ETV Bharat / sukhibhava

ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2022: ಯೋಗಾಸಕ್ತರಿಗೆ ಉಪಯುಕ್ತ ಮಾಹಿತಿ

ಇಂದಿನ ವೇಗದ ಜೀವನದಲ್ಲಿ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ. ಹೀಗಾಗಿ ಒಟ್ಟಾರೆ ಜೀವನಶೈಲಿಯ ಮೇಲೆ ಬಹಳಷ್ಟು ದುಷ್ಪರಿಣಾಮವಾಗಿದೆ. ಹಾಳಾದ ಜೀವನ ಕ್ರಮದಿಂದ ತಾರುಣ್ಯದಲ್ಲೇ ಕೆಲವರಿಗೆ ಮಧುಮೇಹ, ಬೊಜ್ಜು ಆವರಿಸುತ್ತಿವೆ. ಇಂಥ ಒತ್ತಡದ ಜೀವನಶೈಲಿಯಲ್ಲಿ ಫಿಟ್ನೆಸ್ ಕಾಪಾಡಲು, ದೇಹಕ್ಕೆ ಚೈತನ್ಯ ನೀಡಲು ಹಾಗೂ ತನ್ನನ್ನು ತಾನು ಸಾಕ್ಷಾತ್ಕಾರ ಮಾಡಿಕೊಳ್ಳಲು ಯೋಗ ತುಂಬಾನೇ ಸಹಕಾರಿ.

international-yoga-day-2022-history-theme-and-tips-for-beginners

author img

By

Published : Jun 21, 2022, 6:01 AM IST

ಪ್ರಥಮ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಜೂನ್ 21, 2015 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಯೋಗ ದಿನಾಚರಣೆಯು ಸಮುದಾಯ ಆರೋಗ್ಯದ ಆಂದೋಲನವಾಗಿ ಪರಿವರ್ತನೆಯಾಗುತ್ತಿದೆ. ದೈನಂದಿನ ಜೀವನದಲ್ಲಿ ಯೋಗದ ಆರೋಗ್ಯ ಲಾಭದ ಬಗ್ಗೆ ಜಾಗೃತಿ ಮೂಡಿಸಲು "ಮಾನವತೆಗಾಗಿ ಯೋಗ" ಘೋಷವಾಕ್ಯದಡಿ ಈ ಬಾರಿ ಜೂನ್ 21 ರಂದು 8ನೇ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಯೋಗದಿನದ ಇತಿಹಾಸ: ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಮೂಲಕ ಮನಸ್ಸು ಹಾಗೂ ದೇಹದ ಮಧ್ಯೆ ಏಕಾಗ್ರಭಾವನೆ ಮೂಡಿಸುವ 5000 ವರ್ಷ ಪುರಾತನವಾದ ಭಾರತೀಯ ಪರಂಪರೆಯಾಗಿದೆ. ಸೆಪ್ಟೆಂಬರ್ 27, 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಯೋಗವು ಭಾರತದ ಸನಾತನ ಪರಂಪರೆಯ ಅಮೂಲ್ಯ ಕೊಡುಗೆಯಾಗಿದೆ. ಇದು ದೇಹ ಮತ್ತು ಮನಸುಗಳನ್ನು ಬೆಸೆಯುತ್ತದೆ, ವಿಚಾರ ಹಾಗೂ ಆಚಾರಗಳನ್ನು ಬೆಸೆಯುತ್ತದೆ ಹಾಗೂ ಸಹಿಷ್ಣುತೆ ಹಾಗೂ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಪ್ರಕೃತಿ ಹಾಗೂ ಮಾನವನ ಮಧ್ಯೆ ಮಧುರ ಸಂಬಂಧವನ್ನು ಯೋಗ ಬೆಸೆಯುತ್ತದೆ. ಇದು ಕೇವಲ ಒಂದು ವ್ಯಾಯಾಮವಲ್ಲ. ಮನುಷ್ಯನೊಬ್ಬ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗ ಇದಾಗಿದೆ." ಎಂದು ಹೇಳಿದ್ದರು.

ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಬಗ್ಗೆ ಆಗ ಪ್ರಧಾನಿ ಮೋದಿ ಸಲಹೆ ನೀಡಿದ್ದರು. ಜೂನ್ 21ನೇ ತಾರೀಕಿನ ವಿಶೇಷದ ಬಗ್ಗೆ ಅಂದು ಮಾತನಾಡಿದ್ದ ಪ್ರಧಾನಿ, ಭೂಮಂಡಲದ ಉತ್ತರಾರ್ಧ ಗೋಳ ಹಾಗೂ ವಿಶ್ವದ ಬಹಳಷ್ಟು ಭಾಗಗಳಲ್ಲಿ ಈ ದಿನ ಅತ್ಯಂತ ಹೆಚ್ಚು ಮಹತ್ವದ್ದು ಎಂದು ಹೇಳಿದ್ದರು. ಅದರಂತೆ ನಂತರ ಡಿಸೆಂಬರ್ 11, 2014 ರಂದು ಪ್ರತಿವರ್ಷದ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಯೋಗದ ಪ್ರಸ್ತುತತೆ: ಕಳೆದ 2 ವರ್ಷಗಳ ಅವಧಿಯಲ್ಲಿ ಕೋವಿಡ್-19 ಸೋಂಕು ಜನರ ಮಾನಸಿಕ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರಿದ್ದು, ಒತ್ತಡ, ಉದ್ವಿಗ್ನತೆ, ಭಯ, ನಿದ್ರಾಹೀನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ಕೋವಿಡ್‌ನಿಂದ ಬಾಧಿತರಾಗಿ ಚೇತರಿಸಿಕೊಂಡಿರುವವರು ರಕ್ತದೊತ್ತಡ, ಮಧುಮೇಹ, ಶ್ವಾಸಕೋಶ ಹಾಗೂ ಹೃದಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ದಿನನಿತ್ಯದ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿಯ ಹೆಚ್ಚಳವಾಗಿ ಕೋವಿಡ್​ನಿಂದ ಉಂಟಾದ ಅನಾರೋಗ್ಯಗಳು ಕಡಿಮೆಯಾಗುತ್ತವೆ.

ಇಂದಿನ ವೇಗದ ಜೀವನದಲ್ಲಿ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ. ಹೀಗಾಗಿ ಅವರ ಒಟ್ಟಾರೆ ಜೀವನಶೈಲಿಯ ಮೇಲೆ ಬಹಳಷ್ಟು ದುಷ್ಪರಿಣಾಮವಾಗಿದೆ. ಹಾಳಾದ ಜೀವನಶೈಲಿಯಿಂದ ತಾರುಣ್ಯದಲ್ಲೇ ಕೆಲವರಿಗೆ ಮಧುಮೇಹ, ಬೊಜ್ಜು ಆವರಿಸುತ್ತಿವೆ. ಇಂಥ ಒತ್ತಡದ ಜೀವನಶೈಲಿಯಲ್ಲಿ ಫಿಟ್ನೆಸ್ ಕಾಪಾಡಲು, ದೇಹಕ್ಕೆ ಚೈತನ್ಯ ನೀಡಲು ಹಾಗೂ ತನ್ನನ್ನು ತಾನು ಸಾಕ್ಷಾತ್ಕಾರ ಮಾಡಿಕೊಳ್ಳಲು ಯೋಗ ತುಂಬಾನೇ ಸಹಕಾರಿ.

ಉಪಯುಕ್ತ ಟಿಪ್ಸ್:​ ದೈಹಿಕ ವ್ಯಾಯಾಮದ ಹೊರತಾಗಿ ಯೋಗಾಸನಗಳು ಏಕಾಗ್ರತೆ ಮತ್ತು ಉಸಿರಾಟ ನಿಯಂತ್ರಣದ ವ್ಯಾಯಾಮಗಳನ್ನು ಹೊಂದಿರುತ್ತವೆ. ಈ ಆಸನಗಳು ತುಂಬಾ ಸರಳವಾಗಿ ಕಂಡರೂ ಇವನ್ನು ಸೂಕ್ತ ರೀತಿಯಲ್ಲಿ ಹಾಗೂ ಸರಿಯಾದ ಉಸಿರಾಟದ ಕ್ರಮದೊಂದಿಗೆ ಮಾಡುವುದು ಅಗತ್ಯ. ನುರಿತ ಯೋಗ ತಜ್ಞರ ಮಾರ್ಗದರ್ಶನದಲ್ಲಿ ಯೋಗ ಅಭ್ಯಾಸ ಆರಂಭಿಸುವುದು ಒಳಿತು. ಅದರಲ್ಲೂ ನೀವು ಯಾವುದಾದರೂ ಗಾಯ ಅಥವಾ ರೋಗದಿಂದ ಬಳಲುತ್ತಿದ್ದರೆ ಯೋಗ ತಜ್ಞರ ಮಾರ್ಗದರ್ಶನ ಇನ್ನೂ ಅಗತ್ಯ. ಆರಂಭಿಕ ಯೋಗಾಸಕ್ತರಿಗಾಗಿ ಯೋಗ ತಜ್ಞೆ ಮೀನು ವರ್ಮಾ ಅವರು ನೀಡಿರುವ ಕೆಲ ಟಿಪ್ಸ್​ ಇಲ್ಲಿವೆ.

