ಹೈದರಾಬಾದ್: ಹೈದರಾಬಾದ್ನ ಬಾಲಕ ತಮ್ಮ ಜೊತೆ ಓದುತ್ತಿದ್ದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಘಟನೆ ತನಿಖೆ ವೇಳೆ ಆತನ ಈ ಕೃತ್ಯಕ್ಕೆ ಕಾರಣ ತನ್ನ ತಂದೆ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಬಾಲಕ ಪ್ರೇರಿತನಾಗಿದ್ದ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬಹಿರಂಗವಾಗಿತ್ತು.
ನಿರ್ಮಾಲ್ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಾಂಜಾ ಸೇವಿಸುತ್ತಿರುವುದನ್ನು ಶಿಕ್ಷಕರು ಪತ್ತೆ ಮಾಡಿದ್ದರು. ದಕ್ಷಿಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಹುಕ್ಕಾ ಸೇವಿಸಿ ಸಿಕ್ಕಿಬಿದ್ದಿರುವ ಘಟನೆ ಮಕ್ಕಳಲ್ಲಿರುವ ವಿಪರೀತ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಎಲ್ಲ ವಿದ್ಯಾರ್ಥಿಗಳಿಗೆ ಗಾಂಧಿ ಚಿತ್ರ ತೋರಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ಮೊಬೈಲ್ ಹಿಡಿದು ಥಿಯೇಟರ್ನಲ್ಲಿ ದೊಂಬಿ ಮಾಡಿ, ಶಿಕ್ಷಕರ ಮೇಲೆ ತಿರುಗಿ ಬೀಳುವಂಥ ದೌರ್ಜನ್ಯ ನಡೆಸಿದ್ದರು. ಇದು ಶಿಕ್ಷಕರು ಮತ್ತು ಹಿರಿಯರ ಬಗ್ಗೆ ಗೌರವ ಹೊಂದಿರದ ಮಕ್ಕಳ ಮನಸ್ಥಿತಿಯನ್ನು ಇದು ತೋರಿಸುತ್ತದೆ.
ಸೆಲ್ಫೋನ್ ಸುತ್ತವೇ ಈಗಿನ ಜೀವನ: ಚಿಕ್ಕವರಿರಲೀ ಅಥವಾ ದೊಡ್ಡವರು ಇರಲೀ ಪ್ರತಿಯೊಬ್ಬರ ಜೀವನವೂ ಸೆಲ್ ಫೋನ್ ಸುತ್ತ ಸುತ್ತುವರೆದಿದ್ದು, ಇದಕ್ಕೆ ಗಂಟೆಗಟ್ಟಲೇ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಮೊಬೈಲ್ಗೆ ವಿದ್ಯಾರ್ಥಿಗಳ ಆಪ್ತರೆ ದಿನ ಕಳೆದಂತೆ ಹೆಚ್ಚುತ್ತ ಹೋಗಿತ್ತದೆ. ಕಾಣದ ರೀತಿಯಲ್ಲಿ ಅನೇಕ ಅಪಾಯಗಳಿಗೆ ಅವರು ತುತ್ತಾಗುತ್ತಾರೆ.
ಕೋವಿಡ್ ಸಮಯದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಕೈಗೆ ಮೊಬೈಲ್ಗಳು ಬಂದವು. ಅದು ಈಗ ಸಾಂಕ್ರಾಮಿಕ ರೋಗ ಎಂಬಂತೆ ಹಬ್ಬುತ್ತಲೇ ಸಾಗುತ್ತಿದೆ. ಉತ್ತಮ ಉದ್ದೇಶಕ್ಕಾಗಿ ನೀಡಿದ ಮೊಬೈಲ್ಗಳು ಈಗ ಮಕ್ಕಳು ಕೆಟ್ಟ ಅಭ್ಯಾಸಕ್ಕೆ ಬೀಳುವಂತೆ ಮಾಡಿದೆ. ಪೋಷಕರು ಅಥವಾ ಕುಟುಂಬ ಸದಸ್ಯರು ಆರಂಭದಲ್ಲೇ ಈ ಬಗ್ಗೆ ಗಮನ ಹರಿಸದಿದ್ದಲಿ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಕ್ಕಳ ಜೀವನ ಹಾಳು ಮಾಡುತ್ತಿದೆ ಯಾಂತ್ರಿಕ ಜಗತ್ತು: ಸಿನಿಮಾ ಮತ್ತು ಟಿವಿಗಳಲ್ಲಿ ಬರುವ ಕಾಲ್ಪನಿಕ ಹಿರೋಯಿಕ್ ಸೀನ್ಗಳು ಇದ್ದೇ ಇರುತ್ತವೆ. ಇವುಗಳ ಬಗ್ಗೆ ನೀವು ಆಕರ್ಷಿತರಾದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಆಘಾತ ಎದುರಿಸಬೇಕಾಗುತ್ತದೆ. ಇತ್ತೀಚೆನ ದಿನಗಳಲ್ಲಿ ಯುವ ಜನತೆ ತಮ್ಮ ನೆಚ್ಚಿನ ನಟ ಮತ್ತು ನಟಿಯರ ಪಾತ್ರಗಳ ಅನುಕರಣೆ ಮಾಡುತ್ತಾರೆ. ಜೊತೆಗೆ ಅದನ್ನು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕುತ್ತಾರೆ. ಕನಿಷ್ಠ ಎಂದರೂ ನಾಲ್ಕು ಮತ್ತು ಐದು ಗಂಟೆಗಳ ಕಾಲ ಫೋನ್ನಲ್ಲಿ ಕಾಲ ಕಳೆಯುತ್ತಾರೆ.
