ನವದೆಹಲಿ: ಓಮ್ರಿಕಾನ್ ರೂಪಾಂತರಿ ಜೆಎನ್.1 ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಗೆ ಕಾರಣವಾಗಿದ್ದು, ಇದು ಕೋವಿಡ್ ವೈರಸ್ನ ಅತ್ಯಂತ ಗಂಭೀರ ವಿಕಸನವಾಗಿದೆ ಎಂದು ಜಾಗತಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜೆಎನ್.1 ಸೋಂಕು ವೇಗವಾಗಿ ಹರಡುವ ಕಾರಣ ವಿಶ್ವ ಆರೋಗ್ಯ ಸಂಸ್ಥೆಯು 'ಆಸಕ್ತಿಯ ರೂಪಾಂತರ' ಎಂದು ಕರೆದಿದೆ. ಪ್ರಸ್ತುತ ಇದು 41 ದೇಶದಲ್ಲಿ ಹರಡಿಕೊಂಡಿದೆ. ಮೊದಲ ಬಾರಿಗೆ ಆಗಸ್ಟ್ನಲ್ಲಿ ಲಕ್ಸಂಬರ್ಗ್ನಲ್ಲಿ ಪತ್ತೆಯಾಗಿತ್ತು. ಜೆಎನ್.1 ಅನೇಕ ದೇಶದಲ್ಲಿ ಉಸಿರಾಟದ ತೊಂದರೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆ ಜೆಎನ್.1 ಅನ್ನು ಆಸಕ್ತಿಯ ರೂಪಾಂತರ ಎಂದು ಕರೆಯುತ್ತಿದೆ. ಆದರೆ, ಇದು ಅಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದರ ಹರಡುವಿಕೆಯು ಅಸಾಧಾರಣವಾಗಿದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಕ್ರಿಪ್ಸ್ ಸಂಶೋಧನಾ ಅನುವಾದ ಸಂಸ್ಥೆ ನಿರ್ದೇಶಕ ಮತ್ತು ಸಂಸ್ಥಾಪಲ ಡಾ. ಎರಿಕ್ ಟೊಪೊಲ್ ಹೇಳಿದ್ದಾರೆ.
ಜೆಎನ್.1 ಬಿಎ.2.86ಯ ವಂಶವಾಹಿನಿಯಾಗಿದೆ. ಬಿಎ.2.86ಕ್ಕೆ ಹೋಲಿಕೆ ಮಾಡಿದರೆ, ಜೆಎನ್.1 ಹೆಚ್ಚುವರಿ ಎಲ್455ಎಸ್ ರೂಪಾಂತರ ಹೊಂದಿದ್ದು, ಇದು ಹೆಚ್ಚಿನ ಹರಡುವಿಕೆಗೆ ಕಾರಣವಾಗಿದೆ. 'ಜೆಎನ್.1 ಅತ್ಯಂತ ಗಂಭೀರ ವಿಕಸನ ಹೊಂದಿದ್ದು, ಅದು ಇನ್ನೂ ಮುಂದುವರೆದಿದೆ' ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಡಾ. ಮೈಕೆಲ್ ಓಸ್ಟರ್‌ಹೋಮ್ ತಿಳಿಸಿದ್ದಾರೆ.
ಜೆಎನ್.1 ಎಲ್ಲಾ ಹೊಸ ತಳಿಯಲ್ಲಿ ಸಾಮಾನ್ಯವಾಗಿ ಕಂಡುಬರುವ ಬದಲಾವಣೆಗಳನ್ನು ಹೊಂದಿದೆ. ಆದರೆ, ಇದರ ಇತ್ತೀಚಿನ ರೂಪಾಂತರ ಭಿನ್ನವಾಗಿದೆ. ಈ ರೂಪಾಂತರದ ಪ್ರತಿರಕ್ಷಣಾ ತಪ್ಪಿಸಿಕೊಳ್ಳುವಿಕೆ ಮತ್ತು ಹರಡುವ ಸಾಮರ್ಥ್ಯ ಹೊಂದಿರುವುದಿಂದ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ರಾಷ್ಟ್ರೀಯ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಕೋವಿಡ್ ಟಾಸ್ಕ್ ಫೋರ್ಸ್ನ ಸಹ ಅಧ್ಯಕ್ಷ ಡಾ. ರಾಜೀವ್ ಜಯದೇವನ್ ಹೇಳಿದ್ದಾರೆ.
ಕೋವಿಡ್‌ನ ಪ್ರಮುಖ ರೂಪಾಂತರಗಳಾದ ಆಲ್ಫಾ, ಡೆಲ್ಟಾ ಮತ್ತು ಓಮಿಕ್ರಾನ್ ಬಳಿಕ ಜೆಎನ್.1 ಸಾಂಕ್ರಾಮಿಕ ಹೊಸ ಅಧ್ಯಯನವಾಗಿದೆ. ಅಲ್ಲದೇ ಜೆಎನ್.1 ಹೊಸ ಯುಗಕ್ಕೆ ಕಾರಣವಾಗಿದೆ ಎಂದು ಕೆನಡಾದ ಗ್ವೆಲ್ಫ್ ವಿಶ್ವವಿದ್ಯಾನಿಲಯದ ರಯಾನ್ ಗ್ರೆಗೊರಿ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ 19 ಮುಂದಿನ ತಳಿಯು ಜೆಎನ್.1 ನಿಂದ ಬರಲಿದೆ. ಆದರೆ, ಇದಕ್ಕಿಂತ ಕೊಂಚ ವಿಭಿನ್ನತೆಯನ್ನು ನಾವು ಕಾಣಬಹುದಾಗಿದೆ. ಮತ್ತೆ ಓಮಿಕ್ರಾನ್ ತರಹದ್ದನ್ನೇ ನೋಡಬಹುದು ಎಂದು ಅವರು ಹೇಳಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಅಮೆರಿಕದಲ್ಲಿ ಹೆಚ್ಚಿದ ಕೋವಿಡ್; ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