ETV Bharat / sukhibhava

ಜಾಗತಿಕವಾಗಿ ಪ್ರತಿ ನಾಲ್ಕನೆ ವ್ಯಕ್ತಿಯಲ್ಲಿ ಕಾಡುತ್ತಿದೆ ರಕ್ತ ಹೀನತೆ ಸಮಸ್ಯೆ; ಮಹಿಳೆಯರಲ್ಲೇ ಅಧಿಕ

990ರಲ್ಲಿ ಜಾಗತಿಕವಾಗಿ 420 ಮಂದಿ ರಕ್ತ ಹೀನತೆ ಒಳಾಗಾಗಿದ್ದರು 2021ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 1.92 ಬಿಲಿಯನ್​ ಆಗಿದೆ.

Lancet Haematology survey says anaemia cases rising rapidly among women globally

author img

By

Published : Aug 1, 2023, 3:56 PM IST

ನ್ಯೂಯಾರ್ಕ್: ಜಾಗತಿಕವಾಗಿ ನಾಲ್ಕನೇ ಒಂದು ಭಾಗದಷ್ಟು ಜನರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಗರ್ಭಿಣಿಯರು, ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ಕುರಿತು ದಿ ಲ್ಯಾನ್ಸೆಟ್​ ಹೆಮಟೊಲಾಜಿಯಲ್ಲಿ ಪ್ರಕಟಿಸಲಾಗಿದೆ. 1990ರಲ್ಲಿ ಜಾಗತಿಕವಾಗಿ 420 ಮಂದಿ ರಕ್ತ ಹೀನತೆ ಒಳಾಗಾಗಿದ್ದರು. 2021ರಲ್ಲಿ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 1.92 ಬಿಲಿಯನ್​ ಆಗಿದ್ದು, ಇದರಲ್ಲಿ ಉಪ ಸಹಾಯ ಆಫ್ರಿಕಾ ಮತ್ತು ದಕ್ಷಿಣ ಆಫ್ರಿಕಾದ ಮಂದಿ ಹೆಚ್ಚಿದ್ದಾರೆ.

ಅಮೆರಿಕ ಮೂಲಕ ಇನ್ಸುಟಿಟ್ಯೂಟ್​ ಫಾರ್​ ಹೆಲ್ತ್​ ಮ್ಯಾಟ್ರಿಕ್ಸ್​ ಮತ್ತು ಎವಲೂಷನ್​ (ಐಎಚ್​ಎಂಇ) ಅಧ್ಯಯನ ನಡೆಸಿದ್ದು, ಜಾಗತಿಕವಾಗಿ 1990ರಿಂದ 2021ರ ವರೆಗೆ ಎಷ್ಟು ಪಟ್ಟು ರಕ್ತಹೀನತೆ ಪ್ರಕರಣ ಹೆಚ್ಚಾಗಿದೆ ಎಂದು ತೋರಿಸಿದೆ. ಇನ್ನು ಈ ಪ್ರಕರಣ ಪುರುಷರಲ್ಲಿ ದೊಡ್ಡ ಮಟ್ಟದಲ್ಲಿ ಕಡಿಮೆಯಾಗಿದ್ದು, ಮಹಿಳೆಯರಲ್ಲಿ ಸಂತಾನೋತ್ಪತಿ ಸಮಯ ಮತ್ತು ಐದು ವರ್ಷದೊಳಗಿನ ಮಕ್ಕಳಲ್ಲಿ ನಿಧಾನಗತಿ ಬೆಳವಣಿಗೆ ಕಾಣುತ್ತಿದೆ. 2021ರಲ್ಲಿ ಜಾಗತಿಕವಾಗಿ 31.2ರಷ್ಟು ಮಹಿಳೆಯರಲ್ಲಿ ರಕ್ತ ಹೀನತೆ ಕಂಡು ಬಂದರೆ ಪುರುಷರಲ್ಲಿ 17.5ರಷ್ಟಿದೆ. ಸಂತಾನೋತ್ಪತ್ತಿ ವರ್ಷಗಳಲ್ಲಿ 15ರಿಂದ 49 ವರ್ಷದಲ್ಲಿ ಈ ವ್ಯತ್ಯಾಸವು ಹೆಚ್ಚು ಸ್ಪಷ್ಟವಾಗಿದೆ. ಮಹಿಳೆಯರಲ್ಲಿ ರಕ್ತಹೀನತೆಯ ಪ್ರಮಾಣವು 33.7 ಶೇಕಡಾ ಮತ್ತು ಪುರುಷರಲ್ಲಿ ಶೇಕಡಾ 11.3 ರಷ್ಟಿತ್ತು.

