ಹೈದರಾಬಾದ್ : ಕೋವಿಡ್ 19 ಉಪತಳಿಯಾಗಿರುವ ಜೆಎನ್.1 (JN.1) ಸದ್ಯ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಜೆಎನ್. 1 ತಳಿಯನ್ನು ಬಿಎ.2.68 ವಂಶವಾಹಿನಿ ವೆರಿಯೆಂಟ್ ಆಫ್ ಇಂಟ್ರೆಸ್ಟ್ (ರೂಪಾಂತರ ತಳಿ) ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಈ ಹಿಂದೆ ಬಿಎ.2.86 ಉಪವರ್ಗಗಳ ಭಾಗದ ರೂಪಾಂತರ ತಳಿ ಎಂದು ವರ್ಗೀಕರಿಸಲಾಗಿದೆ.
ಲಭ್ಯವಿರುವ ಸಾಕ್ಷಿಗಳ ಆಧಾರದ ಮೇಲೆ ಪ್ರಸ್ತುತ ಹೊರ ಹೊಮ್ಮಿರುವ ಜೆಎನ್ 1ತಳಿ ಕಡಿಮೆ ಸಾರ್ವಜನಿಕ ಆರೋಗ್ಯ ಅಪಾಯವನ್ನು ಹೊಂದಿದೆ. ಇದರ ಹೊರತಾಗಿ, ಉತ್ತರಾರ್ಧ ಗೋಳದಲ್ಲಿ ಚಳಿ ಪ್ರಮಾಣ ಹೆಚ್ಚಿದ್ದು, ಇದು ಅನೇಕ ದೇಶಗಳಲ್ಲಿ ಶ್ವಾಸಕೋಶ ಸೋಂಕಿನ ಅಪಾಯವನ್ನು ಹೆಚ್ಚಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ವೈರಸ್ನಿಂದ ರಕ್ಷಣೆಗೆ ದೇಶಗಳು ಲಸಿಕೆಯನ್ನು ಮುಂದುವರೆಸುವ ಮೂಲಕ ಗಂಭೀರ ರೋಗ ಮತ್ತು ಸಾವಿನಿಂದ ರಕ್ಷಿಸಬಹುದಾಗಿದೆ. ಅಲ್ಲದೇ ವಿಶ್ವ ಸಂಸ್ಥೆ ಜೆಎನ್.1 ಮೇಲೆ ನಿರಂತರ ನಿಗಾ ಇರಿಸಿದ್ದು, ಈ ಕುರಿತು ಮುನ್ನೆಚ್ಚರಿಕೆ ವಹಿಸಲಾಗುವುದು ಎಂದಿದೆ.
ಜೆಎನ್ 1: ಕೋವಿಡ್ 19ನ ಬಿಎ.2.86 ಭಾಗವಾಗಿ ಈ ಜೆಎನ್,1 ತಳಿಯನ್ನು ಪತ್ತೆ ಮಾಡಲಾಗಿದ್ದು, ಇದನ್ನು ವೆರಿಯಂಟ್ ಆಫ್ ಇಂಟ್ರೆಸ್ಟ್ ಎಂದು ವರ್ಗಿಕರೀಸಲಾಗಿದೆ. ಜಾಗತಿಕ ಮಟ್ಟದಲ್ಲಿ ಜೆಎನ್.1 ಅಪಾಯವೂ ಸಾರ್ಜನಿಕ ಆರೋಗ್ಯದ ಮೇಲೆ ಕಡಿಮೆ ಅಪಾಯ ಹೊಂದಿದೆ. ಸದ್ಯ ಚಳಿಗಾಲಕ್ಕೆ ಪ್ರವೇಶ ಪಡೆದಿರುವ ದೇಶದಲ್ಲಿ ಹಲವು ಸೋಂಕು ಮತ್ತು ಬ್ಯಾಕ್ಟೀರಿಯಾ ಪ್ರಕರಣದಲ್ಲಿ ಏರಿಕೆ ಕಂಡಿದ್ದು, ಇದು ಸಾರ್ಸ್-ಕೋವ್-2 ಪ್ರಕರಣ ಹೆಚ್ಚಳಕ್ಕೆ ಕಾರಣವಾಗಲಿದೆಯಾ ಎಂಬ ಆತಂಕವನ್ನು ಹೆಚ್ಚಿಸಿದೆ.
ಸದ್ಯ ಜಾಗತಿಕವಾಗಿ 41 ದೇಶದಲ್ಲಿ 7344 ಜೆಎನ್.1 ತಳಿಯ ಪ್ರಕರಣಗಳು ಕಂಡು ಬಂದಿದೆ. ಜಾಗತಿಕ ಮಟ್ಟದಲ್ಲಿ ಇದರ ಉಪಸ್ಥಿತಿ ಶೇ 27.1 ರಷ್ಟಿದೆ. ಇದು ಜಾಗತಿಕವಾಗಿ ಅತಿ ವೇಗವಾಗಿ ಹೆಚ್ಚಳವಾಗುತ್ತಿದೆ. ಅಕ್ಟೋಬರ್ 30 ರಿಂದ ನವೆಂಬರ್ 5ರ ಪ್ರಕರಣದ ದತ್ತಾಂಶದ ಮಾಹಿತಿ ಪ್ರಕಾರ ಜೆಎನ್. 1 ಜಾಗತಿಕ ಪ್ರಮಾಣದಲ್ಲಿ ಶೇ 3.3ರಷ್ಟು ಏರಿಕೆ ಕಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಎಲ್ಲಾ ಮೂರು ಪ್ರದೇಶದಲ್ಲಿ ಇದು ಸಾರ್ಸ್- ಕೋವ್- 2 ತಳಿ ಜೊತೆಗೆ ಬೆಳವಣಿಗೆ ಕಂಡಿದೆ. ದೇಶಗಳು ಚಳಿಗಾಲದ ಋತುಮಾನಕ್ಕೆ ತೆರೆದುಕೊಳ್ಳುತ್ತಿದೆ. ಸಾರ್ಸ್- ಕೋವ್-2 ಸೋಂಕಿನ ಅಲೆಯನ್ನು ದೊಡ್ಡ ಪ್ರಮಾಣದಲ್ಲಿ ಸಮುದಾಯದಲ್ಲಿ ಕಾಣಬಹುದಾಗಿದೆ ಎಂದು ವೇಸ್ಟ್ವಾಟರ್ ದತ್ತಾಂಶ ತಿಳಿಸಿದೆ.
ಭಾರತದಲ್ಲಿ ಕೂಡ ಹಬ್ಬದ ಋತುಮಾನದ ಹಿನ್ನಲೆ ಕೋವಿಡ್ 19 ಪ್ರಕರಣದಲ್ಲಿ ಏರಿಕೆ ಕಂಡಿದೆ. ಜನರಿಗೆ ಮಾಸ್ಕ್ ಧರಿಸುವಂತೆ ತಜ್ಞರು ಸಲಹೆ ನೀಡಿದ್ದು, ಜನನಿಬಿಡ ಪ್ರದೇಶದಲ್ಲಿ ಒಟ್ಟಿಗೆ ಸೇರುವುದನ್ನು ತಪ್ಪಿಸಿ, ಆರೋಗ್ಯಕರ ಆಹಾರ ಪಾಲಿಸಿ, ಕೋವಿಡ್ ಮಾರ್ಗಸೂಚಿ ಪಾಲಿಸಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ದಾಖಲು; ಕೇಂದ್ರ ಆರೋಗ್ಯ ಸಚಿವರ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