ಇದರಿಂದಾಗಿ ಅವರು ಪುಸ್ತಕ ಓದಲು ಯಾವುದೇ ಸಮಯ ನೀಡುವುದಿಲ್ಲ. ಅಲ್ಲದೇ, ಅವರು ತಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕೂಡ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿಧಾನವಾಗಿ ಅವರು ಒತ್ತಡದಿಂದಾಗಿ ಯಾಂತ್ರಿಕ ಬದುಕು ಜೀವಿಸಲು ಆರಂಭಿಸುತ್ತಾರೆ.
ದೈನಂದಿನ ತರಬೇತಿ ಅಗತ್ಯ: ಈ ಹಿಂದೆ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ವಿದ್ಯಾರ್ಥಿಗಳನ್ನು ಉತ್ತಮವಾಗಿ ರೂಪಿಸುವ ಸಲುವಾಗಿ ಸಣ್ಣ- ಪುಟ್ಟ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಪೋಷಕರು ಕೂಡ ಶಿಕ್ಷಕರಿಗೆ ಕೊಂಚ ಗದವರಿಸುವಂತೆ ಹೇಳುತ್ತಿದ್ದರು. ಆದರೆ, ಈಗ ಇದು ಸಾಧ್ಯವಿಲ್ಲ. ಮಕ್ಕಳಲ್ಲಿ ಬದಲಾವಣೆ ತರುವುದು ದೊಡ್ಡ ಸವಾಲು ಆಗಿದೆ.
ಕೊಂಚ ಧ್ವನಿ ಏರಿಸಿ ಮಾತನಾಡಿದರೂ ಪಂಚಾಯಿತಿ ಏರ್ಪಡುತ್ತದೆ. ಅಧಿಕವಾಗಿ ಮೊಬೈಲ್ ಬಳಕೆಯಿಂದಾಗಿ ಸುಲಭವಾಗಿ ಸಿಗರೇಟ್, ಗಾಂಜಾ ಮಧ್ಯಪಾನದಂತಹ ಚಟಕ್ಕೆ ಬಲಿಯಾಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮಾತಿನ ಮೂಲಕ ಬದಲಾವಣೆ ಮಾಡುವುದು ಅಸಾಧ್ಯವಾಗಿದೆ ಎನ್ನುತ್ತಾರೆ ಅನೇಕ ಶಿಕ್ಷಕರು
ಎಚ್ಚರಿಕೆ ಕರೆಗಂಟೆ: ಮಹಾರಾಷ್ಟ್ರದ ವಡ್ಗಾಮ್ ಗ್ರಾಮದ ಸಂಗ್ಲಿ ಗ್ರಾಮದಲ್ಲಿ ಪ್ರತಿ ರಾತ್ರಿ 7ಕ್ಕೆ ಸೈರನ್ ಕೂಗಲಾಗುವುದು. ಈ ಸದ್ದು ಕೇಳಿ ದಾಕ್ಷಣ ಇಡೀ ಗ್ರಾಮದ ಡಿಜಿಟಲ್ ಡಿಟಾಕ್ಸ್ ಮಾಡಲಾಗುವುದು. ಈ ವೇಳೆ ಗ್ರಾಮದ ಎಲ್ಲರೂು ಒಂದೂವರೆ ಗಂಟೆಗಳ ಕಾಲ ಕಂಪ್ಯೂಟರ್, ಫೋನ್, ಟಿವಿ ಮತ್ತಿತ್ತರ ಡಿಜಿಟಲ್ ಉಪಕರಣ ಬಳಕೆ ಮಾಡುವುದಿಲ್ಲ. ಈ ರೀತಿಯ ಡಿಜಿಟಲ್ ಉಪಕರಣ ಬಳಕೆ ಮಾಡದಿರುವುದು ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾಗುತ್ತದೆ.