ವರ್ಷಗಳು ಕಳೆದಂತೆ, ಜಾಗತಿಕವಾಗಿ ರಕ್ತಹೀನತೆ ಕಡಿಮೆ ಮಾಡುವ ಹೆಚ್ಚಿನ ಗಮನ ನೀಡಲಾಗಿದೆ. ಆದರೆ, ಗುಂಪು, ಮಹಿಳೆ ಮತ್ತು ಮಕ್ಕಳು ಕಡಿಮೆ ಪ್ರಕ್ರಿಯೆ ಹೊಂದಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ವಿಲ್​ ಗಾರ್ಡನೆರ್​ ತಿಳಿಸಿದ್ದಾರೆ.

ಇದು ಸೂಕ್ಷ್ಮವಾದ ಪರಿಸ್ಥಿತಿಯಾಗಿದ್ದು, ಇದು ಪೋಷಕಾಂಶ, ಸಾಮಾಜಿಕ ಆರ್ಥಿಕ ಸ್ಥಿತಿಯ ಲಭ್ಯತೆ ಪರಿಹಾರ ಮಾಡುತ್ತದೆ. ರಕ್ತ ಹೀನತೆ ಕಾರಣಗಳನ್ನು ಪತ್ತೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಬೇಕಿದೆ. ಉಳಿದ ಎರಡು ಗುಂಪುಗಳಿಗೆ ಹೋಲಿಕೆ ಮಾಡಿದರೆ, ಮಹಿಳೆಯರು (15ರಿಂದ 49 ವರ್ಷ) ಮತ್ತು ಐದು ವರ್ಷದ ಮಕ್ಕಳಿಗಿಂತ ವಯಸ್ಕ ಪುರುಷರ ಗುಂಪು ಉತ್ತಮ ಕಾರ್ಯ ನಿರ್ವಹಣೆ ಮಾಡಿದೆ. ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೊರತಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬಹು ವಲಯ ವಿಧಾನಗಳಿವೆ. ಸುಧಾರಿತ ಸಾಂಸ್ಕೃತಿಕ ಜಾಗೃತಿಗೆ ಬದಲಾವಣೆಯ ಅಗತ್ಯವನ್ನು ಇದು ಹೇಳುತ್ತದೆ.

ರಕ್ತ ಹೀನತೆಗೆ ಪ್ರಮುಖ ಕಾರಣ ಎಂದರೆ, ಆರೋಗ್ಯಯುತ ಕೆಂಪು ರಕ್ತ ಕಣಗಳು ಅಥವಾ ಹಿಮೋಗ್ಲೋಬಿನ್​ ದೇಹದ ಟಿಶ್ಯೂಗೆ ಸರಿಯಾದ ಪ್ರಮಾಣದ ಆಮ್ಲಜನಕವನ್ನು ಪೂರೈಕೆ ಮಾಡದಿದ್ದಾಗ ಇದು ಉಂಟಾಗುತ್ತದೆ. ಇದು ಜಗತ್ತಿನಲ್ಲಿ ಅಂಗವೈಕಲ್ಯಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಈ ಅಧ್ಯಯದಲ್ಲಿ ರಕ್ತ ಹೀನತೆಗೆ ಕಾರಣವಾಗುವ 37 ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ. ಅದರಲ್ಲಿ ಕಬ್ಬಿಣ ಕೊರತೆಯು ರಕ್ತ ಹೀನತೆಗೆ ಕಾರಣವಾಗುವ ಪ್ರಮುಖ ಅಂಶವಾಗಿದೆ.

