ETV Bharat / sukhibhava

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾದ ಸ್ಥಳೀಯ "ಸರ್ವವಾಕ್" ಲಸಿಕೆ - cervavac

30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠದ​ ಕಾನ್ಸರ್ - ಈ ರೋಗಕ್ಕೆ ರಾಮಬಾಣ ಈ ಸರ್ವವಾಕ್​ ಲಸಿಕೆ - ಸೆರಮ್​ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯಾಕ್ಸಿನ್​ ಬಿಡುಗಡೆ

indigenous-cervavac-vaccine-can-be-very-beneficial-in-preventing-cervical-cancer
ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾದ ಸ್ಥಳೀಯ "ಸರ್ವವಾಕ್" ಲಸಿಕೆ
author img

By

Published : Jan 26, 2023, 10:20 PM IST

ಹೈದರಾಬಾದ್: ಭಾರತದ ಖ್ಯಾತ ಲಸಿಕಾ ಕಂಪನಿ ಸೆರಮ್​ ಇನ್ಸಿಟಿಟ್ಯೂಟ್​ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ನಿಮಿತ್ತ ಜನವರಿ 25ರಂದು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ್​ರ್​ ನಿರ್ಮೂಲನೆಗೆ ಮೊದಲ ಸ್ಥಳೀಯ ಲಸಿಕೆ 'ಸರ್ವವಾಕ್' ಅನ್ನು ಬಿಡುಗಡೆ ಮಾಡಿದೆ. ಲಸಿಕೆಯ ಅಧ್ಯಯನದ ಪಲಿತಾಂಶದ ಮೇಲೆ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ 100 ಪ್ರತಿಶತದಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ಅತ್ಯಂತ ಮಾರಣಾಂತಿಕ ಕ್ಯಾನ್ಸರ್​ ಆಗಿರುವ ಗರ್ಭಕಂಠ (ಸರ್ವಿಕಲ್) ಕ್ಯಾನ್ಸರ್​ನ ಪ್ರಕರಣಗಳು ಪ್ರತಿವರ್ಷ ಹೆಚ್ಚಾಗುತ್ತಿವೆ. ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತದೆ, ಅದರಲ್ಲಿ ಸುಮಾರು 67 ಸಾವಿರ ಮಹಿಳೆಯರು ಈ ಕ್ಯಾನ್ಸರ್​ನಿಂದ ಸಾವಿಗೀಡಾಗುತ್ತಿದ್ದಾರೆ. ಮತ್ತೊಂದೆಡೆ, ಇತರ ವರದಿಗಳ ಪ್ರಕಾರ, ಭಾರತದಲ್ಲಿ 30 ರಿಂದ 69 ವರ್ಷ ವಯಸ್ಸಿನ ಮಹಿಳೆಯರಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳಲಿದ್ದು, ಶೇ.17ರಷ್ಟು ಮಹಿಳೆಯರು ಸಾಯುತ್ತಾರೆ ಎಂದು ವರದಿಯಾಗಿದೆ.

ಗರ್ಭಕಂಠದ​ ಕಾನ್ಸರ್​ ಹೆಚ್ಚಾಗಿ 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಕಂಡುಬರುತ್ತದೆ. ವಿಶ್ವಾದ್ಯಂತ ಮಹಿಳೆಯರಲ್ಲಿ ನಾಲ್ಕನೇ ಹೆಚ್ಚು ಪ್ರಚಲಿತದಲ್ಲಿರುವ ಕ್ಯಾನ್ಸರ್ ಇದಾಗಿದ್ದು. ಭಾರತದಲ್ಲಿ, ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಆಗಿದೆ.

ಲೈಂಗಿಕವಾಗಿ ಹರಡುವ ರೋಗ: ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲು ಈಟಿವಿ ಭಾರತ್​ ನೊಂದಿಗೆ ಮಾತನಾಡಿದ ಸ್ತ್ರೀರೋಗ ತಜ್ಞೆ ಡಾ. ನಿಧಿ ಕೊಠಾರಿ, ''ಗರ್ಭಕಂಠದ ಕ್ಯಾನ್ಸರ್​ಗೆ ಮುಖ್ಯವಾದ ಕಾರಣ ಎಂದರೆ ಹ್ಯೂಮನ್ ಪ್ಯಾಪಿಲೋಮಾ ಎಂಬ ವೈರಸ್ (HPV). ಲೈಂಗಿಕವಾಗಿ ಹರಡುವ ಈ ಹೆಚ್​ಪಿವಿ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಮತ್ತು ಈ ವೈರಸ್​​​​​​ನ ಪರಿಣಾಮವನ್ನು ಕಂಡು ಹಿಡಿಯಲು ಸ್ವಲ್ಪ ಸಮಯ ತೆಗದುಕೊಳ್ಳುವುದರಿಂದ ರೋಗ ಲಕ್ಷಣಗಳನ್ನು ಬಹುಬೇಗನೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ಸೋಂಕು ಸಾಕಷ್ಟು ಹಾನಿಯನ್ನು ಮಾಡಿರುತ್ತದೆ. ಇದು ಲೈಂಗಿಕವಾಗಿ ಹರಡುವ ರೋಗ ಆಗಿರುವುದರಿಂದ, ರೋಗಿಯ ಸಂಗಾತಿಗೂ ಸೋಂಕು ಹರಡಬಹುದು ಎಂದು ತಿಳಿಸಿದರು.

ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಅಪಾಯ ಹೆಚ್ಚು: HPV ಸೋಂಕಿನ ಕೆಲವು ವಿಧದ ಸೋಂಕು ಮಾತ್ರ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆರಂಭದಲ್ಲಿ ಆಯಾ ವೈರಸ್​ನ ಪ್ರಭಾವಕ್ಕೆ ಒಳಗಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಕ್ಯಾನ್ಸರ್​ ಬರುವ ಸಾಧ್ಯತೆ ಇನ್ನೂ ಹೆಚ್ಚು. ಮಹಿಳೆಯರಲ್ಲಿ ಸಾಮನ್ಯವಾದ ರೋಗನೀರೋಧಕ ಶಕ್ತಿ ದೇಹದಲ್ಲಿದ್ದರೆ, HPVನಿಂದ ಗರ್ಭಕಂಠದ ಕ್ಯಾನ್ಸರ್​ ವೃದ್ಧಿಯಾಗಲು ಸುಮಾರು 15 ರಿಂದ 20 ವರ್ಷಗಳ ಕಾಲ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಮಹಿಳೆಯರಲ್ಲಿ ಈ ಕ್ಯಾನ್ಸರ್ ಕೇವಲ 5 ರಿಂದ 10 ವರ್ಷಗಳಲ್ಲಿ ಹರಡುವ ಸಾಧ್ಯತೆ ಇರುತ್ತದೆ ಎಂದು ಸ್ತ್ರೀರೋಗ ತಜ್ಞೆ ಡಾ. ನಿಧಿ ಕೊಠಾರಿ ತಿಳಿಸಿದರು.

ನರಹುಲಿ ರೂಪದಲ್ಲಿ ಪ್ರಾರಂಭ: ಗರ್ಭಾಶಯದ ಕೆಳಭಾಗದಲ್ಲಿ ಜೀವಕೋಶಗಳಲ್ಲಿ ಬೆಳೆಯಲು ಪ್ರಾರಂಭಿಸುವ ಗರ್ಭಕಂಠದ ಕ್ಯಾನ್ಸರ್ ನೇರವಾಗಿ ಯೋನಿಯೊಂದಿಗೆ ಸಂಪರ್ಕ ಹೊಂದಿದ್ದು. ಈ ಸೋಂಕು ಮೊದಲು ಚಿಕ್ಕದಾಗಿ ಪ್ರಾರಂಭವಾಗಿ ನಂತರ ಕ್ಯಾನ್ಸರ್ ಕೋಶಗಳಾಗಿ ಬದಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಪೂರ್ವ ಹಂತವು ದೀರ್ಘವಾಗಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ಸಕಾಲಿಕ ಪರೀಕ್ಷೆಗಳು ಅಥವಾ ಇತರ ವಿಧಾನಗಳ ಮೂಲಕ ಕ್ಯಾನ್ಸರ್​ ಇರುವುದು ಪತ್ತೆಯಾದರೆ, ಅದನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು.

ಹ್ಯೂಮನ್ ಪ್ಯಾಪಿಲೋಮ ವೈರಸ್ 100 ಕ್ಕೂ ಹೆಚ್ಚು ವೈರಸ್‌ಗಳ ಸ್ಪೆಕ್ಟ್ರಮ್ ಅನ್ನು ಒಳಗೊಂಡಿದ್ದು, ಅವುಗಳಲ್ಲಿ HPV 16 ಮತ್ತು HPV 18 ನಂತಹ ಕೆಲವು ವಿಧದ ವೈರಸ್​ಗಳು ಮಾತ್ರ ಗರ್ಭಕಂಠದ ಕ್ಯಾನ್ಸರ್​ಗೆ ಕಾರಣವಾಗವಾಗುತ್ತದೆ. ಅಂಕಿ - ಅಂಶಗಳ ಪ್ರಕಾರ ಶೇ.83 ಪ್ರತಿಶತ ಗರ್ಭಕಂಠದ ಕ್ಯಾನ್ಸರ್​​ಗಳು ಕೇವಲ HPV 16 ಅಥವಾ 18 ವೈರಸ್‌ಗಳಿಂದ ಉಂಟಾಗುತ್ತವೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇವೆಲ್ಲಕ್ಕೂ ಈಗ ಸರ್ವವಾಕ್​ ಲಸಿಕೆ ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದರ ವ್ಯಾಪಕ ಬಳಕೆ ಬಳಿಕ ಫಲಿತಾಂಶ ಗೊತ್ತಾಗಲಿದೆ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ : ಹೃದಯ ರಕ್ತನಾಳದ ಕಾಯಿಲೆಗೇ ಹೆಚ್ಚು ಜನರು ಬಲಿ.. ಏನಿದು ಸಮಸ್ಯೆ.. ಇದಕ್ಕಿಲ್ಲವೇ ಪರಿಹಾರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.