ETV Bharat / sukhibhava

'ಜನ್ ಔಷಧ ದಿವಸ್': ಸಾರ್ವಜನಿಕ ಹಿತಾಸಕ್ತಿಗಾಗಿ ಜನರಿಕ್ ಔಷಧಗಳ ಬಗ್ಗೆ ಜಾಗೃತಿ - ದೇಶದಲ್ಲಿ ಜೆನೆರಿಕ್ ಔಷಧ

ದೇಶದಲ್ಲಿ ಜೆನೆರಿಕ್ ಔಷಧಗಳ ಜನರಿಗೆ ಹೆಚ್ಚು ತಲುಪಿಸಲು, ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ ಮೊದಲ ವಾರದಲ್ಲಿ 'ಜನ ಔಷಧ ಸಪ್ತಾಹ' ಹಮ್ಮಿಕೊಳ್ಳಲಾಗುತ್ತದೆ. ಪ್ರತಿವರ್ಷ ಮಾರ್ಚ್ 7ಕ್ಕೆ 'ಜನ್ ಔಷಧ ದಿವಸ್' ಆಚರಿಸಲಾಗುತ್ತದೆ.

Jan Aushadhi Diwas 2023
ಜನ್ ಔಷಧಿ ದಿವಸ್
author img

By

Published : Mar 7, 2023, 9:49 PM IST

ಹೈದರಾಬಾದ್: ಸಮಾಜದ ಪ್ರತಿಯೊಂದು ಸಮುದಾಯಗಳಲ್ಲಿ ರೋಗಗಳು ಕಂಡು ಬರುವುದು ಸಾಮಾನ್ಯ. ಆದರೆ, ಆಯಾ ರೋಗಗಳಿಗೆ ಚಿಕಿತ್ಸೆ ಪಡೆಯಲು ಬಡತನದ ಕೆಳಗಿನ ಜನರಿಗೆ ಹಾಗೂ ಮಧ್ಯಮ ವರ್ಗದವರಿಗೆ ತೀವ್ರ ತೊಂದರೆಯಾಗುತ್ತಿರುವುದು ಆತಂಕಕಾರಿ ಸಂಗತಿ. ಚಿಕಿತ್ಸೆ ಪಡೆದ ನಂತರ, ಈ ಔಷಧಗಳಿಗೆ ಹೆಚ್ಚಿನ ವೆಚ್ಚದ ಭರಿಸಬೇಕಾದ ಕಾರಣದಿಂದಾಗಿ ಅನೇಕ ಜನರು ತಮ್ಮ ಔಷಧಗಳ ಕೋರ್ಸ್​ನ್ನು ಪ್ರಾರಂಭಿಸಲು ಅಥವಾ ಮುಂದುವರಿಸಲು ಹಿಂದೇಟು ಹಾಕುತ್ತಾರೆ

ಜನರಿಕ್ ಔಷಧಗಳ ಬಗ್ಗೆ ಜಾಗೃತಿ: ಈ ರೀತಿಯ ಹೆಚ್ಚಿನ ವೆಚ್ಚದ ಔಷಧಗಳು ಅಡೆತಡೆಯಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಭಾರತ ಸರ್ಕಾರವು ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಅದರಲ್ಲಿ ಪ್ರಮುಖವಾಗಿ ಜನರಿಕ್ ಔಷಧಗಳು, ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಲು ವಿಶೇಷ ಕ್ರಮಗಳನ್ನು ವಹಿಸುತ್ತಿದೆ. ಈ ನಿಟ್ಟಿನಲ್ಲಿ ದೇಶದಾದ್ಯಂತ ಅನೇಕ 'ಜನ ಔಷಧ ಕೇಂದ್ರ'ಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಬಡ ಮತ್ತು ಮಧ್ಯವರ್ಗದ ಜನರು ಜನರಿಕ್ ಔಷಧಗಳನ್ನು ಖರೀದಿಸಬಹುದು. ಆದರೆ, ಇಂದಿಗೂ, ಬಹುತೇಕ ಜನರು ಜನರಿಕ್ ಔಷಧಗಳ ಬಗ್ಗೆ ಅಥವಾ 'ಜನ ಔಷಧ ಕೇಂದ್ರ'ದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿರದೇ ಇರುವುದು ಕಳವಳಕಾರಿ ಸಂಗತಿ. ಈ ಔಷಧಗಳ ಗುಣಮಟ್ಟದ ಬಗ್ಗೆ ಜನರಲ್ಲಿ ಕೆಲವು ಸಂದೇಹವಿದೆ.

