ನ್ಯೂಯಾರ್ಕ್: ಪ್ರತಿದಿನ ಕೇವಲ 90 ನಿಮಿಷಗಳ ಕಾಲ ತಡವಾಗಿ ಮಲಗುವುದರಿಂದ ರಕ್ತನಾಳಗಳನ್ನು ಜೋಡಿಸುವ ಕೋಶಗಳ ಮೇಲೆ ಹಾನಿ ಆಗಲಿದೆ. ಅಲ್ಲದೇ, ಕಳಪೆ ನಿದ್ದೆಯು ಹೃದಯ ಸಮಸ್ಯೆಗೆ ಆಹ್ವಾನ ನೀಡಲಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ಸಣ್ಣ ದೀರ್ಘಕಾಲದ ನಿದ್ರಾಹೀನತೆಯ ನಂತರದ ಜೀವನದಲ್ಲಿ ಹೃದಯ ರೋಗದ ಸಮಸ್ಯೆ ಅಭಿವೃದ್ಧಿಯ ಅಪಾಯವನ್ನು ಹೆಚ್ಚಿಸುತ್ತದೆ. ಉತ್ತಮ ನಿದ್ದೆಗಿಂತ ದೀರ್ಘಕಾಲದ ಸೌಮ್ಯ ನಿದ್ರಾಹೀನತೆ ಹೊಂದಿರುವವರಲ್ಲಿ ನಂತರದ ಜೀವನದಲ್ಲಿ ಹೃದಯ ರೋಗದ ಅಪಾಯವನ್ನು ಹೊಂದಿರುವುದು ಸಾವಿರಾರು ಜನರ ಮೇಲೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಕೊಲಂಬಿಯಾ ಯುನಿವರ್ಸಿಟಿ ಮಹಿಳೆಯರ ಮೇಲೆ ಈ ಹೊಸ ಅಧ್ಯಯನವನ್ನು ನಡೆಸಿದೆ. ಇದನ್ನು ಜರ್ನಲ್ ಸೈಂಟಿಫಿಕ್ ವರದಿಯಲ್ಲಿ ಪ್ರಕಟಿಸಲಾಗಿದೆ. ದೀರ್ಘಕಾಲದ ಸೌಮ್ಯ ನಿದ್ರಾಹೀನತೆಯ ಸಮಯದಲ್ಲಿ ದೇಹದಲ್ಲಿ ಏನಾಗುತ್ತಿದೆ ಎಂಬುದನ್ನು ಅಧ್ಯಯನದಲ್ಲಿ ತೋರಿಸಲಾಗಿದೆ.
ಆರು ವಾರಗಳ ಕಾಲ ನಡೆದ ಈ ಅಧ್ಯಯನದಲ್ಲಿ, ಉತ್ತಮ ವಿಶ್ರಾಂತಿ ಕೋಶಗಳಿಗಿಂತ ರಕ್ತನಾಳಗಳನ್ನು ಜೋಡಿಸುವ ಕೋಶಗಳು ಹಾನಿಕಾರಕ ಆಕ್ಸಿಡೆಂಟ್‌ಗಳಿಂದ ತೊಂದರೆಗೆ ಒಳಗಾಗುತ್ತವೆ. ನಿದ್ರೆ ನಿರ್ಬಂಧಿತ ಕೋಶಗಳು ಆ್ಯಂಟಿ ಆಕ್ಸಿಡೆಂಟ್ ಸಕ್ರಿಯವಾಗಲು ವಿಫಲವಾಗಿದೆ.
