ETV Bharat / sukhibhava

International Yoga Day 2023: ನಿಮ್ಮನ್ನು ಆರೋಗ್ಯವಾಗಿ, ಫಿಟ್​ ಆಗಿಡಲು ಸಹಾಯ ಮಾಡುತ್ತವೆ ಈ 5 ಆಸನಗಳು!

author img

By

Published : Jun 19, 2023, 12:37 PM IST

ಯೋಗದಲ್ಲಿ ಹಲವು ಆಸನಗಳನ್ನು ಮಾಡುವುದು ಕಷ್ಟ ಎಂಬ ಆಲೋಚನೆ ಹಲವರಲ್ಲಿದೆ. ಆದರೆ, ಈ ಸರಳ ಆಸನಗಳು ಕೂಡ ಸಾಕಷ್ಟು ಪ್ರಯೋಜನ ನೀಡುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!

International Yoga Day 2023: These 5 asanas will help keep you healthy and fit

ದೇಹ, ಮನಸ್ಸು ಮತ್ತು ಆಧ್ಯಾತ್ಮದ ಮೂಲಕ ಯೋಗ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ, ಕೆಲವರು ಬಾರಿ ಇದನ್ನು ಮಾಡುವುದು ಕಷ್ಟವೂ ಆಗುತ್ತದೆ. ಕೆಲವು ದಿನಗಳಲ್ಲಿ ಯೋಗಾಭ್ಯಾಸ ಮಾಡಲು ಕೋಣೆ, ಸಮಯ ಅಥವಾ ಮಾನಸಿಕ ಸಾಮರ್ಥ್ಯವೂ ಇಲ್ಲದೇ ಇರಬಹುದು. ಒಂದು ವೇಳೆ ನೀವು ಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡದಿದ್ದರೆ, ಯೋಗದ ಲಾಭವನ್ನು ನಿತ್ಯವೂ ಪಡೆಯಬಹುದು. ಯೋಗ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನವನ್ನು ಹೊಂದಿದ್ದು, ನಿಮ್ಮ ದಿನದ ಕೆಲಸವನ್ನು ಸುಗಮವಾಗಿಸುತ್ತಾರೆ. ಸದ್ಯ ಇದೀಗ ಜಗತ್ತು ಅಂತಾರಾಷ್ಟ್ರೀಯ ದಿನದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆ ಹೆಚ್ಚು ಕಷ್ಟಕರವಲ್ಲದ, ಆರೋಗ್ಯಯುತ ಐದು ಅಭ್ಯಾಸವನ್ನು ಹೊಂದಬಹುದಾಗಿದೆ.

ಶವಾಸಾನ
ಶವಾಸಾನ

ಶವಾಸಾನ: ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೆಮಕ್ಕಾಗಿ ಈ ಯೋಗಾಸಾನ ಹೆಚ್ಚು ಪ್ರಯೋಜನ ನೀಡಲಿದೆ. ನಿಮ್ಮ ಒತ್ತಡವನ್ನು ಬಿಟ್ಟು, ದೇಹವನ್ನು ವಿಶ್ರಮಿಸಿ ಮಲಗಿದಾಗ ನಿಮ್ಮ ಉಸಿರಾಟವನ್ನು ಗಮನಿಸಬೇಕು. ಇದರಿಂದ ದೇಹ ಮತ್ತು ಮನಸ್ಸಿಗೆ ಲಾಭವಿದೆ. ಜೊತೆಗೆ ಇದು ಸರಳ ಆಸನವಾಗಿದ್ದು, ಮಾಡುವುದು ಸುಲಭ. ಇದಕ್ಕೆ ಯೋಗ ಮ್ಯಾಟ್​ ಅಥವಾ ಬ್ಲಾಕೆಟ್​ ಇದ್ದರೆ ಸಾಕು. ಆರಾಮವಾಗಿ ನೆಲದ ಮೇಲೆ ಮಲಗಿ, ಆರಾಮದಾಯಕ ಅನುಭವ ಪಡೆಯಬಹುದು.

ವಜ್ರಾಸಾನ
ವಜ್ರಾಸಾನ

ವಜ್ರಾಸಾನ: ಈ ಸುಲಭ ಆಸನದಿಂದ ಅನೇಕ ಪ್ರಯೋಜನಗಳಿವೆ. ನಿಮ್ಮ ಮೊಣಕಾಲು, ಸಂಪೂರ್ಣ ಕಾಲಿನ ಸ್ನಾಯುಗಳು, ಪಾದದ ಕೀಲು ಸೇರಿದಂತೆ ಸಂಪೂರ್ಣ ಕಾಲು ಇದರಿಂದ ಪ್ರಯೋಜನ ಪಡೆಯುತ್ತದೆ. ಆದಾಗ್ಯೂ ಇದು ಆರಂಭದಲ್ಲಿ ನಿಮಗೆ ಸವಾಲು ಎನಿಸಬಹುದು. ನಿಮ್ಮ ಪಾದ ನೋವು ಅನುಭವಿಸಬಹುದು. ನಿತ್ಯ ನೀವು ಈ ಭಂಗಿಯಲ್ಲಿ ಕೆಲವು ನಿಮಿಷ ಕುಳಿತುಕೊಳ್ಳಬೇಕು. ನೀವು ಕುಳಿತಾಗ ನಿಮ್ಮ ಬೆನ್ನು ನೇರವಾಗಿರುವಂತೆ ನೋಡಿಕೊಳ್ಳಬೇಕು, ನಿಮ್ಮ ಮೊಣಕಾಲು ಮಡಚಿ, ಕಾಲಿನ ಮೇಲೆ ದೇಹದ ಬಾರ ಬಿಟ್ಟು ಕುಳಿತು ಕೊಳ್ಳಿ. ಈ ವೇಳೆ ನಿಮ್ಮ ಕಾಲಿನ ಹೆಬ್ಬೆರಳುಗಳ ಸಂದಿಸಬೇಕು.

