ETV Bharat / sukhibhava

ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗೆ ಇರಿಸಿಕೊಳ್ಳಲು ಈ ಸಿಂಪಲ್​ ಟಿಪ್ಸ್​ ಅನುಸರಿಸಿ ಸಾಕು - ಚಳಿಗೆ ಬೆಚ್ಚಗಿನ ಪಾನೀಯ

ಚಳಿಗಾಲದ ಕೊರೆಯುವ ವಾತಾವರಣದಿಂದ ಪಾರಾಗಲು ಆಹಾರ ಮಾತ್ರವಲ್ಲದೇ ದೈನಂದಿನ ಅಭ್ಯಾಸದಲ್ಲಿ ಈ ಬದಲಾವಣೆ ರೂಢಿಸಿಕೊಳ್ಳಿ

ಚಳಿಗಾಲದಲ್ಲಿ ನಿಮ್ಮನ್ನು ಬೆಚ್ಚಗೆ ಇರಿಸಿಕೊಳ್ಳಲು ಈ ಸಿಂಪಲ್​ ಟಿಪ್ಸ್​ ಅನುಸರಿಸಿ ಸಾಕು
just-follow-these-simple-tips-to-keep-yourself-warm-in-winter
author img

By

Published : Jan 31, 2023, 12:58 PM IST

ಹೈದರಾಬಾದ್​: ಹೊರಗೆ ಚಳಿ ನಡುವೆ ಮಳೆ ಬಂದರೆ, ವಾತಾವರಣ ಇನ್ನಷ್ಟು ಶೀತದಿಂದ ಕೊರೆಯುವಂತೆ ಆಗುವುದು ಸುಳ್ಳಲ್ಲ. ಇಂತಹ ಚಳಿಗೆ ಬೆಚ್ಚಗಿನ ಪಾನೀಯಗಳನ್ನು ಕುಡಿಯಲು ಮನಸ್ಸು ಕೇಳುತ್ತದೆ. ಈ ಋತುಮಾನದಲ್ಲಿ ಬಿಸಿ ಬಿಸಿ ಪಾನೀಯ ಹೀರುತ್ತಾ ಇಷ್ಟವಾದ ಪುಸ್ತಕದ ಓದುತ್ತ ಪುಟಗಳನ್ನು ತಿರುಗಿಸುವ ಮಜಾವೇ ಬೇರೆ. ಆದರೆ, ನೀವು ಕುಡಿಯುವ ಬಿಸಿ ಪಾನೀಯಗಳು ಮಾತ್ರವಲ್ಲದೇ ಕೆಲವು ಅಭ್ಯಾಸಗಳು ನಿಮಗೆ ಆರಾಮದಾಯದ ಜೊತೆ ಆರೋಗ್ಯಕ್ಕೂ ಉತ್ತಮವಾಗಿರಬೇಕು. ಚಳಿಗಾಲದ ಋತುಮಾನದ ವಿರುದ್ಧ ನಿಮ್ಮನ್ನು ಕಾಪಾಡುವಂತೆ ಇರಬೇಕು ಎಂಬುದು ಪ್ರಮುಖವಾದ ವಿಷಯ ಆಹಾರಗಳು ಪ್ರಮುಖವಾಗುತ್ತದೆ. ಕೆಮ್ಮು ಮತ್ತು ನೆಗಡಿಯಂತಹ ಸಮಸ್ಯೆಗಳಿಂದ ದೂರವಿರಲು ಚಳಿಗಾಲದ ಸಮಯದಲ್ಲಿ ಆರೋಗ್ಯಕರವಾಗಿರುವುದು ಅವಶ್ಯ. ಅದಕ್ಕಾಗಿ ಈ ಸಿಂಪಲ್​ ಟಿಪ್ಸ್​ ಅನುಸರಿಸಿ ಸಾಕು.

ಶುಂಠಿ ಚಹಾ
ಶುಂಠಿ ಚಹಾ

ಶುಂಠಿ ಚಹಾ: ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಟೀಗಳ ಶುಂಠಿ ಪ್ರಮುಖವಾದದ್ದು. ಅನೇಕ ಔಷಧಗಳ ಗುಣ ಹೊಂದಿರುವ ಶುಂಠಿ ಚಹಾ ದೇಹವನ್ನು ಬೆಚ್ಚಗಿರಿಸುವಲ್ಲಿ ಪ್ರಮುಖವಾಗಿತ್ತದೆ. ಶೀತ ಸಮಯದಲ್ಲಿ ಈ ಚಹಾ ಸೇವಿಸುತ್ತೀರಾ ಎಂದರೆ, ಇದರ ಜೊತೆಗೆ ಏಲಕ್ಕಿಯನ್ನು ಸೇರಿಸುವುದನ್ನು ಮರೆಯಬೇಡಿ. ಚಳಿಗಾಲದ ಸಮಯದಲ್ಲಿ ಬಿಸಿ ಕಾಫಿ ಅಥವಾ ಇನ್ನಿತರ ಬಿಸಿ ಪಾನೀಯವನ್ನು ಆಯ್ಕೆ ಮಾಡಬಹುದು. ಆದರೆ, ಶುಂಠಿ ಚಹಾದ ವಾಸನೆ ನಿಮ್ಮ ಮೂಡ್​ ಅನ್ನು ಉಲ್ಲಾಸಗೊಳಿಸುವ ಜೊತೆಗೆ ಅನೇಕ ಆರೋಗ್ಯಕರ ಲಾಭವನ್ನು ತಂದುಕೊಡುತ್ತದೆ.

