ಲಂಡನ್: ವಾಕಿಂಗ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ಮಾಹಿತಿ ಅನೇಕರಿಗೆ ತಿಳಿದಿರುವ ಸಂಗತಿ. ದಿನದಲ್ಲಿ ಯಾವ ಹೊತ್ತಿನಲ್ಲಾದರೂ ಕನಿಷ್ಟ ದೂರು ನಡೆಯುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹಾರ ಕಾಣಬಹುದು ಎಂದು ವೈದ್ಯರು ಕೂಡ ತಿಳಿಸುತ್ತಾರೆ. ಇದೀಗ ಹೊಸ ಸಂಶೋಧನೆಯೊಂದು ದಿನದಲ್ಲಿ ಕನಿಷ್ಟ 11 ನಿಮಿಷವಾದರೂ ವಾಕ್ ಮಾಡಿ. ಇದರಿಂದ ಅವಧಿ ಪೂರ್ವ ಸಾವು ಅಂದರೆ, ಅನಿರೀಕ್ಷಿತ ಸಾವು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ವಾರದಲ್ಲಿ 75 ನಿಮಿಷಗಳ ಬಿರುಸಿನ ನಡಿಗೆ, ಡ್ಯಾನ್ಸಿಂಗ್, ಬೈಕ್ ರೈಡಿಂಗ್, ಟೆನ್ನಿಸ್ ಆಟ ಅಥವಾ ಹೈಕಿಂಗ್ ಮಾಡುವುದರಿಂದ ಹೃದಯ ಸಂಬಂಧಿ ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಉಂಟಾಗುವ ಅವಧಿ ಪೂರ್ವ ಸಾವು ತಡೆಯಬಹುದು ಎಂದು ಅಧ್ಯಯನ ತೊಳಿಸಿದೆ.
ಈ ಅಧ್ಯಯನ ವಾರದಲ್ಲಿ ಕನಿಷ್ಟ 150 ನಿಮಿಷಗಳು ದೈಹಿಕ ಚಟುವಟಿಕೆಗಳನ್ನು ಮಾಡುವಂತೆ ಕೂಡ ಶಿಫಾರಸ್ಸು ಮಾಡಿದೆ. ಇದು ಮಧ್ಯಮ- ತೀವ್ರತೆ ದೈಹಿಕ ಚಟುವಟಿಕೆ ಆಗಿರಬೇಕು. ವಾರದಲ್ಲಿ 75 ನಿಮಿಷ ಅಥವಾ ತಿಂಗಳಲ್ಲಿ 11 ನಿಮಿಷ ರೂಢಿಸಿಕೊಳ್ಳುವುದರಿಂದ 10 ಅವಧಿಪೂರ್ವ ಸಾವುಗಳಲ್ಲಿ ಒಂದನ್ನು ತಡೆಬಹುದಾಗಿದೆ ಎಂದು ಬ್ರಿಟನ್ನ ಕೆಂಬ್ರಿಡ್ಜ್ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ವಾರದಲ್ಲಿ 150 ನಿಮಿಷಗಳ ಮಧ್ಯಮ- ತೀವ್ರತೆಯ ದೈಹಿಕ ಚಟುವಟಿಕೆಗಳಿಂದಾಗಿ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ. ಕೆಲವು ದೈಹಿಕ ಚಟುವಟಿಕೆಯಲ್ಲಿ ರೂಢಿಸಿಕೊಳ್ಳಿವುದು ಉತ್ತಮ. ವಾರದಲ್ಲಿ 75 ನಿಮಿಷದ ನಡಿಗೆಯು ಕ್ರಮೇಣವಾಗಿ ಹೆಚ್ಚಿನ ಹಂತಕ್ಕೆ ಸಾಗುತ್ತದೆ ಎಂದು ದೊರೆನ್ ಬರ್ಗ್ ತಿಳಿಸಿದ್ದಾರೆ.
ಪಾರ್ಶ್ವವಾಯು ಸೇರಿದಂತೆ ಹೃದ್ರೋಗ ಸಮಸ್ಯೆಗಳು ಜಾಗತಿಕವಾಗಿ ಹೆಚ್ಚಿನ ಸಾವಿಗೆ ಕಾರಣವಾದ ಅಂಶಗಳಾಗಿವೆ. 2019ರಲ್ಲಿ 17.9 ಮಿಲಿಯನ್ ಜನರ ಇದರಿಂದ ಸಾವನ್ನಪ್ಪಿದ್ದಾರೆ. 2017ರಲ್ಲಿ ಕ್ಯಾನ್ಸರ್ನಿಂದ 9.6 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ,
ಈ ಸಂಬಂಧ ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ ಮೆಡಿಸಿನ್ನಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ, ಹೃದ್ರೋಗ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ತಡೆಯಲು ದಿನಕ್ಕೆ ಕೇವಲ 11 ನಿಮಿಷದ ಬಿರುಸಿನ ನಡಿಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂದು ತಿಳಿಸಲಾಗಿದೆ
ಕೆಲವು ನಿರ್ದಿಷ್ಟ ಕ್ಯಾನ್ಸರ್ಗಳಲ್ಲಿ ಕೂಡ ಇದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಹೆಡ್ ಅಂಡ್ ನೆಕ್, ಮೈಲೈಡ್ ಲುಕೇಮಿಯಾ, ಮೂಲೊಮಾ ಮತ್ತು ಗ್ಯಾಸ್ಟ್ರಿಕ್ ಕಾರ್ಡಿಕ್ ಕ್ಯಾನ್ಸರ್ನ ಅಪಾಯವನ್ನು ಇದು ಶೇ 14-26ರಷ್ಟು ಕಡಿಮೆ ಮಾಡುತ್ತದೆ. ಇತರೆ ಕ್ಯಾನ್ಸರ್ಗಳಾದ ಶ್ವಾಸಕೋಶ, ಯಕೃತ್ ಮತ್ತು ಎಂಡೋಮೆಟ್ರಿಲ್, ಕೊಲೊನ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ಅಪಾಯವನ್ನು ಶೇ 3-11ರಷ್ಟು ಕಡಿಮೆ ಮಾಡುತ್ತದೆ
ವಾಕಿಂಗ್ ಅಥವಾ ಸೈಕಲಿಂಗ್ನಂತಹ ದೈಹಿಕ ಚಟುವಟಿಕೆಗಳು ಉತ್ತಮ ಎಂಬುದು ತಿಳಿದಿದೆ. ಇದು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಿದರೂ ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡಲಿದೆ. ಜೊತೆಗೆ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ದಿನದಲ್ಲಿ 10 ನಿಮಿಷ ಹೊಂದಿಸಬೇಕಿದೆ ಎನ್ನುತ್ತಾರೆ ಪ್ರೊ ಜೇಮ್ಸ್ ವುಡ್ಕೊಕ್.
ಇದನ್ನೂ ಓದಿ: ಕಡಿಮೆ ಕ್ಯಾಲೋರಿ ಪಾನೀಯ, ಆಹಾರಗಳಿಂದಲೂ ಸಂಭವಿಸಬಹುದು ಹೃದಯಾಘಾತ - ಪಾರ್ಶ್ವವಾಯು!