ಜಾಗತಿಕವಾಗಿ 825 ಮಿಲಿಯನ್​ ಮಹಿಳೆಯರು ಮತ್ತು 444 ಮಿಲಿಯನ್​ ಜನರು ಇದರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ. ಇದರಲ್ಲಿ ಕಬ್ಬಿಣದ ಅಂಶ ಸೇವನೆ ಮಾಡದಿರುವುದು ಪ್ರಮುಖವಾಗಿದೆ. ಆದರೆ, ಇತರೆ ಅಂಶಗಳು ಕೂಡ ರಕ್ತ ಹೀನತೆಗೆ ಪ್ರಮುಖ ಕಾರಣವಾಗಿದೆ. ಈ ಅಧ್ಯಯನದಲ್ಲಿ ರಕ್ತ ಹೀನತೆ ಸ್ತ್ರೀರೋಗ ಸಮಸ್ಯೆ ಮತ್ತು ಪ್ರಸವದ ವೇಳೆ ಹೆಮಾರೆಜ್​ಗೆ ಕೊಡುಗೆ ನೀಡಿದೆ.

ಐದು ವರ್ಷದೊಳಗಿನ ಮಕ್ಕಳಲ್ಲಿ ರಕ್ತಹೀನತೆಗೆ ಪ್ರಮುಖ ಕಾರಣ ಕಬ್ಬಿಣದ ಕೊರತೆ. ಕಾರಣ ಹಿಮೋಗ್ಲೋಬಿನೊಪಥಿಸ್​ ಇತರೆ ಸೋಂಕಿನ ಸಮಸ್ಯೆ, ಎಚ್​ಐವಿ/ ಏಡ್ಸ್​​ ಮತ್ತು ಮಲೇರಿಯಾ ಕೂಡ ಭೌಗೋಳಿಕ ಅಂಶಗಳು ಕೂಡ ಕಾರಣವಾಗಿದೆ. ಹದಿವಯಸ್ಸಿನ ಮಹಿಳೆಯರು ಮತ್ತು ಯುವತಿಯರಲ್ಲಿ ಋತುಚಕ್ರದ ಅವಧಿಯಲ್ಲಿ ಪರಿಣಾಮಕಾರಿ ನಿರ್ವಹಣೆಯೂ ಪ್ರಮುಖ ಕಾರಣವಾಗಿದೆ. ಋತುಚಕ್ರದ ಅವಧಿಯಲ್ಲಿ ಯಾವ ರೀತಿ ನಿರ್ವಹಣೆ ಮಾಡದೇ ಇರುವುದು ಎಂಬ ಅಂಶ ತಿಳಿಯದ ಹಿನ್ನಲೆ ರಕ್ತಹೀನತೆ ಸಮಸ್ಯೆ ಉದ್ಬವಿಸುತ್ತದೆ ಎಂದು ಡಾ ಥೆರೆಸಾ ತಿಳಿಸಿದ್ದಾರೆ.

ರಕ್ತಹೀನತೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾರಣ ಇದು ದುರ್ಬಲತೆ ಮತ್ತು ಆಯಾಸದೊಂದಿಗೆ ಸಂಬಂಧ ಹೊಂದಿದೆ. ಉಪ ಸಹರನ್​ ಮತ್ತು ದಕ್ಷಿಣ ಏಷ್ಯಾದಲ್ಲಿ ಪ್ರಸ್ತುತ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ. ಉಪ ಸಹಾರನ್​ ಆಫ್ರಿಕಾದಲ್ಲಿ ಶೇ 47.4ರಷ್ಟು, ದಕ್ಷಿಣ ಏಷ್ಯಾದಲ್ಲಿ 35.7ರಷ್ಟು ಮತ್ತು ಕೇಂದ್ರ ಉಪ ಸಹಾರನ್​ ಆಫ್ರಿಕಾದಲ್ಲಿ ಶೇ 35.7ರಷ್ಟು ರಕ್ತ ಹೀನತೆ ಪ್ರಕರಣಗಳಿವೆ.

ಇದನ್ನೂ ಓದಿ: Lung cancer: ಭಾರತದಲ್ಲಿ ಸಾವಿನ ದರ ಹೆಚ್ಚಿಸುತ್ತಿದೆ ಶ್ವಾಸಕೋಶದ ಕ್ಯಾನ್ಸರ್​: ಆರಂಭದಲ್ಲೇ ಮಾಡಬೇಕಿದೆ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.