ಬಿಸಿ ಸೂಪ್
ಬಿಸಿ ಸೂಪ್

ಬಿಸಿ ಸೂಪ್​: ಅನೇಕರಿಗೆ ಚಳಿ, ಶೀತ ಸಮಯದಲ್ಲಿ ಸೂಪು ಕುಡಿಯುವುದರಿಂದ ಹಿತ ಅನುಭವ ಆಗತ್ತದೆ. ಆದರೆ, ಕೆಲವು ಮಂದಿ ಇದನ್ನು ಇಷ್ಟ ಪಡುವುದಿಲ್ಲ. ಆದರೆ, ಈ ಋತುಮಾನದಲ್ಲಿ ಸೂಪ್​ ಅನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಟೊಮೇಟೊ, ಚಿಕನ್​ ಅಥವಾ ಇನ್ನಿತರ ಸೂಪ್​ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಶೀತದ ಸಮಯದಲ್ಲಿ ಉಂಟಾಗುವ ಗಂಟಲಿನ ಕಿರಿಕಿರಿಗೆ ಆರಾಮ ಉಂಟು ಮಾಡುತ್ತದೆ.

ಬಿಸಿ ಊಟ
ಬಿಸಿ ಊಟ

ಬಿಸಿ ಊಟ: ಚಳಿ ಸಮಯದಲ್ಲಿ ಪ್ರತಿಯೊಬ್ಬರು ಬಿಸಿ ಬಿಸಿ ಊಟ ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಮೊಟ್ಟೆ, ಬ್ರೆಡ್​ ಮತ್ತು ಗೋಧಿಯಂತಹ ಬಿಸಿ ಬಿಸಿ ಆಹಾರ ಸೇವನೆಯಿಂದ ದೇಹವನ್ನು ಬೆಚ್ಚಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಿಸಿ ಬಿಸಿ ಊಟ ಮಾಡುವುದವರಿಂದ ಚಳಿಗಾಲದಲ್ಲಿ ದೇಹವನ್ನು ಬಿಸಿಯಾಗಿಡಬಹುದಲ್ಲದೇ, ಅನಾರೋಗ್ಯದಿಂದಲೂ ದೂರ ಇಡಬಹುದು.

ಬೆಂಕಿ ಕಾಯಿಸುವುದು
ಬೆಂಕಿ ಕಾಯಿಸುವುದು

ಬೆಂಕಿ ಕಾಯಿಸುವುದು: ಚಳಿಗಾಲದ ಸಮಯದಲ್ಲಿ ಶೀತ ವಾತಾವರಣದಿಂದ ಪಾರಾಗಲು ರಸ್ತೆ ಬದಿ ಸೇರಿದಂತೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಒಣ ಮರದ ತುಂಡುಗಳನ್ನು ಬಳಸಿ ಮಾಡುವ ಈ ಬೋನ್​ಫೈರ್​ (ಬೆಂಕಿ ಉರಿಸುವುದು) ಮಾಡಬಹುದು. ಈ ಬಿಸಿ ಶಾಖ ಮೈಗೆ, ಮನಸ್ಸಿಗೂ ಆರಾಮ ನೀಡುತ್ತದೆ

ಬಿಸಿ ನೀರಿನ ಸ್ನಾನ
ಬಿಸಿ ನೀರಿನ ಸ್ನಾನ

ಬಿಸಿ ನೀರಿನ ಸ್ನಾನ: ಚಳಿಗಾಲದಲ್ಲಿ ಬಿಸಿ ನೀರಿಸ ಸ್ನಾನ ದೇಹಕ್ಕೆ ಮಾತ್ರವಲ್ಲದೇ ಮನಸ್ಸಿಗೂ ಮುದ ನೀಡುತ್ತದೆ. ಅತಿ ಬಿಸಿ ನೀರಿನ ಬಳಕೆ ಅಲ್ಲದಿದ್ದರೂ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು, ಕಾಲು ನೆನೆಸುವುದರಿಂದ ಆರೋಗ್ಯಕರ ಲಾಭ ಕೂಡ ಇದೆ. ಶೀತದಿಂದ ರಕ್ತ ಸಂಚಾರಕ್ಕೆ ಬಿಸಿ ನೀರು ಸಹಾಯ ಮಾಡುತ್ತದೆ.

ಇದನ್ನೂ ಓದಿ: ನಿಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕೇ: ಹಾಗಾದರೆ 5 ಆರೋಗ್ಯಕರ ಆಯುರ್ವೇದ​ ಪದಾರ್ಥಗಳನ್ನು ನೀವೂ ಟ್ರೈ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.