ಹೈದರಾಬಾದ್: ಅನೇಕ ಬಾರಿ ಬಾಯಿ ಚಪಲಕ್ಕೆ ತಿನ್ನುವ ಆಹಾರಗಳು ಆರೋಗ್ಯಕ್ಕೆ ಅನೇಕ ಬಾರಿ ಸಮಸ್ಯೆ ಆಗುತ್ತದೆ. ಅಲ್ಲದೇ, ಬಾಯಿ ರುಚಿಗೆ ಮತ್ತಿತ್ತರ ಕಾರಣದಿಂದ ಕಂಠಪೂರ್ತಿ ತಿಂದು ಹೊಟ್ಟೆ ಕೆಡಿಸಿಕೊಳ್ಳುವಂತೆ ಆಗುತ್ತದೆ. ಈ ರೀತಿ ಅನಿಯಂತ್ರಿತ ಆಹಾರಗಳು ಅನೇಕ ಆರೋಗ್ಯ ಸಮಸ್ಯೆಗೆ ಕೂಡ ಕಾರಣವಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಆಗಿದೆ. ಇಂತಹ ಸಂದರ್ಭದಲ್ಲಿ ಇದಕ್ಕೆ ಕೆಲವು ಆಹಾರಗಳು ತಕ್ಷಣಕ್ಕೆ ಪರಿಹಾರ ನೀಡುತ್ತದೆ. ಆ ಆಹಾರಗಳ ಮಾಹಿತಿ ಇಲ್ಲಿದೆ.
ಪಪ್ಪಾಯ: ಪಪ್ಪಾಯದಲ್ಲಿನ ಎಂಜೆಮಾ ಆಹಾರ ಜೀರ್ಣಕ್ರಿಯೆ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಪಪ್ಪಾಯಲ್ಲಿನ ನೀರಿನ ಅಂಶ ಮತ್ತು ತಿರುಳು ಹೊಟ್ಟೆಯೊಳಗಿನ ತ್ಯಾಜವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನು ಕೂಡ ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಶುಂಠಿ: ತಲೆ ಸುತ್ತುವಿಕೆ, ಅಜೀರ್ಣ, ಗ್ಯಾಸ್ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಶುಂಠಿ ಟೀ ಸೇವಿಸಿ. ಇಲ್ಲ ಒಣ ಶುಂಠಿ ಪುಡಿಯನ್ನು ಪುಡಿ ಸಕ್ಕರೆಯೊಂದಿಗೆ ಬಾಯಿಗೆ ಹಾಕಿಕೊಳ್ಳಿ. ಇದರಿಂದ ಹೊಟ್ಟೆ ಕೊಂಚ ನಿರಾಳತೆ ಅನುಭವಿಸುತ್ತದೆ. ಇನ್ನು ಪ್ರತಿ ಬಾರಿ ಊಟದಲ್ಲಿ ಹೆಚ್ಚಿದ ಶುಂಠಿ ಜೊತೆಗೆ ಉಪ್ಪನ್ನು ಅನ್ನದೊಂದಿಗೆ ತಿನ್ನುವುದು ಕೂಡ ಅಜೀರ್ಣ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇದು ವಾತಾ ಮತ್ತು ಕಫ ದೋಷವನ್ನು ನಿವಾರಣೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಎಳ ನೀರು: ಎಳನೀರು ನೈಸರ್ಗಿಕ ಸಕ್ಕರೆ ಅಂಶ, ವಿಟಮಿನ್ ಸಿ ಮತ್ತು ಎಲೆಕ್ಟ್ರೊಲೈಟ್ಸ್ ಅನ್ನು ನೀಡಿ ದೇಹಕ್ಕೆ ಚೈತನ್ಯ ನೀಡುತ್ತದೆ. ಇದು ಅಜೀರ್ಣ ಮತ್ತು ತಲೆ ಸುತ್ತುವಿಕೆಯಿಂದ ಕೂಡ ಪರಿಹಾರ ನೀಡುತ್ತದೆ. ದೇಹಕ್ಕೆ ತತ್ಕ್ಷಣಕ್ಕೆ ಇದು ಶಕ್ತಿ ನೀಡುವುದರಿಂದ ದೇಹವು ಆಯಾಸದಿಂದ ಬಳಲುವುದಿಲ್ಲ.
ಬಾಳೆಹಣ್ಣು: ಬಾಳೆ ಹಣ್ಣಿನಲ್ಲಿ ಅಧಿಕ ಪೊಟಾಶಿಯಂ ಇದ್ದು, ಇದು ಹೊಟ್ಟೆಯಲ್ಲಿನ ಉಬ್ಬರ ಕಡಿಮೆ ಮಾಡುತ್ತದೆ. ಅಧಿಕ ಆಹಾರ ಸೇವನೆ ಮಾಡುವಾಗ ಯಾವಾಗಲೂ ಬಾಳೆ ಹಣ್ಣನ್ನು ಸೇವಿಸುವುದು ಉತ್ತಮ. ದೇಹದಲ್ಲಿ ನೀರಿನ ಅಂಶ ಕಡಿಮೆ ಆದಾಗ ಅಥವಾ ಅಧಿಕವಾಗಿ ಚಿಂತೆ ಮಾಡಿದಾಗ ಇದು ಪ್ರಯೋಜನ ನೀಡುತ್ತದೆ.
ಹರ್ಬಲ್ ಟೀ: ಗ್ರೀನ್ ಟೀ ಸೇರಿದಂತೆ ಮತ್ತಿತ್ತರ ಗಿಡಮೂಲಿಕೆಗಳ ಚಹಾಗಳು ಕೂಡ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಣೆ ಮಾಡಲು ಸಹಾಯ ಮಾಡುತ್ತದೆ. ಇದು ಕೂಡ ಹೊಟ್ಟಯಲ್ಲಿ ಆಗುವ ಕಿರಿಕಿರಿಯನ್ನು ತಪ್ಪಿಸುತ್ತದೆ. ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್ ಅನೇಕ ಬಗೆಯ ಸೋಂಕಿನ ವಿರುದ್ಧ ಹೋರಾಡುತ್ತದೆ.
ಇದನ್ನೂ ಓದಿ: ಪೋಷಕಾಂಶಗಳ ಆಗರ ಸಬ್ಬಕ್ಕಿ; ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನ