ನವದೆಹಲಿ: ಇಕ್ಸ್ಚಿಕ್ ಚಿಕೂನ್ ಗುನ್ಯಾದ ವಿರುದ್ಧ ಹೋರಾಡಬಲ್ಲ ಮೊದಲ ಲಸಿಕೆ ಆಗಿದೆ. ಸಾರ್ವಜನಿಕ ಆರೋಗ್ಯ ಬೆದರಿಕೆ ಒಡ್ಡುವ ಮತ್ತು ಜಾಗತಿನಾದ್ಯಂತ ಚಿಕೂನ್ಗುನ್ಯಾ ತಡೆಗಟ್ಟುವಲ್ಲಿ ಈ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ವರದಿ ತಿಳಿಸಿದೆ.
ಫ್ರೆಂಚ್ ಬಯೋಟೆಕ್ ಕಂಪನಿ ವಲ್ನೆವಾ ಈ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ಇತ್ತೀಚೆಗೆ ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮನಿಸ್ಟ್ರೇಷನ್ ಕೂಡ ಇದಕ್ಕೆ ಅನುಮೋದನೆ ನೀಡಿತು. 18 ವರ್ಷ ಮೇಲ್ಪಟ್ಟ ಮಂದಿ ಚಿಕೂನ್ ಗುನ್ಯಾ ವೈರಸ್ನಿಂದ ಅಪಾಯ ತಪ್ಪಿಸಿಕೊಳ್ಳಲು ಈ ಲಸಿಕೆ ಪಡೆಯಬಹುದಾಗಿದೆ.
ಚಿಕೂನ್ಗುನ್ಯಾಕ್ಕೆ ಸೂಕ್ತ ಲಸಿಕೆ ಇಲ್ಲದ ಹಿನ್ನೆಲೆ ವೈದ್ಯಕೀಯ ಕ್ಷೇತ್ರದಲ್ಲಿ ಈ ರೋಗದ ಹೊರೆ ಹೆಚ್ಚಿದೆ. ಸೊಳ್ಳೆ ಕಡಿತದಿಂದ ಉಂಟಾಗುವ ಈ ರೋಗವನ್ನು ತಪ್ಪಿಸಲು ಇದೀಗ ಲಸಿಕೆ ಅಭಿವೃದ್ಧಿ ಮಾಡಲಾಗಿದೆ. ಈ ಇಕ್ಸ್ಚಿಕ್ ಲಸಿಕೆಯು ಲಕ್ಷಾಂತರ ಜನರ ಜೀವನ ಉಳಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಿದೆ ಎಂದು ದತ್ತಾಂಶ ಮತ್ತು ವಿಶ್ಲೇಷಣೆ ಕಂಪನಿಯಾದ ಗ್ಲೋಬಲ್ಡೇಟಾದ ಸೋಂಕು ರೋಗದ ವಿಶ್ಲೇಷಕ ಸ್ಟೆಫನಿ ಕುರ್ಡಾಚ್ ತಿಳಿಸಿದ್ದಾರೆ.
ವಲ್ನೆವಾ ಮೂರನೇ ಹಂತದ ದತ್ತಾಂಶವು ಲಸಿಕೆ ಪಡೆದ ಬಳಿಕ 28 ದಿನದ ನಂತರ ಆರು ತಿಂಗಳ ನಂತರ ಧನಾತ್ಮಕ ಪ್ರತಿಕ್ರಿಯೆ ತೋರಿಸಿದೆ. ಕಾಲಾನಂತರದಲ್ಲಿ ಪ್ರತಿಕಾಯ ಪ್ರತಿಕ್ರಿಯೆಗಳನ್ನು ಉಳಿಸಿಕೊಳ್ಳುವ ಲಸಿಕೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಚಿಕೂನ್ಗುನ್ಯಾ ಹೆಚ್ಚು ಪರಿಣಾಮ ಹೊಂದಿದ್ದು, ವಲ್ನೆವಾ ಇನ್ಸುಟಿಟ್ಯೂಟೊ ಬುಟಂಟನ್ ಅವರೊಂದಿಗೆ ಕ್ಲಿನಿಕಲ್ ಟೆಸ್ಟ್ಗಳನ್ನು ನಡೆಸಿದೆ.
ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಇಕ್ಸ್ಚಿಕ್ ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಇದರ ಸಿಂಗಲ್ ಡೋಸ್ ಹೆಚ್ಚಿನ ಪರಿಣಾಮಕಾರಿಯಾಗಿದೆ. ಇದು ಚಿಕೂನ್ಗುನ್ಯಾ ವೈರಸ್ನಿಂದ ರಕ್ಷಣೆ ನೀಡಲಿದ್ದು, ಇದರ ಸೋಂಕು ಹರಡುವ ಸಾಧ್ಯತೆ ತಡೆಯುತ್ತದೆ ಎಂದು ಕುರ್ಡಾಚ್ ತಿಳಿಸಿದ್ದಾರೆ.
ಅಮೆರಿಕದ ಅಡ್ವೆಸರಿ ಕಮಿಟಿ ಆನ್ ಇಮ್ಯೂನೈಸೆಷನ್ ಪ್ರಾಕ್ಟಿಸ್ 2024ರ ಫೆಬ್ರವರಿ ಅಂತ್ಯಕ್ಕೆ ಇದನ್ನು ಶಿಫಾರಸು ಮಾಡಲು ಮತ ಚಲಾಯಿಸಲಾಗಿದೆ. ಗ್ಲೋಬಲ್ ಡೇಟಾ ಪ್ರಕಾರ, ಚಿಕೂನ್ಗುನ್ಯಾಕ್ಕೆ ಸದ್ಯ ನಾಲ್ಕು ಲಸಿಕೆಗಳ ಪ್ರಯೋಗ ನಡೆಸಲಾಗುತ್ತಿದೆ. ಅದರಲ್ಲಿ ಒಂದು ಉತ್ಪನ್ನವೂ ಬವರಿಯನ್ ನೊರ್ಡಿಕ್ ರ ಸಿಎಚ್ಐಕೆವಿ ವಿಎಲ್ಪಿ. ಇದರ ಮೂರನೇ ಹಂತದ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಇದು ಸುರಕ್ಷೆ ಧನಾತ್ಮಕವಾಗಿದೆ. ಯುರೋಪಿಯನ್ ಮೆಡಿಸಿನ್ ಏಜೆನ್ಸಿಈ ವಿನ್ಯಾಸ ಮಾಡಿದೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವದ ಮೊದಲ ಚಿಕೂನ್ಗುನ್ಯಾ ಲಸಿಕೆಗೆ ಅಮೆರಿಕದ ಎಫ್ಡಿಎ ಅನುಮೋದನೆ