ಅಪನಸನ
ಅಪಾನಾಸನ

ಅಪಾನಾಸನ: ಯೋಗದ ಪ್ರಾಥಮಿಕ ಭಂಗಿಗಳಲ್ಲಿ ಇದು ಒಂದಾಗಿದೆ. ನಿಮ್ಮ ಬೆನ್ನು ಅನ್ನು ಸರಾಗವಾಗಿಸಲು ಸಹಾಯ ಮಾಡುತ್ತದೆ. ಇದರಿಂದ ಬೆನ್ನು ನೋವು ಮಾಯಾವಾಗುತ್ತದೆ. ಯೋಗ ಮ್ಯಾಟ್​ ಮೇಲೆ ಮಲಗಿದಾಗ ನಿಮ್ಮ ಕಾಲನ್ನು ಮಡಚಿ ಹೊಟ್ಟೆ ಬಳಿ ತನ್ನಿ. ಈಗ ಮೊಣಕಾಲನ್ನು ಕೈಯಲ್ಲಿ ಹಿಡಿದಿರಿ. ಈ ವೇಳೆ ದೀರ್ಘ ಉಸಿರಾಟ ನಡೆಸಿ. ಮತ್ತೆ ಮತ್ತೆ ಇದೇ ರೀತಿ ಕಾಲನ್ನು ಮಡಚಿ, ಬಿಡುವುದು ಮಾಡಬಹುದು.

ಪದ್ಮಾಸನ
ಪದ್ಮಾಸನ

ಪದ್ಮಾಸನ: ಯೋಗದಲ್ಲಿ ಹೆಚ್ಚಿನ ಲಾಭಾದಾಯಕ ಮತ್ತು ಪ್ರಮುಖ್ಯತೆಯ ಭಂಗಿ ಇದಾಗಿದೆ. ಇದು ಮೊದಲ ಬಾರಿಗೆ ಸವಾಲು ಎನಿಸಿದರೂ, ಅಭ್ಯಾಸವಾದ ಬಳಿಕ ಆರಾಮವಾಗುತ್ತದೆ. ಇದರಿಂದ ನಿಮ್ಮ ಬೆನ್ನು ಹುರಿ, ಜೀರ್ಣ ಕ್ರಿಯೆ, ರಕ್ತ ಪರಿಚಲನೆ ಮತ್ತು ಕಾಲಿನ ಸ್ನಾಯುಗಳು ಹೆಚ್ಚಿನ ಪ್ರಯೋಜನ ಪಡೆಯಲಿದೆ. ಕುಳಿತುಕೊಳ್ಳುವಾಗ ಆರಾಮದಾಯಕವಾಗಿ ಕುಳಿತುಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಬಲ ಪಾದವನ್ನು ಎಡ ತೊಡೆಯ ಮೇಲೆ ಇಡಿ. ಎಡ ಪಾದವನ್ನು ನಿಮ್ಮ ಬಲ ಪಾದದ ಮೇಲೆ ಇರಿಸಿ ಚಕ್ಕಳ ಮಕ್ಕ ಹಾಕಿ ಕುಳಿತುಕೊಳ್ಳಿ

ಉತ್ಕಟಸಾನ
ಉತ್ಕಟಸಾನ

ಉತ್ಕಟಸಾನ: ಚೇರ್​ ರೀತಿಯ ಭಂಗಿಯಲ್ಲಿ ಕುಳಿತುಕೊಳ್ಳುವ ಭಂಗಿ ಇದಾಗಿದೆ. ಇದರಿಂದ ದೇಹದ ಮೇಲೆ ಮತ್ತು ಕೆಳ ಭಾಗಗಳು ಬಲಗೊಳ್ಳುತ್ತದೆ. ವಿಶೇಷವಾಗಿ ಬೆನ್ನು ಹಿಂದಿನ ಸ್ನಾಯುಗಳಿಗೆ ಈ ಆಸನ ಹೆಚ್ಚಿನ ಪ್ರಯೋಜನ ನೀಡುತ್ತದೆ. ಜೊತೆಗೆ ಇದು ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕ್ಲಾಸ್​ಗೆ ಹೋಗಿ ಯೋಗ ಕಲಿಯಬೇಕಿಲ್ಲ; ಇನ್​​ಫ್ಲುಯನ್ಸರ್​​ಗಳಿಂದಲೂ ಅತ್ಯುತ್ತಮ ಯೋಗ ತರಬೇತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.