ರಕ್ಷಾ ಬಂಧನ (Raksha Bandhan) : ಅಣ್ಣ ತಂಗಿಯ ಪ್ರೀತಿಯ ಸಂಕೇತವಾದ ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ವರ್ಷ ಶ್ರಾವಣ ಮಾಸದ ಹುಣ್ಣಿಮೆಯು ಆಗಸ್ಟ್ 30 ಮತ್ತು 31 ರಂದು ಬಂದಿದ್ದು, ರಕ್ಷಾಬಂಧನ 2023 ರ ಹಬ್ಬವನ್ನು ಯಾವಾಗ ಆಚರಿಸಬೇಕು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಹಾಗಾಗಿ, ರಾಖಿ ಕಟ್ಟಲು ಶುಭ ಮುಹೂರ್ತ ಯಾವುದು ಎಂಬ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಆಗಸ್ಟ್ 30 ರಂದು ಬೆಳಗ್ಗೆ 10:58 ಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತಿದೆ. ಅದರೊಂದಿಗೆ ಭದ್ರಾಕಾಲದ ಉಪಸ್ಥಿತಿ ಇರಲಿದೆ. ಆದ್ದರಿಂದ ಭದ್ರಕಾಲದಲ್ಲಿ ರಾಖಿ ಕಟ್ಟುವುದು ಶುಭವಲ್ಲ. 2023 ರ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 30 ರ ರಾತ್ರಿ ಆಚರಿಸುವುದು ಸೂಕ್ತ ಮತ್ತು ಶಾಸ್ತ್ರಬದ್ಧವಾಗಿರುತ್ತದೆ. ಏಕೆಂದರೆ, ಆಗಸ್ಟ್ 31 ರಂದು ಸಹ ಉದಯ ಪೂರ್ಣಿಮಾ ತಿಥಿ ಇದೆ. ಪೂರ್ಣಿಮಾ ತಿಥಿಯ ಕೊರತೆಯಿಂದಾಗಿ ಆಗಸ್ಟ್ 31 ರಂದು ರಕ್ಷಾ ಬಂಧನವನ್ನು ಆಚರಿಸುವುದು ಸೂಕ್ತವಲ್ಲ. ಜ್ಯೋತಿಷಿಗಳ ಪ್ರಕಾರ, ಈ ವರ್ಷದ ರಕ್ಷಾ ಬಂಧನದ ಶುಭ ಮುಹೂರ್ತವು 30 ರಂದು ರಾತ್ರಿ 09:01 ರಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 31ರ ಗುರುವಾರ ಬೆಳಗ್ಗೆ 7:46 ರ ವರೆಗೆ ರಾಖಿ ಕಟ್ಟಲು ಶುಭ ಸಮಯವಾಗಿರುತ್ತದೆ.
ಇದನ್ನೂ ಓದಿ : ಶಾಲಾ ಮಕ್ಕಳ ರಕ್ಷಾ ಬಂಧನ ತೆಗೆಸಿದ ಶಿಕ್ಷಕಿ : ಪೋಷಕರ ತರಾಟೆ, ನಂತರ ಕ್ಷಮೆಯಾಚನೆ
ಎಲ್ಲಾ ಸಹೋದರಿಯರು ತಮ್ಮ ಸಹೋದರನಿಗೆ ರಾಶಿಚಕ್ರದ ಪ್ರಕಾರ ಯಾವ ಯಾವ ಬಣ್ಣದ ರಾಖಿ ಕಟ್ಟಬೇಕೆಂದು ತಿಳಿಯೋಣ ಬನ್ನಿ:
- ಮೇಷ ರಾಶಿಯವರು ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟಬೇಕು.
- ವೃಷಭ ರಾಶಿಯ ಜನರು ತಿಳಿ ಬಿಳಿ, ಹಸಿರು ಬಣ್ಣದ ರಾಖಿಯನ್ನು ಕಟ್ಟಬೇಕು.
- ಮಿಥುನ ರಾಶಿಯವರು ಹಸಿರು ಅಥವಾ ಬಿಳಿ ಪ್ರಕಾಶಮಾನವಾದ ರಾಖಿಯನ್ನು ಕಟ್ಟಬೇಕು.
- ಕರ್ಕಾಟಕ ರಾಶಿಯವರು ಹಳದಿ ಅಥವಾ ಬಿಳಿ ಬಣ್ಣದ ರಾಖಿಯನ್ನು ಕಟ್ಟಬೇಕು.
- ಸಿಂಹ ರಾಶಿಯ ಜನ ಕೆಂಪು, ಕೇಸರಿ ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟಬೇಕು.
- ಕನ್ಯಾ ರಾಶಿಯವರು ಹಸಿರು ಅಥವಾ ಬಿಳಿ ಪ್ರಕಾಶಮಾನವಾದ ರಾಖಿಯನ್ನು ಕಟ್ಟಬೇಕು.
- ತುಲಾ ರಾಶಿಯ ಜನರು ಪ್ರಕಾಶಮಾನವಾದ ಬಿಳಿ ರಾಖಿ, ನೀಲಿ ಅಥವಾ ನೇರಳೆ ಬಣ್ಣದ ರಾಖಿಗಳನ್ನು ಕಟ್ಟಬೇಕು.
- ವೃಶ್ಚಿಕ ರಾಶಿಯ ಜನರು ತಮ್ಮ ಮಣಿಕಟ್ಟಿನ ಮೇಲೆ ಕೆಂಪು, ಕೇಸರಿ ಅಥವಾ ಬಿಳಿ ಬಣ್ಣದ ರಾಖಿಯನ್ನು ಕಟ್ಟಿಕೊಳ್ಳಬೇಕು.
- ಧನು ರಾಶಿಯವರಿಗೆ ಹಳದಿ ಬಣ್ಣದ ರಾಖಿ, ಕೆಂಪು ಅಥವಾ ಕೇಸರಿ ಬಣ್ಣದ ರಾಖಿ ಕಟ್ಟಬಹುದು.
- ಮಕರ ರಾಶಿಯ ಜನರು ನೇರಳೆ ಬಣ್ಣ ಅಥವಾ ಬಿಳಿ ಪ್ರಕಾಶಮಾನವಾದ ರಾಖಿಯನ್ನು ಕಟ್ಟಬೇಕು.
- ಕುಂಭ ರಾಶಿಯ ಜನರು ನೀಲಿ ಅಥವಾ ನೇರಳೆ ಬಣ್ಣದ ರಾಖಿಯನ್ನು ಕಟ್ಟಬಹುದು.
- ಮೀನ ರಾಶಿಯವರು ಹಳದಿ, ಕೆಂಪು ಅಥವಾ ಕೇಸರಿ ಬಣ್ಣದ ರಾಖಿ ಕಟ್ಟಬಹುದು.
ಇದನ್ನೂ ಓದಿ : 'ಚಂದಮಾಮಾ'ಗೆ ರಕ್ಷಾ ಬಂಧನದ ಶುಭಾಶಯಗಳು : ಮರಳು ಕಲೆಯಲ್ಲಿ ಅರಳಿದ ಭೂಮಿ, ಚಂದ್ರ, ರಾಖಿ ಕಲಾಕೃತಿ