ETV Bharat / sukhibhava

ಗಂಭೀರವಾಗುತ್ತಿದೆ ಬೊಜ್ಜಿನ ಸಮಸ್ಯೆ.. ಉತ್ತಮ ಜೀವನಶೈಲಿ ಅಳವಡಿಸಿಕೊಳ್ಳಲು ಇದು ಸಕಾಲ - ಕೋವಿಡ್-19 ಸಾವಿನ ಪ್ರಮಾಣ

ಬೊಜ್ಜು, ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಬಗ್ಗೆ ನಾವು ಗಮನ ಹರಿಸಬೇಕಾದ ಸಮಯ ಇದು. ಅಧಿಕ ತೂಕ ಅಥವಾ ಬೊಜ್ಜು ಇತರ ಅನೇಕ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಮತ್ತು ಅವುಗಳನ್ನು ಇನ್ನಷ್ಟು ಹದಗೆಡಿಸಬಹುದು. ಕೋವಿಡ್-19 ಸಂದರ್ಭದಲ್ಲಿಯೂ ಈ ಕುರಿತು ಅಧ್ಯಯನ ನಡೆದಿದೆ.

weight
weight
author img

By

Published : Mar 6, 2021, 8:09 PM IST

ಹೈದರಾಬಾದ್: ಸಮಕಾಲೀನ ಕಾಲದಲ್ಲಿ ಆರೋಗ್ಯ ಸ್ಥಿತಿಯ ಮೇಲೆ ಹೆಚ್ಚಾಗಿ ಪರಿಣಾಮ ಬೀರುವ ಅಂಶವೆಂದರೆ ಬೊಜ್ಜು. ಇದು ಎಲ್ಲಾ ಗಂಭೀರ ಕಾಯಿಲೆಗಳ ತೀವ್ರತೆಯನ್ನು ಹೆಚ್ಚಿಸುತ್ತದೆ.

ಮಾರ್ಚ್ 4ರಂದು ವಿಶ್ವ ಬೊಜ್ಜು ದಿನಾಚರಣೆಯಂದು ವಿಶ್ವ ಬೊಜ್ಜು ಒಕ್ಕೂಟವು "2021 ಅಟ್ಲಾಸ್ ವರದಿ" ಬಿಡುಗಡೆ ಮಾಡಿದೆ. ಅದರಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಕಾಯಿಲೆಯ ತೀವ್ರತೆಯನ್ನು ಹೆಚ್ಚಿಸುವ ಪ್ರಮುಖ ಕಾರಣಗಳಲ್ಲಿ ಬೊಜ್ಜು ಕೂಡಾ ಒಂದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಮರಣ ಪ್ರಮಾಣವೂ ಅಧಿಕ ತೂಕ ಹೊಂದಿರುವ ಜನಸಂಖ್ಯೆಯಿರುವ ದೇಶಗಳಲ್ಲಿ ಹೆಚ್ಚಾಗಿರುತ್ತದೆ.

ಅಂಕಿ-ಅಂಶಗಳು ಏನು ಹೇಳುತ್ತವೆ?

2021ರ ಅಟ್ಲಾಸ್ ವರದಿಯ ಪ್ರಕಾರ, ಫೆಬ್ರವರಿ 2021ರ ಅಂತ್ಯದ ವೇಳೆಗೆ 2.5 ಮಿಲಿಯನ್ ಕೋವಿಡ್ -19 ಸಾವುಗಳು ವರದಿಯಾಗಿದ್ದು, ಅದರಲ್ಲಿ 2.2 ಮಿಲಿಯನ್ ಮೃತರಲ್ಲಿ ಅರ್ಧದಷ್ಟು ಜನ ಬೊಜ್ಜಿನಿಂದ ಬಳಲುತ್ತಿರುವ ದೇಶದವರಾಗಿದ್ದಾರೆ.

ಯುನೈಟೆಡ್ ಕಿಂಗ್‌ಡಮ್ ಮಾಹಿತಿಯ ಆಧಾರದ ಮೇಲೆ, ಆಸ್ಪತ್ರೆಗೆ ದಾಖಲಾದ ಒಟ್ಟು ಕೋವಿಡ್-19 ರೋಗಿಗಳಲ್ಲಿ ಸುಮಾರು ಶೇ 36ರಷ್ಟು ಸೋಂಕಿತರು ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಹೆಚ್ಚಿನ ದೇಹದ ತೂಕವನ್ನು ಹೊಂದಿದ್ದವರು.

2020ರ ಮಾರ್ಚ್ 1 ಮತ್ತು ಮೇ 14ರ ನಡುವಿನ ಅವಧಿಯಲ್ಲಿ ಯುಎಸ್ ಜನಸಂಖ್ಯೆಯಲ್ಲಿ ವರದಿಯಾದ ಶೇ 10.5 ಕೋವಿಡ್-19 ಪ್ರಕರಣಗಳಿಗೆ ಬೊಜ್ಜು ಮುಖ್ಯ ಕಾರಣವೆಂದು ಫ್ಯಾನ್ ಎಟ್ ಅಲ್ ಸಂಸ್ಥೆ ಅಂದಾಜಿಸಿದೆ.