ಸರಿಯಾದ ಉಡುಪು ಧರಿಸಿ: ಯೋಗಾಸನ ಮಾಡುವಾಗ ಆರಾಮದಾಯಕವಾದ ಉಡುಪುಗಳನ್ನು ಧರಿಸಬೇಕು. ಆಸನಗಳನ್ನು ಮಾಡುವಾಗ ಉಡುಪು ಬಿಗಿಯಾಗಬಾರದು. ಬೆವರನ್ನು ಸುಲಭವಾಗಿ ಹೀರಿಕೊಳ್ಳುವಂಥ ಹತ್ತಿಯ ಬಟ್ಟೆಗಳನ್ನು ಧರಿಸುವುದು ಉತ್ತಮ.

ಸೂಕ್ತ ಸ್ಥಳ, ಉತ್ತಮ ಮ್ಯಾಟ್: ಯೋಗ ಮ್ಯಾಟ್ ಗಳು ಮೊಣಕಾಲು, ಮೊಣಕೈ, ಮುಂಗೈ ಮತ್ತು ಕಾಲುಗಳಿಗೆ ಮೆತ್ತನೆಯ ಸ್ಪರ್ಷ ನೀಡುತ್ತವೆ ಹಾಗೂ ಆಸನ ಮಾಡುವಾಗ ಜಾರಿ ಬೀಳದಂತೆ ತಡೆಯುತ್ತವೆ. ಆದರೆ ತುಂಬಾ ನಯವಾಗಿರುವ, ಸಲಿಪ್ ಆಗುವಂಥ ಮ್ಯಾಟ್ ಬಳಸಬಾರದು. ಇವುಗಳಳಿಂದ ಬಿದ್ದು ಗಾಯವಾಗುವ ಸಂಭವನೀಯತೆಗಳು ಜಾಸ್ತಿ.

ಏಕಾಗ್ರತೆಯಿಂದ ವ್ಯಾಯಾಮ ಮಾಡಿ: ಯೋಗ ಮಾಡುವಾಗ ದೇಹ ಹಾಗೂ ಮನಸಿನ ಏಕಾಗ್ರತೆ ಸಾಧಿಸುವುದು ಅಗತ್ಯ. ಆದರೆ ಬಹಳಷ್ಟು ಜನ ಯೋಗ ಮಾಡುವಾಗ ಏಕಾಗ್ರತೆ ಇಲ್ಲದೆ ಏನೇನೋ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡಿರುತ್ತಾರೆ. ಹೀಗೆ ಮಾಡುವುದು ಸರಿಯಲ್ಲ.

ಪರಿಣಿತರ ಮಾರ್ಗದರ್ಶನ: ಎಲ್ಲೋ ಒಂದಿಷ್ಟು ಓದಿ ಅಥವಾ ವಿಡಿಯೋ ನೋಡಿ ಯೋಗ ಆರಂಭಿಸುವುದು ಸರಿಯಲ್ಲ. ಇದರಿಂದ ನಿಮಗೆ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಬಹುದು. ಹೀಗಾಗಿ ಯೋಗ ಪರಿಣಿತರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಆರಂಭಿಸುವುದು ಒಳಿತು. ಇನ್ನು ಹಳೆಯ ದೀರ್ಘಾವಧಿಯ ಕಾಯಿಲೆ ಇದ್ದರೆ ವೈದ್ಯರ ಸಲಹೆ ಪಡೆಯಬೇಕು.

ಆಹಾರ ಪದ್ಧತಿ: ಬೆಳಗ್ಗೆ ಅಥವಾ ಸಂಜೆ ಯೋಗ ಮಾಡುವುದಾದಲ್ಲಿ ಯೋಗ ಮಾಡುವ 30 ರಿಂದ 40 ನಿಮಿಷ ಮುನ್ನ ಏನನ್ನೂ ಸೇವಿಸಬೇಡಿ. ಅದಕ್ಕೂ ಮುಂಚೆ ಸಹ ಅತಿಯಾಗಿ ಆಹಾರ ಸೇವಿಸಬೇಡಿ. ಬೆಳಗಿನ ಸಮಯದಲ್ಲಿ ಯೋಗ ಆರಂಭಿಸುವ 30 ರಿಂದ 40 ನಿಮಿಷ ಮುನ್ನ ಒಂದು ಬಾಳೆ ಹಣ್ಣು, ಒಂಚೂರು ಡ್ರೈ ಫ್ರೂಟ್ಸ್​ ಅಥವಾ ಲಘು ಉಪಾಹಾರ ಸೇವಿಸಬಹುದು. ಇನ್ನು ಸಂಜೆ ಯೋಗಾಭ್ಯಾಸ ಮಾಡುವವರು 1 ಗಂಟೆ ಮುಂಚೆ ಕುದಿಸಿದ ತರಕಾರಿ, ಸಲಾಡ್, ಮೊಳಕೆ ಕಾಳು ಸೇವಿಸಬಹುದು. 30 ನಿಮಿಷಗಳ ನಂತರ ನಿರು ಕುಡಿಯುವುದು ಒಳಿತು. ಅದಕ್ಕೂ ಮುನ್ನ ನೀರು ಕುಡಿಯಬಾರದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.