ETV Bharat / sukhibhava

ಪಿಸಿಒಎಸ್​ ಹೊಂದಿರುವ ಮಹಿಳೆಯರಲ್ಲಿ ​ಫಲವತ್ತತೆ ಹೆಚ್ಚಿಸುತ್ತದೆ ಕಿಟೋ ಡಯಟ್; ಅಧ್ಯಯನ

ಇದು ಫಲವತ್ತತೆ ಕೊರತೆಗೆ ಕಾರಣವಾಗುವ ಜೊತೆಗೆ ಮಧುಮೇಹ, ಸ್ಥೂಲಕಾಯ ಮತ್ತು ಇತರೆ ಚಯಾಪಚಯ ಆರೋಗ್ಯ ಸಮಸ್ಯೆಯನ್ನು ಅಭಿವೃದ್ಧಿಪಡಿಸುತ್ತದೆ.

Keto diet boosts fertility in women with PCOS

author img

By ETV Bharat Karnataka Team

Published : Sep 9, 2023, 12:45 PM IST

ಕೌಲಾಲಂಪುರ್​​: ಕಿಟೊಜೆನಿಕ್​ (ಕಿಟೋ) ಡಯಟ್​​ ತೂಕ ನಷ್ಟವನ್ನು ಮಾತ್ರವಲ್ಲ ಹಾರ್ಮೋನ್​ ಅಸಮಾತೋಲನ ನಿವಾರಣೆ ಮಾಡುವ ಜೊತೆಗೆ ಪಿಸಿಒಎಸ್​ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭ ಧರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಪಿಸಿಒಎಸ್​ ಅಂದರೆ ಪಾಲಿಸಿಸ್ಟಿಕ್​ ಒವರಿ ಸಿಂಡ್ರೋಮ್​ ಮಹಿಳೆಯರಲ್ಲಿ ಕಾಣುವ ಸಾಮಾನ್ಯ ಹಾರ್ಮೋನ್​ ಅಸಮಾತೋಲವಾಗಿದೆ. ಗರ್ಭ ಧರಿಸುವ ಸಮಯದಲ್ಲಿ ಈ ಸಮಸ್ಯೆಯಿಂದ ಶೇ 7-10 ಮಹಿಳೆಯರು ಪರಿಣಾಮ ಎದುರಿಸುತ್ತಾರೆ. ಇದು ಫಲವತ್ತತೆ ಕೊರತೆಗೆ ಕಾರಣವಾಗುವ ಜೊತೆಗೆ ಮಧುಮೇಹ, ಸ್ಥೂಲಕಾಯ ಮತ್ತು ಇತರೆ ಚಯಾಪಚಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಕಿಟೋ ಡಯಟ್​​ ಅಧಿಕ ಕೊಬ್ಬಿನ ಕಡಿಮೆ ಕಾರ್ಬೋಹೈಡ್ರೇಟ್​ ಡಯಟ್​ ಆಗಿದ್ದು, ಇದು ಮಹಿಳೆಯರ ಪಿಸಿಒಎಸ್​ ಮೇಲೆ ಭರವಸೆದಾಯಕ ಪರಿಣಾಮವನ್ನು ಬೀರುತ್ತದೆ. ಸಂಶೋಧಕರು ಪತ್ತೆ ಮಾಡಿದಂತೆ ಇದು ಮಹಿಳೆಯರ ತೂಕ ನಷ್ಟದ ಜೊತೆಗೆ ಫಲವತ್ತತೆಯ ಅಭಿವೃದ್ಧಿ ಮಾಡಲು ಕೊಲೆಸ್ಟ್ರಾಲ್​ ಮಟ್ಟ ಸರಿದೂಗಿಸಲು ಮತ್ತು ಋತುಚಕ್ರವನ್ನು ಸಾಮಾನ್ಯವಾಗಿಸಲು ಸಹಾಯ ಮಾಡುತ್ತದೆ.

ಕಿಟೋಜೆನಿಕ್​ ಡಯಟ್​ ಮತ್ತು ಸಂತೋನೋತ್ಪತಿಯ ಹಾರ್ಮೋಮ್​ ಮಟ್ಟ ನಡುವಿನ ಸಂಬಂಧವು ಪಿಸಿಒಎಸ್​ ಮಹಿಳೆ ಮೇಲೆ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಮಲೇಷ್ಯಾದ ಕೌಲಾಲಂಪುರದ ಮಲೇಷ್ಯಾ ಆರೋಗ್ಯ ಸಚಿವರು ಖರ್ನಿಜಾ ಖಲಿದ್​ ತಿಳಿಸಿದ್ದಾರೆ.

