ಅನಿಶ್ಚಿತ ಅಥವಾ ಅಭದ್ರತೆಯ ಉದ್ಯೋಗ ಸ್ಥಿತಿಯು ಅವಧಿ ಪೂರ್ವ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಉದ್ಯೋಗ ಭದ್ರತೆ ಹೊಂದಿರುವವರಿಗೆ ಹೋಲಿಕೆ ಮಾಡಿದಾಗ ಸುರಕ್ಷಿತ ಉದ್ಯೋಗ ಹೊಂದಿರದ ಹಾಗೂ ಒತ್ತಡದಲ್ಲಿರುವವರು ಅಕಾಲಿಕ ಸಾವಿನ ಅಪಾಯವನ್ನು ಶೇ 20ರಷ್ಟು ಹೆಚ್ಚು ಹೊಂದಿರುತ್ತಾರೆ ಎಂದು ಕಂಡುಕೊಳ್ಳಲಾಗಿದೆ.
ಅನಿಶ್ಚತತೆ ಉದ್ಯೋಗ ಎಂದರೆ, ಕಡಿಮೆ ಅವಧಿಯ ಗುತ್ತಿಗೆ ಕೆಲಸ, ಕಡಿಮೆ ದಿನಗೂಲಿ ಮತ್ತು ಹಕ್ಕು ಮತ್ತು ಪ್ರೇರಣೆ ಕೊರತೆ ಎಂಬ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ಎಲ್ಲ ಅಂಶಗಳು ವ್ಯಕ್ತಿಯ ಮಾನಸಿಕ ಸ್ಥಿತಿ ಮತ್ತು ಬದುಕಿನ ಮೇಲೆ ಅಭದ್ರತೆಯ ಭಾವನೆಯನ್ನು ಸೃಷ್ಟಿಸುವಂತೆ ಮಾಡುತ್ತವೆ.
ಸ್ವೀಡನ್ನ ಕರೊಲಿನಸ್ಕಾ ಯುನಿವರ್ಸಿಟಿಯು ಈ ಬಗ್ಗೆ ಅಧ್ಯಯನ ನಡೆಸಿದೆ. ಇಲ್ಲಿನ ಸಂಶೋಧಕರು ನಡೆಸಿರುವ ಅಧ್ಯಯನವನ್ನು ದಿ ಜರ್ನಲ್ ಆಫ್ ಎಪಿಡೆಮಿಲೊಜಿ ಅಂಡ್ ಕಮ್ಯೂನಿಟಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನದಲ್ಲಿ ಉದ್ಯೋಗ ಭದ್ರತೆ ಸುಧಾರಣೆ ಕಾಣಬೇಕಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ.
ಅನಿಶ್ಚತತೆಯ ಉದ್ಯೋಗ ಪರಿಸ್ಥಿತಿಯನ್ನು ಭದ್ರತೆ ಉದ್ಯೋಗ ಪರಿಸ್ಥಿತಿಯಾಗಿ ಬದಲಾವಣೆ ಮಾಡುವ ಮೂಲಕ ಅಕಾಲಿಕ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಇಲ್ಲಿ ನಡೆಸಿದ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಮತ್ತು ಹೀಗೆ ನಡೆಸಿದ ಮೊದಲ ಅಧ್ಯಯನವೂ ಇದಾಗಿದೆ ಎಂದು ಕರೊಲಿನ್ಸಕಾ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಎನ್ವರಮೆಂಟಲ್ ಮೆಡಿಸಿನ್ನ ಅಸಿಸ್ಟೆಂಟ್ ಪ್ರೊ ಥಿಯೋ ಬೋಡಿನ್ ತಿಳಿಸಿದ್ದಾರೆ.
ಸುರಕ್ಷಿತ ಉದ್ಯೋಗ ಒಪ್ಪಂದ ಇಲ್ಲದೇ, ವ್ಯಕ್ತಿಯೊಬ್ಬ ಕೆಲಸ ನಿರ್ವಹಿಸುತ್ತಿದ್ದರೆ ಅವರು ಸಾವಿನ ಅಪಾಯ ಹೆಚ್ಚಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಸಂಶೋಧಕರು ಈ ಅಧ್ಯಯನಕ್ಕಾಗಿ ಸ್ವೀಡನ್ ನಲ್ಲಿ 2005ರಿಂದ 2017ರವರೆಗೆ ಕಾರ್ಯ ನಿರ್ವಹಿಸಿದ 20 ರಿಂದ 55 ವರ್ಷದ 2,50,000 ಜನರ ದತ್ತಾಂಶವನ್ನು ಬಳಕೆ ಮಾಡಿಕೊಂಡು ದತ್ತಾಂಶಗಳ ಮೂಲಕ ಈ ಅಧ್ಯಯನವನ್ನ ನಡೆಸಿದೆ.
ಅಧ್ಯಯನದಲ್ಲಿ ಉದ್ಯೋಗ ಅಭದ್ರತೆಯನ್ನು ಎದುರಿಸುತ್ತಿರುವವರನ್ನು ಸುರಕ್ಷಿತ ಕೆಲಸದ ಪರಿಸ್ಥಿತಿಗೆ ಬದಲಾವಣೆ ಮಾಡಿರುವುದನ್ನು ಒಳಗೊಂಡಿದೆ. ಅನಿಶ್ಚತತೆಯಿಂದ ಸುರಕ್ಷಿತ ಉದ್ಯೋಗ ಪರಿಸ್ಥಿತಿಯು ಅವರ ಸಾವಿನ ಅಪಾಯವನ್ನು ಶೇ 20ರಷ್ಟು ಕಡಿಮೆ ಮಾಡಿದೆ. ಉದ್ಯೋಗಿಗಳು ಸುರಕ್ಷಿತ ಭಾವವನ್ನು 12 ವರ್ಷವಿದ್ದಾಗ ಅವರ ಸಾವಿನ ಅಪಾಯವೂ ಶೇ 30ರಷ್ಟು ಕಡಿಮೆ ಆಗಿದೆ.
ದೊಡ್ಡ ಜನಸಂಖ್ಯೆ ದತ್ತಾಂಶದ ಬಳಕೆಯು ಅನೇಕ ಅಂಶಗಳ ಕುರಿತು ಪರಿಗಣೆಗೆ ತೆಗೆದುಕೊಳ್ಳಲು ಸಹಾಯ ಮಾಡಿದೆ. ಸಾವಿನ ಕಾರಣವಾಗು ವಯಸ್ಸು, ಇತರೆ ಸಮಸ್ಯೆಗಳು ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಅಧ್ಯಯನ ಮೊದಲ ಲೇಖಕರಾದ ಮೌರಿಯಾ ಮಟಿಲ್ಲಾ ಸಂಟಂಡರ್ ತಿಳಿಸಿದರು. ಕಾರ್ಮಿಕರಲ್ಲಿ ಕಂಡು ಬರುವ ಹೆಚ್ಚಿನ ಸಾವಿನ ಪ್ರಮಾಣವನ್ನು ತಪ್ಪಿಸಬಹುದು ಎಂದು ಫಲಿತಾಂಶ ತೋರಿಸಿದೆ.
ಇದನ್ನೂ ಓದಿ: ಕಳಪೆ ಕಲಿಕಾ ಕೌಶಲ್ಯ ಹೊಂದಿರುವ ಮಕ್ಕಳೇ ಇ-ಮೇಲ್ ಸ್ಕ್ಯಾಮ್ಗೆ ಹೆಚ್ಚು ಬಲಿ!