ನವದೆಹಲಿ: ಗಂಡಂದಿರ ಯೋಗಕ್ಷೇಮ ಬಯಸುವ ಈ ಹಬ್ಬವು ತನ್ನದೇ ಆದ ಹಿನ್ನೆಲೆ ಹೊಂದಿದೆ. ಯುದ್ಧಕ್ಕೆಂದು ಹೋದ ಗಂಡ ಸುರಕ್ಷಿತವಾಗಿ ಮರಳಿ ಮನೆಗೆ ಬಂದಾಗ, ಯುದ್ಧದ ನೋವುಗಳನ್ನು ಮರೆಯಲೆಂಬ ಉದ್ದೇಶದಿಂದ ಹೆಂಡತಿಯು ಉತ್ತಮ ಭಕ್ಷ್ಯಭೋಜನ ತಯಾರಿಸಿ, ರಾಣಿಯಂತೆ ಅಲಂಕೃತಗೊಂಡು ಬೇರೆ ಹೆಂಗಳೆಯರ ಜೊತೆ ಸೇರಿಕೊಂಡು ಆಚರಣೆ ಮಾಡುವ ಹಬ್ಬ ಇದಾಗಿದೆ ಎನ್ನಲಾಗ್ತಿದೆ.
ಈ ಹಬ್ಬದ ಇಡೀ ದಿನ ಮಹಿಳೆಯರು ಉಪವಾಸ ಇರುತ್ತಾರೆ. ನಂತರ, ಕರ್ವಾ ಚೌತ್ ಉಪವಾಸವನ್ನು ಕೆಲವು ಟೇಸ್ಟಿ ಮತ್ತು ರುಚಿಕರವಾದ ಭಕ್ಷ್ಯಗಳೊಂದಿಗೆ ಕೊನೆಗೊಳಿಸುತ್ತಾರೆ. ಅಂತಹವರಿಗಾಗಿ ಇಲ್ಲಿವೆ ಕೆಲವು ಸುಲಭಕರವಾಗಿ ತಯಾರಿಸಬಹುದಾದ ಭಕ್ಷ್ಯಗಳು.
ಸೇವಿಯಾನ್: ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳೆಂದರೇ, ವರ್ಮಿಸೆಲ್ಲಿ, ಕ್ರೀಮ್ ಮಿಲ್ಕ್, ಪಿಸ್ತಾ, ಬಾದಾಮಿ, ದೇಸಿ ತುಪ್ಪ, ಖೋಯಾ, ಹಸಿರು ಏಲಕ್ಕಿ ಪುಡಿ.
ಇದನ್ನು ಮಾಡುವ ವಿಧಾನ: ಒಂದು ಪಾತ್ರೆಗೆ ಮೊದಲು ತುಪ್ಪ ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೆ ಹುರಿಯಿರಿ. ನಂತರ ಇದನ್ನು ತೆಗೆದು ಬೇರೆ ಪಾತ್ರೆಗೆ ಹಾಕಿಕೊಳ್ಳಿ. ಬಾಣಲೆಯಲ್ಲಿ ಹಾಲು ಕುದಿಸಿ, ನಂತರ ಕತ್ತರಿಸಿದ ಬಾದಾಮಿ, ಪಿಸ್ತಾ ಸೇರಿಸಿ. 2-3 ನಿಮಿಷ ಬೇಯಿಸಿ, ಬಳಿಕ ಸಕ್ಕರೆ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಕುದಿಸಿ. ಖೋಯಾ ತುರಿದು ಹಾಲಿಗೆ ಸೇರಿಸಿ. ಮಿಶ್ರಣವು ದಪ್ಪವಾಗುವವರೆಗೆ ಬೇಯಿಸಿ. ಶ್ಯಾವಿಗೆ ಸೇರಿಸಿದ ನಂತರ 5 ನಿಮಿಷ ಬೇಯಿಸಿ. ಪುಡಿಮಾಡಿದ ಏಲಕ್ಕಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನಟ್ಸ್ಗಳಿಂದ ಅಲಂಕರಿಸಿ, ಸಣ್ಣಗೆ ಮಾಡಿಕೊಂಡು ಅಥವಾ ಬಿಸಿಯಾಗಿ ಇದನ್ನು ನೀವು ಸವಿಯಬಹುದಾಗಿದೆ.
ಬಾದಾಮಿ ರೋಸ್ ರಾಬ್ಡಿ: ಇದನ್ನು ಮಾಡಲು ಬೇಕಾಗುವ ಪದಾರ್ಥಗಳೆಂದರೇ, ಬಾದಾಮಿ (ಸಿಪ್ಪೆ ತೆಗೆದಿರುವುದು), ಹಾಲು, ಸಕ್ಕರೆ, ಪಿಸ್ತಾ, ಏಲಕ್ಕಿ ಪುಡಿ.
ಮಾಡುವ ವಿಧಾನ: ಪ್ಯಾನ್ ಅನ್ನು ಬಿಸಿ ಮಾಡಿ, ಹಾಲು ಹಾಕಿ ಕುದಿಸಿ. ಬಳಿಕ ಶಾಖವನ್ನು ಕಡಿಮೆ ಮಾಡಿ, ಕೇಸರಿ ಎಳೆಗಳನ್ನು ಹಾಲಿಗೆ ಸೇರಿಸಿ. ಕಡಿಮೆ ಫ್ಲೇಮ್ನಲ್ಲಿ 5 ನಿಮಿಷ ಬೇಯಲು ಬಿಡಿ. ಈಗ ಅದಕ್ಕೆ ಬಾದಾಮಿ, ಖೋಯಾ ಮತ್ತು ಸಕ್ಕರೆ ಸೇರಿಸಿ. ನಂತರ ಚೆನ್ನಾಗಿ ಮಿಶ್ರಣ ಮಾಡಿ, 3 ನಿಮಿಷ ಬೇಯಿಸಿ. ಪಿಸ್ತಾ, ಏಲಕ್ಕಿ ಪುಡಿ ಸೇರಿಸಿ, 2 ನಿಮಿಷ ಬೇಯಿಸಿ. ಒಲೆಯಿಂದ ಅದನ್ನು ಇಳಿಸಿ, ರೋಸ್ ವಾಟರ್ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಸ್ವಲ್ಪ ತಣ್ಣಗಾಗಲು ಬಿಡಿ. ಕತ್ತರಿಸಿದ ಪಿಸ್ತಾ, ಹಣ್ಣುಗಳು ಅಥವಾ ಒಣಗಿದ ಗುಲಾಬಿ ದಳಗಳಿಂದ ಅಲಂಕರಿಸಿ.
ವರ್ಮಿಸೆಲ್ಲಿ ಖೀರ್: ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಇಂತಿವೆ, ವರ್ಮಿಸೆಲ್ಲಿ, ದೇಸಿ ತುಪ್ಪ, ಹಾಲು ಫುಲ್ ಕ್ರೀಮ್, ಬಾದಾಮಿ, ಸಕ್ಕರೆ, ಗೋಡಂಬಿ, ಏಲಕ್ಕಿ.
ವಿಧಾನ: ವೆರ್ಮಿಸೆಲ್ಲಿಯನ್ನು ತೊಳೆದು ಸಾಸ್ ಪ್ಯಾನ್‌ಗೆ ತುಪ್ಪದೊಂದಿಗೆ ಹಾಕಿ 2 ನಿಮಿಷಗಳ ಕಾಲ ಬೆರೆಸಿ. ಹಾಲು ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ಸುಮಾರು 1 ಗಂಟೆ ತನಕ ಕುದಿಸಿ. ಬಾದಾಮಿ ಮತ್ತು ಗೋಡಂಬಿ ಸೇರಿಸಿ. ಪುಡಿ ಮಾಡಿದ ಏಲಕ್ಕಿಯನ್ನು ಸಿಂಪಡಿಸಿ, ನಂತರ ನೀವು ಇದನ್ನು ಸೇವಿಸಬಹುದಾಗಿದೆ.
ಗುಲಾಬ್ ಲಸ್ಸಿ: ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳೆಂದರೇ: ಸಾದಾ ಮೊಸರು (ಮೊಸರು), ಸಕ್ಕರೆ, ನೀರು, ರೋಸ್ ವಾಟರ್ ಮತ್ತು ಗುಲಾಬಿ ದಳಗಳು.
ವಿಧಾನ: ದೊಡ್ಡ ಬಟ್ಟಲಿಗೆ ಸಾದಾ ಮೊಸರು ಹಾಕಿ, ನಂತರ ಚೆನ್ನಾಗಿ ಮಿಶ್ರಣ ಮಾಡಿ. ಮೊಸರಿನೊಂದಿಗೆ ಸಕ್ಕರೆ ಮಿಶ್ರಣವಾಗಬೇಕು. ನಂತರ ಲಸ್ಸಿಗೆ ಸ್ವಲ್ಪ ತೆಳುವಾಗಲು ನೀರು ಸೇರಿಸಿ. ಗುಲಾಬಿ ನೀರು ಮತ್ತು ಕೆಲವು ಗುಲಾಬಿ ದಳಗಳ ಎಲೆಗಳನ್ನು ಹಾಕಿ. ತಣ್ಣಗಾಗಲು ಫ್ರಿಜ್‌ನಲ್ಲಿ ಇಟ್ಟು, ಬಳಿಕ ಗುಲಾಬಿ ದಳದಿಂದ ಅಲಂಕರಿಸಿ ನೀವು ಇದನ್ನು ಕುಡಿಯಬಹುದಾಗಿದೆ.