ನಿದ್ರೆ ಕೊರತೆಯಿಂದ ಹಲವು ಸಮಸ್ಯೆ: ಕೋಶಗಳು ಉರಿಯೂತ ಮತ್ತು ನಿಷ್ಕ್ರಿಯವಾಗಿರುವ ಜೀವಕೋಶಗಳು, ಹೃದಯರಕ್ತನಾಳದ ಕಾಯಿಲೆಯ ಬೆಳವಣಿಗೆಯ ಆರಂಭಿಕ ಹಂತ ಎಂದು ಅಧ್ಯಯನ ಫಲಿತಾಂಶ ತೋರಿಸಿದೆ. ದೀರ್ಘ ನಿದ್ರೆ ಕೊರತೆಯು ಹೃದಯ ರೋಗದ ಕೊರತೆಗೆ ಕಾರಣವಾಗುತ್ತದೆ ಎಂಬ ಮೊದಲ ನೇರ ಪುರಾವೆಯನ್ನು ಈ ಅಧ್ಯಯನ ಹೊಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ಕೊಲಂಬಿಯಾದ ಸೆಂಟರ್ ಫಾರ್ ಸ್ಲಿಪ್ ಮೆಡಿಸಿನ್ ನಿರ್ದೇಶಕ ಸಂಜಾ ಜೆಲಿಕ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಸಂಶೋಧಕರು 1,000 ಮಹಿಳೆಯರನ್ನು ಪರಿಶೀಲನೆ ನಡೆಸಿದ್ದಾರೆ. 35 ಮಹಿಳೆಯರು 12 ವಾರಗಳ ಕಾಲ ಪ್ರತಿದಿನ ಏಳರಿಂದ ಎಂಟು ಗಂಟೆಗಳ ಕಾಲ ಸಾಮಾನ್ಯ ಆರೋಗ್ಯಯುತ ನಿದ್ರೆಯನ್ನು ಮಾಡಿದ್ದಾರೆ. ಆರು ವಾರಗಳ ಕಾಲ ಮಳೆಯರು ಸಾಮಾನ್ಯ ದಿನಚರಿಯು 1.5 ಗಂಟೆಗಳ ತಡವಾಗಿ ನಿದ್ರೆಗೆ ಜಾರಿದ್ದಾರೆ. ಪ್ರತಿ ಭಾಗಿದಾರರ ನಿದ್ರೆಯ ಪತ್ತೆಗೆ ಅವರು ಮಣಿಕಟ್ಟಿನ ಸಾಧನವನ್ನು ಬಳಕೆ ಮಾಡಿದ್ದಾರೆ.
ಏಳರಿಂದ ಏಂಟು ಗಂಟೆಗಳ ಕಾಲ ಉತ್ತಮ ನಿದ್ದೆಯನ್ನು ಮಾಡಿರುವವರಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಬಂದಿದೆ ಎಂದು ಜೆಲಿಕ್ ತಿಳಿಸಿದ್ದಾರೆ.
ಯುವ ಮತ್ತು ಆರೋಗ್ಯಯುತ ಜನರು ಕಡಿಮೆ ನಿದ್ದೆಯನ್ನು ಹೊಂದಿದ್ದರೆ, ಅವರಲ್ಲಿ ಹೃದಯರೋಗದ ಅಪಾಯವು ಉಲ್ಬಣವಾಗುತ್ತದೆ. ಜೆಲಿಕಾ ತಂಡ ಇದೀಗ ಮಲಗುವ ಸಮಯದ ವ್ಯತ್ಯಾಸವು ನಾಳದ ಕೋಶಗಳ ದೀರ್ಘ ಆದರೆ, ನಿಯಮಿತ ಪರಿಣಾಮ ಬೀರುತ್ತದೆಯೇ ಎಂದು ನೋಡಲು ಅಧ್ಯಯನವನ್ನು ವಿನ್ಯಾಸಗೊಳಿಸುತ್ತಿದೆ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮಹಿಳೆಯರಿಗೆ ಗರ್ಭಧಾರಣೆ ಸಮಸ್ಯೆಗಳಿಗಿಂತಲೂ ಬೊಜ್ಜಿನಿಂದ ಹೃದಯ ರೋಗದ ಅಪಾಯ ಹೆಚ್ಚು