ETV Bharat / sukhibhava

ವಾಹ್‌, ಚಹಾ! ದೇಶಿ ಚಹಾದ ಬಗ್ಗೆ ನಿಮಗೆಷ್ಟು ಗೊತ್ತು?

ಚಹಾ ಪ್ರಿಯರಿಗಾಗಿ ದೇಶಿ ಚಹಾದ ಕುರಿತ ಮಾಹಿತಿ ಇಲ್ಲಿದೆ.

Etv Bharat
Etv Bharat
author img

By

Published : Dec 15, 2022, 6:05 PM IST

ಬಹುತೇಕರ ಜೀವನದಲ್ಲಿ ಚಹಾಕ್ಕೆ ಮಹತ್ವದ ಸ್ಥಾನವಿದೆ. ಚಹಾ ಇಲ್ಲದೇ ಹಲವರ ದಿನಚರಿಯೇ ಶುರುವಾಗದು. ಬೆಳಗ್ಗೆದ್ದಾಗ ಚಹಾ ಕುಡಿದರೆ ಅದೇನೋ ಮನಸ್ಸಿಗೆ ಉಲ್ಲಾಸ. ಕೆಲವರಿಗಂತೂ ಚಹಾ ಅನ್ನುವುದು ಮೆಡಿಸಿನ್​ ರೀತಿಯಲ್ಲೇ ಕೆಲಸ ಮಾಡುತ್ತದೆ. ಅದರಲ್ಲೂ ಭಾರತೀಯರಿಗೆ ಚಹಾ ಎಂಬ ಪಾನಕ ಬಹಳಷ್ಟು ಪ್ರಿಯ. ಪ್ರಮುಖ ಚಹಾ ಉತ್ಪಾದನಾ ದೇಶವಾಗಿರುವ ಭಾರತದಲ್ಲಿ ಇಂದು ಅಂತಾರಾಷ್ಟ್ರೀಯ ಚಹಾ ದಿನಾಚರಿಸುತ್ತಿದ್ದೇವೆ. ಇದರ ಸಲುವಾಗಿ ಕೆಲವೊಂದು ದೇಶಿ ಚಹಾದ ಬಗ್ಗೆ ತಿಳಿದುಕೊಳ್ಳೋಣ.

Masala Chai
ಮಸಾಲ ಚಹಾ

ಮಸಾಲ ಚಹಾ: ಭಾರತದಲ್ಲಿ ಅತೀ ಹೆಚ್ಚು ಜನರು ಚಹಾ ಇಷ್ಟಪಡುತ್ತಾರೆ. ಅದರಲ್ಲಂತೂ ಮಸಾಲ ಚಾಯ್​(ಚಹಾ) ತುಂಬಾ ಸ್ಪೆಷಲ್​. ಇದು ಹಾಲು, ಸಕ್ಕರೆ, ಶುಂಠಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಒಳಗೊಂಡಿರುತ್ತದೆ. ಚಹಾ ಕುದಿಯುತ್ತಿದ್ದಂತೆ ಅದರ ಸುವಾಸನೆ ಮನಸ್ಸಿಗೂ ಆಹ್ಲಾದಕರ.

Kashmiri Kahwa
ಕಾಶ್ಮೀರಿ ಕಹ್ವಾ

ಕಾಶ್ಮೀರಿ ಕಹ್ವಾ: ಕಾಶ್ಮೀರಿ ಕಹ್ವಾ ಇದು ಕುಡಿಯಲು ಬಹಳ ಕಹಿ. ಆದರೆ ಕಹ್ವಾ ದೇಹವನ್ನು ಬೆಚ್ಚಗೆ ಮಾಡುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕಾಶ್ಮೀರಿ ಗ್ರೀನ್ ಟೀ ಎಲೆಗಳ ಜೊತೆಗೆ ಕೇಸರಿ, ದಾಲ್ಚಿನ್ನಿ, ಗುಲಾಬಿ ಎಸಳು ಮತ್ತು ಏಲಕ್ಕಿಯನ್ನು ಬೆರೆಸಿ ಕಾಶ್ಮೀರಿ ಕಹ್ವಾ ಮಾಡಲಾಗುತ್ತದೆ. ಬೇಕಿದ್ದಲ್ಲಿ ಬಾದಾಮಿ ಮತ್ತು ಜೇನನ್ನೂ ಬಳಸಬಹುದು.

Darjeeling Tea
ಡಾರ್ಜಿಲಿಂಗ್ ಚಹಾ

ಡಾರ್ಜಿಲಿಂಗ್ ಚಹಾ: ಭಾರತೀಯರಿಗೆ ಡಾರ್ಜಿಲಿಂಗ್ ಚಹಾದ ಪರಿಚಯ ಇದ್ದೇ ಇರುತ್ತದೆ. ಈ ವಿಧದ ಚಹಾವನ್ನು ಭಾರತೀಯರು ಮಾತ್ರವಲ್ಲದೇ ಇತರೆ ದೇಶಗಳ ಜನರೂ ಸೇವಿಸುತ್ತಾರೆ. ಈ ಚಹಾವಂತೂ ಅತಿ ಹೆಚ್ಚು ಪರಿಮಳ ಹೊಂದಿರುತ್ತದೆ. ತೆಳ್ಳಗಿನ ದೇಹ ಹೊಂದಲು ಡಾರ್ಜಿಲಿಂಗ್​ ಚಹಾ ಸಹಕಾರಿ.

Butter tea
ಬೆಣ್ಣೆ ಚಹಾ

ಬೆಣ್ಣೆ ಚಹಾ: ಬೆಣ್ಣೆ ಚಹಾವನ್ನು ಸಾಮಾನ್ಯವಾಗಿ ಗುರ್ ಗುರ್ ಚಾಯ್ ಎಂದು ಕರೆಯಲಾಗುತ್ತದೆ. ಇದು ಲಡಾಖ್ ಮತ್ತು ಸಿಕ್ಕಿಂನಲ್ಲಿ ಬಹಳ ಜನಪ್ರಿಯವಾಗಿದೆ. ಚಹಾ ಎಲೆಗಳು, ಯಾಕ್ ಪ್ರಾಣಿಯ ಹಾಲು, ಬೆಣ್ಣೆ, ನೀರು ಮತ್ತು ಉಪ್ಪು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಈ ಚಹಾವು ಸಣ್ಣ ಗ್ಲಾಸ್​ನಲ್ಲಿ ದೊರೆಯುತ್ತದೆ. ಹಿಮಾಲಯದ ಅಲೆಮಾರಿಗಲು ಈ ಚಹಾವನ್ನು ಒಂದು ದಿನದಲ್ಲಿ 30 ಗ್ಲಾಸ್​​ಗಿಂತ ಅಧಿಕ ಕುಡಿಯುತ್ತಾರಂತೆ.

Nilgiri Tea
ನೀಲಗಿರಿ ಟೀ

ನೀಲಗಿರಿ ಟೀ: ನೀಲಗಿರಿ ಚಹಾವನ್ನು ನೀಲಿ ಪರ್ವತ ಚಹಾ ಎಂದೂ ಕರೆಯುತ್ತಾರೆ. ಈ ಚಹಾವು ಪ್ರಪಂಚದಲ್ಲಿ ತನ್ನ ಸುವಾಸನೆಯಿಂದಲೇ ಅತಿ ಹೆಚ್ಚು ಬೇಡಿಕೆ ಪಡೆದಿದೆ. ಅಲ್ಲದೇ ಇದು ಮಧುಮೇಹ ತಡೆಗಟ್ಟಲು, ತೂಕ ನಷ್ಟಕ್ಕೂ ಸಹಕಾರಿ.

Nilgiri Tea
ನೀಲಗಿರಿ ಟೀ

ಇದನ್ನೂ ಓದಿ: ಚಳಿಗಾಲದಲ್ಲಿ ಸತಾಯಿಸುವ ಸುಗಂಧದ ಅಲರ್ಜಿ.. ಮುಂಜಾಗ್ರತೆಗೆ ಪರಿಸರತಜ್ಱರ ಸಲಹೆ: ಇದರ ಹಿಂದಿದೆ ನಿಸರ್ಗದ ರೋಚಕ ಕಥೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.