ಪ್ರಾಚೀನ ಭಾರತೀಯ ಯೋಗಾಭ್ಯಾಸದ ಕುರಿತು ಅರಿವು ಮೂಡಿಸುವ ಹಿನ್ನೆಲೆ 2015ರಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಜಾರಿಗೆ ತರಲಾಯಿತು. ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಉದ್ದೇಶದ ಯೋಗದ ಬಗ್ಗೆ ಜಾಗೃತಿ ಮೂಡಿಸುವುದರ ಜತೆಗೆ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕಾಗಿ ನಿಯಮಿತ ಅಭ್ಯಾಸವಾಗಿ ಪ್ರಚಾರ ಮಾಡುವುದಾಗಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಲು ಮತ್ತು ಉತ್ತೇಜಿಸುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಈ ದಿನದಂದು ಬೆಳಕು ಚೆಲ್ಲಲಾಗಿದೆ.
2014ರಲ್ಲಿ ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ 69ನೇ ಸೆಷನ್ನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯೋಗಕ್ಕಾಗಿ ಒಂದು ಜಾಗತಿಕ ದಿನಾಚರಣೆ ಕುರಿತು ಆಲೋಚನೆಯನ್ನು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪಕ್ಕೆ ಅವಿರೋಧವಾಗಿ 193 ವಿಶ್ವ ಸಂಸ್ಥೆಯ ರಾಜ್ಯಗಳು ಡಿಸೆಂಬರ್ 11, 2014ರಂದು ಒಪ್ಪಿಗೆ ಸೂಚಿಸಿದರು. ಬಳಿಕ ವಿಶ್ವಸಂಸ್ಥೆ ಜೂನ್ 21ಅನ್ನು ಅಂತಾರಾಷ್ಟ್ರೀಯ ಯೋಗದಿನಾಚರಣೆಯಾಗಿ ರೂಪಿಸಿತು. ಮೊದಲ ಬಾರಿಗೆ 2015ರಂದು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು.
ಈ ವರ್ಷ ಅಂದರೆ 2023ರಲ್ಲಿ 9ನೇ ವರ್ಷದ ಅಂತಾರಾಷ್ಟ್ರೀಯ ಯೋಗದಿವನ್ನು ಆಚರಿಸಲಾಗುತ್ತಿದೆ. ಈ ಬಾರಿ ಯೋಗ ದಿವನ್ನು ವಸುದೈವ ಕುಟುಂಬಕಂಗೆ ಯೋಗ ಎಂಬ ಧ್ಯೇಯವಾಕ್ಯವಾಗಿ ಆಚರಣೆ ಮಾಡಲಾಗುತ್ತಿದೆ. ಒಂದು ಭೂಮಿ, ಒಂದು ಕುಟುಂಬ ಎಂಬ ಭಾರತದ ಆಶಯ ಈ ಘೋಷವಾಕ್ಯದ ಹಿಂದಿದೆ. ಇನ್ನು ಈ ಬಾರಿ ಅಂದರೆ 2023ರ ಜೂನ್ 21ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಯೋಗ ಸೆಷನ್ ನಡೆಯಲಿದೆ. ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ನಿಂದ ಭಾರತೀಯರಿಗೆ ಯೋಗದ ಮಹತ್ವದ ಸಂದೇಶವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದರು. ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5:30ರ ಸುಮಾರಿಗೆ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭಾರತದಲ್ಲಿ ಮೂಲದ ಯೋಗದ ಪ್ರಾಚೀನ ಅಭ್ಯಾಸವನ್ನು ಅಂತಾರಾಷ್ಟ್ರೀಯ ಯೋಗ ದಿನದಂದು ಗೌರವಿಸುತ್ತದೆ. ದೈಹಿಕ ವಿಶ್ರಾಂತಿಯ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಯೋಗ ಉತ್ತೇಜಿಸುತ್ತದೆ. ಸ್ವಯಂ-ಅರಿವು ಮತ್ತು ಮಾನಸಿಕ ಸ್ಪಷ್ಟತೆಯನ್ನು ಬೆಳೆಸಲು ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುವ ಅಭ್ಯಾಸವನ್ನು ಉತ್ತೇಜಿಸಲು ದಿನವು ಸಹಾಯ ಮಾಡುತ್ತದೆ, ಇದು ಒತ್ತಡ-ಮುಕ್ತ ವಾತಾವರಣವನ್ನು ನಿರ್ಮಸಲು ಸಹಾಯ ಮಾಡುತ್ತದೆ.
ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಯೋಗ ನಮ್ಮ ಜೀವನಶೈಲಿಯ ಪ್ರಮುಖ ಭಾಗವಾಗಿದೆ. ಇದು ಇಂದು ನಿನ್ನೆಯದಲ್ಲ. ಹಲವು ವರ್ಷಗಳಿಂದ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿ ಉಳಿದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯೋಗದ ಬಗ್ಗೆ ಹೆಚ್ಚು ಹೆಚ್ಚು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 21 ಅನ್ನು 'ಅಂತಾರಾಷ್ಟ್ರೀಯ ಯೋಗ ದಿನ' ಎಂದು ಆಚರಿಸಲಾಗುತ್ತದೆ.
ಇದನ್ನೂ ಓದಿ: International Yoga Day: ವಿಡಿಯೋ ಸಂದೇಶದ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