ಭಾರತದಲ್ಲಿ 2010ರಿಂದ 2025ರವರೆಗೆ, ಬೊಜ್ಜಿನ ಸಮಸ್ಯೆ ಹೊಂದುವವರ ಸಂಖ್ಯೆ ಹೆಚ್ಚಾಗಲಿದೆ. 2010ರಲ್ಲಿ ಶೇ 2 ರಷ್ಟು ಪುರುಷರು ಬೊಜ್ಜು ಹೊಂದಿದ್ದರು. ಇದು 2025ರ ವೇಳೆಗೆ ಈ ಪ್ರಮಾಣ ಶೇ 5.3 ಕ್ಕೆ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. 2025ರ ವೇಳೆಗೆ ಸುಮಾರು 2,63,218 ಪುರುಷರು ಬೊಜ್ಜಿನ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

2010ರಲ್ಲಿ ಶೇ 4ರಷ್ಟು ಮಹಿಳೆಯರು ಬೊಜ್ಜು ಹೊಂದಿದ್ದರು. ಇದು 2025ರ ವೇಳೆಗೆ ಶೇ 8.4 ರಷ್ಟಾಗುವ ನಿರೀಕ್ಷೆಯಿದೆ. ಅಂದರೆ 3,96,047 ಮಹಿಳೆಯರು ಬೊಜ್ಜಿನ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಬೊಜ್ಜಿನ ಸಮಸ್ಯೆಗಳು ಹೆಚ್ಚುತ್ತಿವೆ. 2010ರಲ್ಲಿ 5 ರಿಂದ 19 ವರ್ಷ ವಯಸ್ಸಿನ ಮಕ್ಕಳು ಮತ್ತು ಯುವಜನರಲ್ಲಿ ಶೇ 1 ರಷ್ಟು ಜನ ಬೊಜ್ಜಿನ ಸಮಸ್ಯೆ ಹೊಂದಿದ್ದು, ಇದು 2025ರ ವೇಳೆಗೆ ಶೇ 5.1ಕ್ಕೆ ಏರಿಕೆಯಾಗುವ ನಿರೀಕ್ಷೆಯಿದ್ದು, 1,82,941 ಮಕ್ಕಳು ಬೊಜ್ಜಿನ ಸಮಸ್ಯೆಗೆ ಒಳಗಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಸಾವಿನ ಪ್ರಮಾಣದ ಮೇಲೆ ಪರಿಣಾಮ ಬೀರಿದ ಆಹಾರ ಪದ್ಧತಿ:

ಸಂಶೋಧನೆಯು ಬೊಜ್ಜಿನ ಮೇಲೆ ಪರಿಣಾಮ ಬೀರುವ ಆಹಾರ ಪದಾರ್ಥಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದೆ. ಇದನ್ನು ಎರಡು ವಿಭಾಗಗಳಲ್ಲಿ ವರ್ಗೀಕರಿಸಲಾಗಿದೆ. ಮೊದಲನೆಯದಾಗಿ ದ್ವಿದಳ ಧಾನ್ಯಗಳು ಮತ್ತು ಬೇರು ತರಕಾರಿಗಳನ್ನು ಒಳಗೊಂಡಿರುವ ಆರೋಗ್ಯಕರ ಹಾಗೂ ಸಸ್ಯಾಹಾರಿ ಆಹಾರ. ಎರಡನೆಯದು ಸಂಸ್ಕರಿಸಿದ ತೈಲಗಳು ಮತ್ತು ಗ್ಲೂಕೋಸ್ ಹಾಗೂ ಸಕ್ಕರೆ ಹೊಂದಿರುವ ಆಹಾರಗಳು.

ಕೋವಿಡ್-19ನಿಂದ ಸಾವನ್ನಪ್ಪಿದವರಲ್ಲಿ, ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸೇವಿಸುವವರ ಸಂಖ್ಯೆ ಕಡಿಮೆಯಾಗಿದ್ದು, ಮಾಂಸಾಹಾರಿ ಹಾಗೂ ಸಕ್ಕರೆ ಆಹಾರವನ್ನು ಸೇವಿಸುವವರು ಬೊಜ್ಜಿಗೆ ಬಲಿಯಾಗಿದ್ದಾರೆ ಎಂದು ಫಲಿತಾಂಶಗಳು ಸ್ಪಷ್ಟವಾಗಿ ತೋರಿಸಿವೆ.

ಆದ್ದರಿಂದ ಬೊಜ್ಜು, ಜೀವನಶೈಲಿ ಮತ್ತು ಆಹಾರ ಪದ್ಧತಿಗಳ ಬಗ್ಗೆ ನಾವು ಗಮನ ಹರಿಸಬೇಕಾದ ಸಮಯ ಇದು. ಅಧಿಕ ತೂಕ ಅಥವಾ ಬೊಜ್ಜು ಇತರ ಅನೇಕ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಮತ್ತು ಅವುಗಳನ್ನು ಇನ್ನಷ್ಟು ಹದಗೆಡಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.