಕ್ರಾಮಿಕ ಸನ್ನದ್ಧತೆ ಮತ್ತು ಪ್ರತಿಕ್ರಿಯೆಯ ಪರಿಣಾಮಕಾರಿತ್ವವನ್ನು ನಿರ್ಧರಿಸುವುದನ್ನು ಎಂದು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು.

ಜಾಗತಿಕವಾಗಿ ಕೋವಿಡ್​ 19ನಿಂದಾಗಿ ಲಸಿಕೆ ಮತ್ತು ಪ್ರಯಾಣ ವಿಚಾರದಲ್ಲಿನ ಸಹಕಾರ ಸೇರಿದಂತೆ ಇನ್ನಿತರ ಅಂಶಗಳಲ್ಲಿ ರಾಷ್ಟ್ರಗಳ ನಡುವಿನ ಸಹಕಾರದ ವೈಫಲ್ಯ ಎದುರಿಸಿದರ ಪಾಠಗಳನ್ನು ಕಲಿಯಬೇಕಿದೆ.

ಜಾಗತಿಕ ಸಹಕಾರ ಕೊರತೆ: ಕೋವಿಡ್​ 10 ಸಾಂಕ್ರಾಮಿಕತೆ ಕುರಿತು ಮಾರ್ಚ್​ 2020ರಲ್ಲಿ ಡಬ್ಲ್ಯೂಎಚ್​ಒ ತಂತ್ರಗಾರಿಕೆ ನಿರ್ಧಾರ ತೆಗೆದುಕೊಂಡ ಬಳಿಕವೇ ಸರ್ಕಾರಗಳು ಈ ಕುರಿತು ತುತ್ತು ಕಾರ್ಯಕ್ಕೆ ಮುಂದಾದವು. ಅಲ್ಲಿಯವರೆಗೆ ಜಾಗತಿಕವಾಗಿ ಸಹಕಾರದ ಕೊರತೆಯನ್ನು ರಾಷ್ಟ್ರಗಳು ಎದುರಿಸಿದವು. ಜಾಗತಿಕವಾಗಿ ರಾಷ್ಟ್ರಗಳೆಲ್ಲದರ ಸಾಮೂಹಿಕ ಪ್ರಯತ್ನಗಳಿಂದಾಗಿ ಇದನ್ನು ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಘೋಷಿಸಿದವು. ಕೋವಿಡ್​ 19 ಪ್ರತಿಕ್ರಿಯೆಯಾಗಿ ಪ್ರಯಾಣದ ಕ್ರಮಗಳ ಬಳಕೆಯ ಕುರಿತಾದ ನಮ್ಮ ಸಂಶೋಧನೆಯು ಪ್ರಮುಖ ನೀತಿ ಕ್ಷೇತ್ರಗಳನ್ನು ಗುರುತಿಸಿದೆ. ಅಲ್ಲಿ ಪರಿಣಾಮಕಾರಿತ್ವವನ್ನು ಸುಧಾರಿಸುವುದು ಇಚ್ಛಿಸುವ ದೇಶಗಳು ಹೇಗೆ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಈ ಮಧ್ಯೆ, ಇನ್‌ಫ್ಲುಯೆಂಜಾ ಪ್ರಕರಣಗಳು ಇದೀಗ ಹೆಚ್ಚಳ ಕಾಣುತ್ತಿದೆ. ಕೋವಿಡ್​ 19 ಸಾಂಕ್ರಾಮಿಕತೆ ಸಮಯದಲ್ಲಿ ಅಂತರಾಷ್ಟ್ರೀಯ ಕಾಳಜಿ ತುರ್ತು ಪರಿಸ್ಥಿತಿ ಘೋಷಣೆಯನ್ನು ಅಳವಡಿಸಿಕೊಳ್ಳುವುದು. ಇದರ ನಡುವೆ ಸರ್ಕಾರಗಳು ತೆಗೆದುಕೊಂಡ ಕ್ರಮಗಳು ಭವಿಷ್ಯದಲ್ಲಿ ಜಗತ್ತು ಕಲಿಯಬೇಕಿರುವ ಅಗತ್ಯ ಪಾಠಗಳಾಗಿವೆ.

ಇದನ್ನೂ ಓದಿ: ಕಡಿಮೆ ವಿಟಮಿನ್​ ಡಿ ಪ್ರಮಾಣದಿಂದ ದೀರ್ಘ ಕೋವಿಡ್​ ಅಪಾಯ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.