ಈ ಫಲಿತಾಂಶಗಳು ಪ್ರಮುಖವಾದ ಪರಿಣಾಮವನ್ನು ಹೊಂದಿದೆ ವಿಶೇಷವಾಗಿ ಎಂಡೊಕ್ರಿನೊಲೊಜಿಸ್ಟ್ಸ್​, ಗೈನಾಕಾಲಜಿಸ್ಟ್​​ ಮತ್ತು ಡಯಟಿಷಿಯನ್​ಗಳು ತಮ್ಮ ವೈದ್ಯಕೀಯ ಚಿಕಿತ್ಸೆಯಲ್ಲಿ ಇದನ್ನು ಸೇರಿಸಬಹುದಾಗಿದೆ. ಆದರೆ ಇದಕ್ಕೆ ಎಚ್ಚರಿಕೆಯಿಂದ ನಿಯಮ ರೂಪಿಸಬೇಕಿದೆ. ಮಹಿಳೆಯ ಪಿಸಿಒಎಸ್​ ಅನುಸಾರವಾಗ ವೈಯಕ್ತಿಕ ಆಹಾರ ಶಿಫಾರಸುಗಳನ್ನು ಕಸ್ಟಮೈಸ್ ಮಾಡಬೇಕಿದೆ ಎಂದು ಕಲೀದ್​ ತಿಳಿಸಿದ್ದಾರೆ.

ಮಹಿಳೆಯ ಪಿಸಿಒಎಸ್ ಟೆಸ್ಟೊಸ್ಟ್ರೊನ್​ ಮತ್ತು ಇತರೆ ಆ್ಯಂಡ್ರೊಜೆನ್​ ಹಾರ್ಮೋನ್​ ಮಟ್ಟವನ್ನು ಹೆಚ್ಚು ಹೊಂದಿರುತ್ತಾರೆ. ಇವರಲ್ಲಿ ಸಂತೋನೋತ್ಪತ್ತಿ ಸಮಸ್ಯೆ ಅಥವಾ ಅನಿಮತ ಋತುಚಕ್ರ ಅಥವಾ ದೊಡ್ಡ ಅಂಡಾಶಯ ಹೊಂದಿರುವ ಕಿರುಚೀಲಗಳನ್ನು ಹೊಂದಿರುತ್ತಾರೆ.

ಈ ಅಧ್ಯಯನವನ್ನು ಜರ್ನಲ್​ ಆಫ್​ ದಿ ಎಂಡೋಕ್ರೈನ್​ ಸೊಸೈಟಿಯಲ್ಲಿ ಪ್ರಕಟಿಸಲಾಗಿದೆ. ಮಹಿಳೆಯರಲ್ಲಿನ ಪಿಸಿಒಎಸ್​ ಮತ್ತು ಕಿಟೋ ಡಯಟ್​ಗಳ ದೀರ್ಘ ವಿಶ್ಲೇಷಣೆಯಲ್ಲಿ ಕ್ಲಿನಿಕಲ್​ ಟ್ರಯಲ್​ ನಡೆಸಲಾಗಿದ್ದು ಇದು ಸಂತಾನೋತ್ಪತ್ತಿ ಹಾರ್ಮೋನ್​ ಮತ್ತು ತೂಕ ಬದಲಾವಣೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಪರೀಕ್ಷೆ ನಡೆಸಲಾಗಿದೆ.

ಪಿಸಿಒಎಸ್​ ಮಹಿಳೆಯರು ಕೆಟೋ ಡಯಟ್​ ಕನಿಷ್ಠ 45 ದಿನಗಳ ಕಾಲ ಹೊಂದಿರುವವರಲ್ಲಿ ಗಮನಾರ್ಹ ತೂಕ ನಷ್ಟವನ್ನು ಹೊಂದಿದರು. ಜೊತೆಗೆ ಅವರ ಸಂತಾನೋತ್ಪತ್ತಿ ಹಾರ್ಮೋನ್​ಗಳು ಕೂಡ ಸುಧಾರಣೆ ಕಂಡಿದೆ. (ಐಎಎನ್​ಎಸ್​)

ಇದನ್ನೂ ಓದಿ: ದತ್ತಾಂಶ ಕಾಳಜಿ; ಮಹಿಳೆಯರ ಋತುಚಕ್ರ ಮತ್ತು ಫಲವತ್ತತೆ ಪತ್ತೆ ಆ್ಯಪ್​ಗಳ ಸುರಕ್ಷೆ ಬಗ್ಗೆ ಪರಿಶೀಲಿಸಿದ ಯುಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.