ಜನ ಔಷಧಿ ಸಪ್ತಾಹ: ಪ್ರತಿ ವರ್ಷ ಮಾರ್ಚ್ ತಿಂಗಳ ಮೊದಲ ವಾರದಲ್ಲಿ, 'ಜನ ಔಷಧ ಸಪ್ತಾಹ' ಅಥವಾ ಜನರಿಕ್ ಮೆಡಿಸಿನ್ ವೀಕ್ ಅನ್ನು ಆಚರಿಸಲಾಗುತ್ತದೆ. ಆದರೆ, ಮಾರ್ಚ್ 7ಕ್ಕೆ 'ಜನ ಔಷಧ ದಿವಸ್' ಅಥವಾ ಜನರಿಕ್ ಮೆಡಿಸಿನ್ ದಿನವನ್ನಾಗಿ ಆಚರಿಸಲಾಗುತ್ತದೆ. ಜನರಲ್ಲಿ ಜನರಿಕ್ ಔಷಧಗಳ ಬಗ್ಗೆ ಜಾಗೃತಿ ಮೂಡಿಸಲಲಾಗುತ್ತದೆ. ಈ ದಿನವನ್ನು ಪ್ರಧಾನಿ ನರೇಂದ್ರ ಮೋದಿಯವರು 'ಜನ್ ಔಷಧ ದಿವಸ್' ಎಂದು ಘೋಷಿಸಿದ ನಂತರ 2019ರ ಮಾರ್ಚ್ 7ರಂದು ಮೊದಲ ಬಾರಿಗೆ ಆಚರಿಸಲಾಯಿತು.

ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಗಳು ಲಭ್ಯ: ಜನರಿಕ್ ಔಷಧಗಳು ಬ್ರಾಂಡ್ ಹೆಸರಿಲ್ಲದ ಔಷಧಗಳಾಗಿವೆ. ಈ ಔಷಧಗಳ ಬೆಲೆ ತೀರಾ ಕಡಿಮೆ ಇರುತ್ತದೆ. ಆದರೆ, ಜನಪ್ರಿಯ ಬ್ರಾಂಡ್‌ಗಳ ದುಬಾರಿ ಔಷಧಗಳಂತೆ ಅವು ಸುರಕ್ಷಿತ, ಪರಿಣಾಮಕಾರಿ ಮತ್ತು ಪ್ರಯೋಜನಕಾರಿ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾ (ಪಿಎಂಬಿಜೆಪಿ) ಅನ್ನು ನವೆಂಬರ್ 2008ರಲ್ಲಿ ಭಾರತ ಸರ್ಕಾರದ ಫಾರ್ಮಾಸ್ಯುಟಿಕಲ್ಸ್ ಇಲಾಖೆ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯವು, ಅಗತ್ಯವಿರುವ ಜನರಿಗೆ ಗುಣಮಟ್ಟದ ಜನರಿಕ್ ಔಷಧಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿವೆ. ಈ ಉಪಕ್ರಮದ ಅಡಿಯಲ್ಲಿ, ದೇಶದ ಹಲವು ಭಾಗಗಳಲ್ಲಿ 'ಜನ್ ಔಷಧ ಕೇಂದ್ರ'ಗಳನ್ನು ಸ್ಥಾಪಿಸಲಾಯಿತು.

ದೇಶದಲ್ಲಿವೆ 9,000ಕ್ಕೂ ಹೆಚ್ಚು ಜನ ಔಷಧ ಕೇಂದ್ರಗಳು: ಪ್ರಸ್ತುತ, 50ರಿಂದ 90ರಷ್ಟು ಅಗ್ಗದ ದರದಲ್ಲಿ ಔಷಧಗಳು ದೇಶದ 9,000ಕ್ಕೂ ಹೆಚ್ಚು ಜನ ಔಷಧ ಕೇಂದ್ರಗಳಲ್ಲಿ ಲಭ್ಯವಿದೆ. ಆದರೆ, ಈ ಔಷಧಗಳು ಕಡಿಮೆ ಬೆಲೆಗೆ ಲಭಿಸುತ್ತವೆ. ಜೊತೆಗೆ ಈ ಔಷಧಗಳು ಗುಣಮಟ್ಟದಿಂದ ಕೂಡಿರುತ್ತವೆ. ಪ್ರತಿದಿನ ಸುಮಾರು 12 ಲಕ್ಷ ಜನರು ಈ ಜನೌಷಧ ಕೇಂದ್ರಗಳಿಗೆ ಭೇಟಿ ನೀಡುತ್ತಾರೆ.

10,000 ಜನೌಷಧ ಕೇಂದ್ರಗಳನ್ನು ತೆರೆಯುವ ಗುರಿ: ಜನವರಿ 31 2023ರವರೆಗೆ, ದೇಶದ 743 ಜಿಲ್ಲೆಗಳಲ್ಲಿ ಜನರಿಕ್ ಔಷಧಗಳ ಲಭ್ಯತೆಯೊಂದಿಗೆ 9,082 ಜನೌಷಧ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ಸುಮಾರು 1,759 ಔಷಧಗಳು ಮತ್ತು 280 ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಅತ್ಯಂತ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತಿದೆ. ಅವುಗಳ ಜೊತೆಗೆ ಪ್ರೋಟೀನ್ ಪೌಡರ್‌ಗಳು, ಮಾಲ್ಟ್ ಆಧಾರಿತ ಆಹಾರ ಪೂರಕಗಳು, ಪ್ರೋಟೀನ್, ಇಮ್ಯುನಿಟಿ ಔಷಧಗಳು, ಸ್ಯಾನಿಟೈಸರ್‌ಗಳು, ಮಾಸ್ಕ್‌ಗಳು, ಗ್ಲುಕೋಮೀಟರ್‌ಗಳು, ಆಕ್ಸಿಮೀಟರ್‌ಗಳು ಇತ್ಯಾದಿ ಮತ್ತು ನ್ಯೂಟ್ರಾಸ್ಯುಟಿಕಲ್ ಉತ್ಪನ್ನಗಳನ್ನು ಸಹ ಈ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಭಾರತ ಸರ್ಕಾರವು ಡಿಸೆಂಬರ್ 2023ರ ಅಂತ್ಯದ ವೇಳೆಗೆ 10,000 ಜನೌಷಧ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ಜನೌಷಧಿ ದಿವಸ್ ಮತ್ತು ಸಪ್ತಾಹವನ್ನು ಆಚರಿಸುವ ಉದ್ದೇಶವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಜನರಿಕ್ ಔಷಧಗಳ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಮೂಡಿಸುವುದು. ಅಲ್ಲದೆ, ಈ ಕಾರ್ಯಕ್ರಮವು ಪ್ರತಿಯೊಬ್ಬ ವ್ಯಕ್ತಿಗೆ ಔಷಧಗಳನ್ನು ಲಭ್ಯವಾಗುವಂತೆ ಭಾರತ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.

ಇದನ್ನೂ ಓದಿ: 'ಗರ್ಭ ಸಂಸ್ಕಾರ': ಗರ್ಭದಲ್ಲಿರುವ ಶಿಶುಗಳಿಗೆ ಮೌಲ್ಯಗಳನ್ನು ಕಲಿಸಲು ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.