ನಮ್ಮ ಗ್ರಾಮದಲ್ಲಿ ಈ ರೀತಿ ಈಗ ಸೈರನ್ ಕೂಗುವುದು ಅಸಾಧ್ಯವಾಗಬಹುದು. ಆದರೆ, ಈ ನಿಯಮಗಳ ಪಾಲನೆ ಅಸಾಧ್ಯವಲ್ಲ. ಮೊದಲಿಗೆ ಇದು ಕಷ್ಟ ಆದರೂ, ಪ್ರಾಕ್ಟಿಸ್ ಮೂಲಕ ಉತ್ತಮ ಫಲಿತಾಂಶ ಪಡೆಯಬಹುದು ಅಂತಾರೆ ಅಲ್ಲಿನ ಗ್ರಾಮಸ್ಥರು.
ಮಕ್ಕಳ ಸ್ನೇಹಿ ಪೋಷಕರು: ಜಂಕ್ ಆಹಾರಗಳನ್ನು ಕೊಡಿಸಿದ ಮಾತ್ರಕ್ಕೆ ಮಕ್ಕಳ ಮೇಲೆ ಪ್ರೀತಿ ಇದೆ ಎಂದು ಅಲ್ಲ. ಅದನ್ನು ಹೇಗೆ ಬಳಕೆ ಮಾಡಬೇಕು ಎಂಬುದು ತಿಳಿಸಬೇಕು. ಫೋನ್ಗಳನ್ನು ಪೋಷಕರ ಸಮ್ಮತಿ ಇಲ್ಲದಂತೆ ಬಳಕೆ ಮಾಡದಂತೆ ಎತ್ತಿಡಬೇಕಿದೆ. ಮಕ್ಕಳು ಏನೇ ಮಾಡಿದರೂ ಅದನ್ನು ಗಮನಿಸಿ, ಪ್ರಶ್ನಿಸಿ, ಶಿಕ್ಷಿಸಬೇಕು. ಪೋಷಕರು ಶಿಸ್ತಿನಿಂದ ಇರಬೇಕು ಎಂಬುದನ್ನು ಮರೆಯಬಾರದು. ಇದರ ಜೊತೆಗೆ ಮೌಲ್ಯ ಕಲಿಸಬೇಕು. ಮಕ್ಕಳ ಸ್ನೇಹಿ ವಾತವಾರಣವನ್ನು ನಾವು ಸೃಷ್ಟಿಸಿ, ಅವರಿಗೆ ತಿಳಿ ಹೇಳಬೇಕು ಎನ್ನುತ್ತಾರೆ ಪರ್ಸನಾಲಿಟಿ ಡೆವಲಪ್ಮೆಂಟ್ ಸ್ಪೆಶಲಿಸ್ಟ್ ಡಾ ಕವಿತಾ ಅಜಯ್
ನೈತಿಕ ಮೌಲ್ಯ ತಿಳಿಸಲು ಬೇಕು ಪ್ರತ್ಯೇಕ ತರಗತಿ: ಶಾಲೆಗಳಲ್ಲಿ ಮಕ್ಕಳಿಗೆ ನೈತಿಕ ಪಾಠ ಹೇಳಲು ಪ್ರತ್ಯೇಕ ತರಗತ ನಡೆಸಬೇಕು. ಅಗತ್ಯ ಇದ್ದರೆ, ನಾಯಕತ್ವದ ಅಡಿ ವ್ಯಕ್ತಿತ್ವ ನಿರ್ಮಾಣಕ್ಕೆ ಅರಿವು ಮೂಡಿಸಬೇಕು. ಉತ್ತಮ ಪ್ರಜೆಗಳಾಗಲು ಅವರಿಗೆ ಒಳ್ಳೆಯದ್ದು ಮತ್ತು ಕೆಟ್ಟದ್ದರ ಕುರಿತು ತಿಳಿಸಬೇಕು. ಶಿಕ್ಷಣ ಇಲಾಖೆ ಮತ್ತು ಪೋಷಕರು ಕ್ರಮಕ್ಕೆ ಮುಂದಾದರೆ ಮಕ್ಕಳಲ್ಲಿ ಬದಲಾವಣೆ ಸಾಧ್ಯ ಎನ್ನುತ್ತಾರೆ ಶಿಕ್ಷಕರಾದ ಶ್ರೀನಿವಾಸ್.
ಇದನ್ನೂ ಓದಿ: ಮಕ್ಕಳಲ್ಲಿ ದೀರ್ಘಕಾಲದ ಕೋವಿಡ್ ಲಕ್ಷಣಗಳು ಕಾಲಾಂತರದಲ್ಲಿ ಬದಲು: ಅಧ್ಯಯನ